Thursday, 24th October 2024

42,470 ಕೋವಿಡ್​ ಪ್ರಕರಣ ಪತ್ತೆ

covid

ಹೊಸ 42,470 ಕೋವಿಡ್​ ಪ್ರಕರಣಗಳು ಪತ್ತೆ

35,140 ಜನರು ಸೋಂಕಿನಿಂದ ಚೇತರಿಕೆ 

ಬೆಂಗಳೂರು: ರಾಜ್ಯದಲ್ಲಿ ಶನಿವಾರ ಹೊಸದಾಗಿ 42,470 ಕೋವಿಡ್​ ಪ್ರಕರಣಗಳು ಪತ್ತೆಯಾಗಿದ್ದು, 26 ಮಂದಿ ಮೃತಪಟ್ಟಿದ್ದಾರೆ.

2,19,699 ಜನರಿಗೆ ಪರೀಕ್ಷೆ ನಡೆಸಿದ್ದು, ಸಕ್ರಿಯ ಪ್ರಕರಣಗಳು 3,30,447ಕ್ಕೆ ತಲುಪಿದೆ. 35,140 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಹೈ ರಿಸ್ಕ್ ದೇಶದಿಂದ 410 ಜನರು ಬಂದಿಳಿದಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ರಾಜಧಾನಿ ಬೆಂಗಳೂರಿನಲ್ಲಿ 17,266 ಮಂದಿಗೆ ಸೋಂಕು ದೃಢಪಟ್ಟಿದ್ದು, ನಗರದಲ್ಲಿ 2,18,329 ಸಕ್ರಿಯ ಪ್ರಕರಣಗಳಿವೆ. ಒಟ್ಟೂ ಸೋಂಕಿತರ ಸಂಖ್ಯೆ 15,59,358ಕ್ಕೆ ಏರಿದ್ದು, ಶನಿವಾರ 22,511ಜನರು ಚೇತರಿಕೆ ಕಂಡಿದ್ದಾರೆ. ಇದುವರೆಗೆ 16,490 ಸೋಂಕಿತರು ಮೃತಪಟ್ಟಿದ್ದಾರೆ.

ದೇಶದಲ್ಲೇ ಅತಿ ಹೆಚ್ಚು ಟೆಸ್ಟಿಂಗ್​ನಲ್ಲಿ ಕರ್ನಾಟಕವು ಮೂರನೇ ಸ್ಥಾನದಲ್ಲಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ 1,14,61,224 ಮಂದಿಗೆ ರ‍್ಯಾಪಿಡ್ ಆಯಂಟಿಜನ್ ಟೆಸ್ಟ್, 4,88,73,290 ಜನರಿಗೆ ಆರ್​​ಟಿಪಿಸಿಆರ್ ಟೆಸ್ಟ್ ಮಾಡಲಾಗಿದೆ. ‌ಒಟ್ಟಾರೆ, ಇಲ್ಲಿ ತನಕ 6,03,34,514 ಮಂದಿಗೆ ಟೆಸ್ಟ್​ಗೆ ಒಳಪಟ್ಟಿದ್ದಾರೆ.