ವಿವಾದಕ್ಕೆ ತೆರೆಯೆಳೆದ ನಟಿ ಲೀಲಾವತಿ!
ಪಿಂಡ ಪ್ರದಾನದಿಂದ ಮಾಹಿತಿ ಬಹಿರಂಗ
ರವಿರಾಜ ಅಜ್ರಿ
ಹೌದು. ಈ ವಿಷಯ ದೃಶ್ಯ ಮಾಧ್ಯಮ ಹಾಗೂ ಪತ್ರಿಕಾ ಮಾಧ್ಯಮಗಳಲ್ಲಿ ಅಂಥ ಸುದ್ದಿಯೇ ಆಗಲಿಲ್ಲ! ಕಳೆದ ಅಕ್ಟೋಬರ್
29 ರಂದು ಕನ್ನಡದ ಹೃದಯವಂತ ಯುವನಟ ಪುನೀತ್ ರಾಜ್ ಕುಮಾರ್ ತಮ್ಮ 46ರ ಹರೆಯದಲ್ಲಿ ಅಕಸ್ಮಾತ್ ನಿಧನ ಹೊಂದಿ ರುವುದರಿಂದ, ಆ ಸುದ್ದಿಯ ಪ್ರಸಾರದಲ್ಲೇ ಮಾಧ್ಯಮಗಳು ಮುಳುಗಿದ್ದುದರಿಂದ, ಇದು ಸಣ್ಣ ವಿಷಯವಾಗಿ ಅವರಿಗೆ ಕಂಡಿತು.
ಆದರೆ ಈ ವಿಷಯ ಜಾಲತಾಣ ಮಾಧ್ಯಮದಲ್ಲಿ ಮಾತ್ರ ಚರ್ಚೆ-ವಿವಾದದ ಎಡೆ ಮಾಡಿ ಕೊಟ್ಟದ್ದು ಮಾತ್ರ ಸತ್ಯ. ಕಳೆದ ತಿಂಗಳು ಪುನೀತ್ ರಾಜ್ಕುಮಾರ್ ನಿಧನರಾಗಿ 12ನೇ ದಿನಕ್ಕೆ ಕಂಠೀರವ ಸ್ಟುಡಿಯೋದಲ್ಲಿ ತಿಥಿ ಕಾರ್ಯಕ್ರಮ ನಡೆದ ಸಂದರ್ಭದಲ್ಲಿ ಹಿರಿಯ ನಟಿ ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಶ್ರೀರಂಗಪಟ್ಟಣದ ಕಾವೇರಿ ನದಿ ತೀರ ದಲ್ಲಿ ಪಿಂಡ ಪ್ರಧಾನ ಮಾಡಿದ್ದರು.
ಈ ಸುದ್ದಿ ದೃಶ್ಯ ಮಾಧ್ಯಮ ಹಾಗೂ ಕನ್ನಡ ಪತ್ರಿಕೆ ಗಳಲ್ಲಿ ಪುನೀತ್ ರಾಜ್ಕುಮಾರ್ಗೆ ವಿನೋದ್ರಾಜ್ ಪಿಂಡ ಪ್ರಧಾನ ಮಾಡಿದರು ಎಂದು ಸಣ್ಣ ಶಿರೋನಾಮೆಯಲ್ಲಿ ಪ್ರಸಾರ ಹಾಗೂ ಪ್ರಕಟ ಮಾಡಿದರು. ಆದರೆ ಈ ಸುದ್ದಿ ಎಷ್ಟು ಸತ್ಯ ಎಂದು ಈಗ ‘ತುಳಸಿ ಕನ್ನಡ ಯೂಟ್ಯೂಬ್ ಚಾನೆಲ್ ’ ಪ್ರಸಾರ ಮಾಡಿದ ಪಿಂಡ ಪ್ರಧಾನ ಮಾಡಿದ ಕಾರ್ಯಕ್ರಮದ ವೀಡಿಯೋ ನೋಡಿದಾಗ ನಮಗೆ ಅರಿವಾಗುತ್ತದೆ.
