Sunday, 5th January 2025

ಭಾರತದಲ್ಲಿ ತಬ್ಲಿಗಿಗಳ ನಿಷೇಧ ಯಾವಾಗ ?

ವೀಕೆಂಡ್ ವಿಥ್ ಮೋಹನ್

ಮೋಹನ್ ವಿಶ್ವ

camohanbn@gmail.com

ಈ ಸಂಘಟನೆ, ಕ್ರಿಶ್ಚಿಯನ್ನರಂತೆ ಮತಾಂತರ ಮಾಡುವುದಿಲ್ಲ. ಆದರೆ ಪಾಕ್‌ನೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಭಾರತದ ಭದ್ರತೆಗೆ ಯಾವತ್ತಿದ್ದರೂ ಅಪಾಯಕಾರಿ. ಯಾವ ದೃಷ್ಟಿಯಲ್ಲಿ ನೋಡಿದರೂ ಈ ಸಂಘಟನೆಯನ್ನು, ಅದರ ಸದಸ್ಯರನ್ನು ನಂಬುವುದು ಅಸಾಧ್ಯ.

ಡಿಸೆಂಬರ್ 6ನೇ ತಾರೀಖು ಸೌದಿ ಅರೇಬಿಯಾ ಸರಕಾರದ ಇಸ್ಲಾಮಿಕ್ ವ್ಯವಹಾರಗಳ ಕಾರ್ಯಾಲಯ ಒಂದು ಟ್ವೀಟ್ ಮಾಡಿತು. ‘ಸೌದಿಯ ಮೌಲ್ವಿಗಳು ಬರುವ ಶುಕ್ರವಾರ ಮಸೀದಿಗಳಿಗೆ ಬರುವವರಲ್ಲಿ ‘ತಬ್ಲಿಗಿ ಜಮಾತ್’ ಸಂಘಟನೆಯ ಅಪಾಯಕಾರಿ ಅಂಶಗಳ ಬಗ್ಗೆ ಅರಿವು ಮೂಡಿಸಲು ತಮ್ಮ ಸಮಯ ನಿಗದಿ ಪಡಿಸಬೇಕು. ಸಂಘಟನೆ ಹೇಗೆ ಮುಸಲ್ಮಾನರನ್ನು ದಾರಿ ತಪ್ಪಿಸುತ್ತಿದೆ, ಹೇಗೆ ಮುಸಲ್ಮಾನರನ್ನು ವಿಚಲಿತರನ್ನಾಗಿ ಮಾಡುತ್ತಿದೆ ಎಂಬ ವಿಷಯ ಹೇಳಬೇಕು’ ಎಂಬುದು ಟ್ವೀಟ್‌ನ ಸಾರ.

ಕಟ್ಟರ್ ಮುಸ್ಲಿಂ ಸಂಪ್ರದಾಯವಾದಿ ದೇಶವಾಗಿದ್ದ ಸೌದಿ ಅರೇಬಿಯಾವೂ ಕೆಲ ವರ್ಷಗಳಿಂದ ಆಧುನಿಕ ಜಗತ್ತಿಗೆ ಅನುಗುಣವಾಗುವಂತೆ ಬದಲಾಗುತ್ತಿದೆ. ತನ್ನ ನೆಲದ  ಪುರಾತನ ಮುಸಲ್ಮಾನ ಸಂಪ್ರದಾಯಗಳಿಗೆ ಕಳೆದ ಬ್ರೇಕ್ ಹಾಕಿದೆ. ಇದರ ಮುಂದುವರಿದ ಭಾಗವೇ ‘ತಬ್ಲಿಗಿ ಜಮಾತ್’ ಸಂಘಟನೆಯನ್ನು ತನ್ನ ನೆಲದಲ್ಲಿ ನಿಷೇಧಿಸಿ ರುವುದು. ಪೌರತ್ವ ತಿದ್ದುಪಡಿ ಕಾಯಿದೆ ಸಂಬಂಧ ದೆಹಲಿಯಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ‘ತಬ್ಲಿಗಿ ಜಮಾತ್’ ಮೊದಲಿಗೆ ಪರಿಚಯವಾಗಿತ್ತು. ನಂತರ ಆ ಹೆಸರು ಹೆಚ್ಚು ಕೇಳಿಬಂದದ್ದು ಕರೋನ ಮೊದಲ ಅಲೆ ಸಮಯದಲ್ಲಿ. ದೇಶದೆಡೆ ‘ಲಾಕ್ ಡೌನ್’ ಘೋಷಣೆಯಾಗಿ ಎಲ್ಲರೂ ಮನೆಯಲ್ಲಿದ್ದರೆ ತಬ್ಲಿಗಿ ಜಮಾತ್ ಸದಸ್ಯರು ಮಸೀದಿಗಳಲ್ಲಿ ಗುಂಪುಗೂಡಿ ತನ್ನ ಕಾರ್ಯಾಚರಣೆಗಿಳಿದಿತ್ತು.

