Saturday, 23rd November 2024

ತ್ರಿಪುರದ ನೆಲದಲ್ಲಿ ಕನ್ನಡದ ಕಹಳೆ

Club House

ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 129

ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆ ನೋಡಲೇಬೇಕಾದ ಸ್ಥಳ ತ್ರಿಪುರ: ವೇದ ಬ್ರಹ್ಮ ಕೃಷ್ಣ ಜೋಯಿಸ್

ಬೆಂಗಳೂರು: ಕಪಿಲಾ ನದಿಯನ್ನು ನೋಡುವುದೇ ಒಂದು ಸೌಭಾಗ್ಯ. ಐದು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕಪಿಲಾ ರತಿಗೆ ನಾವು ಕರ್ನಾಟಕದಿಂದ ಹೋಗಿರುವುದು ತುಂಬಾ ಸಂತೋಷದ ವಿಚಾರ, ಇದರ ಕುರಿತಾಗಿ ನನಗೆ ಹೆಮ್ಮೆ ಅನಿಸುತ್ತದೆ ಎಂದು ವೇದ ಬ್ರಹ್ಮ ಕೃಷ್ಣ ಜೋಯಿಸ್ ಹೇಳಿದರು.

ವಿಶ್ವವಾಣಿ ಕ್ಲಬ್‌ಹೌಸ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಆರತಿ ಮಾಡುವ ದಿನ ಬೆಳಗ್ಗೆ ಸಪ್ತ ನದಿಗಳಿಗೆ ಪೂಜೆ ಮಾಡಲಾಗುತ್ತದೆ. ಸಂಜೆಯ ಸಮಯ ಲಕ್ಷಾಂತರ ಹಣತೆಗಳನ್ನು ಹಚ್ಚಲು ಜನರು ಕಾಯುತ್ತಿರುತ್ತಾರೆ. ಐದು ಹತ್ತು ನಿಮಿಷಗಳ ಒಳಗೆ ಲಕ್ಷ ದೀಪಗಳು ಪ್ರಜ್ವಲಿಸುತ್ತಿರುತ್ತವೆ ಎಂದು ಹೇಳಿದರು.

ತ್ರಿಪುರ ಸುಂದರಿಯ ಮಹಿಮೆ ನಮಗೆ ಅರ್ಥವಾಗಬೇಕಾದರೆ ಅಲ್ಲಿ ಹೋಗಿಯೇ ನೋಡ ಬೇಕು. ಅದನ್ನು ಇಲ್ಲಿಂದ ಹೇಳಿದರೆ ಅನುಭವಕ್ಕೆ ಬರುವುದಿಲ್ಲ. ಸಾಧ್ಯವಾದರೆ ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆ ನೋಡಲೇಬೇಕಾದ ಸ್ಥಳ ತ್ರಿಪುರ ಎಂದು ಮಾಹಿತಿ ನೀಡಿದರು.

ತ್ರಿಪುರಾದಲ್ಲಿ ನಡೆದ ದೀಪಾರತಿ ಕಾರ್ಯಕ್ರಮದ ಕುರಿತು,, ನಮ್ಮ ಉಸ್ತುವಾರಿಯನ್ನೂ ಅಲ್ಲಿನ ಸರಕಾರವೇ ನೋಡಿಕೊಂಡಿತ್ತು. ಕಾರ್ಯಕ್ರಮ ಪ್ರಾರಂಭವಾಗುವ ಮುನ್ನ ‘ಮಿನಿಟ್ ಟು ಮಿನಿಟ್’ ಎಂಬ ಒಂದು ಸಭೆ ನಡೆಯುತ್ತಿತ್ತು. ಸಂಜೆ ಐದು ಗಂಟೆಗೆ ಕಾರ್ಯಕ್ರಮ ನಿಗದಿಯಾಗಿದ್ದರೆ ಸರಿಯಾಗಿ ಒಂದು ನಿಮಿಷವೂ ಹೆಚ್ಚುಕಮ್ಮಿಯಾಗದೆ ಸರಿಯಾಗಿ ಐದು ಗಂಟೆಗೆ ಆರಂಭ ವಾಗುತ್ತಿತ್ತು. ಇಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಗಮನಿಸಬೇಕಾಗಿರುವುದರೆಂದರೆ ಅಲ್ಲಿನ ರಾಜಕಾರಣಿಗಳ ಸಮಯ ಪ್ರಜ್ಞೆ ಎಂದರು.

