Friday, 20th September 2024

ಯುವ ಪೀಳಿಗೆ ದೇಶಕ್ಕೆ ಕೀರ್ತಿ ತರಲಿ: ಮೇರಿ ಕೋಮ್

ನವದೆಹಲಿ: ಯುವ ಪೀಳಿಗೆಗಳು ಆಟದಲ್ಲಿ ಮುಂದುವರೆಯಲಿ, ದೇಶಕ್ಕೆ ಕೀರ್ತಿ ತರುವಂತೆ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಗೆಲುವು ಸಾಧಿಸಲಿ ಎನ್ನುವ ಉದ್ದೇಶದಿಂದ, ಭಾರತೀಯ ಬಾಕ್ಸಿಂಗ್ ತಾರೆ ಎಂ.ಸಿ ಮೇರಿ ಕೋಮ್ ಅವರು, ವಿಶ್ವ ಚಾಂಪಿಯನ್ ಶಿಪ್ ಹಾಗೂ ಏಷ್ಯನ್ ಗೇಮ್ಸ್ ಅನ್ನು ತ್ಯಜಿಸಿದ್ದಾರೆ.

ಈ ಕುರಿತಂತೆ ಬಾಕ್ಸಿಂಗ್ ಫೆಡರೇಷನ್ ಆಫ್ ಇಂಡಿಯಾ, ಭಾರತೀಯ ಬಾಕ್ಸಿಂಗ್ ತಾರೆ ಎಂಸಿ ಮೇರಿ ಕೋಮ್ ವಿಶ್ವ ಚಾಂಪಿಯನ್ ಶಿಪ್ ಮತ್ತು ಏಷ್ಯನ್ ಗೇಮ್ಸ್ ಅನ್ನು ಬಿಟ್ಟು ಯುವ ಪೀಳಿಗೆಗೆ ದಾರಿ ಮಾಡಿಕೊಡುತ್ತಿದ್ದಾರೆ ಎಂಬುದಾಗಿ ತಿಳಿಸಿದೆ.