Sunday, 5th January 2025

ಕರ್ನಾಟಕ-ತಮಿಳುನಾಡು ಕಾದಾಟ

ಸೂರತ್:
ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿ ಟಿ-20 ಕ್ರಿಿಕೆಟ್ ಟೂರ್ನಿಯ ಗುಂಪು ಹಂತದಲ್ಲಿ ಅತ್ಯುತ್ತಮ ಪ್ರದರ್ಶನ ತೋರುವಲ್ಲಿ ಯಶಸ್ವಿಿಯಾಗಿರುವ ಕರ್ನಾಟಕ ತಂಡ, ಇಂದು ಸೂಪರ್ ಲೀಗ್‌ನ ಮೊದಲನೇ ಪಂದ್ಯದಲ್ಲಿ ಬಲಿಷ್ಟ ತಮಿಳುನಾಡು ವಿರುದ್ಧ ಇಲ್ಲಿನ ಲಾಲಾಬಾಯಿ ಕ್ರೀಡಾಂಗಣದಲ್ಲಿ ಸೆಣಸಲಿದೆ.

ಟೂರ್ನಿಯುದ್ದಕ್ಕೂ ಮನೀಷ್ ಪಾಂಡೆ ನಾಯಕತ್ವದ ಕರ್ನಾಟಕ ತಂಡ ಬ್ಯಾಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಿಂಗ್ ಮೂರು ವಿಭಾಗಗಳಲ್ಲಿ ಸ್ಥಿಿರ ಪ್ರದರ್ಶನ ತೋರುವಲ್ಲಿ ಯಶಸ್ವಿಿಯಾಗಿದೆ. ಗುಂಪು ಹಂತದಲ್ಲಿ ಆಡಿದ್ದ ಒಟ್ಟು ಆರು ಪಂದ್ಯಗಳಿಂದ ಐದರಲ್ಲಿ ಜಯ ಹಾಗೂ ಒಂದು ಪಂದ್ಯದಲ್ಲಿ ಸೋಲು ಅನುಭವಿಸಿತ್ತು. ಒಟ್ಟು 20 ಅಂಕಗಳೊಂದಿಗೆ ‘ಎ’ ಗುಂಪಿನಲ್ಲಿ ಅಗ್ರ ಸ್ಥಾಾನ ಪಡೆದಿತ್ತು. ಮತ್ತೊೊಂದೆಡೆ ತಮಿಳುನಾಡು ತಂಡ ಆಡಿದ್ದ ಒಟ್ಟು ಆರು ಪಂದ್ಯಗಳಲ್ಲಿ ಐದರಲ್ಲಿ ಜಯ, ಒಂದು ಸೋಲು ಅನುಭವಿಸಿತ್ತು. ಒಟ್ಟು 20 ಅಂಕಗಳೊಂದಿಗೆ ‘ಬಿ’ ಗುಂಪಿನಲ್ಲಿ ಅಗ್ರ ಸ್ಥಾಾನ ಅಲಂಕರಿಸಿದೆ.

ಅದ್ಭುತ ಲಯದಲ್ಲಿರುವ ದೇವದತ್ತ ಪಡಿಕ್ಕಲ್ ಮೇಲೆ ಇಂದಿನ ಪಂದ್ಯದಲ್ಲಿ ಹೆಚ್ಚಿಿನ ನಿರೀಕ್ಷೆೆ ಇಡಲಾಗಿದೆ. ಅವರು ಶತಕ ಸೇರಿದಂತೆ ಎರಡು ಅರ್ಧಶತಕ ಸಿಡಿಸಿ ಒಟ್ಟು ಆರು ಪಂದ್ಯಗಳಿಂದ 101.00 ಸರಾಸರಿಯಲ್ಲಿ 303 ರನ್ ದಾಖಲಿಸಿದ್ದಾಾರೆ. ಇವರ ಜತೆ ಮನೀಷ್ ಪಾಂಡೆ, ಕೆ.ಎಲ್ ರಾಹುಲ್, ಕರುಣ್ ನಾಯರ್ ಬ್ಯಾಾಟಿಂಗ್ ವಿಭಾಗದಲ್ಲಿ ಬಲ ತುಂಬಲಿದ್ದಾಾರೆ. ಇನ್ನೂ ಬೌಲಿಂಗ್ ವಿಭಾಗದಲ್ಲಿ ಶ್ರೇಯಸ್ ಗೋಪಾಲ್ ಅತ್ಯುತ್ತಮ ಪ್ರದರ್ಶನ ತೋರುವಲ್ಲಿ ಸಫಲರಾಗಿದ್ದಾಾರೆ. ಅವರು ಆರು ಪಂದ್ಯಗಳಿಂದ 13 ವಿಕೆಟ್ ಕಿತ್ತಿಿದ್ದಾಾರೆ. ವಿ.ಕೌಶಿಕ್, ರೋನಿತ್ ಮೋರೆ ಹಾಗೂ ಕೆ.ಗೌತಮ್ ಅನುಪಸ್ಥಿಿಯಲ್ಲಿ ಪ್ರವೀಣ್ ದುಬೆ ಮೇಲೆ ಸ್ಪಿಿನ್ ಜವಾಬ್ದಾಾರಿ ಇದೆ.

ಕರ್ನಾಟಕ ತಂಡದಂತೆ ತಮಿಳುನಾಡು ಗುಂಪು ಹಂತವನ್ನು ಯಶಸ್ವಿಿಯಾಗಿ ಮುಗಿಸಿದೆ. ವಿಜಯ್ ಹಜಾರೆ ಟ್ರೋೋಫಿಯ ಫೈನಲ್ ಹಣಾಹಣಿಯಲ್ಲಿ ಕರ್ನಾಟಕ ವಿರುದ್ಧ ತಮಿಳುನಾಡು ತಂಡ ಸೋಲು ಅನುಭವಿಸಿತ್ತು. ಇದೀಗ ಸೇಡು ತೀರಿಸಿಕೊಳ್ಳುವ ಯೋಜನೆಯೊಂದಿಗೆ ಕಣಕ್ಕೆೆ ಇಳಿಯಲಿದೆ. ಬಾಬಾ ಅಪರಜೀತ್, ದಿನೇಶ್ ಕಾರ್ತಿಕ್, ಮುರಳಿ ವಿಜಯ್ ತಂಡದ ಬ್ಯಾಾಟಿಂಗ್ ವಿಭಾಗದ ಬಲವಾಗಿದ್ದಾಾರೆ. ಮಧ್ಯಮ ಕ್ರಮಾಂಕದಲ್ಲಿ ಸ್ಟಾಾರ್ ಆಲ್ ರೌಂಡರ್ ವಿಜಯ್ ಶಂಕರ್ ಅವರ ಮೇಲೆ ಹೆಚ್ಚಿಿನ ನಿರೀಕ್ಷೆೆ ಇದೆ.

ಸಮಯ: ಇಂದು ಸಂಜೆ 6:30
ಸ್ಥಳ: ಲಾಲಾಬಾಯಿ ಕ್ರೀಡಾಂಗಣ, ಸೂರತ್

Leave a Reply

Your email address will not be published. Required fields are marked *