ಪೊಲೀಸರು ಲಾಠಿ ಪ್ರಹಾರ ಮಾಡಿದರೂ ಕೇಳದ ತಬ್ಲಿಗಿಗಳು ಪದೇ ಪದೇ ಕರೋನ ನಿಯಮವಳಿ ಗಾಳಿಗೆ ತೂರಿ ‘ಪ್ರಾರ್ಥನೆ’ ಮುಂದುವರಿಸಿದ್ದು ಸುದ್ದಿಯಾಗಿತ್ತು. ಅಷ್ಟಕ್ಕೂ ಏನಿದು ತಬ್ಲಿಗಿ ಜಮಾತ್? 1925ರಲ್ಲಿ ಉತ್ತರ ಪ್ರದೇಶದ ಸಣ್ಣ ನಗರವೊಂದರಲ್ಲಿ ಆರಂಭವಾದ ಈ ಸಂಘಟನೆ ಇಂದು ಸುಮಾರು 200 ದೇಶಗಳಲ್ಲಿದೆ. ‘ಪ್ರವಾದಿ ಮೊಹಮ್ಮದ್’ ಕಾಲದ ಸಂಪ್ರದಾಯ ಮರುಸ್ಥಾಪಿಸುವ ಉದ್ದೇಶದಿಂದ ಹುಟ್ಟಿಕೊಂಡ ಸಂಘಟನೆಯಿದು.

ಇಡೀ ಜಗತ್ತೇ ಮುಂದೆ ಹೋಗುತ್ತಿದ್ದರೆ ಈ ಸಂಘಟನೆ ಮಾತ್ರ ನೂರಾರು ವರ್ಷಗಳ ಹಿಂದಕ್ಕೆ ಹೊರಟಿದೆ. ತಬ್ಲಿಗಿಗಳ ಮೂಲ ಉದ್ದೇಶ ಇತರ ಧರ್ಮ ದವರನ್ನು ಮುಸ್ಲಿಂ ಧರ್ಮಕ್ಕೆ ಕರೆತರುವುದಲ್ಲ. ಬದಲಾಗಿ ಮುಸಲ್ಮಾನರನ್ನು ಕಟ್ಟರ್ ಸಂಪ್ರದಾಯಸ್ಥರಾಗಿಸುವುದು. ಆದರೆ ಜಿಹಾದಿ ಮನಃಸ್ಥಿತಿಯ ಹುಡುಗರನ್ನು ತಯಾರು ಮಾಡಿ ಹಲವು ಭಯೋತ್ಪಾದಕ ಸಂಘಟನೆಗಳಿಗೆ ನೇಮಕ ಮಾಡಿರುವ ಆರೋಪ ಈ ಸಂಘಟನೆ ಮೇಲಿದೆ. ಇಡೀ ಜಗತ್ತನ್ನು
ಇಸ್ಲಾಮೀಕರಣಗೊಳಿಸುವುದರಲ್ಲಿ ನಂಬಿಕೆ ಇಟ್ಟಿರುವ ಈ ಸಂಘಟನೆಯು ‘ಐಸಿಸ್’ ಹಾಗೂ ‘ಅಲ್ ಖೈದಾ’ ಸಂಘಟನೆಗಳಿಗೆ ಭಯೋತ್ಪಾದಕರನ್ನು ನೇಮಿಸಿ ಕಳುಹಿಸಿರುವ ಆರೋಪ ಹೊತ್ತಿದೆ.

