Friday, 20th September 2024

ಬಾಲಿವುಡ್​ ನಟ ಸುಶಾಂತ್​ ಸಂಬಂಧಿಗಳ ಅಪಘಾತದಲ್ಲಿ ಸಾವು

ಬಿಹಾರ: ಭೀಕರ ರಸ್ತೆ ಅಪಘಾತದಲ್ಲಿ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ರ ಐವರು ಸಂಬಂಧಿಗಳು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ.

ಬಿಹಾರದ ಲಖಿಸರಾಯ್​ ಜಿಲ್ಲೆಯಲ್ಲಿ ಟ್ರಕ್​​ಗೆ ಎಸ್​ಯುವಿ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಎಸ್​ಯುವಿ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಟ್ರಕ್​ ಚಾಲಕ ಹಾಗೂ ಸಹಾಯಕ ಸ್ಥಳದಿಂದ ಪರಾರಿಯಾಗಿದ್ದಾರೆ.

ಇಬ್ಬರು ಮಹಿಳೆಯರು ಸೇರಿದಂತೆ ಮೃತಪಟ್ಟ ಆರು ಮಂದಿ ಹರಿಯಾಣದ ಹೆಚ್ಚುವರಿ ಪೊಲೀಸ್​ ಮಹಾ ನಿರ್ದೇಶಕ ಒ.ಪಿ ಸಿಂಗ್​ ಸಹೋದರಿಯ ಅಂತ್ಯಕ್ರಿಯೆ ಮುಗಿಸಿ ಪಾಟ್ನಾದಿಂದ ಜಮುಯಿಗೆ ಮರಳುತ್ತಿದ್ದರು ಎನ್ನಲಾಗಿದೆ. ಒ.ಪಿ ಸಿಂಗ್​ ದಿವಂಗತ ಸುಶಾಂತ್​ ಸಿಂಗ್​ ರಜಪೂತ್​ ಸಹೋದರಿಯ ಪತಿ ಎಂದು ತಿಳಿದು ಬಂದಿದೆ.

ಮೃತರನ್ನು ಲಾಲ್​ಜೀತ್​ ಸಿಂಗ್​ ( ಮೃತಪಟ್ಟ ಮಹಿಳೆಯ ಪತಿ), ನೆಮಾನಿ ಸಿಂಗ್​, ಅಮಿತ್​ ಶಂಕರ್​ ಅಲಿಯಾಸ್​ ಚಂದ್ರ ಸಿಂಗ್​, ಸುನೀತಾ ದೇವಿ, ಅನಿತಾ ದೇವಿ ಹಾಗೂ ಚಾಲಕ ಚೇತನ್​ ಕುಮಾರ್ ಎಂದು ಗುರುತಿಸಲಾಗಿದೆ.