Friday, 20th September 2024

ಮಕ್ಕಳ ದಿನಾಚರಣೆಗೆ ಒಂದೇ ದಿನವಲ್ಲ..!

ತನ್ನಿಮಿತ್ತ

ಎಲ್.ಪಿ.ಕುಲಕರ್ಣಿ, ಬಾದಾಮಿ, ಅಧ್ಯಾಪಕ 

ಭಾರತದಲ್ಲಿ ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮ ದಿನವಾದ ನವೆಂಬರ್ 14ನ್ನು ಮಕ್ಕಳ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಹಾಗೆಯೇ ವಿಶ್ವಸಂಸ್ಥೆೆಯು ನವೆಂಬರ್ 20ರಂದು ‘ವಿಶ್ವ ಮಕ್ಕಳ ದಿನ’ವನ್ನಾಾಗಿ ಆಚರಿಸಲಾಗುತ್ತಿಿದೆ.ಅಲ್ಲದೇ ನಾನಾ ದೇಶಗಳು ಬೇರೆ ಬೇರೆ ದಿನಗಳಂದು ಆಚರಿಸಿಕೊಂಡು ಬರುತ್ತಿಿವೆ.

1954ರಲ್ಲಿ ವಿಶ್ವ ಸಂಸ್ಥೆೆಯ ಸಾಮಾನ್ಯ ಸಭೆಯು ನವೆಂಬರ್ 20ರಂದು ಅಂತಾರಾಷ್ಟ್ರೀಯ ಮಕ್ಕಳ ದಿನವನ್ನಾಾಗಿ ಆಚರಿಸಲು ತೀರ್ಮಾನಿಸಿತು. ವಿಶ್ವ ಸಂಸ್ಥೆೆಯ ಈ ತೀರ್ಮಾನಕ್ಕೆೆ 191 ದೇಶಗಳು ಒಪ್ಪಿಿಗೆ ಸೂಚಿಸಿವೆ. ಆದರೆ, ನವೆಂಬರ್ 20ಕ್ಕೆೆ ಮಕ್ಕಳ ದಿನಾಚರಣೆಯನ್ನು ಆಚರಿಸಬೇಕೆಂದಿಲ್ಲ. ನಾನಾ ದೇಶಗಳು ತಮಗೆ ಅನುಕೂಲವಾಗುವ ದಿನವನ್ನು ಮಕ್ಕಳ ದಿನವನ್ನಾಾಗಿ ಆಚರಣೆ ಮಾಡಬಹುದು ಎಂದು ವಿಶ್ವ ಸಂಸ್ಥೆೆಯು ಅವಕಾಶ ಕಲ್ಪಿಿಸಿದೆ. ಹಾಗಾಗಿ ಬೇರೆ ಬೇರೆ ದಿನಗಳನ್ನು ಮಕ್ಕಳ ದಿನವನ್ನಾಾಗಿ ಆಚರಣೆ ಮಾಡಲಾಗುತ್ತದೆ. ಜಗತ್ತಿಿನ ಬಹುತೇಕ ದೇಶಗಳು ಅಂದರೆ ಒಟ್ಟು 50 ದೇಶಗಳು ಜೂನ್ 1ರಂದು ಮಕ್ಕಳ ದಿನ ಆಚರಿಸುತ್ತಿಿವೆ. 1989ರಲ್ಲಿ ವಿಶ್ವಸಂಸ್ಥೆೆ ಮುಂದಿಟ್ಟ ಅಂತಾರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಪ್ಪಂದಕ್ಕೆೆ ಹಲವು ದೇಶಗಳು ಸಹಿ ಹಾಕಿವೆ. ಇದು ಮಕ್ಕಳ ಆರ್ಥಿಕ, ರಾಜಕೀಯ, ಸಾಮಾಜಿಕ, ನಾಗರಿಕ ಮತ್ತು ಸಂಸ್ಕೃತಿಕ ಹಕ್ಕುಗಳನ್ನು ಕಾಪಾಡುವ ಮತ್ತು ಎಲ್ಲ ದೇಶಗಳ ಮಕ್ಕಳಿಗೂ ಅನ್ವಯಿಸುವ ಒಪ್ಪಂದ. 1992 ಡಿಸೆಂಬರ್ 11ರಂದು ಈ ಒಪ್ಪಂದಕ್ಕೆೆ ಭಾರತ ಸರಕಾರವೂ ಸಹ ಸಹಿ ಹಾಕಿದೆ.