ಇತ್ತೀಚಿನ ದಿನಗಳಲ್ಲಿ ಈ ಎರಡೂ ಸಂಘಟನೆಗಳು ತಮ್ಮ ನೆಲೆ ಕಳೆದುಕೊಂಡಿರುವ ಕಾರಣ, ‘ತಬ್ಲಿಗಿ ಜಮಾತ್’ ಹೆಚ್ಚಿನ ಮಾನ್ಯತೆ ಪಡೆದಿದೆ. ಪಾಕಿ ಸ್ತಾನದ ಭಯೋತ್ಪಾದಕ ಸಂಘಟನೆಗಳ ಜತೆ ತಬ್ಲಿಗಿಯ ಯುವಕರು ಸಂಪರ್ಕ ಹೊಂದಿರುವ ಅಪಾಯಕಾರಿ ಅಂಶವನ್ನು ತಳ್ಳಿಹಾಕಲಾಗಲಾರ ದೆಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಇತರ ಸಂಘಟನೆಗಳಂತೆ ‘ತಬ್ಲಿಗಿ ಜಮಾತ್’ ಒಬ್ಬ ಅಥವಾ ಇಬ್ಬರ ನಾಯಕತ್ವದಲ್ಲಿ ನಡೆಯುವುದಿಲ್ಲ. ಸಾಮೂಹಿಕ ನಾಯಕತ್ವದಡಿ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಹಲವು ದೇಶಗಳ ಗುಪ್ತಚರ ಇಲಾಖೆಗಳ ಮೂಲಗಳ ಪ್ರಕಾರ ಜಿಹಾದ್ ನಡೆಸಲು ‘ತಬ್ಲಿಗಿ ಜಮಾತ್’ ಜಗತ್ತಿನ ಅತ್ಯಂತ ದೊಡ್ಡ ಮಾನವಶಕ್ತಿ ಹೊಂದಿರುವ ಸಂಘಟನೆ.

ಕೇಂದ್ರೀಕೃತ ನಾಯಕತ್ವದ ಅಪ್ಪಣೆಯಿಲ್ಲದೆ ಕಾರ್ಯಗಳು ನಡೆಯುವ ಕಾರಣಕ್ಕಾಗಿ ಈ ಸಂಘಟನೆಯ ಮೇಲೆ ನಿಗಾ ವಹಿಸುವುದು ಕಷ್ಟ. ಭಾರತದಲ್ಲಿ ಮಿಲಿಯನ್ ಗಟ್ಟಲೆ ತಬ್ಲಿಗಿಗಳಿದ್ದಾರೆ. ಪ್ರತಿ ವರ್ಷ ಮದ್ಯ ಪ್ರದೇಶದ ಭೋಪಾಲ್‌ನಲ್ಲಿ ನಡೆಯುವ ಸಭೆಯಲ್ಲಿ ಲಕ್ಷಾಂತರ ಜನರು ಸೇರುತ್ತಾರೆ. ದೆಹಲಿಯ ನಿಜಾಮುದ್ದಿನ್ ತಬ್ಲಿಗಿಗಳ ಕೇಂದ್ರ ಕಚೇರಿ. ಇಲ್ಲಿಂದಲೇ ಜಗತ್ತಿನ ಹಲವು ದೇಶಗಳ ಸದಸ್ಯರ ಕಾರ್ಯಗಳ ಮೇಲ್ವಿಚಾರಣೆ ಮಾಡಲಾಗುತ್ತದೆ. ಭಾರತದಲ್ಲಿಈ ಹಿಂದೆಯೂ ಮೂಲಭೂತವಾದಿ, ಜಿಹಾದಿಗಳ ನೇಮಕ ಹಾಗೂ ಹಿಂಸಾತ್ಮಕ ಕೃತ್ಯಗಳಲ್ಲಿ ‘ತಬ್ಲಿಗಿ’ ಭಾಗಿಯಾಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

