ಬಾಕ್‌ಸ್; ಕ್ರೆೆಡಿಟ್ ಕಾರ್ಡ್ ಆಮಿಷವೊಡ್ಡಿಿ ಆನ್‌ಲೈನ್ ಮೂಲಕ ಹಣ ಅಪರಿಸುತ್ತಿಿರುವ ಪ್ರಕರಣಗಳು ಸಹ ಹೆಚ್ಚಾಾಗುತ್ತಿಿವೆ. ರಾಜ್ಯದಲ್ಲಿ ಪ್ರತಿನಿತ್ಯ ಕನಿಷ್ಠ 4 ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗುತ್ತಿಿದೆ.
ಕರ್ನಾಟಕ ಹಲವಾರು ಕಾರಣಗಾಗಿ ದೇಶಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಹೀಗೆ ಗುರುತಿಸಿಕೊಳ್ಳಲು ಅನೇಕ ಕಾರಣ. ಐಟಿ-ಬಿಟಿ ಜತೆಗೆ ಉದ್ಯಾಾನ ನಗರಿ, ವಾಣಿಜ್ಯ ನಗರಿ, ಅನೇಕ ಕಂಪನಿಗಳ ಆರಂಭದಿಂದ ಸ್ಟಾಾರ್ಟಪ್ ನಗರಿ ಎಂದೆಲ್ಲ ಕರೆಸಿಕೊಳ್ಳುತ್ತಿಿದೆ. ಇಂತಹ ಮಹತ್ವದ ನಗರಿ ಇದೀಗ ಕುಖ್ಯಾಾತಿಗೂ ಕಾರಣವಾಗುತ್ತಿಿರುವುದು ಇಂದಿನ ಆತಂಕ.
ಬೆಂಗಳೂರನ್ನು ಭಾರತದ ಐಟಿ ಕ್ಯಾಾಪಿಟಲ್ ಎಂದು ಕರೆಯುತ್ತಿಿರುವ ಕಾಲದಲ್ಲಿಯೇ ಬೆಂಗಳೂರು ಸೈಬರ್ ಕ್ರೈಂ ಹೆಚ್ಚಳದಿಂದ ದುಸ್ಥಿಿತಿ ಅನುಭವಿಸುತ್ತಿಿದೆ. 2017ನೇ ಸಾಲಿನಲ್ಲಿ 2023ರಷ್ಟಿಿದ್ದ ಸೈಬರ್ ಕ್ರೈಂ ಪ್ರಕರಣಗಳು, 2018ರಲ್ಲಿ 5036ಕ್ಕೆೆ ಏರಿಕೆಯಾಗಿತ್ತು. ಇದೀಗ 2019ರ ನವೆಂಬರ್ ಮಾಸದವರೆಗೆ ಪ್ರಸ್ತುತ 9602 ಪ್ರಕರಣಗಳು ನಡೆದಿರುವುದನ್ನು ಗಮನಿಸಿದರೆ, ಹೆಚ್ಚುತ್ತಿಿರುವ ಸೈಬರ್ ಕ್ರೈಂಗಳ ಏರಿಕೆಯ ವೇಗವನ್ನು ಗುರುತಿಸಬಹುದು.
ಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ ದಾಖಲಾಗಿರುವ ಸೈಬರ್ ಕ್ರೈಂ ಪ್ರಕರಣಗಳಲ್ಲಿ ಶೇ.30ರಷ್ಟು ಪ್ರಕರಣಗಳು ಕೆಲಸದ ಆಮಿಷವೊಡ್ಡಿಿ ವಂಚಿಸಿರುವ ಪ್ರಕರಣಗಳಾಗಿವೆ. ಉಳಿದಂತೆ ಕ್ರೆೆಡಿಟ್ ಕಾರ್ಡ್ ಆಮಿಷವೊಡ್ಡಿಿ ಆನ್‌ಲೈನ್ ಮೂಲಕ ಹಣ ಅಪರಿಸುತ್ತಿಿರುವ ಪ್ರಕರಣಗಳು ಸಹ ಹೆಚ್ಚಾಾಗುತ್ತಿಿವೆ. ರಾಜ್ಯದಲ್ಲಿ ಪ್ರತಿನಿತ್ಯ ಕನಿಷ್ಠ 4 ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗುತ್ತಿಿದ್ದು, ಅವುಗಳಲ್ಲಿ 3 ಪ್ರಕರಣಗಳು ಬೆಂಗಳೂರಿಗೆ ಸಂಬಂಧಿಸಿದ ಪ್ರಕರಣಗಳೆ ಆಗಿರುತ್ತವೆ.