ಈ ಸಂದರ್ಭದಲ್ಲಿ ಜಗತ್ತಿಿನ ಪ್ರಮುಖ ದೇಶಗಳಲ್ಲಿ ಆಚರಿಸುವ ಮಕ್ಕಳ ದಿನಾಚರಣೆಗಳ ಬಗ್ಗೆೆ ತಿಳಿದುಕೊಳ್ಳುವುದು ಬಹಳ ಮುಖ್ಯವೆನಿಸುತ್ತದೆ. ಭಾರತದಲ್ಲಿ ಚಾಚಾ ನೆಹರು ಅವರಿಗೆ ಮಕ್ಕಳ ಮೇಲಿನ ಮಮತೆ ಬಹಳಷ್ಟಿಿತ್ತು. ಆದ್ದರಿಂದ ಹಿರಿತನ, ಅಧಿಕಾರಗಳಗಳನ್ನು ಬದಿಗಿಟ್ಟು ಅತ್ಯಂತ ಸಂತೋಷದಿಂದ ತಮ್ಮ ಜನ್ಮದಿನವನ್ನು ಮಕ್ಕಳ ದಿನಾಚರಣೆ ಎಂದು ಆಚರಿಸಲು ಒಪ್ಪಿಿಕೊಂಡರು. ಈ ರೀತಿ ‘1951ರಲ್ಲಿ ನವೆಂಬರ್ 14ರಂದು ಭಾರತದಲ್ಲಿ ಮಕ್ಕಳ ದಿನಾಚರಣೆ’ ಆರಂಭವಾಯಿತು.

ಸಿಂಗಪುರದಲ್ಲಿ ಅಕ್ಟೋೋಬರ್ ಮೊದಲ ಶುಕ್ರವಾರವನ್ನು ಮಕ್ಕಳ ದಿನವನ್ನಾಾಗಿ ಆಚರಿಸಲಾಗುತ್ತದೆ. ಆ ದಿನ ಪೋಷಕರು ಮಕ್ಕಳಿಗೆ
ವಿಧವಿಧವಾದ ಕೊಡುಗೆಗಳನ್ನು ನೀಡುತ್ತಾಾರೆ. ಅಲ್ಲದೆ ಮಕ್ಕಳನ್ನು ಪ್ರವಾಸಕ್ಕೆೆ ಕರೆದೊಯ್ದು ನಾನಾ ಸ್ಥಳಗಳನ್ನು ಪರಿಚಯಿಸುತ್ತಾಾರೆ. ಅದೇರೀತಿ ಮೆಕ್ಸಿಿಕೋ ದೇಶದಲ್ಲಿ ಪ್ರತಿ ವರ್ಷ ಏಪ್ರಿಿಲ್ 20ರಂದು ‘ಎಲ್ ದಿಯಾ ದೆಲ್ ನಿನೊ’ ಎಂಬುದಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಾಾರೆ. ಅಂದು ಶಾಲೆಗಳು, ಪಾರ್ಕ್‌ಗಳಲ್ಲಿ ನಾನಾ ಸಂಘಟನೆಗಳು ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಶಾಲೆಗಳಲ್ಲಿ ಅಂದು ಪಾಠ ಪ್ರವಚನಗಳ ಬದಲಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ವಿಭಿನ್ನ ರೀತಿಯ ಆಹಾರ ಸವಿಯುವುದರ ಜತೆಗೆ ಮಕ್ಕಳು ಕ್ರೀಡೆಗಳಲ್ಲಿ ಪಾಲ್ಗೊೊಳ್ಳುತ್ತಾಾರೆ. ಲೈವ್ ಮ್ಯೂಸಿಕ್, ಸೂತ್ರದ ಬೊಂಬೆಯಾಟ ಮುಂತಾದ ಹಲವು ಕಾರ್ಯಕ್ರಮಗಳು ನಡೆಯುತ್ತವೆ.