2013ರಲ್ಲಿ ತಜಕಿಸ್ತಾನ ‘ತಬ್ಲಿಗಿ ಜಮಾತ್’ ಸಂಘಟನೆಯನ್ನು ನಿಷೇಧಿಸಿತ್ತು. ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಹಲವು ಅಂಶಗಳು ಕಂಡು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು. ಇದಾದ ನಂತರ ರಷ್ಯಾ, ಇರಾನ್, ತುರ್ಕಮೆನಿಸ್ತಾನ್ ಹಾಗೂ ಉಜ್ಬೇಕಿಸ್ತಾನ್ ದೇಶಗಳೂ ‘ತಬ್ಲಿಗಿ ಜಮಾತ್’ ಅನ್ನು ನಿಷೇಧಿಸಿವೆ. ಪ್ರವಾದಿ ಮೊಹಮ್ಮದ್ ಕಾಲದ ಸಂಪ್ರದಾಯಗಳ ಮರು ಜಾರಿಯ ಉದ್ದೇಶ ಈಡೇರಿಸುವ ಭರದಲ್ಲಿ ಜಗತ್ತಿ ನಾದ್ಯಂತ ಭಯೋತ್ಪಾದಕ ಕೃತ್ಯಗಳಲ್ಲಿ ಅದರ ಸದಸ್ಯರು ಪರೋಕ್ಷ ಭಾಗಿಯಾಗಿದ್ದಾರೆ.

2001ರಲ್ಲಿ ಶೂ ಬಾಂಬರ್ ರಿಚರ್ಡ್ ರೀಡ್ ಎಂಬಾತ ವಿಮಾನ ಉಡಾಯಿಸಲು ಹೂಡಿದ್ದ ಸಂಚಿನಲ್ಲಿ ಸಿಕ್ಕು ಹಾಕಿಕೊಂಡಿದ್ದ. ಈತ ತಬ್ಲಿಗಿಗಳೊಂದಿಗೆ
ಸಂಪರ್ಕದಲ್ಲಿರುವ ವಿಷಯವನ್ನು ಅಮೆರಿಕ ಬಹಿರಂಗ ಪಡಿಸಿತ್ತು. ಐಸಿಸ್‌ನ ಹಲವರನ್ನು ಸೆರೆ ಹಿಡಿದಿದ್ದ ಅಮೆರಿಕ ಸೇನಾ ಪಡೆಗಳಿಗೆ, ತಬ್ಲಿಗಿ ಜತೆ ನಂಟಿದ್ದ ಹಲವರು ಸಿಕ್ಕಿದ್ದರು. ಮುಸ್ಲಿಂ ರಾಷ್ಟ್ರಗಳೇ ‘ತಬ್ಲಿಗಿ ಜಮಾತ್’ ಅನ್ನು ನಿಷೇಧಿಸಿವೆಯೆಂದರೆ ಆ ಸಂಘಟನೆ ಸಮಾಜಕ್ಕೆ ಅದೆಷ್ಟು ಮಾರಕ ವೆಂಬುದು ತಿಳಿಯುತ್ತದೆ. ಸೌದಿ ಅರೇಬಿಯಾದಂತಹ ಕಟ್ಟರ್ ಮುಸಲ್ಮಾನ್ ಸಂಪ್ರದಾಯವಾದಿ ರಾಷ್ಟ್ರ, ತನ್ನದೇ ಧರ್ಮದ ಮೂಲಭೂತವಾದಿ ಸಂಘಟನೆಯೊಂದನ್ನು ನಿಷೇಧಿಸಿರುವುದು ಸಣ್ಣ ವಿಷಯವಲ್ಲ. ಆ ಮೂಲಕ ಜಗತ್ತಿನ ಇತರ ದೇಶಗಳಿಗೆ ಎಚ್ಚರಿಕೆಯ ಸಂದೇಶ ನೀಡಿದೆ. ಆದರೆ ಈ
ಸಂಘಟನೆ, ಕ್ರಿಶ್ಚಿಯನ್ನರಂತೆ ಮತಾಂತರ ಮಾಡುವುದಿಲ್ಲ.

