ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಶನ್ (ಫೋರ್ಡಾ) ಮತ್ತು ದೆಹಲಿಯ ಜಂಟಿ ಸಿಪಿ ನಡುವಿನ ಸಭೆಯ ನಂತರ ಮುಷ್ಕರಕ್ಕೆ ಕರೆ ನೀಡಲಾಗಿದೆ.
“ಕಳೆದ ಸಂಜೆ ದೆಹಲಿಯ ಜಂಟಿ ಸಿಪಿಯನ್ನು ಭೇಟಿಯಾದೆವು. ದೆಹಲಿ ಪೊಲೀಸರು ಎಫ್ಐಆರ್ ಅನ್ನು ರದ್ದುಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ” ಎಂದು ಫೋರ್ಡಾ ಅಧ್ಯಕ್ಷ ಡಾ ಮನೀಶ್ ಹೇಳಿದ್ದಾರೆ.
ನೀಟ್ ಪಿಜಿ 2021 ಕೌನ್ಸೆಲಿಂಗ್ಗಾಗಿ ಅಖಿಲ ಭಾರತ ಕೋಟಾದಲ್ಲಿ (AIQ) EWS ಕೋಟಾ ಪ್ರಶ್ನಿಸುವ ಹಲವಾರು ಅರ್ಜಿಗಳು ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಉಳಿದಿವೆ. ಕೌನ್ಸೆಲಿಂಗ್ ಹಾಗೂ ದಾಖಲಾತಿ ಪ್ರಕ್ರಿಯೆ ಚುರುಕುಗೊಳಿಸಬೇಕು ಎಂದು ವೈದ್ಯರು ಒತ್ತಾಯಿಸಿದ್ದರು.