Friday, 3rd January 2025

ಆಜಮ್ ಖಾನ್ ರಸ್ತೆ ಮರು ನಾಮಕರಣ

Ashok Singhal Road

ಆಗ್ರಾ: ವಿಶ್ವ ಹಿಂದೂ ಪರಿಷತ್ತಿನ ಹಿರಿಯ ನಾಯಕ ಅಶೋಕ್ ಸಿಂಘಾಲ್ ಅವರ ಹೆಸರನ್ನು ಆಗ್ರಾದ ಆಜಮ್ ಖಾನ್ ರಸ್ತೆಗೆ ಮರು ನಾಮಕರಣ ಮಾಡಲಾಗಿದೆ.

ಸಿಂಘಾಲ್ ರಾಮ ಜನ್ಮಭೂಮಿ ಚಳವಳಿಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು. ಮೇಲ್ಕಂಡ ರಸ್ತೆಯ ಮರುನಾಮಕರಣ ಮಾಡಲು ಸೆಪ್ಟೆಂಬರ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಪುರಸಭೆಯ ಮಂಡಳಿ ಸಭೆಯಲ್ಲಿ ನಿರ್ಧಾರಕ್ಕೆ ಬರಲಾಗಿತ್ತು.

ಜಾಗಗಳ ಹೆಸರುಗಳನ್ನು ಬದಲಿಸುವ ಕೆಲಸ ಹೀಗೇ ಮುಂದುವರೆಯಲಿದೆ ಎಂದು ಆಗ್ರಾ ಮೇಯರ್‌ ನವೀನ್ ಜೈನ್ ತಿಳಿಸಿದ್ದಾರೆ.

“ಅಶೋಕ್ ಸಿಂಘಾಲ್ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಭಾರತಾದ್ಯಂತ ಹಿಂದೂ ಗಳನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು,” ಎಂದು ತಿಳಿಸಿದ್ದಾರೆ. ಇದೇ ಆಗ್ರಾದ ‘ಮುಘಲ್ ರಸ್ತೆ’ಯನ್ನು ‘ಮಹಾರಾಜಾ ಅಗ್ರಸೇನ್ ರಸ್ತೆ’ ಎಂದು ಮರುನಾಮಕರಣ ಮಾಡಲಾಗಿತ್ತು.