Saturday, 9th November 2024

ಕೇವಲ ಸಾಂಪ್ರದಾಯಿಕ ಶಿಕ್ಷಣದಿಂದ ಸವಾಲು ಎದುರಿಸಲು ಸಾಧ್ಯವೇ?

ದಿಲೀಪ್ ಕುಮಾರ್ ಸಂಪಡ್ಕ, ಶಿಕ್ಷಕರು

ಆಧುನಿಕ ಶಿಕ್ಷಣ ವ್ಯವಸ್ಥೆೆಯನ್ನು ಅವಲೋಕಿಸಿದಾಗ ವಿದ್ಯಾಾರ್ಥಿಗಳಲ್ಲಿ ಮೌಲ್ಯಗಳು, ಶಿಸ್ತು, ದೇಶದ ಬಗ್ಗೆೆ ಕಾಳಜಿ, ಸೇವಾ
ಮನೋಭಾವನೆ, ಭಾವೈಕ್ಯತೆ ಹಾಗೂ ತನ್ನ ಜೀವನದ ಸ್ಪಷ್ಟ ಗುರಿಗಳ ನಿರ್ಧಾರ ಮಾಡುವಲ್ಲಿ ನಿಖರತೆಯ ಕೊರತೆಯಾಗುತ್ತಿಿದೆ ಎಂಬ ವಿಚಾರಗಳು ಸಾರ್ವಜನಿಕ ವಲಯಗಳಲ್ಲಿ ಆಗಾಗ್ಗೆೆ ಚರ್ಚೆಯಾಗುತ್ತಿಿರುತ್ತದೆ. ಇಂದಿನ ವಿದ್ಯಾಾರ್ಥಿಗಳೇ ಮುಂದಿನ ಪ್ರಜೆಗಳು ಎಂಬ ಮಾತು ಅಕ್ಷರಃ ಸತ್ಯ. ಇಂದಿನ ಯವ ಜನಾಂಗವನ್ನು ಒಬ್ಬ ಪರಿಪೂರ್ಣ ನಾಗರಿಕನಾಗಿ ರೂಪಿಸುವ ಹೊಣೆ ಶಿಕ್ಷಣದ ವ್ಯವಸ್ಥೆೆಯ ಮೇಲಿದೆ. ವಿದ್ಯಾಾರ್ಥಿಗಳಿಗೆ ಪಠ್ಯ ವಿಚಾರಗಳನ್ನು ಹೊರತುಪಡಿಸಿ, ವಿದ್ಯಾಾರ್ಥಿಗಳಲ್ಲಿರುವ ಅದಮ್ಯವಾದ ಬುದ್ಧಿಿ, ಬಲ, ಆದರ್ಶ, ಉತ್ಸಾಾಹವನ್ನು ಬಳಸಿಕೊಂಡು ಅವರನ್ನು ಕ್ರಿಿಯಾತ್ಮಕ ಕಾರ್ಯಗಳಿಗೆ ತೊಡಗಿಸುವ ಕೆಲಸ ಅತೀ ಮುಖ್ಯವಾಗಿ ಮಾಡಬೇಕಿದೆ.