ಆ ವೀಡಿಯೋದಲ್ಲಿ ಪುನೀತ್ ರಾಜ್ಕುಮಾರ್ಗಿಂತ ಮುಖ್ಯವಾಗಿ ಕನ್ನಡ ಕಂಡ ಶ್ರೇಷ್ಠ ನಟ ರಾಜ್ಕುಮಾರ್ಗೆ ಆ ದಿನ ವಿನೋದ್ ರಾಜ್ ಪಿಂಡ ಬಿಟ್ಟಿದ್ದನ್ನೂ ಸೆರೆ ಹಿಡಿದಿದ್ದಾರೆ. ಅಂದರೆ, ಆ ಚಾನೆಲ್ ನೋಡಿದಾಗ, ವಿನೋದ್ ರಾಜ್ ತಂದೆ ರಾಜ್ಕುಮಾರ್ ಎಂದೂ ಸುಲಭವಾಗಿ ಅರ್ಥವಾಗುತ್ತದೆ. ಲೀಲಾ ವತಿ ಅವರು ರಾಜ್ ಹೆಸರಿನಲ್ಲಿ ವಿನೋದ್ರಾಜ್ಗೆ ಪಿಂಡ ಬಿಡಲು ಅನುಮತಿ ನೀಡಿದ್ದರಿಂದ ರಾಜ್ಕುಮಾರ್ ವಿನೋದ್ರಾಜ್ ತಂದೆಯೆಂದು ಹೇಳಿದಂತಾಗುತ್ತದೆ.
ಲೀಲಾವತಿ ಮಗನ ತಂದೆ ಯಾರೆಂದು ತಿಳಿಸಲು ಭಯಪಡುತ್ತಿದ್ದರು!: ಭಯ ಪಡಲು ಕಾರಣ? ರಾಜ್ ಕುಮಾರ್ಗೆ ಪಾರ್ವ ತಮ್ಮನವರೊಂದಿಗೆ ಮೊದಲೇ ಮದುವೆಯಾಗಿತ್ತು. ರಾಜ್ಕುಮಾರ್ ಹಾಗೂ ಲೀಲಾವತಿ ಅವರು ಸಿನಿಮಾಗಳಲ್ಲಿ ಒಟ್ಟಿಗೆ ಅಭಿ ನಯಿಸುತ್ತಿದ್ದುದರಿಂದ ಅವರಿಬ್ಬರಲ್ಲಿ ಅನುರಾಗ ಬೆಳೆದು, ಸಂಬಂಧ ಬೆಳೆದಿತ್ತು. ಆದರೆ ಮದುವೆಯಾಗಲು ಅನೇಕ ಅಡ್ಡಿ ಗಳಿದ್ದವು. ಪಾರ್ವತಮ್ಮನ ಒಪ್ಪಿಗೆ ಬೇಕಿತ್ತು. ಅದು ಸಾಧ್ಯವಿರಲಿಲ್ಲ. ಈ ವಿಷಯದಲ್ಲಿ ಯಾವ ಹೆಣ್ಣೂ ಒಪ್ಪುವುದು ಕಷ್ಟ. ಇದಕ್ಕಿಂತಲೂ ಮತ್ತೊಂದು ದೊಡ್ಡ ತಡೆಗೋಡೆಯಿತ್ತು. ಲೀಲಾವತಿ ಅವರು ಸಿನಿಮಾರಂಗಕ್ಕೆ ಬರುವ ಮೊದಲು ನಾಟಕ, ರಂಗ ಭೂಮಿಯಲ್ಲಿ ಅಭಿನಯಿಸಿದ್ದರು.
ಸುಬ್ಬಯ್ಯ ನಾಯಿಡು ನಾಟಕ ಕಂಪೆನಿ, ಮಹಾಲಿಂಗ ಭಾಗವತರ ನಾಟಕ ಕಂಪನಿಗಳಲ್ಲಿ ನಟಿಸುತ್ತಿದ್ದರು. ಅಲ್ಲಿ ಲೀಲಾವತಿ ಅವರಿಗೆ ಮಹಾಲಿಂಗ ಭಾಗವತರ ನಡುವೆ ಸಂಬಂಧವಿತ್ತೆಂದು ಕೂಡ ಹೇಳಲಾ ಗಿದೆ. ಈಗಲೂ ವಿನೋದ ಅವರ ಪೋಷಕರ ದಾಖಲೆಗಳಲ್ಲಿ ಲೀಲಾವತಿ ಹಾಗೂ ಮಹಾಲಿಂಗ ಭಾಗವತರೆಂದು ಇದೆ. ೧೯೮೭ರಲ್ಲಿ ಬಿಡುಗಡೆಗೊಂಡ ದ್ವಾರಕೀಶ್ ನಿರ್ಮಾ ಣದ ‘ಡ್ಯಾನ್ಸ್ ರಾಜ ಡ್ಯಾನ್ಸ್’ ವಿನೋದರಾಜ್ ಅಭಿನಯದ ಮೊದಲ ಚಿತ್ರ. ಆ ಚಿತ್ರದಲ್ಲಿ ವಿನೋದ್ ಹೆಸರಿಗೆ ‘ರಾಜ್’ ಸೇರಿಸಿದ ಅನಂತರವೇ ‘ರಾಜ್ಕುಮಾರ್ ಪುತ್ರ’ನೆಂದು ಸುದ್ದಿ ಹರಡಿ-ಅನುಮಾನದ ಗೊಂದಲಗಳಿಗೆ ಕಾರಣವಾಯಿತು.
