Monday, 25th November 2024

ನಟ ದಿಲೀಪ್’ಗೆ ನಿರೀಕ್ಷಣಾ ಜಾಮೀನು ಮಂಜೂರು

ತಿರುವನಂತಪುರಂ: ನಟ ದಿಲೀಪ್ ಮತ್ತು ಇತರರಿಗೆ ಕೇರಳ ಹೈಕೋರ್ಟ್ ಸೋಮವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ನಟಿಯ ಅಪಹರಣ(2017) ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಅಧಿಕಾರಿ ಗಳ ಹತ್ಯೆಗೆ ಸಂಚು ರೂಪಿಸಿದ ಆರೋಪದ ಪ್ರಕರಣದಲ್ಲಿ ಬಂಧನದಲ್ಲಿದ್ದರು.

ಕಳೆದ ತಿಂಗಳು, ದಿಲೀಪ್ ಕುಮಾರ್ ಸ್ನೇಹಿತ ಮತ್ತು ಚಲನಚಿತ್ರ ನಿರ್ದೇಶಕ ಬಾಲಚಂದ್ರಕುಮಾರ್ ನೀಡಿದ ಮಾಹಿತಿಯ ಆಧಾರದ ಮೇಲೆ ಅಪರಾಧ ವಿಭಾಗವು ದಿಲೀಪ್ ಮತ್ತು ಇತರ ಐವರ ವಿರುದ್ಧ ಪ್ರಕರಣ ದಾಖಲಿಸಿದೆ. ಪಿತೂರಿ ಪ್ರಕರಣದ ಆರು ಆರೋಪಿಗಳಲ್ಲಿ, ಕ್ರೈಂ ಬ್ರಾಂಚ್ ದಿಲೀಪ್ ಸೇರಿ ದಂತೆ ಐವರನ್ನು ಮಾತ್ರ ಹೆಸರಿಸಿದೆ ಮತ್ತು ಆರನೆಯವರು ಪ್ರಥಮ ಮಾಹಿತಿ ವರದಿಯಲ್ಲಿ ಅಪರಿಚಿತರಾಗಿ ಉಳಿದಿದ್ದಾರೆ.

ನವೆಂಬರ್ 15, 2017 ರಂದು ದಿಲೀಪ್ ಸಂಚು ರೂಪಿಸಿದ್ದಾರೆ ಎಂದು ಬಾಲಚಂದ್ರಕುಮಾರ್ ಹೇಳಿದ್ದಾರೆ. ಅರ್ಜಿದಾರರು ಮತ್ತು ಪ್ರಾಸಿಕ್ಯೂಷನ್ ನಡು ವಿನ ಹಲವು ಸುತ್ತಿನ ವಾದ-ವಿವಾದಗಳ ನಂತರ ನಿರೀಕ್ಷಣಾ ಜಾಮೀನು ಅರ್ಜಿಗಳ ಕುರಿತು ನ್ಯಾಯಾಲಯದ ತೀರ್ಪು ಬಂದಿದೆ.

ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್, ಮೂರು ದಿನಗಳ ಕಾಲ 33 ಗಂಟೆಗಳ ಕಾಲ ದಿಲೀಪ್ ಮತ್ತು ಇತರರನ್ನು ವಿಚಾರಣೆಗೆ ಒಳಪಡಿಸಲು ಅಪರಾಧ ವಿಭಾಗಕ್ಕೆ ಅವಕಾಶ ನೀಡಿತ್ತು. ಆರೋಪಿಗಳ ಕಸ್ಟಡಿ ವಿಚಾರಣೆಗೆ ನ್ಯಾಯಾಲಯ ಅವಕಾಶ ನೀಡಿರಲಿಲ್ಲ. ಬಳಿಕ ಜಾಮೀನು ಅರ್ಜಿಯ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯಕ್ಕೆ ಕ್ರೈಂ ಬ್ರಾಂಚ್ ವಿಚಾರಣೆ ವರದಿ ಯನ್ನು ಸಲ್ಲಿಸಿತ್ತು.

ಮೊಬೈಲ್ ಫೋನ್‌ಗಳನ್ನು ತನಿಖಾಧಿಕಾರಿಗಳಿಗೆ ಹಸ್ತಾಂತರಿಸಲು ದಿಲೀಪ್ ಹಿಂದೇಟು ಹಾಕಿದ್ದರಿಂದ, ಸಾಧನಗಳನ್ನು ವಶಪಡಿಸಿಕೊಳ್ಳಲು ನಿರ್ದೇಶನ ವನ್ನು ಕೋರಿ ಪ್ರಾಸಿಕ್ಯೂಷನ್ ಹೈಕೋರ್ಟ್‌ಗೆ ಹೋಗಬೇಕಾಯಿತು.