ಕೇವಲ ಸಾಂಪ್ರದಾಯಿಕ ಶಿಕ್ಷಣ ಒಂದರಲ್ಲೇ ಈ ಸಮಾಜದಲ್ಲಿರುವ ಎಲ್ಲಾಾ ಸವಾಲುಗಳನ್ನು ಸಮರ್ಪಕವಾಗಿ ಎದುರಿಸಲು ಸಾಧ್ಯವೇ ಇಲ್ಲ ಎಂಬುದು ನಮಗೆಲ್ಲ ತಿಳಿದಿದೆ. ಸಮಾಜದ ನೇರ ಸಂಪರ್ಕವನ್ನು ಪಡೆದಾಗ, ಸಮಾಜದ ನೋವು-ನಲಿವುಗಳಿಗೆ ಸ್ಪಂದಿಸುವ, ಜೀವನದ ಮೌಲ್ಯಗಳನ್ನು ಎತ್ತಿಿ ಹಿಡಿಯುವ ಪ್ರವೃತ್ತಿಿ ಹುಟ್ಟುತ್ತದೆ. ಈ ದಿಶೆಯಲ್ಲಿ ಶಿಕ್ಷಣ ಕ್ಷೇತ್ರದ ಹಲವು ಸಮಸ್ಯೆೆಗಳಿಗೆ ಉತ್ತರ ಕಂಡು ಹಿಡಿಯಬಹುದಾಗಿದೆ. ಹಾಗೆಯೇ ಸಮಾಜದ ಬೇರೆ ಬೇರೆ ಸಮಸ್ಯೆೆಗಳಿಗೆ ಪರಿಹಾರಗಳನ್ನು ಕಾಣಬಹುದಾಗಿದೆ. ನಮ್ಮ ರಾಷ್ಟ್ರ ಮುಂದುವರೆಯಬೇಕಾದರೆ ನಮ್ಮ ಯುವ ಜನಾಂಗ, ಅದರಲ್ಲೂ ವಿದ್ಯಾಾರ್ಥಿಗಳು ಸಾಮಾಜಿಕ ಜವಾಬ್ದಾಾರಿ ಅರಿತು ಬದುಕಿನೊಡನೆ ನೇರ ಸಂಪರ್ಕ ಇಟ್ಟಕೊಳ್ಳಬೇಕೆಂಬುದು ಗಾಂಧೀಜಿಯವರ ಕನಸಾಗಿತ್ತು. ಇವುಗಳನ್ನು ಮನಗಂಡ ಸರಕಾರ ವಿದ್ಯಾಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆ ಮತ್ತು ಸೇವಾ ಮನೋಭಾವ ಮೂಡಿಸಲು ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕವನ್ನು ಪ್ರೌೌಢಶಾಲೆಗಳಿಗೂ ವಿಸ್ತರಿಸುವ ಮೂಲಕ ಪ್ರೌೌಢಶಾಲೆ ಮಕ್ಕಳಲ್ಲಿಯೂ ಧನಾತ್ಮಕ ಭಾವನೆ ಬಿತ್ತಿಿ ಅವರ ವ್ಯಕ್ತಿಿತ್ವ ವಿಕಸನಗೊಳಿಸಲು ದಿಟ್ಟ ಹೆಜ್ಜೆೆಯನ್ನಿಿರಿಸಿರುವುದು ಶ್ಲಾಾಘನೀಯ.
ರಾಷ್ಟ್ರೀಯ ಸೇವಾ ಯೋಜನೆಯು 1969ರಲ್ಲಿ ಉನ್ನತ ಶಿಕ್ಷಣದಲ್ಲಿ ಜಾರಿಗೆ ಬಂದಿತು.

ಶಿಕ್ಷಣದೊಂದಿಗೆ ವ್ಯಕ್ತಿಿ ವಿಕಸನ ಮತ್ತು ಶಿಕ್ಷಣದೊಂದಿಗೆ ಸೇವೆ ಎಂಬ ಎರಡು ಉದ್ದೇಶಗಳನ್ನು ಎನ್‌ಎಸ್‌ಎಸ್ ಹೊಂದಿದೆ. ದೇಶಾದ್ಯಂತ ಸುಮಾರು 500 ವಿಶ್ವವಿದ್ಯಾಾಲಯ ಮತ್ತು ನಿರ್ದೇಶನಾಲಯಗಳಲ್ಲಿ ಸುಮಾರು 40 ಲಕ್ಷ ಸ್ವಯಂಸೇವಕರು ಈ ಯೋಜನೆಯಲ್ಲಿ ತೊಡಗಿಕೊಂಡಿದ್ದಾಾರೆ. ನಮ್ಮ ರಾಜ್ಯದಲ್ಲಿರುವ 32 ವಿಶ್ವವಿದ್ಯಾಾಲಯ ಮತ್ತು 4 ನಿರ್ದೇಶನಾಲಯಗಳಲ್ಲಿ ಸುಮಾರು 4,75,000 ಸ್ವಯಂಸೇವಕರು ಸ್ವಯಂ ತೊಡಗಿಸಿಕೊಂಡಿದ್ದಾಾರೆ. ಪ್ರಸ್ತುತ ಸ್ನಾಾತಕೋತ್ತರ ಪದವಿಯಿಂದ ಪಿಯುಸಿವರೆಗೆ ಮಾತ್ರ ಈ ಯೋಜನೆಯು ಅನುಷ್ಠಾಾನದಲ್ಲಿದ್ದು

