Friday, 22nd November 2024

ಈ ವಾರ ತೆರೆಗೆ ಕಾಳಿದಾಸ ಕನ್ನಡ ಮೇಷ್ಟ್ರು

ಕನ್ನಡ ರಾಜ್ಯೋತ್ಸವದ ತಿಂಗಳಿನಲ್ಲಿ ಕನ್ನಡ ನಾಡು ನುಡಿಯ ಕುರಿತ ಗಂಭೀರ ವಿಚಾರಗಳ ಸುತ್ತ ಮನರಂಜನಾತ್ಮಕವಾಗಿ ರೂಪಿಸಿರುವ `ಕಾಳಿದಾಸ ಕನ್ನಡ ಮೇಷ್ಟ್ರು’ ತೆರೆಗೆ ಬರುತ್ತಿದೆ. ಇದೇ ಶುಕ್ರವಾರ ರಿಲೀಸಾಗುತ್ತಿರುವ ಈ ಚಿತ್ರವನ್ನು ಗೀತ ಸಾಹಿತಿ ಕವಿರಾಜ್ ನಿರ್ದೇಶಿಸಿದ್ದಾರೆ. ನವೆಂಬರ್ ತಿಂಗಳಿನಲ್ಲಿ ಮಾತಿನ ಮಲ್ಲ, ನವರಸ ನಾಯಕ ಜಗ್ಗೇಶ್ ಅಭಿನಯದ ಸಿನಿಮಾ ಬಿಡುಗಡೆ ಆಗುತ್ತಿರುವುದು ವಿಶೇಷ. ಮೇಘನ ಗಾಂವ್‍ಕರ್ ಈ ಚಿತ್ರದ ಕಥಾ ನಾಯಕಿ. ಈ ಚಿತ್ರದಲ್ಲಿ 21ಜನ ಕನ್ನಡದ ನಾಯಕಿಯರು ಒಂದೇ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಅಸಲಿಗೆ `ಕಾಳಿದಾಸ ಕನ್ನಡ ಮೇಷ್ಟ್ರು’ ಕನ್ನಡ ವರ್ಸಸ್ ಇಂಗ್ಲಿಷ್ ವ್ಯಾಮೋಹದ ಕುರಿತಾದ ಸಿನಿಮಾ. ಕವಿರಾಜ್ ಈ ಹಿಂದೆ `ಮದುವೆಯ ಮಮತೆಯ ಕರೆಯೋಲೆ’ ಸಿನಿಮಾ ನಿರ್ದೇಶನ ಮಾಡಿದವರು. ಪೆÇೀಷಕ ಕಲಾವಿದರುಗಳಲ್ಲಿ ಅಂಬಿಕ, ತಬಲಾ ನಾಣಿ, ಟಿ ಎಸ್ ನಾಗಾಭರಣ, ಸುಂದರ್, ಯತಿರಾಜ್, ಉಷಾ ಭಂಡಾರಿ, ರಘು ರಾಮನಕೊಪ್ಪ, 16 ಮಕ್ಕಳಲ್ಲಿ ಪ್ರಣೀತಾ, ಆರ್ಯ, ಗೌತಮ್, ಗಣೇಶ ಶ್ರಾವಣಿ ಪ್ರಮುಖ ಪಾತ್ರ ಮಾಡಿದ್ದಾರೆ. ಯು ಆರ್ ಉದಯಕುಮಾರ್ ಈ ಚಿತ್ರದ ನಿರ್ಮಾಪಕರು, ಗುರುಕಿರಣ್ ಈ ಚಿತ್ರಕ್ಕೆ ರಾಗ ಸಂಯೋಜನೆ ಮಾಡಿದ್ದಾರೆ. ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಮಾಡಿದ್ದಾರೆ

