Saturday, 14th December 2024

ಗಗನಯಾನ ಯೋಜನೆ ಸ್ಥಳಾಂತರ ಸಲ್ಲ

ISRO- PSLV

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) 2023ರ ಮಾನವಸಹಿತ ಗಗನಯಾನ ಯೋಜನೆಯನ್ನು ಬೆಂಗಳೂರಿನಿಂದ ಗುಜರಾತ್‌ಗೆ ಸ್ಥಳಾಂತರಿಸಲಾಗುತ್ತಿದ್ದು, ಅದರ ಭಾಗವಾಗಿ ಅಂತಿಮ ಹಂತದಲ್ಲಿರುವ ಯೋಜನೆಯ ಕಾರ್ಯಕ್ರಮಗಳಿಗೆ ತಡೆ ನೀಡಲಾಗಿದೆ ಎಂದು ವರದಿಯಾಗಿದೆ.

ಎತ್ತಿನಗಾಡಿ, ಸೈಕಲ್ ಮೇಲೆ ರಾಕೆಟ್ ಹೊತ್ತುಕೊಂಡು ಹೋಗಿ ಬೆಂಗಳೂರಿನಲ್ಲಿ ಇಸ್ರೋ ಸಂಸ್ಥೆ ಕಟ್ಟಿ ಬೆಳೆಸಲಾಗಿದೆ. ವಿಜ್ಞಾನಿಗಳು ಹಗಲು-ರಾತ್ರಿ ಶ್ರಮಿಸಿ ಇಸ್ರೋ ಅಭಿವೃದ್ಧಿಗೆ ಕಾರಣರಾಗಿzರೆ. ಇಲ್ಲಿಂದಲೇ ಅನೇಕ ಯೋಜನೆಗಳು ಸಫಲವಾಗಿವೆ. ಈಗ ಇದ್ದಕ್ಕಿಂದಂತೆ ಸ್ಥಳಾಂತರ ಮಾಡುವ ಕಾರಣ ಎನು ಎಂಬುದಕ್ಕೆ ಅರ್ಥವಾಗದ ಸಂಗತಿ. ಇಸ್ರೋಂ ಸಂಸ್ಥೆಯಲ್ಲಿ ಸುಮಾರು ೧೫ ಸಾವಿರ ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ಮಾಹಿತಿ ತಂತ್ರಜ್ಞಾನ ಕೇಂದ್ರವಷ್ಟೇ ಅಲ್ಲ, ತಾಂತ್ರಿಕ ಅನ್ವೇಷಣೆಗಳ ಹಬ್ ಕೂಡ ಆಗಿದೆ. ಇಸ್ರೋ ಕೇಂದ್ರದಲ್ಲಿ ಮಾನವ ಸಹಿತ ವೈಮಾನಿಕ ಯಾನಕ್ಕೆ 2007ರಿಂದಲೂ ಸಂಶೋ ಧನಾ ಯೋಜನೆ ನಡೆಯು ತ್ತಿದೆ. ಈಗ ಇದನ್ನು ಗುಜರಾತ್‌ಗೆ ಸ್ಥಳಾಂತರಿಸುವುದರಿಂದ ಕರ್ನಾಟಕಕ್ಕೆ ದೊಡ್ಡ ನಷ್ಟವೇ ಆಗಲಿದೆ.

ರಾಜ್ಯದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಭಾರತೀಯ ವಿಜ್ಞಾನ ಸಂಸ್ಥೆಯಂತಹ (ಐಐಎಸ್‌ಸಿ) ರಾಷ್ಟ್ರ ಮಟ್ಟದ ಸರಕಾರಿ ಸಂಸ್ಥೆಗಳಿವೆ. ಈ ಕಾರಣಕ್ಕೆ ಇಡೀ ಜಗತ್ತು ಇಂದು ರಾಜ್ಯದತ್ತ ನೋಡು ವಂತೆ ಆಗಿದೆ. ಇನ್ನೊಂದೆಡೆ, ಜಗತ್ತಿನ ಸಾ-ವೇರ್ ಕ್ಷೇತ್ರದ ಪ್ರಸಿದ್ಧ ಕಂಪನಿಗಳು ಸೇರಿ ನೂರಾರು ಕಂಪನಿಗಳು ಬೆಂಗಳೂರಿನಲ್ಲಿ ಬೀಡುಬಿಟ್ಟಿವೆ. ಹೀಗಿರುವಾಗ ಇಸ್ರೋದ ಉದ್ದೇಶಿತ ಮಾನವಸಹಿತ ಗಗನಯಾನ ಯೋಜನೆಯನ್ನು ಬೆಂಗಳೂರಿನಿಂದ ಗುಜರಾತ್‌ಗೆ ಸ್ಥಳಾಂತ ರಿಸುವುದು ಎಷ್ಟರಮಟ್ಟಿಗೆ ಸರಿ? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಪ್ರಧಾನಿ ನರೇಂದ್ರ ಮೋದಿ ಬಳಿಗೆ ರಾಜ್ಯದಿಂದ ನಿಯೋಗ ಕೊಂಡೊಯ್ಯುವ ಮೂಲಕ ಇಸ್ರೋದ ಪ್ರಮುಖ ಯೋಜನೆಯೊಂದು ರಾಜ್ಯದಲ್ಲೇ ಉಳಿಯುವಂತೆ ನೋಡಿ ಕೊಳ್ಳಬೇಕು.

ಇಂತಹ ಸನ್ನಿವೇಶದಲ್ಲಿ ರಾಜ್ಯದ ಸರ್ವ ಪಕ್ಷಗಳು ಒಗ್ಗಟ್ಟಾಗಬೇಕು. ರಾಜ್ಯದಿಂದ ಆಯ್ಕೆಯಾದ ಬಿಜೆಪಿ 28 ಲೋಕಸಭಾ ಸದಸ್ಯರು, 12 ರಾಜ್ಯಸಭಾ ಸದಸ್ಯರು ಕೇಂದ್ರ ಸರಕಾರದ ಮುಲಾಜಿಗೆ ಒಳಗಾಗದೇ ಒಗ್ಗಟ್ಟು ಪ್ರದರ್ಶಿಸುವ ಮೂಲಕ ರಾಜ್ಯದ ಹಿರಿಮೆ, ಸ್ವಾಭಿಮಾನ ಮುಖ್ಯ ಎಂಬುದನ್ನು ಸಾಬೀತು ಪಡಿಸಬೇಕಿದೆ