ಬಾಂಗ್ಲಾಾ ದೇಶದಲ್ಲಿ ಈ ಮೊದಲು ಬಾಂಗ್ಲಾಾದೇಶದ ಪಿತಾಮಹ ಶೇಖ್ ಮುಜೆಬುರ್ ರೆಹಮಾನ್ ಜನ್ಮದಿನದ ಸ್ಮರಣೆಯಲ್ಲಿ ಮಾರ್ಚ್ 20ರಂದು ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿಿತ್ತು. ನಂತರ 2000ನೇ ಸಾಲಿನಲ್ಲಿ ಬಾಂಗ್ಲಾಾ ಸರಕಾರ ನವೆಂಬರ್ 20ರಂದು ಮಕ್ಕಳ ದಿನವನ್ನಾಾಗಿ ಆಚರಿಸುತ್ತಿಿದೆ. ಈ ದಿನದಂದು ಮಕ್ಕಳ ಹಕ್ಕುಗಳ ಬಗ್ಗೆೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿಿದೆ. ಜಪಾನಿನಲ್ಲಿ ಪ್ರತಿವರ್ಷ ಮೇ ತಿಂಗಳ 5ರಂದು ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿಿದೆ. ಈ ದಿನ ಕುಟುಂಬದ ಎಲ್ಲ ಸದಸ್ಯರು ಮಕ್ಕಳೊಂದಿಗೆ ಸೇರಿ ಬಣ್ಣ ಬಣ್ಣದ ಗಾಳಿಪಟಗಳನ್ನು ತಯಾರಿಸಿ ಹಾರಿಬಿಟ್ಟು ಖುಷಿಪಡುತ್ತಾಾರೆ. ಶಕ್ತಿಿ ಹಾಗೂ ಶೌರ್ಯವನ್ನು ಸಂಕೇತಿಸಲು ಸಮುರಾಯ್‌ಗಳ ಮೂರ್ತಿಗಳನ್ನು ಪ್ರತಿಷ್ಠಾಾಪಿಸುತ್ತಾಾರೆ. ಅಲ್ಲದೇ ಜಪಾನ್‌ನ ರಾಜಧಾನಿ ಟೊಕಿಯೋದಲ್ಲಿ ‘ಕಿಡ್‌ಸ್‌ ಒಲಿಂಪಿಕ್‌ಸ್‌’ ಕೂಡ ಆಯೋಜಿಸುತ್ತಾಾರೆ. ಅಲ್ಲಿ ಸಹಸ್ರಾಾರು ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿ, ಕುಣಿದು ಕುಪ್ಪಳಿಸುತ್ತಾಾರೆ.

ಚೀನಾದಲ್ಲಿ ಚೀನಾದಲ್ಲಿ ಮಕ್ಕಳನ್ನು ಭವಿಷ್ಯದ ಸಂಪನ್ಮೂಲ ಎಂದು ಪರಿಗಣಿಸಲಾಗುವುದರಿಂದ ಕ್ರಿಿಸ್‌ಮಸ್ ರೀತಿಯಲ್ಲಿಯೇ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಜೂನ್ 1ರಂದು ಚೀನಾದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ಆ ದಿನ ಮಕ್ಕಳಿಗಾಗಿ ವಿಭಿನ್ನ ಚಟುವಟಿಕೆಗಳನ್ನು ಹಮ್ಮಿಿಕೊಳ್ಳಲಾಗಿರುತ್ತದೆ. ಅಂದು ಚೀನಾದಲ್ಲಿ ಸಾರ್ವತ್ರಿಿಕ ರಜೆ ಇರುತ್ತದೆ. ಜರ್ಮನಿಯಲ್ಲಿ ಜೂನ್ 1ರಂದು ‘ಕಿಂಡರ್ ಟ್ಯಾಾಗ್’ ಎಂಬ ಹೆಸರಿನಲ್ಲಿ ಪ್ರತಿ ವರ್ಷ ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಜರ್ಮನಿಯಲ್ಲಿ 1950ರಿಂದಲೂ ಜೂನ್ 1ರಂದು ಮಕ್ಕಳ ದಿನವನ್ನಾಾಗಿ ಆಚರಿಸಿಕೊಂಡು ಬರಲಾಗುತ್ತಿಿದೆ. ಅಂದು ಶಾಲೆಗಳಲ್ಲಿ ಮಕ್ಕಳಿಗಾಗಿ ವಿಶೇಷ ಚಟುವಟಿಕೆ ಹಾಗೂ ಪ್ರವಾಸ ಏರ್ಪಡಿಸಲಾಗಿರುತ್ತದೆ.