ಪ್ರೌೌಢಶಾಲೆಗಳಿಗೂ ಇದನ್ನು ವಿಸ್ತರಿಸುವ ಬಗ್ಗೆೆ 2016-17ರಲ್ಲಿ ರಾಜ್ಯಮಟ್ಟದ ಸಲಹಾ ಸಮಿತಿಯಲ್ಲಿ ನಿರ್ಧರಿಸಲಾಗಿತ್ತು.
ಇದರ ಮುಂದುವರಿದ ಭಾಗವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರತಿ ಜಿಲ್ಲೆೆಯಲ್ಲಿ ಪ್ರಾಾಯೋಗಿಕ ಹಂತದಲ್ಲಿ ಹತ್ತು ಶಾಲೆಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆಯನ್ನು ಅನುಷ್ಠಾಾನಗೊಳಿಸಲು ಮತ್ತು ಅಗತ್ಯವಾದ ಅನುದಾನವನ್ನು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಭರಿಸತಕ್ಕದ್ದು ಎಂಬ ಸಲಹೆಯೊಂದಿಗೆ ಪ್ರಾಾಥಮಿಕ ಮತ್ತು ಪ್ರೌೌಢ ಶಿಕ್ಷಣ ಇಲಾಖೆಯು 2018ರಲ್ಲಿ ಅನುಮೋದನೆ ನೀಡಿದೆ. ಸರಕಾರ ರಾಜ್ಯದ 34 ಶೈಕ್ಷಣಿಕ ಜಿಲ್ಲೆೆಗಳ 340 ಪ್ರೌೌಢಶಾಲೆಗಳಲ್ಲಿ ಪ್ರಾಾಯೋಗಿಕ ಘಟಕಗಳಿಗೆ ಚಾಲನೆ ನೀಡಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯು ರಾಜ್ಯಮಟ್ಟದಲ್ಲಿ ಯೋಜನೆಯ ಅನುಷ್ಠಾಾನದ ಪೂರ್ತಿ ಜವಾಬ್ದಾಾರಿಯನ್ನು ಹೊಂದಿದೆ. ನೀತಿ ನಿಮಾವಳಿಗಳನ್ನು ನಿರ್ಧರಿಸಲು ರಾಜ್ಯಮಟ್ಟದ ಸಲಹಾ ಸಮಿತಿ ಇರುತ್ತದೆ. ಈ ಸಮಿತಿಗೆ 2 ವರ್ಷದ ಅವಧಿಯಾಗಿದ್ದು,

ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಎನ್‌ಎಸ್‌ಎಸ್ ಕೋಶವು ಸಲಹಾ ಸಮಿತಿಯನ್ನು ರಚಿಸಿ ಆದೇಶ ಹೊರಡಿಸುತ್ತದೆ. ಸಲಹಾ ಸಮಿತಿಯು ವರ್ಷಕ್ಕೆೆ 2 ಬಾರಿ ಸಭೆ ಸೇರುತ್ತದೆ. ಮೊದಲ ಸಭೆಯಲ್ಲಿ ಕ್ರಿಿಯಾ ಯೋಜನೆಗೆ ಒಪ್ಪಿಿಗೆ ಹಾಗೂ ವರ್ಷದ ಚಟುವಟಿಕೆಗಳ ಬಗ್ಗೆೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತದೆ. ಎರಡನೆಯ ಸಭೆಯಲ್ಲಿ ವರ್ಷದ ಚಟುವಟಿಕೆಗಳ ಮೌಲ್ಯಮಾಪನ ಮಾಡಲಾಗುತ್ತದೆ. ಪ್ರೌೌಢಶಾಲೆಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಅನುಷ್ಠಾಾನದ ನೀತಿ ನಿಯಮಾವಳಿಗಳ ಬಗ್ಗೆೆ ನಿರ್ಧಾರ ತೆಗೆದುಕೊಳ್ಳುವ ಸಂಪೂರ್ಣ ಹಕ್ಕು ಸಲಹಾ ಸಮಿತಿಗೆ ಇರುತ್ತದೆ.

ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಪ್ರೌೌಢಶಾಲೆಗಳಲ್ಲಿ ಮಹತ್ತರವಾದ ದೂರದೃಷ್ಟಿಿಯ ಉದ್ದೇಶ ಇಟ್ಟುಕೊಂಡು ಅನುಷ್ಠಾಾನ ಮಾಡಲಾಗಿದೆ. ಪ್ರೌೌಢಶಾಲಾ ಹಂತದಲ್ಲಿ ಎನ್‌ಎಸ್‌ಎಸ್ ಅನುಷ್ಠಾಾನದಲ್ಲಿರುವುದರಿಂದ ಈ ಹಂತದಲ್ಲಿ ವಿದ್ಯಾಾರ್ಥಿಗಳಿಗೆ ಸರಳವಾಗಿ ಎನ್‌ಎಸ್‌ಎಸ್ ಕುರಿತು ಮನವರಿಕೆ ಮಾಡಿದರೆ ಮುಂದಿನ ಹಂತದಲ್ಲಿ ಅದನ್ನು ಸಬಲೀಕರಣಗೊಳಿಸಲು ಸಾಧ್ಯವಾಗುತ್ತದೆ. ವಿದ್ಯಾಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳ ಮೂಲಕ ಅವರ ವ್ಯಕ್ತಿಿತ್ವ ವಿಕಸನವನ್ನು ಸಾಧಿಸಬಹುದು. ಅಲ್ಲದೆ, ಪ್ರೌೌಢಶಾಲಾ ಹಂತದಲ್ಲಿ ಸಮಾಜ ಸೇವೆಯ ಕುರಿತಾಗಿ ಮನವರಿಕೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಪ್ರೌೌಢ ಶಾಲೆಗಳಲ್ಲಿ ಅನುಷ್ಠಾಾನ ಮಾಡಿರುವ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ವಿಶ್ವವಿದ್ಯಾಾಲಯ ಮತ್ತು ಕಾಲೇಜು ಮಟ್ಟದ ಪರಿಕಲ್ಪನೆಗಿಂತ ಕೊಂಚ ವಿಭಿನ್ನವಾಗಿ ಪ್ರೌೌಢಶಾಲಾ ವಿದ್ಯಾಾರ್ಥಿಗಳ ಬೌದ್ಧಿಿಕ ಮತ್ತು ಅವರ ವಯಸ್ಸಿಿಗೆ ಅನುಗುಣವಾಗಿ ಚಟುವಟಿಕೆಗಳನ್ನು ರೂಪಿಸಲಾಗಿದೆ. ಅವುಗಳು ಮುಖ್ಯವಾಗಿ ರಾಷ್ಟ್ರೀಯ ಸೇವಾ ಯೋಜನೆಯನ್ನು 8 ಮತ್ತು 9ನೇ ತರಗತಿಗಳಿಗೆ ಮಾತ್ರ ಅನುಷ್ಠಾಾನಿಸುವುದು. ಒಂದು ತರಗತಿಯ ಆಸಕ್ತ 50-100 ವಿದ್ಯಾಾರ್ಥಿಗಳ ಘಟಕವನ್ನು ರೂಪಿಸುವುದು. ವರ್ಷಕ್ಕೆೆ ನಿರ್ಧಿಷ್ಟವಾದ 5 ರಿಂದ 6 ಕಾರ್ಯಕ್ರಮಗಳನ್ನು ರೂಪಿಸುವುದು. ವರ್ಷಕ್ಕೆೆ ಒಂದು ದಿನದ ಶಿಬಿರವೊಂದನ್ನು ಗ್ರಾಾಮೀಣ ಪ್ರದೇಶ ಅಥವಾ ಸ್ಲಂಗಳಲ್ಲಿ ಏರ್ಪಡಿಸುವುದು. ಸಮೀಪದ ಕಾಲೇಜುಗಳ ಎನ್‌ಎಸ್‌ಎಸ್ ಪರಿಣಿತರಿಂದ ತರಬೇತಿ ಹಾಗೂ ಇತರ ಕಾರ್ಯಕ್ರಮಗಳಿಗೆ ಸಂಪನ್ಮೂಲ ವ್ಯಕ್ತಿಿಗಳಾಗಿ ಆಹ್ವಾಾನಿಸುವುದು. ಸ್ಥಳೀಯ ಕಾಲೇಜುಗಳು ಪ್ರೌೌಢಶಾಲೆಗಳ ಘಟಕಗಳ ಸಹಯೋಗದೊಂದಿಗೆ ಕೆಲವು ಕಾರ್ಯಕ್ರಮಗಳನ್ನು ರೂಪಿಸುವುದು. ಪ್ರೌೌಢಶಾಲೆಯ ಶಿಕ್ಷಕರೊಬ್ಬರನ್ನು ಕಾರ್ಯಕ್ರಮ ಅಧಿಕಾರಿಯಾಗಿ ನೇಮಿಸಿ ಮೇಲ್ವಿಿಚಾರಣೆಯಲ್ಲಿ ಯೋಜನೆಯನ್ನು ಶಾಲೆಯಲ್ಲಿ ಅನುಷ್ಠಾಾಗೊಳಿಸುವುದು.

