Saturday, 23rd November 2024

ಕ್ರೀಡಾಂಗಣದ ಹೊರಗೆ ಕಾಲ್ತುಳಿತ: ಆರು ಮಂದಿ ಸಾವು

ಕ್ಯಾಮರೂನ್‌: ಆಫ್ರಿಕನ್ ಕಪ್ ಆಫ್ ನೇಷನ್ಸ್ ಫುಟ್‌ಬಾಲ್ ಪಂದ್ಯ ಆಯೋಜಿಸಿದ್ದ ಕ್ರೀಡಾಂಗಣದ ಹೊರಗೆ ನಡೆದ ಕಾಲ್ತುಳಿತದಲ್ಲಿ ಕನಿಷ್ಠ ಆರು ಜನರು ಮೃತಪಟ್ಟಿದ್ದಾರೆ.

ಪಂದ್ಯಾವಳಿಯಲ್ಲಿ ಕೊನೆಯ 16 ನಾಕೌಟ್ ಪಂದ್ಯದಲ್ಲಿ ಆತಿಥೇಯ ದೇಶವು ಕೊಮೊರೊಸ್ ಆಡುವುದನ್ನು ವೀಕ್ಷಿಸಲು ಕ್ಯಾಮರೂನ್ ರಾಜಧಾನಿ ಯೌಂಡೆಯಲ್ಲಿರುವ ಒಲೆಂಬೆ ಕ್ರೀಡಾಂಗಣಕ್ಕೆ ಪ್ರವೇಶ ಪಡೆಯಲು ಪ್ರೇಕ್ಷಕರು ಹೆಣಗಾಡುತ್ತಿರುವಾಗ ಕಾಲ್ತುಳಿತ ಸಂಭವಿಸಿದೆ.

ಕಾಲ್ತುಳಿತದಿಂದ 6 ಮಂದಿ ಮೃತಪಟ್ಟು, ಕನಿಷ್ಠ 40 ಮಂದಿ ಗಾಯಗೊಂಡಿದ್ದಾರೆ. ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕ್ರೀಡಾಂಗಣವು 60 ಸಾವಿರ ಜನರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಕೋವಿಡ್‌ ಕಾರಣದಿಂದಾಗಿ ಹೆಚ್ಚು ಪ್ರೇಕ್ಷಕರಿಗೆ ಅವಕಾಶ ನೀಡಿರ ಲಿಲ್ಲ. ಆದರೂ ಸುಮಾರು 50 ಸಾವಿರ ಜನರು ಪಂದ್ಯಕ್ಕೆ ಹಾಜರಾಗಲು ಪ್ರಯತ್ನಿಸಿದ್ದಾರೆ.

ಆತಿಥೇಯ ಕ್ಯಾಮರೂನ್ ಹತ್ತು ಮಂದಿಯ ಕೊಮೊರೊಸ್ ವಿರುದ್ಧ 2-1 ಗೆಲುವಿನೊಂದಿಗೆ ಪಂದ್ಯಾವಳಿಯ ಕ್ವಾರ್ಟರ್-ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಕಾಯ್ದಿರಿಸಿತು.