ತ್ರಿಪುರ ಜನರಿಗೆ ಹಾಡುಗಳಿಗಿಂತ ದಕ್ಷಿಣ ಭಾರತದವರು ಉಚ್ಛರಿಸುವ ವೇದ ಘೋಷಗಳನ್ನು ಕೇಳುವುದು ತುಂಬಾ ಇಷ್ಟ, ಉದಾ ಹರಣೆಗೆ ಅಲ್ಲಿನ ಮಹಿಳೆಯರು ನದಿಗೆ ಆರತಿ ಮಾಡುವಾಗ ಹಾಡುಗಳನ್ನು ಹಾಕುತ್ತಿದ್ದರು, ಆದರೆ, ಈ ಬಾರಿ ನಮ್ಮಿಂದಲೇ ವೇದ ಘೋಷ ಹೇಳಿಸಿದ್ದಾರೆ. ಅಲ್ಲಿ ಆರತಿ ಮತ್ತು ಅರ್ಚನೆಯನ್ನು ಮಾಡುವಾಗ ಯಾವುದೇ ಕಾರಣಕ್ಕೂ ಜಾತಿ ಬಂಧನವಿರಲಿಲ್ಲ ಎಂದು ಹೇಳಿದರು.

ಕಾವೇರಿ ಭೂಮಿಗೆ ಬಂದಿದ್ದು ಹೀಗೆ
ಸುರ ಮತ್ತು ಪದ್ಮಾಸುರ ಎನ್ನುವ ಇಬ್ಬರು ರಾಕ್ಷಸರು ಭೂಮಿಗೆ ಮಳೆ ಬಾರದಂತೆ ತಡೆದಿದ್ದರು. ಈ ಸಂದರ್ಭದಲ್ಲಿ ಆಹಾರ ವಿಲ್ಲದೆ ತತ್ತರಿಸಿದ ಜನರು ಇಂದ್ರನನ್ನು ಪ್ರಾರ್ಥಿಸಿದ್ದರು. ಇಂದ್ರನು ಗಣಪತಿಯನ್ನು ಪ್ರಾರ್ಥನೆ ಮಾಡಿದ್ದ. ಅಗಸ್ತ್ಯರ ಕಮಂಡಲ ದಲ್ಲಿ ಕಾವೇರಿ ಜಲ ಇರುವದನ್ನು ಅರಿತಿದ್ದ ಗಣಪತಿ, ಅಗಸ್ತ್ಯರು ಸಂಧ್ಯಾವಂದನೆಗೆ ಕುಳಿತಿದ್ದ ಸಂದರ್ಭದಲ್ಲಿ ಕಮಂಡಲವನ್ನು ಬೀಳಿಸಿ ಅದರಿಂದ ಕಾವೇರಿಯನ್ನು ಚೆಲ್ಲಿದ. ಆಗ ಕಾವೇರಿ ಧರೆಗಿಳಿದಳು ಎಂದು ವೇದ ಬ್ರಹ್ಮ ಭಾನುಪ್ರಕಾಶ್ ಶರ್ಮಾ ಹೇಳಿದರು.

ದೀಪ ಜ್ಞಾನದ ಸಂಕೇತ. ನಾವು ದೀಪ ಹಚ್ಚುವುದರಿಂದ ನಮ್ಮ ಅಜ್ಞಾನ ನಾಶವಾಗು ತ್ತದೆ. ನಮ್ಮಲ್ಲಿರುವ ಕೆಟ್ಟ ಭಾವನೆಗಳು ನಶಿಸಿ ಒಳ್ಳೆಯ ವಿಚಾರಗಳು ಉಗಮವಾಗುತ್ತದೆ. ನಿತ್ಯವೂ ದೀಪ ಬೆಳಗಿ ನಮ್ಮ ಅಜ್ಞಾನವನ್ನು ದೂರಗೊಳಿಸಿಕೊಳ್ಳಬೇಕು.
– ವೇದಬ್ರಹ್ಮ ಕೃಷ್ಣ ಜೋಯಿಸ್

2015ರಿಂದ ಇದುವರೆಗೆ 8 ನದಿಗಳ ಸ್ವಚ್ಛತಾ ಕಾರ್ಯಕ್ಕೆ ಯುವಾ ಬ್ರಿಗೇಡ್ ಕೈ ಹಾಕಿದೆ. ಸ್ವಚ್ಛತಾ ಅಭಿಯಾನ ಜನರ ಸಹಕಾರ ದಿಂದ ಯಶಸ್ವಿಯಾಗಿದೆ. ನಮ್ಮ ಈ ಕಾರ್ಯ ನೋಡಿ ನದಿಗಳಲ್ಲಿ ಕಸ ಎಸೆಯುವವರ ಸಂಖ್ಯೆಯೂ ಗಣನೀಯವಾಗಿ ಕಡಿಮೆ ಆಗುತ್ತಿದೆ.
– ಚಂದ್ರಶೇಖರ್ ಯುವ ಬ್ರಿಗೇಡ್ ಮುಖಂಡ

ಕೃಷ್ಣಾ ಜೋಯಿಸರು ಪೊಲೀಸ್ ಇಲಾಖೆಯಿಂದ ಸ್ವಯಂ ನಿವೃತ್ತಿಯನ್ನು ಪಡೆದು ಈಗ ಆಧ್ಯಾತ್ಮ ಮಾರ್ಗದಲ್ಲಿ ತೊಡಗಿದ್ದಾರೆ. ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ.
-ವಿಶ್ವೇಶ್ವರ್ ಭಟ್ ವಿಶ್ವವಾಣಿ ಪ್ರಧಾನ ಸಂಪಾದಕರು