ಪೊಲೀಸ್ ಠಾಣೆ, ಆಸ್ಪತ್ರೆೆ, ನ್ಯಾಾಯಾಲಯ, ಪತ್ರಿಿಕಾಲಯ, ವೃದ್ಧಾಾಶ್ರಮ, ಸಹಕಾರ ಸಂಘಗಳಿಗೆ ಭೇಟಿ ನೀಡುವುದು. ಅಂಚೆ ಕಚೇರಿ, ಗ್ರಾಾಮ ಪಂಚಾಯತ್, ನಗರಸಭೆ, ಪುರಸಭೆ, ಸ್ವಸಹಾಯ ಗುಂಪು, ಅಗ್ನಿಿಶಾಮಕ ದಳದ ಅಧಿಕಾರಿಗಳೊಂದಿಗೆ ಮುಖಾಮುಖಿ ಚರ್ಚೆ ನಡೆಸುವುದು. ನಕ್ಷತ್ರ ವೀಕ್ಷಣೆ, ಪಕ್ಷಿ ವೀಕ್ಷಣೆ, ಕೃಷಿ ಕೆಲಸಗಳ ವೀಕ್ಷಣೆ, ಮತ್ತು ಪ್ರಾಾಚ್ಯವಸ್ತು ಸಂಗ್ರಹಾಲಯ ಭೇಟಿ. ಇವುಗಳ ಆಧಾರದಲ್ಲಿ ಕಾರ್ಯಕ್ರಮಗಳನ್ನು ನಿರ್ಧರಿಸಲಾಗುತ್ತದೆ.

ಇದಲ್ಲದೆ, ಮಾದಕ ವ್ಯಸನ, ಧೂಮಪಾನ, ಮಧ್ಯಪಾನದ ವಿರುದ್ಧ ಅರಿವು ಮೂಡಿಸುವುದು, ಹೆಣ್ಣು ಮಕ್ಕಳಿಗೆ ಕಾನೂನು ಮತ್ತು ಆರ್ಯೋೋಗದ ಬಗ್ಗೆೆ ವಿಶೇಷ ತರಬೇತಿ ನೀಡುವುದು. ವಿದ್ಯಾಾರ್ಥಿಗಳಿಗೆ ಸ್ವಚ್ಛತೆಯ ಬಗ್ಗೆೆ ಅರಿವು ಮೂಡಿಸುವುದು. ಶಾಲಾ ಆವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಪ್ರೇರೇಪಿಸುವುದು. ಗ್ರಾಾಮ ಪಂಚಾಯಿತಿ, ನಗರ ಸಭೆ ಮೊದಲಾದ ಸ್ಥಳೀಯ ಸಂಸ್ಥೆೆಗಳ ಪರಿಚಯ ಮಾಡಿಸುವುದು. ಸ್ಥಳೀಯ ಪ್ರಾಾಥಮಿಕ ಆರೋಗ್ಯ ಕೇಂದ್ರದೊಂದಿಗೆ ವಿದ್ಯಾಾರ್ಥಿಗಳಿಗಾಗಿ ಆರೋಗ್ಯ ಕಾರ್ಯಕ್ರಮಗಳನ್ನು ನಡೆಸುವುದು. ಸ್ಥಳೀಯ ಸಂಘ ಸಂಸ್ಥೆೆಗಳು ಮತ್ತು ಕಾಲೇಜುಗಳ ಸಹಕಾರದೊಂದಿಗೆ ವ್ಯಕ್ತಿಿತ್ವ ವಿಕಸನ ಕಾರ್ಯಕ್ರಮವನ್ನು ರೂಪಿಸುವುದು.

