Saturday, 23rd November 2024

ಭಾರತ-ನ್ಯೂಜಿಲೆಂಡ್ ಹಣಾಹಣಿ: ಶಾರ್ದೂಲ್‌ ಕಣಕ್ಕಿಳಿಯುವರೇ ?

ದುಬೈ: ಭಾರತ ಮತ್ತು ನ್ಯೂಜಿಲೆಂಡ್ ಎರಡೂ ತಂಡಗಳೂ ತಂತಮ್ಮ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧವೇ ಸೋತಿವೆ. ಪಾಕಿಸ್ತಾನ ಸೆಮಿಫೈನಲ್ ಪ್ರವೇಶ ಬಹುತೇಕ ಖಚಿತಪಡಿಸಿಕೊಂಡಿದೆ. ಈ ಪಂದ್ಯದಲ್ಲಿ ಭಾರತ ತಂಡದಲ್ಲಿ ಒಂದು ಬದಲಾವಣೆ ಆಗುವ ನಿರೀಕ್ಷೆ ಇದೆ.
ಐಪಿಎಲ್​ನಲ್ಲಿ ಬಹಳ ಗಮನ ಸೆಳೆದಿರುವ ಶಾರ್ದೂಲ್ ಠಾಕೂರ್ ಅವರನ್ನ ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತ ಇದೆ. ಆದರೆ, ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಬಗ್ಗೆ ಸಂಶಯ ವಿದೆ. ಹಾರ್ದಿಕ್ ಪಾಂಡ್ಯಗೆ ವಿರಾಟ್ ಕೊಹ್ಲಿ ಎಲ್ಲಾ ಬೆಂಬಲ ನೀಡುತ್ತಿದ್ದಾರೆ. ಈಗಾಗಲೇ ನೆಟ್​ನಲ್ಲಿ ಹಾರ್ದಿಕ್ ಸ್ವಲ್ಪಸ್ವಲ್ಪವಾಗಿ ಬೌಲಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ಅವರು ಒಂದೆರಡು ಓವರ್ ಬೌಲಿಂಗ್ ಮಾಡಬಹುದು ಎಂಬ ನಿರೀಕ್ಷೆ ಹುಟ್ಟು ಹಾಕಿದೆ.

ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಭಾರತ ತಂಡದಲ್ಲಿ ಆರು ಬೌಲರ್​ಗಳು ಅಗತ್ಯ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಭಾರತ ಚೇಸಿಂಗ್ ಮಾಡುವುದಿದ್ದಲ್ಲಿ ವಿರಾಟ್ ಕೊಹ್ಲಿ ಕೂಡ ಒಂದೆರಡು ಓವರ್ ಬೌಲ್ ಮಾಡಬಹುದು.

ಶಾರ್ದೂಲ್ ಠಾಕೂರ್ ಅವರು ನ್ಯೂಜಿಲೆಂಡ್ ವಿರುದ್ಧ ಆಡಬಹುದು ಎಂದು ವಿರಾಟ್ ಕೊಹ್ಲಿ ಸುಳಿವು ಕೊಟ್ಟಿದ್ದಾರೆ. ಭುವನೇಶ್ವರ್ ಕುಮಾರ್ ಅವರ ಬದಲು ಶಾರ್ದೂಲ್ ಠಾಕೂರ್ ಅವರಿಗೆ ಅವಕಾಶ ಕೊಡಬಹುದು ಎಂಬ ಅಂದಾಜು ಇದೆ.

ತಂಡಗಳು:

ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ(ನಾ), ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್/ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ಜಸ್​ಪ್ರೀತ್ ಬುಮ್ರಾ.

ನ್ಯೂಜಿಲೆಂಡ್ ಸಂಭಾವ್ಯ ತಂಡ: ಮಾರ್ಟಿನ್ ಗಪ್ಟಿಲ್, ಡರಿಲ್ ಮಿಶೆಲ್, ಕೇನ್ ವಿಲಿಯಮ್ಸನ್(ನಾ), ಡೆವೋನ್ ಕಾನ್​ವೇ, ಗ್ಲೆನ್ ಫಿಲಿಪ್ಸ್, ಜೀಮ್ಸ್ ನೀಶಮ್, ಟಿಮ್ ಸೀಫರ್ಟ್, ಮಿಶೆಲ್ ಸ್ಯಾಂಟ್ನರ್, ಟಿಮ್ ಸೌಥಿ/ಅಡಮ್ ಮಿಲ್ನೆ, ಈಶ್ ಸೋಧಿ, ಟ್ರೆಂಟ್ ಬೌಲ್ಟ್.