ಆದರೆ ಪಾಕಿಸ್ತಾನದಂತಹ ಶತ್ರು ದೇಶದ ಸದಸ್ಯರ ಜತೆ ಭಾರತದ ತಬ್ಲಿಗಿಗಳು ನಿರಂತರ ಸಂಪರ್ಕದಲ್ಲಿರುವುದು ಭಾರತದ ಭದ್ರತೆಗೆ ಯಾವತ್ತಿದ್ದರೂ ಅಪಾಯಕಾರಿ. ಯಾವ ದೃಷ್ಟಿಯಲ್ಲಿ ನೋಡಿದರೂ ಈ ಸಂಘಟನೆಯನ್ನು, ಅದರ ಸದಸ್ಯರನ್ನು ನಂಬುವುದು ಅಸಾಧ್ಯ. ಮುಸಲ್ಮಾನರನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗುವುದರ ಬದಲು, ಮೂಲಭೂತವಾದದ ಹೆಸರಿನಲ್ಲಿ ನೂರಾರು ವರ್ಷಗಳ ಹಿಂದಕ್ಕೆ ಒಯ್ಯುವುದು ಎಷ್ಟು ಸರಿ?
ಇಡೀ ಜಗತ್ತೇ ಮುಂದುವರಿಯುತ್ತಿರುವಾಗ ಪ್ರವಾದಿ ಮೊಹಮ್ಮದ್‌ರ ಹೆಸರಿನಲ್ಲಿ ಇಡೀ ಸಮುದಾಯದ ಏಳಿಗೆಗೆ ಬಹುದೊಡ್ಡ ಕೊಡಲಿ ಏಟು ನೀಡು ತ್ತಿರುವ ಸಂಘಟನೆ ಇದು.

ಭಾರತಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದಿದ್ದರೂ ಮುಸಲ್ಮಾನ್ ಧರ್ಮದಲ್ಲಿ ಇಂದಿಗೂ ಅತೀ ಹೆಚ್ಚಿನ ಅನಕ್ಷರಸ್ಥರಿದ್ದಾರೆ. ಅವರನ್ನು ಕೇವಲ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವ ರಾಜಕೀಯ ಪಕ್ಷ ಅವರಿಗೆ ಉತ್ತಮ ವಿದ್ಯಾಭ್ಯಾಸ ನೀಡುವಲ್ಲಿ ವಿಫಲವಾಗಿದೆ. ಇಂದಿಗೂ ಅವರ ತಲೆಯಲ್ಲಿ ತಾವು ಬಹುಸಂಖ್ಯಾತರಾಗಬೇಕೆಂಬ ಮೂಲ ಉದ್ದೇಶವೇ ಆಳವಾಗಿ ಬೇರೂರುವಂತೆ ಮಾಡಿದ್ದಾರೆ. ಸ್ವಾತಂತ್ರ್ಯಪೂರ್ವಕ್ಕೆ ತಾಳೆ ಹಾಕಿ ನೋಡಿದರೆ ಮುಸಲ್ಮಾನರ ಜನಸಂಖ್ಯೆ ಗಣನೀಯ ಏರಿಕೆಯಾಗಿದೆ. ಅವರೇನು ಅಲ್ಪಸಂಖ್ಯಾತರಲ್ಲ. ಆದರೂ ಅವರನ್ನು ಅಲ್ಪಸಂಖ್ಯಾತರೆಂದು ಕರೆಯುವ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳಲಾಗುತ್ತಿದೆ.

