ಜಾರ್ಖಂಡ್: ಕುಸ್ತಿಪಟುವಿನ ಕಪಾಳಕ್ಕೆ ಬಿಜೆಪಿ ಸಂಸದ ಹೊಡೆದ ಆಘಾತಕಾರಿ ಘಟನೆ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಕ್ರೀಡಾ ಸಮಾರಂಭದ ವೇದಿಕೆಯ ಮೇಲೆ ನಡೆದಿದೆ.
ಭಾರತೀಯ ಕುಸ್ತಿಪಟು ಫೆಡರೇಷನ್ ಅಧ್ಯಕ್ಷ ಬ್ರಿಡ್ಜ್ ಭೂಷಣ್ ಶರಣ್ ಸಿಂಗ್ ವೇದಿಕೆಯ ಮೇಲೆಯೇ ಯುವ ಕುಸ್ತಿಪಟುವಿಗೆ ಎರಡು ಬಾರಿ ಹಲ್ಲೆ ನಡೆಸಿದರು. ಕೂಡಲೇ ಕುಸ್ತಿಪಟು ವೇದಿಕೆಯಿಂದ ಹೊರ ತೆರಳಿದ್ದಾರೆ.
ಉತ್ತರ ಪ್ರದೇಶದ ಕೈಸರ್ ಗಂಜ್ ಕ್ಷೇತ್ರದ ಸಂಸದ ಬ್ರಿಡ್ಜ್ ಭೂಷಣ್ ಶರಣ್ ಸಿಂಗ್, 15 ವರ್ಷದೊಳಗಿ ನವರ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಶಿಪ್ ನ ಮೊದಲ ದಿನದ ಸ್ಪರ್ಧೆಯ ವೇಳೆ ಮುಖ್ಯ ಅತಿಥಿ ಯಾಗಿ ಆಗಮಿಸಿದ್ದರು.
ವಯೋಮಿತಿ ಮೀರಿದ ಕಾರಣ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿರಲಿಲ್ಲ. ಇದನ್ನು ಪ್ರಶ್ನಿಸಲು ಯುವ ಕುಸ್ತಿಪಟು ವೇದಿಕೆಗೆ ಬಂದಾಗ ಘಟನೆ ನಡೆದಿದೆ.