ಇನ್ನೂ ಪೋಲೆಂಡ್‌ನಲ್ಲಿ 1952ರಲ್ಲಿ ಮೊಟ್ಟ ಮೊದಲ ಬಾರಿಗೆ ಜೂನ್ 1ರಂದು ಅಂತಾರಾಷ್ಟ್ರೀಯ ಮಕ್ಕಳ ದಿನ ಆಚರಿಸಲಾಗಿದ್ದು, ಮುಂದುವರೆದಿದೆ. ಈ ದಿನದಂದು ಪೋಷಕರು ಮಕ್ಕಳಿಗಾಗಿ ವಿಶೇಷ ಉಡುಗೊರೆಗಳನ್ನು ನೀಡುತ್ತಾಾರೆ. ಜೂನ್ ಮೊದಲ ವಾರದಲ್ಲಿ ಹಲವು ಪಾರ್ಕ್‌ಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಿಕೊಳ್ಳಲಾಗಿರುತ್ತದೆ.
ದಕ್ಷಿಣ ಕೊರಿಯಾದಲ್ಲಿ ಪ್ರತಿ ವರ್ಷ ಮೇ.5ರಂದು ಮಕ್ಕಳ ದಿನವನ್ನಾಾಗಿ ಆಚರಿಸುತ್ತಾಾರೆ. ಅಂದು ಪಾಲಕರು ಮಕ್ಕಳಿಗೆ ವಿಶೇಷ ಉಡುಗೊರೆಗಳನ್ನು ನೀಡುತ್ತಾಾರೆ. ಆಟಿಕೆಗಳ ಬದಲಾಗಿ ಹಲವು ಉಪಯುಕ್ತ ಪುಸ್ತಕಗಳು, ಇಲ್ಲವೇ ಬಟ್ಟೆೆಗಳನ್ನು ಹೆಚ್ಚಾಾಗಿ ಕೊಡುಗೆ ರೂಪದಲ್ಲಿ ನೀಡಲಾಗುತ್ತದೆ.

ಥಾಯ್ಲೆೆಂಡ್‌ನಲ್ಲಿ ಪ್ರತಿ ವರ್ಷದ ಜನವರಿ ತಿಂಗಳ ಎರಡನೇ ಶನಿವಾರವನ್ನು ಮಕ್ಕಳ ದಿನವೆಂದು ಆಚರಿಸುತ್ತಾಾರೆ. ಮಕ್ಕಳು ದೇಶದ ಅತ್ಯಮೂಲ್ಯ ಸಂಪನ್ಮೂಲ ಎಂದು ಪರಿಗಣಿಸಿ ಈ ದಿನ ಮಕ್ಕಳಿಗೆ ಅವರ ಮಹತ್ವದ ಬಗ್ಗೆೆ ಮತ್ತು ಮಕ್ಕಳನ್ನು ಬೆಳೆಸುವ ಸಮಾಜದ ಜವಾಬ್ದಾಾರಿಗಳ ಬಗ್ಗೆೆ ಪೋಷಕರಿಗೆ ಅರಿವು ಮೂಡಿಸಲಾಗುತ್ತದೆ. ಆ ದಿನ ಥಾಯ್ಲೆೆಂಡ್‌ನ ಬಸ್‌ಗಳು, ಉದ್ಯಾಾನಗಳು, ಸರಕಾರಿ ಕಚೇರಿಗಳು ಅಥವಾ ಸರಕಾರಿ ಕಾರ್ಯಾಲಯ, ಸೇನಾ ಕಾರ್ಯಾಲಯಗಳಿಗೆ ಉಚಿತ ಪ್ರವೇಶವಿರುತ್ತದೆ. ಜತೆಗೆ ಮಕ್ಕಳಿಗೆ ಯುದ್ಧ ವಿಮಾನಗಳ ಪರಿಚಯ ಮಾಡಿಕೊಡಲು ರಾಯಲ್ ಥೈ ಏರ್ ಫೋರ್ಸ್ ಅನುಮತಿ ನೀಡುತ್ತದೆ.

