Saturday, 23rd November 2024

ಸಂಸದ್ ಟಿವಿ ನಿರೂಪಕಿ ಸ್ಥಾನಕ್ಕೆ ಪ್ರಿಯಾಂಕಾ ಚತುರ್ವೇದಿ ರಾಜೀನಾಮೆ

ನವದೆಹಲಿ: ʼಅಶಿಸ್ತಿನ ವರ್ತನೆʼಗಾಗಿ ಹನ್ನೊಂದು ಮಂದಿಯೊಂದಿಗೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ರಾಜ್ಯಸಭೆ ಯಿಂದ ಅಮಾನತುಗೊಂಡ ನಂತರ ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಸಂಸದ್ ಟಿವಿಯಲ್ಲಿನ ಕಾರ್ಯ ಕ್ರಮದ ನಿರೂಪಕಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸಂಸದ್ ಟಿವಿಯ ಮೇರಿ ಕಹಾನಿ ಕಾರ್ಯಕ್ರಮದ ನಿರೂಪಕಿ ಸ್ಥಾನದಿಂದ ನಾನು ಕೆಳಗಿಳಿಯುತ್ತಿರುವುದು ತೀವ್ರ ದುಃಖ ತಂದಿದೆ. ಸಂಸದ್ ಟಿವಿಯಲ್ಲಿ ಕಾರ್ಯಕ್ರಮವೊಂದಕ್ಕೆ ಸ್ಥಳ ಆಕ್ರಮಿಸಿಕೊಳ್ಳಲು ನನಗೆ ಇಷ್ಟವಿಲ್ಲ ಆದರೆ 12 ಸಂಸದರನ್ನು ಅನಿಯಂತ್ರಿತವಾಗಿ ಅಮಾನತುಗೊಳಿಸಿರುವ ಕಾರಣ ಸಂಸದೀಯ ಕರ್ತವ್ಯಗಳನ್ನು ನಿರ್ವಹಿಸಲು ನನಗೆ ಅವಕಾಶ ನಿರಾ ಕರಿಸಲಾಗಿದೆ.

ಆಗಸ್ಟ್‌ನಲ್ಲಿ ನಡೆದಿದ್ದ ಹಿಂದಿನ ಅಧಿವೇಶನದಲ್ಲಿ “ಅಶಿಸ್ತಿನ” ವರ್ತನೆಗಾಗಿ 12 ವಿರೋಧ ಪಕ್ಷದ ಸಂಸದರನ್ನು ಸಂಸತ್ತಿನ ಸಂಪೂರ್ಣ ಚಳಿಗಾಲದ ಅಧಿವೇಶನಕ್ಕಾಗಿ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿತ್ತು. ಅಮಾನತುಗೊಂಡಿದ್ದ ಸಂಸದ ರಲ್ಲಿ ಕಾಂಗ್ರೆಸ್‌ನ ಆರು, ತೃಣಮೂಲ ಕಾಂಗ್ರೆಸ್ ಮತ್ತು ಶಿವಸೇನೆಯ ತಲಾ ಇಬ್ಬರು ಮತ್ತು ಸಿಪಿಐ ಮತ್ತು ಸಿಪಿಐ(ಎಂ)ನ ತಲಾ ಒಬ್ಬರು ಸೇರಿದ್ದಾರೆ.