ಕನ್ನಡ್ ಗೊತ್ತಿಲ್ಲ
ರಾಮರತ್ನ ಪೆÇ್ರಡಕ್ಷನ್ಸ್ ಮೂಲಕ ಕುಮಾರ ಕಂಠೀರವ ಅವರು ನಿರ್ಮಿಸಿರುವ `ಕನ್ನಡ್ ಗೊತ್ತಿಲ್ಲ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಆರ್ ಜೆ ಮಯೂರ್ ನಿರ್ದೇಶನದಲ್ಲಿ ಮೂಡಿಬಂದಿರುವ `ಕನ್ನಡ್ ಗೊತ್ತಿಲ್ಲ` ಕನ್ನಡ ಭಾಷಾ ಪ್ರೇಮವನ್ನು ಸಾರುವ ಚಿತ್ರವಾಗಿದೆ. ಈ ಚಿತ್ರ ನವಂಬರ್‍ನಲ್ಲೇ ತೆರೆಗೆ ಬರುತ್ತಿರುವುದು ವಿಶೇಷ.
ಹೊರ ರಾಜ್ಯಗಳಿಂದ ಬರುವ ಅನ್ಯಭಾಷಿಗರು ಹಲವಾರು ವರ್ಷಗಳಿಂದಲೂ ಕರ್ನಾಟಕದಲ್ಲೇ ನೆಲೆಸಿದ್ದರೂ ಕನ್ನಡ ಭಾಷೆಯನ್ನು ಕಲಿತಿರುವುದಿಲ್ಲ. ಅವರನ್ನು ಕನ್ನಡದಲ್ಲಿ ಮಾತನಾಡಿಸಲು ಪ್ರಯತ್ನಿಸಿದರೂ ಕೂಡ ಸಾರಿ, ನಮಗೆ ಕನ್ನಡ್ ಗೊತ್ತಿಲ್ಲ ಎಂದು ಬಹಳ ಸುಲಭವಾಗಿ ಹೇಳಿಬಿಡುತ್ತಾರೆ. ಇಂಥದೇ ವಿಷಯವನ್ನು ಪ್ರಮುಖವಾಗಿಟ್ಟುಕೊಂಡು ನಿರ್ಮಿಸಿರುವ `ಕನ್ನಡ್ ಗೊತ್ತಿಲ್ಲ` ಒಂದು ಥ್ರಿಲ್ಲರ್ ಚಿತ್ರವಾಗಿದೆ. ಈ ಚಿತ್ರದಲ್ಲಿ ಬೆಡಗಿ ಹರಿಪ್ರಿಯಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸುಧಾರಾಣಿ, ಪವನ್ ಕುಮಾರ್, ಧರ್ಮಣ್ಣ, ಸಂತೋಷ್ ಕರ್ಕಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಈ ಚಿತ್ರಕ್ಕೆ ಗಿರಿಧರ್ ದಿವಾನ್ ಅವರ ಛಾಯಾಗ್ರಹಣ ಹಾಗೂ ಸಂಕಲನವಿದೆ. ನಕುಲ್ ಅಭಯಂಕರ ಅವರ ಸಂಗೀತ ಸಂಯೋಜನೆಯಿದೆ.

ನ್ಯೂರಾನ್

ಫ್ರೆಂಡ್ಸ್ ಪೆÇ್ರಡಕ್ಷನ್ ಲಾಂಛನದಲ್ಲಿ ವಿನಯ್‍ಕುಮಾರ್.ವಿ.ಆರ್ ಅವರು ನಿರ್ಮಿಸಿರುವ `ನ್ಯೂರಾನ್` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ನೈಜ ಘಟನೆ ಆಧಾರಿತ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ ವಿಕಾಸ್ ಪುಷ್ಪಗಿರಿ. ಇದು ಅವರಿಗೆ ಚೊಚ್ಚಲ ನಿರ್ದೇಶನದ ಚಿತ್ರ.
ಯುವ ಈ ಚಿತ್ರದ ಮೂಲಕ ನಾಯಕನಟನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಇನ್ನುಳಿದಂತೆ ನೇಹಾ ಪಾಟೀಲ್ ನಾಯಕಿಯಾಗಿ ಕಾಣಿಸಿಕೊಂಡಿದ್ಧಾರೆ. ವೈಷ್ಣವಿ ಮೆನನ್ ಪ್ರಮುಖ ಪಾತ್ರದಲ್ಲಿದ್ದಾರೆ. ಜೈಜಗದೀಶ್, ಶಿಲ್ಪಾ ಶೆಟ್ಟಿ, ವರ್ಷ, ಅರವಿಂದ್ ರಾವ್, ಕಬೀರ್ ಸಿಂಗ್(ಬಾಂಬೆ), ರಾಕ್‍ಲೈನ್ ಸುಧಾಕರ್, ಕಾರ್ತಿಕ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಗುರುಕಿರಣ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಹೈದರಾಬಾದ್‍ನ ಶೋಯಬ್ ಅಹಮದ್ ಛಾಯಾಗ್ರಹಣ, ಶ್ರೀಧರ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಶಿವಕುಮಾರ್ ಅವರ ಕಲಾ ನಿರ್ದೇಶನವಿದೆ. ಡಾ|| ವಿ.ನಾಗೇಂದ್ರ ಪ್ರಸಾದ್, ಕವಿರಾಜ್ ಹಾಡುಗಳನ್ನು ರಚಿಸಿದ್ದಾರೆ. ಶ್ರೀಹರ್ಷ ಸಂಭಾಷಣೆ ಬರೆದಿದ್ದಾರೆ.

