Thursday, 19th September 2024

ಮಹಾರಾಷ್ಟ್ರದಲ್ಲಿ ಕರೋನಾ ಭೀತಿ: ಮತ್ತೆ ಲಾಕ್‌ಡೌನ್‌ಗೆ ಕೌಂಟ್‌ಡೌನ್‌ …?

#corona

ಮುಂಬೈ: ಒಂದೊಂದೇ ರಾಜ್ಯದಲ್ಲಿ ಮತ್ತೆ ಕರೋನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು,  ಮಹಾರಾಷ್ಟ್ರ, ಕೇರಳ ಮತ್ತು ದೆಹಲಿಗಳಲ್ಲಿ ಮತ್ತೆ ಮೊದಲಿನಂತೆ ನಿರ್ಬಂಧ ವಿಧಿಸಲಾಗುತ್ತಿದೆ. ಮಹಾರಾಷ್ಟ್ರ ಸಚಿವರೊಬ್ಬರು ಮತ್ತೊಮ್ಮೆ ಲಾಕ್​ಡೌನ್ ಮಾಡುವ ಸೂಚನೆ ನೀಡಿದ್ದಾರೆ.

ಮಹಾರಾಷ್ಟ್ರ ಸಚಿವ ವಿಜಯ್ ವಡೆತ್ತಿವಾರ್, ಮತ್ತೆ ಲಾಕ್‌ಡೌನ್​ ಹೇರುವ ಕಾಲ ಸಮೀಪಿಸುತ್ತಿದೆ. ಆದರೆ ಅಂತಿಮವಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರೇ ನಿರ್ಣಯ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಕಳೆದ 11 ದಿನಗಳಿಂದಲೂ ದಾಖಲಾಗುವ ಪ್ರಕರಣ​ಗಳು ಹೆಚ್ಚುತ್ತಿವೆ. ಮುಂಬೈನಲ್ಲಿ ಜನವರಿ 7ರವರೆಗೂ ಸೆಕ್ಷನ್​ 144 ಜಾರಿಯಲ್ಲಿದೆ.

ಹೊಸವರ್ಷದ ಮುನ್ನಾದಿನವೇ ಮುಂಬೈ ಪೊಲೀಸ್ ಆಯುಕ್ತರು ಸೆಕ್ಷನ್​ 144 ಹೇರಿದ್ದಾರೆ. ಕಡಲತೀರಗಳು, ತೆರೆದ ಮೈದಾನಗಳು, ಉದ್ಯಾನಗಳು ಮತ್ತು ಅಂಥ ಯಾವುದೇ ಸಾರ್ವಜನಿಕ ಸ್ಥಳಗಳಿಗೆ ಜನರು ಮುಂಜಾನೆ 5ರಿಂದ ಸಂಜೆ 5ರವರೆಗೆ ಭೇಟಿ ನೀಡುವುದನ್ನು ನಿರ್ಬಂಧಿಸಿದ್ದಾರೆ. ಈ ಆದೇಶ ಜನವರಿ 15ರವರೆಗೂ ಇರಲಿದೆ.

ಮಹಾರಾಷ್ಟ್ರದಲ್ಲಿ ಶುಕ್ರವಾರ ಒಂದೇ ದಿನ 8067 ಕೊರೊನಾ ಸೋಂಕು ಪ್ರರಕರಣ​ಗಳು ದಾಖಲಾಗಿವೆ. ಸದ್ಯ 454 ಓಮಿಕ್ರಾನ್​ ಸೋಂಕಿತರು ಇದ್ದು, 157 ಮಂದಿ ಚೇತರಿಸಿಕೊಂಡು ಬಿಡುಗಡೆ​ ಆಗಿದ್ದಾರೆ.