Saturday, 14th December 2024

ಮನು ಭಾಕರ್‌ಗೆ ದಾಖಲೆಯ ಚಿನ್ನ

ದೆಹಲಿ: ಭಾರತದ ಮನು ಭಾಕರ್ ಮತ್ತೊೊಂದು ಚಿನ್ನದ ಪದಕ ತಮ್ಮ ಮುಡಿಗೇರಿಸಿಕೊಂಡು ಹೊಸ ದಾಖಲೆ ಸೃಷ್ಟಿಿಸಿದ್ದಾರೆ.
ಐಎಸ್‌ಎಸ್‌ಎಫ್ ವಿಶ್ವಕಪ್ ಮಹಿಳೆಯರ 10ಮೀ. ಏರ್ ಪಿಸ್ತೂಲ್ ಫೈನಲ್ ಪಂದ್ಯಾಾವಳಿಯಲ್ಲಿ ಭಾಕರ್ ಸ್ವರ್ಣ ಪದಕ ಪಡೆದರು. ಇವರ ದಾಖಲೆಯ ಚಿನ್ನದ ಪದಕದ ಹಾದಿಯಲ್ಲಿ ಒಟ್ಟು 244.7 ಅಂಕಗಳು ಇದ್ದವು.
ಈ ವರ್ಷದ ವಿಶ್ವಕಪ್‌ನಲ್ಲಿ ಮಹಿಳೆಯರ 10ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತಕ್ಕೆೆ ಇದು ಮೊದಲನೆಯ ಚಿನ್ನದ ಪದಕ. ಇದರ ಜತೆಗೆ, ಮನು ಭಾಕರ್, ಕಿರಿಯರ ವಿಶ್ವ ದಾಖಲೆಯನ್ನು ಮುರಿದರು. ಮತ್ತೊೊಂದೆಡೆ, ಐಎಸ್‌ಎಸ್‌ಎಫ್ ವಿಶ್ವಕಪ್ ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಹೀನಾ ಸಿಧು ನಂತರ ಚಿನ್ನದ ಪದಕ ಗಳಿಸಿದ ಭಾರತೀಯ ಶೂಟರ್ ಎನಿಸಿಕೊಂಡಿದ್ದಾರೆ.