Friday, 20th September 2024

ಮೊಬೈಲ್‌ App ಸಿದ್ದತೆಗಾಗಿ ’ಟೈಂ’ ಬೇಕೆಂದ ವಿಮಾ ಕಂಪನಿಗಳ ಅರ್ಜಿ ವಜಾ

ನವದೆಹಲಿ: ಅಪಘಾತದಲ್ಲಿ ಸಂತ್ರಸ್ತರಿಗೆ ಪರಿಹಾರ ಒದಗಿಸಲು ನ್ಯಾಯಮಂಡಳಿ ಗಳಲ್ಲಿ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಲು ಅನುಕೂಲವಾಗುವಂತೆ ಅಖಿಲ ಭಾರತ ಮಟ್ಟದಲ್ಲಿ ಮೊಬೈಲ್‌ ಆಪ್‌ ಅಭಿವೃದ್ಧಿಪಡಿಸಲು ಹೆಚ್ಚಿನ ಕಾಲಾವಕಾಶ ಕೋರಿದ್ದ ವಿಮಾ ಕಂಪನಿಗಳ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ.

ನ್ಯಾಯಾಲಯದ ನಿರ್ದೇಶನದಿಂದ ವಿಮಾ ಕಂಪನಿಗಳು ಹೊರಗುಳಿಯಲು ಸಾಧ್ಯವಿಲ್ಲ. ವಿಮಾ ಕಂಪನಿಗಳು ಈ ಆಪ್‌ ತಯಾರಿ ಸಲು ಸಮರ್ಥರಾಗಿರದಿದ್ದರೆ ನಾವು ಸರ್ಕಾರಕ್ಕೆ ಸೂಚನೆ ನೀಡುತ್ತೇವೆ’ ಎಂದು ನ್ಯಾ.ಸಂಜಯ್‌ ಕಿಶನ್‌ ಕೌಲ್‌ ನೇತೃತ್ವದ ಪೀಠ ಹೇಳಿದೆ. ಆಯಪ್‌ ತಯಾರಿಕೆಗೆ ಸುಪ್ರೀಂಕೋರ್ಟ್‌ ವಿಮಾ ಕಂಪನಿಗಳಿಗೆ ಎರಡು ತಿಂಗಳ ಕಾಲಾ      ವಕಾಶ ನೀಡಿದೆ.

ಆಯಪ್‌ ಅಭಿವೃದ್ಧಿಯಿಂದ ಭಾರತದಾದ್ಯಂತ ರಸ್ತೆ ಅಪಘಾತಗಳು, ನ್ಯಾಯಮಂಡಳಿಗಳು, ಪೊಲೀಸ್‌ ಮತ್ತು ವಿಮಾ ಕಂಪನಿ ಗಳ ಸಂತ್ರಸ್ತರು ಪರಿಹಾರ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳಬಹುದು. ಇದಕ್ಕೆ ಸಂಬಂಧಿಸಿದಂತೆ 2021ರ ಮಾರ್ಚ್‌ 16 ಮತ್ತು ಆಗಸ್ಟ್‌ 3 ರಂದು ಸುಪ್ರೀಂಕೋರ್ಟ್‌ ವಿಸ್ತೃತ ಆದೇಶವನ್ನು ನೀಡಿತ್ತು.