Sunday, 5th January 2025

ನೈಕಾ ಸಂಸ್ಥಾಪಕಿ ಫಾಲ್ಗುಣಿ ನಾಯರ್​​ ಏಳನೇ ಮಹಿಳಾ ಬಿಲಿಯೇನರ್​

ನವದೆಹಲಿ: ನೈಕಾ ಕಂಪನಿ ಸಂಸ್ಥಾಪಕಿ ಫಾಲ್ಗುಣಿ ನಾಯರ್​​ ದೇಶ ಕಂಡ ಏಳನೇ ಮಹಿಳಾ ಬಿಲಿಯೇನರ್​ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಬುಧವಾರದಂದು ಮಾರುಕಟ್ಟೆ ಆರಂಭವಾಗುತ್ತಿದ್ದಂತೆಯೇ ನೈಕಾದ ಷೇರುಗಳು 80 ಪ್ರತಿಷತ ಪ್ರೀಮಿಯಂ ಸಂಪಾದಿಸಿದೆ.

ಸೌಂದರ್ಯವರ್ಧಕ ಸೇರಿದಂತೆ ವಿವಿಧ ಚಿಲ್ಲರೆ ವ್ಯಾಪಾರದ ಮಾರುಕಟ್ಟೆಯಾದ ನೈಕಾ ಮೊದಲ ಐದು ನಿಮಿಷಗಳಲ್ಲೇ 1 ಟ್ರಿಲಿ ಯನ್ ಕೋಟಿ ಮೌಲ್ಯ ತಲುಪಿದೆ. ನೈಕಾದ ಮಾರ್ಕೆಟ್​ ಕ್ಯಾಪ್​​ ಈಗಾಗಲೇ ಕೈಗಾರಿಕಾ ದೈತ್ಯಗಳಾದ ಬ್ರಿಟಾನಿಯಾ, ಗೋದ್ರೇಜ್​ ಹಾಗೂ ಇಂಡಿಗೋ ಸಮೀಪಿಸಿದೆ.

ನೈಕಾ, ದೇಶದಲ್ಲಿ ಮಹಿಳಾ ನೇತೃತ್ವದ ಮೊದಲ ಯೂನಿಕಾರ್ನ್​ ಆಗಿದೆ. ಫಾಲ್ಗುಣಿ ನಾಯರ್​ ಈ ಕಂಪನಿಯನ್ನು 2012ರಲ್ಲಿ ಆರಂಭಿಸಿದರು. ಇದೊಂದು ಮೊಬೈಲ್​ ಅಪ್ಲಿಕೇಶನ್​ ಹಾಗೂ ವೆಬ್​ಸೈಟ್​ ಆಗಿದ್ದು ಇಲ್ಲಿ ಸೌಂದರ್ಯವರ್ಧಕ, ವೈಯಕ್ತಿಕ ಆರೈಕೆಯ ಉತ್ಪನ್ನಗಳು ಮಾರಾಟಕ್ಕಿವೆ.

ಕಂಪನಿ ಆರಂಭಿಸಿದ 8 ವರ್ಷಗಳಲ್ಲಿ 58 ವರ್ಷದ ಫಾಲ್ಗುಣಿ ನಾಯರ್​, ಬಿಲಿಯೇನರ್​ ಪಟ್ಟಿಗೆ ಸೇರಿದ್ದಾರೆ.

Leave a Reply

Your email address will not be published. Required fields are marked *