ಪ್ರಾಾಕೃತಿಕ ವಿಪತ್ತುಗಳು ಸಂಭವಿಸಿದಂತಹ ಸಮಯದಲ್ಲಿ ವಿದ್ಯಾಾರ್ಥಿಗಳ ಪಾತ್ರದ ಕುರಿತು ತಿಳಿಯಪಡಿಸುವುದು. ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸ್ವಾಾಮಿ ವಿವೇಕಾನಂದರ ತತ್ವಗಳ ಬಗ್ಗೆೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುವುದು. ನೆರೆಯ ಗ್ರಾಾಮ, ಸ್ಲಂ ಅಥವಾ ಪ್ರೇಕ್ಷಣೀಯ ಸ್ಥಳಗಳಲ್ಲಿ ಬೆಳಗ್ಗೆೆಯಿಂದ ಸಂಜೆವರೆಗೆ ಒಂದು ದಿನದ ಶಿಬಿರವನ್ನು ನಡೆಸಿ, ಈ ಶಿಬಿರದಲ್ಲಿ ಶ್ರಮದ ಬಗ್ಗೆೆ ಅರಿವು, ವ್ಯಕ್ತಿಿ ವಿಕಸನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಬಹುದಾದ ರೂಪುರೇಷೆಗಳನ್ನು ನಿರ್ಧರಿಸುವ ಸ್ವಾಾತಂತ್ರ್ಯವನ್ನು ಶಾಲೆಯ ಎನ್‌ಎಸ್‌ಎಸ್ ಅಧಿಕಾರಿಗಳಿಗೆ ನೀಡಲಾಗಿದೆ.

