Friday, 20th September 2024

ಪೇಟಿಎಂ ಷೇರು ಶೇ.20 ರಷ್ಟು ಕುಸಿತ

ಮುಂಬೈ: ಮಾರುಕಟ್ಟೆಗೆ ಪ್ರವೇಶಿಸಿದ ಮೊದಲ 15 ನಿಮಿಷಗಳಲ್ಲಿ ಪೇಟಿಎಂ ಸಂಸ್ಥೆ ಷೇರು ಶೇ.20 ರಷ್ಟು ಕುಸಿತ ಕಂಡಿದೆ. ಇತ್ತ ಪೇಟಿಎಂ ಷೇರುಗಳ ಮೌಲ್ಯ ಕುಸಿದಿದ್ದರೆ, ಜೊಮಾಟೊ ಮತ್ತು ನೈಕಾ ಷೇರುಗಳು ಏರಿಕೆ ಕಂಡಿವೆ.

ಎನ್‌ಎಸ್‌ಇ 1,950 ರೂಪಾಯಿಗಳ ಮೂಲಕ ಷೇರು ವಹಿವಾಟು ಪ್ರಾರಂಭವಾಯಿತು. ಬಾಂಬೇ ಷೇರು ವಿನಿಮಯ ಕೇಂದ್ರದಲ್ಲಿ 2,150 ರೂಪಾಯಿಗಳಷ್ಟಿತ್ತು. ಷೇರು ವಹಿ ವಾಟು 1701 ಕ್ಕೆ ಅಂದರೆ ಶೇ.20 ಕ್ಕಿಂತಲೂ ಹೆಚ್ಚು ಕುಸಿತ ಕಂಡಿತ್ತು.

18,300 ಕೋಟಿ ರೂಪಾಯಿಗಳಷ್ಟು ಇನಿಷಿಯಲ್ ಪಬ್ಲಿಕ್ ಆಫರಿಂಗ್ ಗೆ ಪೂರ್ಣ ಚಂದಾದಾರತ್ವ ಪಡೆಯುವುದಕ್ಕೆ ಹರಸಾಹಸ ಪಟ್ಟ ಪೇಟಿಎಂ ಕುರಿತು ಹೂಡಿಕೆ ದಾರರು ಆತಂಕ ಹೊಂದಿದ್ದು, ನಷ್ಟ ಎದುರಿಸುತ್ತಿರುವ ಸಂಸ್ಥೆ ಕೇಳುತ್ತಿರುವ ಮೌಲ್ಯವನ್ನು ಖರೀದಿಸಲು ಹಿಂದೇಟು ಹಾಕಿ ದ್ದಾರೆ.