Saturday, 23rd November 2024

ಅಂತರರಾಷ್ಟ್ರೀಯ ವಿಮಾನ ಹಾರಾಟಕ್ಕಿದ್ದ ನಿರ್ಬಂಧ ತೆರವು

ವಾಷಿಂಗ್ಟನ್‌: ವಿವಿಧ ದೇಶಗಳಿಗೆ ಅನ್ವಯಿಸಿ ಅಂತರರಾಷ್ಟ್ರೀಯ ವಿಮಾನ ಪ್ರಯಾಣದ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಅಮೆರಿಕ ಸೋಮವಾರ ಹಿಂಪ ಡೆದಿದೆ. ಕೋವಿಡ್‌ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅಮೆರಿಕ ವಿಮಾನ ಯಾನ ಸ್ಥಗಿತಗೊಳಿಸಿತ್ತು.

ಯೂರೋಪ್‌ನ ವಿವಿಧ ದೇಶಗಳು ಹಾಗೂ ಗಡಿಗೆ ಹೊಂದಿಕೊಂಡ ಮೆಕ್ಸಿಕೊ, ಕೆನಡಾ ಮೇಲಿನ ನಿರ್ಬಂಧ ಸಡಿಲಿಸಲಾಗಿದೆ.

ಪೂರ್ಣ ಲಸಿಕೆ ಪಡೆದಿರುವ ದಾಖಲೆಯೊಂದಿಗೆ ಅಮೆರಿಕಕ್ಕೆ ಭೇಟಿ ನೀಡಬಹು ದಾಗಿದೆ. ಕೋವಿಡ್‌ ಸೋಂಕು ತೀವ್ರವಾಗಿದ್ದ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಡೋನಾಲ್ಡ್ ಟ್ರಂಪ್ ನೇತೃತ್ವದ ಆಡಳಿತ ನಿರ್ಬಂಧ ಹೇರಿತ್ತು.

ನಿರ್ಬಂಧ ತೆರವು ಹಿಂದೆಯೇ ವಿಮಾನಯಾನ ಸಂಸ್ಥೆಗಳು ಯೂರೋಪ್‌ ಮತ್ತು ಇತರೆಡೆಯಿಂದ ಹೆಚ್ಚಿನ ಪ್ರಯಾಣಿಕರು ಆಗಮಿ ಸುವ ನಿರೀಕ್ಷೆ ಗರಿಗೆದರಿದೆ. ಯುರೋಪ್‌ ಮತ್ತು ಅಮೆರಿಕ ನಡುವಣ ಪ್ರಯಾಣಿಕರ ‍ಪ್ರಮಾಣ ಕಳೆದ ತಿಂಗಳಿಗೆ ಹೋಲಿಸಿದಲ್ಲಿ ಈ ತಿಂಗಳು ಶೇ 21ರಷ್ಟು ಹೆಚ್ಚಾಗಿದೆ.

ಗಡಿಭಾಗದ ಮೆಕ್ಸಿಕೊ ಮತ್ತು ಕೆನಡಾದಿಂದಲೂ ರಸ್ತೆ ಮೂಲಕ ಸಂಚರಿಸಲು ಇದ್ದ ನಿರ್ಬಂಧವನ್ನು ಅಮೆರಿಕ ತೆಗೆದಿದೆ. ಮೆಕ್ಸಿಕೊ ಮೂಲದ ಗ್ರಾಹಕರ ಸಂಖ್ಯೆ ಕುಂಠಿತ ವಾಗಿದ್ದರಿಂದ ಅಮೆರಿಕದ ಬಹುತೇಕ ಮಾಲ್‌ಗಳು, ರೆಸ್ಟೋರಂಟ್‌ಗಳು ಭಣಗುಡುವ ಸ್ಥಿತಿಯಲ್ಲಿದ್ದವು.