ಮನರೂಪ
ಹೊಸ ತಲೆಮಾರಿನವರ ಮನೋಲೋಕವನ್ನು ತೆರೆದಿಡುವ ವಿಶಿಷ್ಟ ಪ್ರಕಾರದ ಸೈಕಾಲಜಿಕಲ್ ಥ್ರಿಲ್ಲರ್ ಕನ್ನಡ ಸಿನಿಮಾ ಮನರೂಪ ನವೆಂಬರ್ 22 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಮನುಷ್ಯನ, ಅದರಲ್ಲೂ ಮಿಲೇನಿಯಲ್‍ಗಳ (1980 ಮತ್ತು 2000 ನೇ ವರ್ಷಗಳ ಅವಧಿಯಲ್ಲಿ ಜನಿಸಿದವರು) ಬೇರೆ ಬೇರೆ ಮುಖಗಳನ್ನು ಅರ್ಥಮಾಡಿಕೊಳ್ಳಲು ನಿರ್ಭಿಡೆಯಿಂದ ಪ್ರಯತ್ನಿಸಿರುವ ಅಸಂಗತ ಸಿನಿಮಾ ಇದು. ಇಡೀ ಸಿನಿಮಾದ ಕತೆ ಎರಡು ದಿನಗಳಲ್ಲ್ಲಿ ನಡೆಯುತ್ತದೆ. ಪ್ರೇಕ್ಷಕರು ವಿಚಿತ್ರ ಅನುಭವದೊಂದಿಗೆ ಎಂಜಾಯ್ ಮಾಡಲು ಹಾಗೂ ತಮ್ಮೊಳಗಿರುವ ಸೆಲ್ಫ್ ಅಬ್ಸೆಷನ್ ಅಥವಾ ಸ್ವಯಂ ಗೀಳನ್ನು ಸಿನಿಮಾದಲ್ಲಿರುವ ಪಾತ್ರಗಳೊಂದಿಗೆ ಸಮೀಕರಿಸಿಕೊಳ್ಳಲು ಸಾಧ್ಯವಾಗುವ ರೀತಿಯಲ್ಲಿ ಚಿತ್ರವನ್ನು ಕಟ್ಟಿಕೊಡಲಾಗಿದೆ.

