ದೆಹಲಿಯಲ್ಲಿ ಜನರು ತೀವ್ರ ಚಳಿಗೆ ಬೀದಿಬದಿ ಅಂಗಡಿ ಪಕ್ಕ ಬೆಂಕಿಯನ್ನು ಹೊತ್ತಿಸಿ ಚಳಿ ಕಾಯಿಸಿ ಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ದಪ್ಪ ದಪ್ಪ ರಗ್ಗು ಹೊದ್ದುಕೊಂಡು ಜನರು ಓಡಾಡುತ್ತಿರುವುದು ಸಾಮಾನ್ಯವಾಗಿತ್ತು. ರಾಷ್ಟ್ರ ರಾಜಧಾನಿಗೆ ಹಳದಿ ಅಲರ್ಟ್ ನೀಡಲಾಗಿದೆ.
ತಾಪಮಾನ ಕುಸಿತ ಕಂಡ ಪರಿಣಾಮ ಮಂಜು ಮುಸುಕಿದ ವಾತಾವರಣ ದೆಹಲಿ ಜನರನ್ನು ಕಾಡಿದೆ. ಉತ್ತರ ಭಾರತದಾದ್ಯಂತ ಶೀತಗಾಳಿಯು ತನ್ನ ಹಿಡಿತವನ್ನು ಬಿಗಿಗೊಳಿಸಿದೆ.
ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದ ಹಲವು ಪ್ರದೇಶಗಳಲ್ಲಿ ಹಿಮಪಾತವು ಬಯಲು ಪ್ರದೇಶದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದೆ.
ದೆಹಲಿಯಲ್ಲಿ ಪ್ರಸ್ತುತ ವಾಯು ಗುಣಮಟ್ಟ ಅತಿ ಕಳಪೆ ಮಟ್ಟಕ್ಕೆ ಇಳಿದಿದ್ದು ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ 316ರಲ್ಲಿದೆ. ಪಂಜಾಬ್ ರಾಜ್ಯದಲ್ಲಿ ಕೂಡ ತೀವ್ರ ಚಳಿಯಿದ್ದು,ಅಮೃತಸರದಲ್ಲಿ ದಟ್ಟ ಮಂಜು ಕವಿದಿರುವುದು ಮಾತ್ರವಲ್ಲದೆ ಶೀತಗಾಳಿ ಹಬ್ಬಿದೆ.