ಆ ಬಳಿಕ ಲೀಲಾವತಿ ಭಯದ ವಾತಾವರಣದಲ್ಲಿ ಬದುಕ ತೊಡಗಿದರು. ಸುಮಾರು ೨೬ ಚಿತ್ರಗಳಲ್ಲಿ ವಿನೋದ್ ರಾಜ್ ಅಭಿ ನಯಿಸಿದ್ದರು. ಇತ್ತೀಚಿನ 10-12 ವರ್ಷಗಳಲ್ಲಿ ವಿನೋದ್ ರಾಜ್ಗೆ ಚಿತ್ರಗಳು ಕಡಿಮೆಯಾದವು. ಅವರ ಒಲವು ಕೃಷಿ ಕ್ಷೇತ್ರದ ಕಡೆ ಹರಿಯಿತು. ಚಿತ್ರರಂಗದಲ್ಲಿ ನಮ್ಮನ್ನು ತುಳಿಯ ತೊಡಗಿದರು; ಏಳೆಂಟು ಸಾರಿ ಆಕ್ಸಿಡೆಂಟ್ ಮಾಡಿದ್ದರು’ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ವಿನೋದ್ ರಾಜ್ ಹೇಳಿದ್ದರು. ಈಗ ವಿನೋದ್ರಾಜ್ಗೆ ಜೀವರಕ್ಷಣೆಗೆ ಪಿಸ್ತೂಲು ಕೂಡ ಇದೆ.
ಎಲ್ಲಿ ತಪ್ಪಿದ್ದರು ಲೀಲಾವತಿ?: ‘ಮಗನ ತಂದೆ ತಾಯಿಗೆ ಗೊತ್ತಿಲ್ಲದೆ ಬೇರೆ ಯಾರಿಗೆ ಗೊತ್ತಿರಲು ಸಾಧ್ಯ?’- ಈ ವಿಷಯವನ್ನು ಸಮಾಜದ ಮುಂದಿಡಲು ಭಯದ ಹಿಂಜರಿಕೆಯಿಂದ ಲೀಲಾವತಿ ಅವರು ಸೋತರು. ಕೇವಲ ಇದೊಂದು ವಿಷಯವಲ್ಲದೆ, ಪತ್ರಕರ್ತರು ಲೀಲಾವತಿ ಅವರ ಸಂದರ್ಶನಕ್ಕೆ ಬಂದಾಗ, ತನ್ನ ಕುಟುಂಬದ ಹಿನ್ನಲೆ ತಿಳಿಸುತ್ತಿರಲಿಲ್ಲ. ಅವರು ಕರಾವಳಿ ಕಡೆಯವರು, ತುಳು ಮಾತಾಡುವವರೆಂದು ಹೆಚ್ಚಿನವರಿಗೆ ಮಾತ್ರ ಗೊತ್ತು. ನಾನೇ ಅನೇಕ ಸಾರಿ ಅವರಲ್ಲಿ ಕೆದಕಿ ಕೇಳಿದಾಗ, ಒಮ್ಮೆ ಉಡುಪಿಯವರೆಂದೂ, ಮತ್ತೊಮ್ಮೆ ಬೆಳ್ತಂಗಡಿಯವರೆಂದೂ ಹೇಳುತ್ತಾರೆ. ಈ ತನಕವೂ ಅವರ ಕುಟುಂಬದ ಹಿನ್ನಲೆ (ತಂದೆ-ತಾಯಿ) ಯಾರೆಂದೂ ಗೊತ್ತಿಲ್ಲ; ಎಲ್ಲಿಯೂ ದಾಖಲಾಗಿಲ್ಲ.