ತ್ರಿವಳಿ ತಲಾಕ್ ನಿಷೇಧದಂತಹ ಸುಧಾರಣಾ ಕಾನೂನುಗಳನ್ನು ತಂದು ಮುಸಲ್ಮಾನ್ ಹೆಣ್ಣು ಮಕ್ಕಳಿಗೆ ನ್ಯಾಯ ಒದಗಿಸುವ ಕೆಲಸ ಈಗ ಆಗುತ್ತಿದೆ. ಇಂತಹ ಕಾಲಘಟ್ಟದಲ್ಲಿಯೂ ಸಾಂಪ್ರದಾಯಿಕ ಕರಾಳ ಕೂಪಕ್ಕೆ ತನ್ನ ಧರ್ಮದವರನ್ನು ಕರೆದುಕೊಂಡು ಹೋಗುವ ‘ತಬ್ಲಿಗಿ ಜಮಾತ್’ ಸಂಘಟನೆಯ ಉದ್ದೇಶ ಸರಿಯೆನಿಸುವುದಿಲ್ಲ. ಕರೋನ ಸೋಂಕು ತೀವ್ರ ಹರಡಲು ಕಾರಣವಾಗಿದ್ದ ತಬ್ಲಿಗಿಗಳಿಗೆ ಲಸಿಕೆಯಲ್ಲಿ ನಂಬಿಕೆಯಿಲ್ಲ. ಹೀಗಾಗಿ ಹಲವು
ಮುಸ್ಲಿಂ ಯುವಕರು ಇಂದಿಗೂ ಮೊದಲನೇ ಡೋಸ್ ಅನ್ನೂ ಹಾಕಿಸಿಕೊಂಡಿಲ್ಲ. ಇಂತಹ ಯುವಕರು ‘ತಬ್ಲಿಗಿ ಜಮಾತ್’ ನಡೆಸುವ ಕಾರ್ಯಾಗಾರ ಗಳಿಂದ ಪ್ರೇರಿತರಾಗಿದ್ದಾರೆ; ಆಗುತ್ತಿದ್ದಾರೆ.

ಭಾರತದಲ್ಲಿ 1920ರ ದಶಕದಲ್ಲಿ ಮುಸಲ್ಮಾನ್ ಧರ್ಮಕ್ಕೆ ಮತಾಂತರವಾದ ಹಿಂದುಗಳನ್ನು ‘ಘರ್ ವಾಪಸಿ’ಗೆ ಪ್ರೇರೇಪಿಸಿ ‘ಶುದ್ಧಿ ಚಳವಳಿ’ ಶುರು ವಾಯಿತು. ಈ ಚಳುವಳಿಯ ವಿರುದ್ಧ ‘ತಬ್ಲಿಗಿ ಜಮಾತ್’ ಹುಟ್ಟಿಕೊಂಡಿತೆಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಮುಸ್ಲಿಮರಿಗೆ ಇಂಗ್ಲಿಷ್ ಶಿಕ್ಷಣ ನೀಡಲು ಕೆಲ ಹಿರಿಯ ಮುಸ್ಲಿಂ ನಾಯಕರು ಪ್ರತಿಪಾದಿಸಿದ್ದರು. ಎಲ್ಲಿ ಮುಸಲ್ಮಾನರಿಗೆ ಉನ್ನತ ಇಂಗ್ಲಿಷ್ ಶಿಕ್ಷಣ ಸಿಕ್ಕು ತಮ್ಮ ಮೂಲಭೂತವಾದಕ್ಕೆ ಧಕ್ಕೆ ಬರುತ್ತದೆಯೋ ಎಂಬ ಭಯ ಹಲವು ಮುಸ್ಲಿಂ ನಾಯಕರಿಗೆ ಕಾಡಿತು. ಈ ವಿಷಯವೂ ‘ತಬ್ಲಿಗಿ ಜಮಾತ್’ ಹುಟ್ಟಿಗೆ ಕಾರಣವಾಯಿತೆಂದು ಹೇಳಲಾಗು ತ್ತದೆ.

ಮಾಧ್ಯಮದ ಯಾವುದೇ ಅಂಗಗಳನ್ನೂ ಬಳಸಿಕೊಳ್ಳದೇ ಮುಖತಃ ಸದಸ್ಯರನ್ನು ಭೇಟಿ ಮಾಡಿ, ನಿರಂತರ ಸಭೆಗಳನ್ನು ಏರ್ಪಡಿಸಿ ತಮ್ಮ ಧರ್ಮದ ಮೂಲಭೂತವಾದವನ್ನು ತಲುಪಿಸುವ ಕೆಲಸವನ್ನು ಅದು ಮಾಡುತ್ತದೆ. ಆಧುನಿಕ ಯುಗದ ಯಾವೊಂದು ಸಂವಹನ ಮಾದರಿಯನ್ನೂ ಅನು ಸರಿಸುವುದಿಲ್ಲ. ಹಾಗಾಗಿ ಇವರ ಚಲನವಲನಗಳ ಮೇಲೆ ನಿಗಾ ಇಡುವುದು ಸುಲಭವಲ್ಲ. ಭಾರತದ ವಿಭಜನೆಗೂ ಮೊದಲು ‘ತಬ್ಲಿಗಿ ಜಮಾತ್’
ಬಾಂಗ್ಲಾದೇಶಕ್ಕೆ ತನ್ನ ಸದಸ್ಯರನ್ನು ಕಳುಹಿಸಿ ಹಿಂದೂಗಳ ಕೊಲೆ ಮಾಡಿಸಿತ್ತೆಂಬ ಮಾತುಗಳೂ ಕೇಳಿ ಬಂದಿದ್ದವು.

