Saturday, 23rd November 2024

ಆಪರೇಷನ್ ಗಂಗಾ: ಉತ್ತುಂಗಕ್ಕೇರಿದ ಭಾರತದ ವರ್ಚಸ್ಸು

ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಕೇಂದ್ರ ಸರಕಾರ ಪಟ್ಟ ಪ್ರಯತ್ನ ನಿಜಕ್ಕೂ ಶ್ಲಾಘ ನೀಯ.

ಈವರೆಗೂ ಯುದ್ಧಭೂಮಿಯಿಂದ 15 ಸಾವಿರ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಇನ್ನೂ ೧೫ ಸಾವಿರ ಭಾರತೀಯರು ಅಲ್ಲಿಯೇ ಇದ್ದು, ಅವರನ್ನು ಸುರಕ್ಷಿತವಾಗಿ ಕರೆತರಲು ಸರ್ವ ಪ್ರಯತ್ನಗಳನ್ನೂ ಕೇಂದ್ರ ಸರಕಾರ ಕೈಗೊಂಡಿದೆ. ಇತರ ಬೃಹತ್ ದೇಶಗಳು ಉಕ್ರೇನ್‌ನಲ್ಲಿರುವ ತಮ್ಮ ಪ್ರಜೆಗಳನ್ನು ತಾಯ್ನಾಡಿಗೆ ಕರೆಸಿಕೊಳ್ಳಲು ದೊಡ್ಡ ಮಟ್ಟದ ಸವಾಲು ಎದುರಿಸುತ್ತಿವೆ ಎಂಬುದನ್ನು ನಿತ್ಯ ಮಾಧ್ಯಮ ಗಳಲ್ಲಿ ವರದಿಯಾಗುತ್ತಿದೆ. ಆದರೆ ಭಾರತವು ಆಪರೇಷನ್ ಗಂಗಾ ಯೋಜನೆ ಮೂಲಕ ಸಾವಿರಾರು ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತರುವಲ್ಲಿ ಬಹುತೇಕ ಯಶಸ್ವಿಯಾಗಿದೆ.

ಆಪರೇಷನ್ ಗಂಗಾ ಕಾರ್ಯಾ ಚರಣೆಯು ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸನ್ನು ಹೆಚ್ಚಿಸಿದೆ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಪ್ರತಿಪಕ್ಷಗಳು ಒಂದೆ ರಡು ವಿದ್ಯಾರ್ಥಿಗಳು ಹೇಳಿಕೆ ಕೊಟ್ಟ ವಿಡಿಯೊಗಳನ್ನೇ ಇಟ್ಟುಕೊಂಡು ಈ ಕಾರ್ಯಾ ಚರಣೆ ಬಗ್ಗೆ ಇಲ್ಲಸಲ್ಲದ ಆಕ್ಷೇಪಗಳನ್ನು ಎತ್ತುತ್ತಿರುವುದು ಸರಿಯಲ್ಲ. ಪ್ರತಿಪಕ್ಷಗಳು ಆಡಳಿತ ಪಕ್ಷವು ಎಡವಿದಾಗ ತಿದ್ದಬೇಕು ಎಂಬುದು ನಿಜವಾದರೂ ಹೆಜ್ಜೆ ಹೆಜ್ಜೆಗೂ ಸರಕಾರದ ನಡೆಗೆ ಅಡ್ಡಗಾಲು ಹಾಕುವುದು ಸರಿಯಲ್ಲ.

ಒಳರಾಜಕೀಯ ಏನೇ ಇದ್ದರೂ ರಾಷ್ಟ್ರೀಯತೆ ವಿಚಾರದಲ್ಲಿ ಪ್ರತಿಪಕ್ಷಗಳು ಒಂದಾಗಿ ಕೆಲಸ ಮಾಡಬೇಕು. ಇರಲಿ, ಉಕ್ರೇನ್‌ನಿಂದ ವಿದ್ಯಾರ್ಥಿಗಳನ್ನು ಕರೆತಂದದ್ದಾಯಿತು, ಆದರೆ ಈಗ ಅವರೆಲ್ಲ ತಮ್ಮ ವಿದ್ಯಾಭ್ಯಾಸ ಮೊಟಕುಗೊಳ್ಳುತ್ತದೆ ಎಂಬ ಆತಂಕದಲ್ಲಿದ್ದಾರೆ. ಈ ನಿಟ್ಟಿನಲ್ಲಿ ವೈದ್ಯಕೀಯ ಕೋರ್ಸ್ ಮುಗಿದ ವಿದ್ಯಾರ್ಥಿಗಳಿಗೆ ಭಾರತದಲ್ಲೇ ಇಂಟರ್ನ್‌ಶಿಪ್ ಮಾಡಲು ಅವಕಾಶ ನೀಡಿರುವುದು ಸ್ವಾಗ ತಾರ್ಹ ಕ್ರಮ. ಆದರೆ ಪ್ರಥಮ ವರ್ಷ, ದ್ವಿತೀಯ ವರ್ಷ ಓದುತ್ತಿರುವ ಇನ್ನೂ ಸಾವಿರಾರು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮೊಟಕು ಗೊಳ್ಳುತ್ತದೆ ಎಂಬ ಆತಂಕ ಎದುರಿಸುತ್ತಿದ್ದಾರೆ.

ಹೀಗಾಗಿ ಆ ವಿದ್ಯಾರ್ಥಿಗಳೆಲ್ಲ ತಮ್ಮ ವೈದ್ಯಕೋರ್ಸ್‌ನ್ನು ಪೂರ್ಣಗೊಳಿಸಲು ಕೇಂದ್ರ ಸರಕಾರ ಪರ್ಯಾಯ ಮಾರ್ಗಗಳನ್ನು ಸೂಚಿಸ ಬೇಕಿದೆ. ಉಳಿದ ಅವಽಯ ಶಿಕ್ಷಣವನ್ನು ಭಾರತದಲ್ಲೇ ಮುಂದುವರಿಸುವುದಕ್ಕಾಗಿ ನೋಂದಣಿಗಾಗಿ ಇರುವ ನಿಬಂಧನೆಗಳನ್ನು ಸಡಿಲ ಗೊಳಿಸಬೇಕಿದೆ. ಆ ಮೂಲಕ ವಿದ್ಯಾರ್ಥಿಗಳಿಗೆ ಆತ್ಮಸೈರ್ಯ ತುಂಬಬೇಕಿದೆ. ಈ ಕಾರ್ಯಕ್ಕೆ ಪ್ರತಿಪಕ್ಷಗಳೂ ಯಾವುದೇ ಅಡಚಣೆ ಮಾಡದೆ ಕೈಜೋಡಿಸಬೇಕಿದೆ.