Wednesday, 27th November 2024

ತಂಬಾಕು ಉತ್ಪನ್ನ ನಿಷೇಧಿಸಿ ಆ.ಪ್ರದೇಶ ಸರ್ಕಾರ ಆದೇಶ

ಹೈದರಾಬಾದ್ : ತಂಬಾಕು ಉತ್ಪನ್ನಗಳನ್ನು ನಿಷೇಧಿಸಿ ಆಂಧ್ರಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ. ಇಂದಿನಿಂದ ತಂಬಾಕು, ಗುಟ್ಕಾ, ಪಾನ್ ಮಸಾಲಾವನ್ನು ನಿಷೇಧಿಸಲಾಗಿದೆ.

ರಾಜ್ಯದಲ್ಲಿ ಇಂದಿನಿಂದ ಗುಟ್ಕಾ, ಪಾನ್ ಮಸಾಲಾ ಮತ್ತು ಜಗಿಯಲಾದ ತಂಬಾಕು ವಸ್ತುಗಳ ತಯಾರಿಕೆ, ವಿತರಣೆ ಮತ್ತು ಮಾರಾಟವನ್ನು ಸರ್ಕಾರ ನಿಷೇಧಿಸಿದೆ. ಯಾರೇ ನಿಯಮಗಳನ್ನು ಉಲ್ಲಂಘಿಸಿದರೂ ಕ್ರಮ ತಪ್ಪಿಸಲಾಗುವುದು ಎಂದು ಎಚ್ಚರಿಸ ಲಾಗಿದೆ.

ನಿಕೋಟಿನ್ ತುಂಬಿದ ಉತ್ಪನ್ನಗಳು ಯಾವುದೇ ಹೆಸರಿನಲ್ಲಿ ತಯಾರಿಸಲು, ಮಾರಾಟ ಮಾಡಲು, ಪೂರೈಸಲು ಮತ್ತು ಸಂಗ್ರಹಿ ಸಲು ಅಪರಾಧವಾಗುತ್ತವೆ. ನಿಯಮ ಉಲ್ಲಂಘಿಸಿದರೆ ಕ್ರಮ ತಪ್ಪಿಸಲಾಗುವುದು ಎಂದು ಆಯುಕ್ತರು ಎಚ್ಚರಿಸಿದರು.

ಗುಟ್ಕಾ ನಿಷೇಧ ಪ್ರಶ್ನಿಸಿ ಹೈಕೋರ್ಟ್ ನಲ್ಲಿ 160 ಅರ್ಜಿಗಳು ಸಲ್ಲಿಕೆಯಾಗಿವೆ. ಇದೆಲ್ಲವನ್ನು ವಜಾ ಮಾಡಿ ಹೈಕೋರ್ಟ್ ತೀರ್ಪು ನೀಡಿದೆ.