Saturday, 23rd November 2024

ಹುಟ್ಟುಹಬ್ಬದ ಸಂಭ್ರಮದಲ್ಲಿ ಜಾನ್ವಿ

ಮುಂಬೈ: ನಟಿ ಜಾನ್ವಿ ಕಪೂರ್​ ಅವರು ಚಿತ್ರರಂಗಕ್ಕೆ ಕಾಲಿಟ್ಟು ಕೆಲವೇ ವರ್ಷಗಳು ಕಳೆದಿವೆ.

ಮೊದಲ ಸಿನಿಮಾ ‘ಧಡಕ್​’ ಮೂಲಕ ಯಶಸ್ಸು ಸಿಕ್ಕರೂ ಕೂಡ ನಂತರದ ದಿನಗಳಲ್ಲಿ ಅವರು ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಾಣಲಿಲ್ಲ. ಅದೇನೇ ಇದ್ದರೂ ಜಾನ್ವಿ ಕಪೂರ್​ ಅವರಿಗೆ ಇರುವ ಡಿಮ್ಯಾಂಡ್​ ಕಡಿಮೆ ಆಗಿಲ್ಲ. ಭಾನುವಾರ ಅವರ ಹುಟ್ಟುಹಬ್ಬ.

ಅಭಿಮಾನಿಗಳು, ಸೆಲೆಬ್ರಿಟಿಗಳು, ಕುಟುಂಬದವರು ಜಾನ್ವಿಗೆ ಶುಭಾಶಯ ತಿಳಿಸಿದ್ದಾರೆ.

ಸಲಿ ವಿಚಾರ ಏನೆಂದರೆ, ಜಾನ್ವಿ ಕಪೂರ್​ ಅವರು ಸಿನಿಮಾ ಜಗತ್ತಿಗೆ ಕಾಲಿಡುವುದು ಶ್ರೀದೇವಿಗೆ ಇಷ್ಟ ಇರಲಿಲ್ಲ. ಮಗಳು ಬೇರೆ ರೀತಿಯಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದು ಬಯಸಿದ್ದರು. ಕಡೆಗೂ ಬಣ್ಣದ ಲೋಕದ ಸೆಳೆತದಿಂದ ಜಾನ್ವಿ ಕಪೂರ್​ ಅವರು ನಟಿಯಾಗಿಯೇ ವೃತ್ತಿಜೀವನ ಆಯ್ಕೆ ಮಾಡಿಕೊಂಡರು.

ಜಾನ್ವಿ ಕಪೂರ್​ ನಟಿಸಿದ ಮೊದಲ ಸಿನಿಮಾ ರಿಲೀಸ್​ ಆಗೋಕಿಂತ ಮುಂಚೆಯೇ ಶ್ರೀದೇವಿ 2018ರ ಫೆ.24ರಂದು ಅವರು ದುಬೈನಲ್ಲಿ ಕೊನೆ ಯುಸಿರು ಎಳೆದರು. ಅದೇ ವರ್ಷ ಜುಲೈ 20ರಂದು ‘ಧಡಕ್​’ ಸಿನಿಮಾ ರಿಲೀಸ್​ ಆಯಿತು.

‘ಧಡಕ್​’ ಚಿತ್ರಕ್ಕೆ ಶಶಾಂಕ್​​ ಕೈತಾನ್​ ನಿರ್ದೇಶನ ಮಾಡಿದ್ದರು. ಜಾನ್ವಿಗೆ ಜೋಡಿಯಾಗಿ ಇಶಾನ್​ ಖಟ್ಟರ್​ ನಟಿಸಿದ್ದರು. ಮರಾಠಿಯ ‘ಸೈರಾಟ್​’ ಚಿತ್ರದ ಹಿಂದಿ ರಿಮೇಕ್​ ಆಗಿ ‘ಧಡಕ್​’ ಮೂಡಿಬಂತು. ನಿರ್ಮಾಣದ ಹೊಣೆಯನ್ನು ಹೊತ್ತಿದ್ದು ನಿರ್ಮಾಪಕ ಕರಣ್​ ಜೋಹರ್​.

ಶ್ರೀದೇವಿ ಮತ್ತು ಬೋನಿ ಕಪೂರ್​ ದಂಪತಿಗೆ ಇಬ್ಬರು ಮಕ್ಕಳು. ಮೊದಲ ಪುತ್ರಿ ಜಾನ್ವಿ ಕಪೂರ್​, ಎರಡನೇ ಪುತ್ರಿ ಖುಷಿ ಕಪೂರ್​. ‘ನಾನು ಚಿತ್ರರಂಗಕ್ಕೆ ಬರುವುದು ಅಮ್ಮನಿಗೆ ಇಷ್ಟ ಇರಲಿಲ್ಲ. ತಂಗಿ ಖುಷಿ ಕಪೂರ್ ಚಿತ್ರರಂಗಕ್ಕೆ ಬರುವುದರ ಬಗ್ಗೆ ಅಮ್ಮನಿಗೆ ಯಾವುದೇ ಆತಂಕ ಇರಲಿಲ್ಲ ಎಂದು ಸಂದರ್ಶನದಲ್ಲಿ ಜಾನ್ವಿ ಕಪೂರ್​ ಹೇಳಿಕೊಂಡಿದ್ದರು.