ಹೊಸ ಪ್ರತಿಭೆ ದಿಲೀಪ್ ಕುಮಾರ್ ನಾಯಕನ ಪಾತ್ರದಲ್ಲಿ ನಟಿಸಿದ್ದು, ಕಿರುತೆರೆಯಲ್ಲಿ ಜನಪ್ರಿಯ ನಟಿಯಾಗಿರುವ ಅನುಷಾ ರಾವ್ ಹಾಗೂ ಈಗಾಗಲೇ ಸಿನಿಮಾಗಳಲ್ಲಿ ನಟಿಸಿರುವ ನಿಶಾ ಬಿ.ಆರ್. ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆರ್ಯನ್ ಹಾಗೂ ಶಿವಪ್ರಸಾದ್ ಕೂಡ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಮನರೂಪದ ಐವರು ಸ್ನೇಹಿತರು ಇವರೇ ಆಗಿದ್ದು, ಇವರ ಸುತ್ತಲಿನಲ್ಲೇ ಥ್ರಿಲ್ಲಿಂಗ್ ಕತೆ ಗಿರಕಿಹೊಡೆಯುತ್ತದೆ. ಅಮೋಘ ಸಿದ್ದಾರ್ಥ್, ಗಜ ನೀನಾಸಂ ಹಾಗೂ ಪ್ರಜ್ವಲ್ ಗೌಡ ಅವರು ಕನ್ನಡದ ಪ್ರೇಕ್ಷಕರಿಗೆ ಅಪರೂಪವಾದ ವಿಚಿತ್ರ ಪಾತ್ರಗಳ ಮೂಲಕ ನಿಮ್ಮನ್ನು ಕಾಡಲಿದ್ದಾರೆ.
ಬಿ. ಸುರೇಶ್, ರಮಾನಂದ ಐನಕೈ, ಸತೀಶ್ ಹೆಗಡೆ ಗೋಳಿಕೊಪ್ಪ, ಪವನ್ ಕಲ್ಮನೆ, ಯಶೋದಾ ಹೊಸಕಟ್ಟ ಹಾಗೂ ಮಂಜುನಾಥ್ ಬೆಂಗಳೂರು, ಭಾಗೀರತಿ ಕನ್ನಡತಿ ಅವರು ಪೆÇೀಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಮಹಾಬಲ ಸೀತಾಳಭಾವಿ ಸಂಭಾಷಣೆ ಬರೆದಿದ್ದಾರೆ. ಗೋವಿಂದರಾಜ್ ಕ್ಯಾಮೆರಾ ನಿರ್ವಹಿಸಿದ್ದಾರೆ. ಸೂರಿ ಮತ್ತು ಲೋಕಿ ಎಡಿಟ್ ಮಾಡಿದ್ದಾರೆ. ಸರವಣ ಮ್ಯೂಸಿಕ್ ನೀಡಿದ್ದು, ನಾಗರಾಜ್ ಹುಲಿವಾನ್ ಶಬ್ಧ ಮತ್ತು ಧ್ವನಿ ವಿನ್ಯಾಸ ಮಾಡಿದ್ದಾರೆ. ಸಿ.ಎಂ.ಸಿ.ಆರ್ ಮೂವೀಸ್ ಮನರೂಪ ಚಿತ್ರವನ್ನು ನಿರ್ಮಿಸಿದೆ.

ರಾಜಲಕ್ಷ್ಮೀ
ಎಸ್.ಕೆ.ಎಂ ಮೂವೀಸ್ ಲಾಂಛನದಲ್ಲಿ ಮೋಹನ್ ಕುಮಾರ್ ಎಸ್.ಕೆ ಅವರು ನಿರ್ಮಿಸಿರುವ `ರಾಜಲಕ್ಷ್ಮೀ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಶ್ರೀಕಾಂತ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ನಾಗರಾಜಮೂರ್ತಿ ಅವರ ಛಾಯಾಗ್ರಹಣವಿದೆ. ಎ.ಟಿ.ರವೀಶ್ ಸಂಗೀತ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಕಾಂತರಾಜ್ ಬರೆದಿದ್ದಾರೆ. ಕಿರಣ್-ಅರ್ಜುನ್ ಸಂಕಲನ, ನವೀನ್ ಕನ್ನಡಿಗ ನೃತ್ಯ ನಿರ್ದೇಶನ, ಸಂಕರ್ ಶಾಸ್ತ್ರಿ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಮಾಗಡಿ ಯತೀಶ್ ಸಂಭಾಷಣೆ ಬರೆದಿದ್ದಾರೆ.
ಹೊನ್ನವಳ್ಳಿ ಕೃಷ್ಣ, ಟೆನ್ನಿಸ್ ಕೃಷ್ಣ, ನವೀನ್ ತೀರ್ಥಹಳ್ಳಿ, ರಶ್ಮಿಗೌಡ, ಚಂದ್ರಪ್ರಭಾ, ಸ್ಟೈಲ್ ಶಶಿ, ಸೀತಾರಾಂ, ಮುತ್ತುರಾಜ್, ಸದಾನಂದ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.