Thursday, 12th December 2024

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಿ

ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಯ ಶಿ-ರಸ್ಸಿನಂತೆ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಗೌರವಧನವನ್ನು ಹೆಚ್ಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಆದರೆ ಈ ಆದೇಶದಿಂದ ಅನೇಕ ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳುವ ಆತಂಕ ಎದುರಿಸು ವಂತಾಗಿದೆ. ಉಪನ್ಯಾಸಕರ ಕಾರ್ಯಭಾರವು 8 ರಿಂದ 10 ಗಂಟೆಗಳ ಕಾರ್ಯಭಾರ ಇದ್ದಾಗ ಹೆಚ್ಚಿನ ಅತಿಥಿ ಉಪನ್ಯಾಸಕರಿಗೆ ಅವಕಾಶ ಸಿಗುತ್ತಿತ್ತು. ಆದರೆ ಇದೀಗ ನೂತನ ಆದೇಶದ ಪ್ರಕಾರ 15 ಗಂಟೆಗೆ ಕಾರ್ಯ ಭಾರವನ್ನು ಹೆಚ್ಚಿಸಿರುವುದರಿಂದ ಶೇ.50 ರಷ್ಟು ಅಂದರೆ 7 ಸಾವಿರ ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ. ಅರ್ಧದಷ್ಟು ಜನರನ್ನು ಮನೆಗೆ ಕಳುಹಿಸಿ, ಉಳಿದವರಿಗೆ ಅವರ ಗೌರವಧನ ವನ್ನು ಕೊಡುವ ಯೋಚನೆಯನ್ನು ಸರಕಾರ ಮಾಡಿದಂತಿದೆ.

ಅಲ್ಲದೆ, ಒಂದು ಗಂಟೆಗೆ 450 ರು. ಇ ದ್ದ ಗೌರವಧನ 500 ರು.ಗೆ ಹೆಚ್ಚಳವಾಗಿದೆ. ಗೌರವಧನದಲ್ಲೂ ಹೇಳಿಕೊಳ್ಳುವಷ್ಟು ಹೆಚ್ಚಳ ಆಗಿಲ್ಲ. ಇದರ ಬದಲಿಗೆ ರಾಜ್ಯದ್ದೇ ಆದ ಪ್ರತ್ಯೇಕ ವೇತನ ಶ್ರೇಣಿಯನ್ನು(ಸ್ಟೇಟ್ ಸ್ಕೇಲ್) ಅನುಷ್ಠಾನಗೊಳಿಸಬೇಕಿತ್ತು. ಅಲ್ಲದೆ, 10 ತಿಂಗಳ ಬದಲಿಗೆ ಪೂರ್ಣಾವಧಿ ಎಂದು ನೇಮಕ ಮಾಡಿಕೊಂಡು, ರಜೆ ಅವಽಗೂ ಗೌರವಧನ ನೀಡಬೇಕಾಗಿತ್ತು. 15-20 ವರ್ಷ ಸೇವೆ ಸಲ್ಲಿಸಿದವರಿಗೆ ಸೇವಾ ಭದ್ರತೆಯ ವಿಚಾರದಲ್ಲಿ ಸರಕಾರ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎಂಬುದನ್ನೂ ಸ್ಪಷ್ಟಪಡಿಸಬೇಕಿತ್ತು. ಯುಜಿಸಿಯ ಎಲ್ಲ ಅರ್ಹತೆ ಇದ್ದು, ವಯೋಮಿತಿ  ಮೀರುತ್ತಿರುವವರ ಬಗ್ಗೆಯೂ ಆದೇಶದಲ್ಲಿ ಪ್ರಸ್ತಾಪ ಮಾಡಬೇಕಿತ್ತು.

ಇಷ್ಟೆಲ್ಲವನ್ನೂ ಮಾಡಬೇಕಿದ್ದ ಸರಕಾರ ಕೇವಲ ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸುವ ಮೂಲಕ ಅತಿಥಿ ಉಪನ್ಯಾಸಕರಿಗೆ ಸಂಕ್ರಾಂತಿ ಉಡುಗೊರೆ
ಕೊಟ್ಟಿದೆ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಉನ್ನತ ವ್ಯಾಸಂಗಕ್ಕೆ ಉತ್ತೇಜನ ನೀಡಲು ಕೇಂದ್ರ ಸರಕಾರ ಕೋಟಿ ಕೋಟಿ ಹಣ ಮೀಸಲಿಟ್ಟರೂ ರಾಜ್ಯ ಸರಕಾರದ ನೀತಿಗಳಿಂದ ಯುವಕರು ಉನ್ನತ ಶಿಕ್ಷಣದತ್ತ ಮುಖ ಮಾಡಲು ಹಿಂದೆ ಮುಂದೆ ನೋಡುವಂತಾಗಿದೆ. ಸರಕಾರ ಅತಿಥಿ ಉಪನ್ಯಾಸಕರಿಗೆ ಸೂಕ್ತ ಸೇವಾ ಭದ್ರತೆ ಒದಗಿಸುವ ಮೂಲಕ ಉನ್ನತ ವ್ಯಾಸಂಗದತ್ತ ಯುವಕರನ್ನು ಸೆಳೆಯುವ ಪ್ರಯತ್ನ ಮಾಡಬೇಕಿದೆ.