***
ಕಳೆದ ತಿಂಗಳು ಶ್ರೀರಂಗಪಟ್ಟಣದ ಕಾವೇರಿ ತೀರದಲ್ಲಿ ರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ಗೆ ಒಟ್ಟಿಗೆ ಪಿಂಡ ಬಿಡಲು ವಿನೋದ್ರಾಜ್ಗೆ ಧೈರ್ಯ ಮಾಡಿ, ಲೀಲಾವತಿ ಅವರು ಅನುಮತಿ ನೀಡಿದ್ದರು. ಈ ವಿಷಯದಲ್ಲಿ ತಾಯಿ-ಮಗನಿಗೆ ನಮ್ಮ ಶುಭ ಹಾರೈಕೆ. ದಾಖಲೆ ಪ್ರಕಾರ ಲೀಲಾವತಿ ಅವರಿಗೆ ಈಗ 83ರ ಪ್ರಾಯ. 1938 ರಲ್ಲಿ ಬೆಳ್ತಂಗಡಿಯಲ್ಲಿ ಜನನ. ಮಗ ವಿನೋದ್ ರಾಜ್ ಜುಲೈ 5,1967ರಲ್ಲಿ ಮದರಾಸ್ನಲ್ಲಿ ಜನನ.
ವೀಡಿಯೋದಲ್ಲಿ ಏನಿದೆ..?
ಶ್ರೀರಂಗಪಟ್ಟಣದ ಕಾವೇರಿ ತೀರದಲ್ಲಿ ಪಿಂಡ ಪ್ರಧಾನದ ಅನಂತರ, ಕಿರು ಪತ್ರಿಕಾಗೋಷ್ಠಿಯನ್ನು ವಿನೋದ್ ರಾಜ್-ಲೀಲಾವತಿ ಮಾಡಿದ್ದಾರೆಂದೂ ವಿಡಿಯೋ ಸಂದರ್ಶನದಲ್ಲಿ ಗೊತ್ತಾಗುತ್ತದೆ. ರಾಜ್ಕುಮಾರ್ ನಿಧನ ಹೊಂದಿ ಈಗಾಗಲೇ 15-16 ವರ್ಷ ಗಳು ಕಳೆದಿವೆ. ನಾವು ಕಾಶಿಯಲ್ಲಿ ಅವರಿಗೆ ಪಿಂಡ ಬಿಡಲು ನಿರ್ಧರಿಸಿದ್ದೆವು. ಅವರ ಸಮಾಧಿಯ ಮಣ್ಣನ್ನು ಕಾಯಿದಿರಿಸಿದ್ದೆವು.
ಅನಿವಾರ್ಯ ಕಾರಣಗಳಿಂದ ಆ ಕೆಲಸ ನೆರವೇರಿಸಲು ಆಗಲಿಲ್ಲ. ಈಗ ಕಾಲ ಕೂಡಿ ಬಂತು. ಕಾಲಕ್ಕೆ ಹೊಂದಿಕೊಂಡು ನಾವು ಬದುಕಬೇಕಾಗಿದೆ. ಹಾಗೆಯೇ ಬದುಕುತ್ತಿದ್ದೇವೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.
ಹಿಂದೂ ಸಂಪ್ರದಾಯದಲ್ಲಿ ಪಿಂಡ ಬಿಡುವುದು ಯಾರಿಗೆ?
ಹಿಂದೂ ಸಂಪ್ರದಾಯದಲ್ಲಿ ವೈದಿಕರಲ್ಲಿ ಹಾಗೂ ವೈದಿಕೇತರರಲ್ಲಿ ಶ್ರಾದ್ಧದ ದಿನ ಪಿಂಡ ಬಿಡುವ ಸಂಪ್ರದಾಯವಿದೆ. ಮಕ್ಕಳು ತಂದೆ- ತಾತನಿಗೆ ಪಿಂಡ ಬಿಡುವ ಪದ್ಧತಿ. ಮಕ್ಕಳಿಲ್ಲದಿದ್ದರೇ, ಹತ್ತಿರದ ಸಂಬಂಧದ ಸೋದರರು ಪಿಂಡ ಬಿಡುತ್ತಾರೆ. ಹೀಗಾಗಿ ರಾಜ್ ಕುಮಾರ್ಗೆ ವಿನೋದ್ರಾಜ್ ಪಿಂಡ ಬಿಡುವುದರಿಂದ ರಾಜ್ ಮಗನೆಂದು ಅರ್ಥವಾಯಿತಲ್ಲವೇ? ಇದು ಅಂಥ ದೊಡ್ಡ
ಸುದ್ದಿಯೇ? (ನಟಿ ಅಮೂಲ್ಯ ಗರ್ಭಿಣಿ ಎಂದು ಮಾಧ್ಯಮದಲ್ಲಿ ಬಿತ್ತರಿಸುವುದಕ್ಕಿಂತ ಇದು ಸಣ್ಣ ಸುದ್ದಿಯೇ?).