ಶಾಲೆಗಳಲ್ಲಿ ಈ ಕಾರ್ಯಕ್ರಮದ ಅನುಷ್ಠಾಾನಕ್ಕೆೆ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಎನ್‌ಎಸ್‌ಎಸ್ ಕೋಶವು ಪೂರ್ಣ ಅನುದಾನವನ್ನು ನೀಡುತ್ತದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಎನ್‌ಎಸ್‌ಎಸ್ ವಿಭಾಗವು ಆಯುಕ್ತರು ಮತ್ತು ನಿರ್ದೇಶಕರ
ಸಲಹೆಯಂತೆ ಖರ್ಚು ವೆಚ್ಚಗಳನ್ನು ನಿರ್ವಹಿಸುತ್ತದೆ. ಜಿಲ್ಲಾಾ ಮಟ್ಟದಲ್ಲಿ ಶಾಲೆಯ ಎನ್‌ಎಸ್‌ಎಸ್ ಅಧಿಕಾರಿಗಳಿಗೆ ಎರಡು ದಿನದ ತರಬೇತಿ ನಡೆಸಲಾಗುತ್ತದೆ. ಶಾಲಾ ಮಟ್ಟದಲ್ಲಿ ಅರ್ಧ ದಿನದ ತರಬೇತಿಯನ್ನು ವಿದ್ಯಾಾರ್ಥಿಗಳಿಗೆ ಕಡ್ಡಾಾಯವಾಗಿ ನಡೆಸಬೇಕು. ಈ ತರಬೇತಿಯಲ್ಲಿ ಎನ್‌ಎಸ್‌ಎಸ್‌ನ ಹಿನ್ನೆೆಲೆ, ಉದ್ದೇಶ ಮತ್ತು ಕಾರ್ಯಕ್ರಮಗಳ ಮಾಹಿತಿ ನೀಡಬೇಕಿದೆ.
ಈ ಕಾರ್ಯಕ್ರಮವನ್ನು ಉತ್ತೇಜಿಸಲು ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಎನ್‌ಎಸ್‌ಎಸ್‌ನಲ್ಲಿ ಎರಡು ವರ್ಷ ಪೂರೈಸಿದ ಎಲ್ಲಾಾ ವಿದ್ಯಾಾರ್ಥಿಗಳಿಗೆ ಪ್ರಮಾಣ ಪತ್ರವನ್ನು ರಾಜ್ಯಮಟ್ಟದಿಂದಲೇ ಒದಗಿಸಲಾಗುತ್ತದೆ. ನೋಡೆಲ್ ಅಧಿಕಾರಿಗಳು ಮತ್ತು ಶಾಲಾ ಮಟ್ಟದ ಎನ್‌ಎಸ್‌ಎಸ್‌ನಲ್ಲಿ ಸಲ್ಲಿಸಿದ ಸೇವೆಯನ್ನು ಸೇವಾ ಪುಸ್ತಕದಲ್ಲಿ ದಾಖಲಿಸಲಾಗುತ್ತದೆ. ಅತ್ಯುತ್ತಮ ಸೇವೆ ಸಲ್ಲಿಸಿದ ಜಿಲ್ಲೆೆ ಮತ್ತು ಘಟಕಗಳಿಗೆ ರಾಜ್ಯ ಮಟ್ಟದ ಪ್ರಶಸ್ತಿಿಯನ್ನು ನೀಡುವ ಪ್ರಸ್ತಾಾವನೆಯಿದೆ.

ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಒಂದು ಉದಾತ್ತವಾದ, ಮೌಲ್ಯಾಾಧಾರಿತ ಯುವ ಜನತೆಯ ಯೋಜನೆಯಾಗಿದೆ. ಯುವಜನತೆ ರಾಷ್ಟ್ರದ ಅತ್ಯುತ್ತಮ ನಾಗರಿಕರಾಗಿ, ರಾಷ್ಟ್ರ ನಿರ್ಮಾಣದಲ್ಲಿ ಹಾಗೂ ಮುಖ್ಯವಾಗಿ ಗ್ರಾಾಮೀಣ ಅಭಿವೃದ್ಧಿಿಯಲ್ಲಿ ನೇರವಾಗಿ ಭಾಗವಹಿಸಬೇಕೆಂಬ ರಾಷ್ಟ್ರಪಿತ ಮಹಾತ್ಮಾಾ ಗಾಂಧೀಜಿಯವರ ಕನಸನ್ನು ನನಸಾಗಿಸಲು ಮೂಡಿ ಬಂದ ಯೋಜನೆ ಇದಾಗಿದೆ. ಒಟ್ಟಾಾರೆಯಾಗಿ ಈ ಯೋಜನೆಯೂ ಪ್ರೌೌಢ ಶಾಲೆಯ ಹಂತದಲ್ಲಿ ಅನುಷ್ಠಾಾನ ಮಾಡಿರುವುದು ಒಂದು ಉತ್ತಮ ನಿರ್ಧಾರವಾಗಿದೆ. ಇದು ಔಪಚಾರಿಕ ಶಿಕ್ಷಣದೊಂದಿಗೆ, ಅನೇಕ ರಚನಾತ್ಮಕ ಜನಪರ ಕಾರ್ಯಯೋಜನೆಗಳಾದ ಪರಿಸರ ಸಂರಕ್ಷಣೆ, ಆರೋಗ್ಯ, ನೈರ್ಮಲ್ಯ, ನೆಲ-ಜಲ ಸಂವರ್ಧನೆ, ನಾಯಕತ್ವ ಬೆಳವಣಿಗೆ ಮುಂತಾದವುಗಳ ಬಗ್ಗೆೆ ಜಾಗೃತಿ ಮತ್ತು ತರಬೇತಿ ನೀಡಲಿದೆ.

