Saturday, 23rd November 2024

ನವದೆಹಲಿಯಲ್ಲಿ ನ.26ರವರೆಗೆ ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ

ನವದೆಹಲಿ: ರಾಜಧಾನಿಯಲ್ಲಿ ಗಾಳಿ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರ ಮತ್ತೊಮ್ಮೆ ಶಿಸ್ತುಕ್ರಮಗಳನ್ನು ಜಾರಿಗೊಳಿ ಸಿದೆ.

ನ.26ರವರೆಗೂ ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವುದಕ್ಕೆ ಸೂಚಿಸಲಾಗಿದೆ. ನವದೆಹಲಿಗೆ ಅಗತ್ಯ ವಸ್ತುಗಳನ್ನು ಹೊರತುಪಡಿಸಿದಂತೆ ಇತರೆ ಸರಕುಗಳನ್ನು ಹೊತ್ತು ಬರುವ ಎಲ್ಲಾ ಟ್ರಕ್ ಸಂಚಾರಕ್ಕೆ ನಿರ್ಬಂಧ ವಿಸ್ತರಿಸಲಾಗಿದೆ.

ಸರ್ಕಾರಿ ಕಚೇರಿಗಳು ನ.26 ರವರೆಗೆ ಬಂದ್ ಆಗಿರುತ್ತವೆ. ಖಾಸಗಿ ಕಚೇರಿಗಳು ತಮ್ಮ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವಂತೆ ಸೂಚಿಸ ಲಾಗಿದೆ,” ಎಂದು ಕೇಜ್ರಿವಾಲ್ ಸರ್ಕಾರದ ಆದೇಶದಲ್ಲಿ ತಿಳಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ ಮುಂದಿನ ನವೆಂಬರ್ 26ರವರೆಗೂ ಯಾವುದೇ ರೀತಿ ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗದಂತೆ ನಿರ್ಬಂಧ ವಿಧಿಸಲಾಗಿದೆ. ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜು ಗಳನ್ನು ಮುಂದಿನ ಆದೇಶವರೆಗೂ ಬಂದ್ ಮಾಡುವಂತೆ ಆದೇಶಿಸಲಾಗಿತ್ತು.

ನವೆಂಬರ್ 26 ರವರೆಗೆ ಅಗತ್ಯ ವಸ್ತುಗಳನ್ನು ಸಾಗಿಸುವ ಟ್ರಕ್‌ಗಳನ್ನು ಹೊರತು ಪಡಿಸಿ ದೆಹಲಿಯಲ್ಲಿ ಟ್ರಕ್‌ಗಳ ಪ್ರವೇಶವನ್ನು ನಿಲ್ಲಿಸಿ ಎಂದು ದೆಹಲಿಯ ಪರಿಸರ ಇಲಾಖೆ ಆದೇಶದಲ್ಲಿ ಹೇಳಿತ್ತು.

ದೆಹಲಿ ಸರ್ಕಾರವು ಕಳೆದ ಬುಧವಾರ ನಗರದೊಳಗೆ ಅನಗತ್ಯ ವಸ್ತುಗಳನ್ನು ಸಾಗಿಸುವ ಟ್ರಕ್‌ಗಳ ಪ್ರವೇಶವನ್ನು ನಿಷೇಧಿಸುವುದು ಮತ್ತು ಮುಂದಿನ ಆದೇಶ ದವರೆಗೆ ಶಾಲಾ-ಕಾಲೇಜುಗಳನ್ನು ಮುಚ್ಚುವುದು ಸೇರಿದಂತೆ 10 ನಿರ್ದೇಶನ ಗಳನ್ನು ಹೊರಡಿಸಿತ್ತು.