ಟರ್ಕಿಯಲ್ಲಿ ಪ್ರತಿ ವರ್ಷ ಏಪ್ರಿಿಲ್ 23ರಂದು ಮಕ್ಕಳ ದಿನವನ್ನಾಾಗಿ ಆಚರಿಸುತ್ತಾಾರೆ. ಆ ದಿನ ದೇಶಾದ್ಯಂತ ಮಕ್ಕಳು ಟರ್ಕಿ ಪಾರ್ಲಿಮೆಂಟ್‌ನಲ್ಲಿ ಕುಳಿತು ಸಾಂಕೇತಿಕವಾಗಿ ಸರಕಾರ ನಡೆಸುತ್ತಾಾರೆ. ಜತೆಗೆ ದೇಶ ವಿದೇಶಗಳಿಂದಲೂ ಮಕ್ಕಳನ್ನು ಆಹ್ವಾಾನಿಸುವುದಲ್ಲದೆ ಅವರಿಗೆ ಸಾಂಪ್ರದಾಯಿಕ ಉಡುಗೆ ತೊಡುವ ಸ್ಪರ್ಧೆ ಆಯೋಜನೆ ಮಾಡುತ್ತಾಾರೆ. ಅರ್ಜೆಂಟೈನಾದಲ್ಲಿ ಆಗಸ್‌ಟ್‌ ತಿಂಗಳ ಮೂರನೇ
ಭಾನುವಾರವನ್ನು ಮಕ್ಕಳ ದಿನವನ್ನಾಾಗಿ ಆಚರಿಸುತ್ತಾಾರೆ.

ಉಳಿದಂತೆ ಆಗಸ್‌ಟ್‌ 30ರಂದು ಬ್ರಿಿಟನ್, ಜೂನ್ ತಿಂಗಳ 2ನೇ ಭಾನುವಾರ ಯುಎಸ್‌ಎ, ನವೆಂಬರ್ 20ರಂದು ಪಾಕಿಸ್ತಾಾನ,
ಅಕ್ಟೋೋಬರ್ ತಿಂಗಳ 4ನೇ ಬುಧವಾರ ಆಸ್ಟ್ರೇಲಿಯಾ, ಮಾರ್ಚ್ ಮೊದಲ ಭಾನುವಾರ ನ್ಯೂಜಿಲ್ಯಾಾಂಡ್,
ಫೆಬ್ರವರಿ 13ರಂದು ಮಯನ್ಮಾಾರ್, ಮೇ ತಿಂಗಳ ಎರಡನೇ ಭಾನುವಾರ ಸ್ಪೇನ್, ಜುಲೈ 29ರಂದು ಕೊಲಂಬಿಯಾ, ಅಕ್ಟೋೋಬರ್ 8ರಂದು ಇರಾನ್, ಅಕ್ಟೋೋಬರ್‌ರಂದು ಬ್ರೆೆಜಿಲ್, ಅಕ್ಟೋೋಬರ್ 1ರಂದು ಶ್ರೀಲಂಕಾದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿಿದೆ.

1954ರಲ್ಲಿ ವಿಶ್ವ ಸಂಸ್ಥೆೆಯ ಸಾಮಾನ್ಯ ಸಭೆಯು ನವೆಂಬರ್ 20ರಂದು ಅಂತಾರಾಷ್ಟ್ರೀಯ ಮಕ್ಕಳ ದಿನವನ್ನಾಾಗಿ ಆಚರಿಸಲು ತೀರ್ಮಾನಿಸಿದ್ದು, ವಿಶ್ವ ಸಂಸ್ಥೆೆಯ ಈ ತೀರ್ಮಾನಕ್ಕೆೆ 191 ದೇಶಗಳು ಒಪ್ಪಿಿಗೆ ಸೂಚಿಸಿವೆ. ಆದರೆ, ಇದೇ ದಿನ ಮಕ್ಕಳ ದಿನಾಚರಣೆಯನ್ನು ಆಚರಿಸಬೇಕೆಂದಿಲ್ಲ. ನಾನಾ ದೇಶಗಳು ತಮಗೆ ಅನುಕೂಲವಾಗುವ ದಿನವನ್ನು ಮಕ್ಕಳ ದಿನವನ್ನಾಾಗಿ ಆಚರಣೆ ಮಾಡಬಹುದು ಎಂದು ವಿಶ್ವ ಸಂಸ್ಥೆೆಯು ಅವಕಾಶ ಕಲ್ಪಿಿಸಿದೆ. ಹಾಗಾಗಿ ಬೇರೆ ಬೇರೆ ದಿನವನ್ನು ಮಕ್ಕಳ ದಿನವನ್ನಾಾಗಿ ಆಚರಣೆ ಮಾಡಲಾಗುತ್ತದೆ.