Friday, 20th September 2024

ರಾಯಲ್ ಗೋಲ್ಡ್ ಮೆಡಲ್ 2022 ಪ್ರಶಸ್ತಿಗೆ ವಾಸ್ತುಶಿಲ್ಪಿ ಬಾಲಕೃಷ್ಣ ದೋಷಿ ಆಯ್ಕೆ

Balakrishna Doshi

ಲಂಡನ್: ಭಾರತೀಯ ವಾಸ್ತುಶಿಲ್ಪಿ ಬಾಲಕೃಷ್ಣ ದೋಷಿ ಅವರು ವಾಸ್ತುಶಿಲ್ಪಕ್ಕಾಗಿ ವಿಶ್ವದ ಅತ್ಯುನ್ನತ ಗೌರವಗಳಲ್ಲಿ ಒಂದಾದ ರಾಯಲ್ ಗೋಲ್ಡ್ ಮೆಡಲ್ 2022 ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

70 ವರ್ಷಗಳ ವೃತ್ತಿಜೀವನ ಮತ್ತು 100ಕ್ಕೂ ಹೆಚ್ಚು ವಾಸ್ತು ರಚನೆಗಳ ನಿರ್ಮಾಣ ದೊಂದಿಗೆ, 94 ವರ್ಷದ ದೋಷಿ ಅವರು ತಮ್ಮ ವಾಸ್ತುಶಿಲ್ಪ ಮತ್ತು ಬೋಧನೆಗಳ ಮೂಲಕ ಭಾರತ ಹಾಗೂ ಇತರೆ ದೇಶಗಳಲ್ಲಿನ ವಾಸ್ತುಶಿಲ್ಪದ ದಿಕ್ಕಿನ ಮೇಲೆ ಪ್ರಭಾವ ಬೀರಿ ದ್ದಾರೆ ಎಂದುಆರ್ ಐಬಿಎ ತಿಳಿಸಿದೆ.

ದೋಶಿ ಅವರ ಜೀವಮಾನದ ಸಾಧನೆ ಗುರುತಿಸಿ, ರಾಯಲ್ ಗೋಲ್ಡ್ ಮೆಡಲ್ ಅನ್ನು ರಾಣಿ ಎಲಿಜೆಬ್ತ್ II ವೈಯಕ್ತಿಕವಾಗಿ ಅನುಮೋದಿಸಿದ್ದಾರೆ.

“ಇಂಗ್ಲೆಂಡ್ ರಾಣಿಯಿಂದ ರಾಯಲ್ ಗೋಲ್ಡ್ ಮೆಡಲ್ ಸ್ವೀಕರಿಸಲು ನನಗೆ ತುಂಬಾ ಖುಷಿಯಾಗುತ್ತಿದೆ ಮತ್ತು ಆಶ್ಚರ್ಯವೂ ಆಗಿದೆ. ಇದು ಅತ್ಯಂತ ದೊಡ್ಡ ಗೌರವ” ಎಂದು ದೋಷಿ ಹೇಳಿದ್ದಾರೆ.

ದೋಶಿ ಮಹಾರಾಷ್ಟ್ರದ ಪುಣೆ ಮೂಲದ ವಾಸ್ತುಶಾಸ್ತ್ರಜ್ಞರಾಗಿದ್ದಾರೆ. ಜೆಫಿ ಸ್ಕೂಲ್ ಆಫ್ ಆರ್ಕಿಟೆಕ್ಚರ್ ನ ಹಳೆ ವಿದ್ಯಾರ್ಥಿಯಾಗಿ ರುವ ದೋಶಿ 1950ರಲ್ಲಿ ಪ್ಯಾರೀಸ್ ನಲ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ್ದರು.