ಸಮುದಾಯದ ಸೇವೆ ಮೂಲಕ ವಿದ್ಯಾಾರ್ಥಿಗಳ ವ್ಯಕ್ತಿಿತ್ವ ವಿಕಾಸದೊಂದಿಗೆ ಸಾಂಪ್ರದಾಯಿಕ ಶಿಕ್ಷಣದ ಜತೆಗೆ ವಿದ್ಯಾಾರ್ಥಿಗಳ ಮೂಲ ಸ್ವಭಾವ ಮತ್ತು ಪ್ರವೃತ್ತಿಿಗಳಲ್ಲಿ ಪರಿಣಾಮಕಾರಿಯಾದ ಧನಾತ್ಮಕ ಪರಿವರ್ತನೆಯನ್ನುಂಟು ಮಾಡಿ ಉತ್ತಮ ಚಾರಿತ್ರ್ಯವಂತ ನಾಗರಿಕನ್ನಾಾಗಿ ರೂಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಇದು ಖಂಡಿತವಾಗಿಯೂ ಈಡೇರುವುದರಲ್ಲಿ ಸಂಶಯವೇ ಇಲ್ಲ. ಈ ಯೋಜನೆಯೂ ವಿದ್ಯಾಾರ್ಥಿಗಳಲ್ಲಿರುವ ಸುಪ್ತ ಸಾಮರ್ಥ್ಯಗಳನ್ನು ಉಳಿಸಿ, ಬೆಳೆಸುವುದರ ಜತೆಗೆ ಇರಬಹುದಾದ ಓರೆ ಕೊರೆಗಳನ್ನು ತಿದ್ದಲು ಇದು
ಸಾಧನವಾಗುತ್ತದೆ. ವಿದ್ಯಾಾರ್ಥಿಗಳು ಈ ಯೋಜನೆಯಲ್ಲಿ ಸಕ್ರಿಿಯವಾಗಿ ತೊಡಗಿದರೆ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಸಮಸ್ಯೆೆಗಳು ಕಡಿಮೆಯಾಗುತ್ತದೆ. ವಿದ್ಯಾಾರ್ಥಿಗಳು, ಸಾಮಾನ್ಯ ವಿದ್ಯಾಾರ್ಥಿಗಳಿಗಿಂತ ಭಿನ್ನವಾಗಿರಲು ರಾಷ್ಟ್ರೀಯ ಸೇವಾ ಯೋಜನೆ ಸಹಾಯ ಮಾಡುತ್ತದೆ.

ಅಂತಿಮವಾಗಿ, ನಾನು ನನಗಾಗಿ ಮಾತ್ರವಲ್ಲ, ನಮ್ಮೆೆಲ್ಲರಿಗಾಗಿ ಎಂಬುದು ರಾಷ್ಟ್ರೀಯ ಸೇವಾ ಯೋಜನೆಯ ಧ್ಯೇಯ ವಾಕ್ಯವಾಗಿದೆ. ಇದರ ಸಾರಾಂಶ ‘ನಾನು ನನಗಾಗಿ ಮಾತ್ರವಲ್ಲ, ನಿಮ್ಮೆೆಲ್ಲರಿಗಾಗಿಯೂ’ ಎಂಬುದಾಗಿದೆ. ಆದುದರಿಂದ, ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾಾರ್ಥಿಗಳು ಸಮಾಜದ ಅಭ್ಯುದಯದ ಮೂಲಕ ತನ್ನ ಅಭ್ಯುದಯವನ್ನು ಕಾಣುತ್ತಾಾನೆ. ಆದ್ದರಿಂದ ಈ ಎಲ್ಲ ಬೆಳವಣಿಗೆಗಳು
ಯಶಸ್ವಿಿಯಾಗಲು ಇಲಾಖೆಯ ಜತೆಗೆ ಶಿಕ್ಷಕರು, ಪೋಷಕರು ಮತ್ತು ಎಸ್‌ಡಿಎಂಸಿಯವರು ಕೈಜೊಡಿಸುವ ಅವಶ್ಯಕತೆಯಿದೆ.