Friday, 22nd November 2024

ಕರೋನಾಕ್ಕೆ 41 ಮಂದಿ ಗರ್ಭಿಣಿಯರ ಸಾವು

ತಿರುವನಂತಪುರಂ: ಕೇರಳದಲ್ಲಿ ಕರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ಕೇರದಳಲ್ಲಿ 41 ಮಂದಿ ಗರ್ಭಿಣಿಯರು ಮೃತ ಪಟ್ಟಿದ್ದಾರೆ ಎಂದು ಕೇರಳ ಸರ್ಕಾರ ಹೇಳಿದೆ.

ಕೇರಳ ಆರೋಗ್ಯ ಸಚಿವ ವೀಣಾ ಜಾರ್ಜ್, ಮಾರ್ಚ್ 2020 ರಿಂದ ಕೇರಳದಲ್ಲಿ ಇದುವರೆಗೆ 41 ಗರ್ಭಿಣಿಯರು ಕೋವಿಡ್-19 ಗೆ ಬಲಿಯಾಗಿದ್ದಾರೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಕೋವಿಡ್ ಪಾಸಿಟಿವ್ ವ್ಯಕ್ತಿಗಳ ಸಂಖ್ಯೆ 149 ರಷ್ಟಿದೆ.

ಕೇರಳದಲ್ಲಿ ಮಂಗಳವಾರ  7 ಸಾವಿರಕ್ಕೂ ಅಧಿಕ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಕೇರಳದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 49,19,952ಕ್ಕೆ ಏರಿಕೆಯಾಗಿದ್ದು, ಕೋವಿಡ್ ನಿಂದಾಗಿ ಬಲಿಯಾದವರ ಸಂಖ್ಯೆ 29,355ಕ್ಕೆ ಏರಿಕೆಯಾಗಿದೆ.