ಇದೇ ಮೊದಲ ಬಾರಿಗೆ ಆಫ್ಘಾನಿಸ್ಥಾನಕ್ಕೆ ಐದು ಲಕ್ಷ ಲಸಿಕೆಗಳನ್ನು ರವಾನಿಸಲಾಗಿದ್ದು, ಸಂಜೆಯ ವೇಳೆಗೆ ಲಸಿಕೆ ಹೊತ್ತ ಇರಾನ್‍ನ ಮಹಾನ್ ವಿಮಾನ ಕಾಬೂಲ್ ತಲುಪಲಿವೆ. ಜನವರಿ ಎರಡನೇ ವಾರದಲ್ಲಿ ಉಳಿದ ಐದು ಲಕ್ಷ ಲಸಿಕೆಗಳನ್ನು ಪೂರೈಕೆ ಮಾಡಲಾಗುತ್ತದೆ.
ತಾಲಿಬಾನಿಗಳು ಕಳೆದ ಆಗಸ್ಟ್ 15ರಂದು ಆಫ್ಘಾನಿಸ್ಥಾನವನ್ನು ತಮ್ಮ ಕೈ ವಶ ಮಾಡಿಕೊಂಡರು. ಅನಂತರ ಅಲ್ಲಿದ್ದ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿಗಳನ್ನು ಪ್ರಯಾಸದಿಂದ ಭಾರತವೂ ಸೇರಿದಂತೆ ಹಲವು ದೇಶಗಳು ವಾಪಾಸ್ ಕರೆಸಿಕೊಂಡವು.
ಈ ಮೊದಲು ಭಾರತ ಆಫ್ಘಾನಿಸ್ಥಾನಕ್ಕೆ ವೈದ್ಯಕೀಯ ಸಲಕರಣೆಗಳನ್ನು ರಫ್ತು ಮಾಡಿತ್ತು. ಇದೇ ಮೊದಲ ಭಾರಿಗೆ ಲಸಿಕೆಯನ್ನೂ ಪೂರೈಕೆ ಮಾಡಲಾ ಗುತ್ತಿದೆ. ಭಾರತ್ ಬಯೋಟೆಕ್ ಸಂಸ್ಥೆ ತಯಾರಿಸಿರುವ ದೇಶಿಯ ಕೋವ್ಯಾಕ್ಸಿನ್ ಲಸಿಕೆಯನ್ನು ಆಫ್ಘಾನಿಸ್ತಾನಕ್ಕೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಮೊದಲು ಬಾಂಗ್ಲಾದೇಶ, ನೇಪಾಳ, ಮ್ಯಾನ್ಮಾರ್, ಭೂತಾನ್, ಶ್ರೀಲಂಕ, ಮಾಲ್ಡವೀಸ್, ಬ್ರೇಜಿಲ್, ಮೊರೊಕೋ, ದಕ್ಷಿಣ ಆಫ್ರಿಕಾ, ನೈಜೀರಿಯಯಾ ಸೇರಿದಂತೆ ಹಲವು ರಾಷ್ಟ್ರಗಳಿಗೆ ಲಸಿಕೆಗಳನ್ನು ಪೂರೈಕೆ ಮಾಡಿದೆ.