ಹುಟ್ಟಿನಿಂದಲೇ ಕಟ್ಟರ್ ಮುಸಲ್ಮಾನ್ ಸಂಪ್ರದಾಯ ವನ್ನು ಪಸರಿಸುತ್ತಿರುವ ‘ತಬ್ಲಿಗಿ ಜಮಾತ್’ ಕಾರ್ಯನಿರ್ವಹಣೆಯೇ ಅನುಮಾನ ಹುಟ್ಟಿಸುತ್ತದೆ. ಜಗತ್ತಿನಾದ್ಯಂತ ಸುಮಾರು 20 ಕೋಟಿಗೂ ಅಧಿಕ ಸದಸ್ಯ ರನ್ನು ಒಳಗೊಂಡಿರುವ ‘ತಬ್ಲಿಗಿ ಜಮಾತ್’ 1960-70 ರ ದಶಕದಲ್ಲಿ ಆಫ್ರಿಕಾ ದೇಶದಲ್ಲಿ ಬಹುಬೇಗ ಹಬ್ಬಿತು. ಕೀನ್ಯಾ, ದಕ್ಷಿಣ ಆಫ್ರಿಕಾ, ಉಗಾಂಡ, ಮೊರಾಕ್ಕೋ, ತಾಂಜೇನಿಯಾ ದೇಶಗಳಲ್ಲಿ ಬಹುಬೇಗ ಸ್ತಿತ್ವ ಕಂಡುಕೊಂಡ ಸಂಘಟನೆ, ಜಗತ್ತಿನ ಅತ್ಯಂತ ಹಿಂದುಳಿದ ಪ್ರದೇಶ ವಾಗಿರುವ ಆಫ್ರಿಕಾದ ದೇಶ ಗಳಲ್ಲಿ ಮುಸಲ್ಮಾನರು ಇಂದಿ ಗೂ ಕಟ್ಟರ್ ಇಸ್ಲಾಮಿಕ್ ಸಂಪ್ರದಾಯ ಅನುಕರಣೆ ಮಾಡು ವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಸಂಘಟನೆ ಸದ್ಯಕ್ಕೆ ಭಾರತಕ್ಕೆ ಅಷ್ಟೊಂದು ಮಾರಕವಲ್ಲವೆಂದು ಭಾರತೀಯ ಗುಪ್ತಚರ ಇಲಾಖೆ ಹೇಳಿದರೂ, ಪರೋಕ್ಷವಾಗಿ ‘ತಬ್ಲಿಗಿ ಜಮಾತ್’ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿರುವ ಹಲವು ಪ್ರಸಂಗಗಳು ಬೆಳಕಿಗೆ ಬಂದಿವೆ.

ಈ ಹಿನ್ನೆಲೆಯಲ್ಲಿ ಹಾಗೂ ಹಲವು ಮುಸಲ್ಮಾನ್ ರಾಷ್ಟ್ರಗಳೇ ಈ ಸಂಘಟನೆ ಯನ್ನು ನಿಷೇಧಿಸಿರುವುದನ್ನು ನೋಡಿದರೆ ಭಾರತವೂ ಎಚ್ಚೆತ್ತು ಅದನ್ನು ನಿಷೇಧಿಸಿ, ಅದರ ಬೆಳವಣಿಗೆಗೆ ಕಡಿವಾಣ ಹಾಕಬೇಕಾದ ಅನಿವಾರ್ಯ ಇದೆ. ಷ್ಟಿಯಲ್ಲಿ ನೋಡಿದರೂ ಈ ಸಂಘಟನೆಯನ್ನು, ಅದರ ಸದಸ್ಯರನ್ನು ನಂಬುವುದು ಅಸಾಧ್ಯ.