ಒಂದೆಡೆ ಜನರು ಸುಶಿಕ್ಷಿಿತರು, ವಿದ್ಯಾಾವಂತರಾಗುತ್ತಿಿರುವ ದಿನಗಳಲ್ಲಿಯೇ ಆಧುನಿಕ ಸಂವಹನ ಮಾಧ್ಯಮಗಳ ದುರ್ಬಳಕೆ ಹೆಚ್ಚಳವಾಗುತ್ತಿಿರುವುದು ದುರಂತ. ವಂಚನೆ ಮಾಡುವವರು ಆಮಿಷಗಳ ಮೂಲಕ ನಂಬಿಕೆಹುಟ್ಟಿಿಸಿ, ನಂತರ ವಂಚನೆ ಮಾಡುತ್ತಿಿರುವ ಬೆಳವಣಿಗೆಯನ್ನು ಗಮನಿಸಿದಾಗ ನಂಬಿಕೆಗಳ ದುರ್ಬಳಕೆ ಎಂತಹ ಅನಾಹುತವನ್ನು ಸೃಷ್ಟಿಿಸುತ್ತಿಿದೆ ಎಂಬುದು ಅಚ್ಚರಿ ಮತ್ತು ಆತಂಕವನ್ನು ಮೂಡಿಸುತ್ತಿಿದೆ. ಈ ವರ್ಷದಲ್ಲಿ ಜುಲೈ 16ರವರೆಗೆ ನಗರ ಸೈಬರ್ ಕ್ರೈಂ ಠಾಣೆಯೊಂದರಲ್ಲೆ 5,741 ಪ್ರಕರಣಗಳು ದಾಖಲಾಗಿದ್ದು, ದಿನವೊಂದಕ್ಕೆೆ ಸರಾಸರಿ 30ರಿಂದ 60ರವರೆಗೆ ಪ್ರಕರಣಗಳು ದಾಖಲಾಗಿವೆ ಎಂಬ ಕೆಲವು ವರದಿಗಳನ್ನು ಗಮನಿಸಿದಾಗ ಸುರಕ್ಷತೆಯ ಬಗ್ಗೆೆ ಭೀತಿ ಮೂಡುತ್ತದೆ.
ಪೊಲೀಸ್ ಇಲಾಖೆಯೂ ಸಹ ಸುಮ್ಮನೆ ಕುಳಿತಿರುವುದಿಲ್ಲ. ಎಲ್ಲ ಪ್ರಕರಣಗಳಲ್ಲಿಯೂ ಅಪರಾಧಿಗಳು ಸಿಕ್ಕಿಿ ಬೀಳುವುದಿಲ್ಲ. ತನಿಖೆ, ಬಂಧನ, ಇದೆಲ್ಲಕ್ಕೂ ಸಮಯ ಹಾಗೂ ಇಲಾಖೆಗೆ ಸಮರ್ಪಕವಾದ ವ್ಯವಸ್ಥೆೆಗಳು, ಸಿಬ್ಬಂದಿ ಎಲ್ಲವೂ ಬೇಕಾಗುತ್ತದೆ. ಆದ್ದರಿಂದ ಪ್ರಕರಣಗಳು ಘಟಿಸಿದಾಗ ಪೊಲೀಸರ ಬಳಿ ಧಾವಿಸುವುದಕ್ಕಿಿಂತ ಮೊದಲೆ ಜಾಗೃತಿವಹಿಸುವುದು ಮುಖ್ಯ. ಆದ್ದರಿಂದ ಪೊಲೀಸ್ ಇಲಾಖೆಯೂ ಸಹ ಸಾರ್ವಜನಿಕರಲ್ಲಿ ಸೈಬರ್ ಕ್ರೈಂ ಬಗ್ಗೆೆ ಜಾಗೃತಿ ಮೂಡಿಸಲು ನಾನಾ ಕ್ರಮಗಳನ್ನು ಕೈಗೊಂಡಿದೆ. ಅವುಗಳಲ್ಲಿ ಕಿರುತೆರೆ ಕಲಾವಿದನ್ನು ಬಳಸಿಕೊಂಡು ಕಿರುಚಿತ್ರದ ಮೂಲಕ ಜಾಗೃತಿ ಆರಂಭಿಸಿರುವುದು ಸಹ ಒಂದಾಗಿದೆ.
ಇಂತಹ ಸಂದರ್ಭದಲ್ಲಿ ತಿಳಿಯಬೇಕಿರುವ ಬಹುಮುಖ್ಯ ಸಂಗತಿ ಎಂದರೆ ಅಪರಾಧ ನಿಯಂತ್ರಣ ಕೇವಲ ಪೊಲೀಸರ ಜವಾಬ್ದಾಾರಿಯಲ್ಲ, ಸುರಕ್ಷತೆಯ ನಿಟ್ಟಿಿನಲ್ಲಿ ನಾವುಗಳು ಸಹ ಜಾಗೃತಿವಹಿಸುವುದು ಹಾಗೂ ಪೊಲೀಸ್ ಇಲಾಖೆಗಳು ನೀಡುವ ಸಲಹೆಗಳನ್ನು ಪಾಲಿಸುವುದು ಇಂದಿನ ಅಗತ್ಯ. ಆನ್‌ಲೈನ್ ವ್ಯವಹಾರಗಳಲ್ಲಿ ಸೀಕ್ರೆೆಟ್ ಕೋಡ್‌ಗಳನ್ನು ಸುರಕ್ಷತೆಯಿಂದ ಕಾಪಾಡಿಕೊಳ್ಳುವುದು ಸಹ ಇಂದಿನ ಬಹುಮುಖ್ಯ ಸಂಗತಿ.