Saturday, 23rd November 2024

ಷೇರುಪೇಟೆಯಲ್ಲಿ ಸೆನ್ಸೆಕ್ಸ್ ಕುಸಿತ, ಚಿನ್ನದ ಬೆಲೆ ಏರಿಕೆ

ನವದೆಹಲಿ: ರಷ್ಯಾ, ಉಕ್ರೇನ್ ನಡುವಿನ ಯುದ್ಧದ ಪರಿಣಾಮ ಕಚ್ಚಾ ತೈಲ ಮಾತ್ರವಲ್ಲದೇ, ಮತ್ತೊಂದೆಡೆ ಷೇರುಪೇಟೆಯಲ್ಲಿ ಸೆನ್ಸೆಕ್ಸ್ ಕುಸಿತದಿಂದ ಹೂಡಿಕೆದಾರರು ಚಿನ್ನ ಖರೀದಿಯಲ್ಲಿ ಹೆಚ್ಚು ಒಲವು ತೋರಿದ ಹಿನ್ನೆಲೆಯಲ್ಲಿ ಭಾರತದಲ್ಲಿ ಮಂಗಳವಾರ ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ಬೆಲೆ 49,400 ರೂಪಾಯಿಗೆ ಏರಿಕೆ ಯಾಗಿದ್ದು, 24ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನದ ಬೆಲೆ 53,890ಕ್ಕೆ ಹೆಚ್ಚಳವಾಗಿದೆ. ಭಾರತದಲ್ಲಿ ಬೆಳ್ಳಿ ಬೆಲೆಯೂ ಏರಿಕೆಯಾಗಿದ್ದು, ಒಂದು ಕೆ.ಜಿ ಬೆಳ್ಳಿ ಬೆಲೆಯಲ್ಲಿ 700 ರೂಪಾಯಿ ಹೆಚ್ಚಳವಾಗಿದ್ದು, ಪ್ರಸ್ತುತ ಒಂದು ಕೆಜಿ ಬೆಳ್ಳಿ ಬೆಲೆ 70,700 ರೂಪಾಯಿಗೆ ಏರಿಕೆಯಾಗಿದೆ ಎಂದು ತಿಳಿಸಿದೆ.

ಚೆನ್ನೈನಲ್ಲಿ 22 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನದ ಬೆಲೆ 50,200 ರೂಪಾಯಿಯಾಗಿದ್ದು, 24 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನದ ಬೆಲೆ 54,760 ರೂಪಾಯಿ. ಮುಂಬಯಿಯಲ್ಲಿ 22 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ಬೆಲೆ 49,400 ರೂಪಾಯಿ, 24 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ಬೆಲೆ 53, 890ಕ್ಕೆ ಹೆಚ್ಚಳವಾಗಿದೆ.

ದೆಹಲಿಯಲ್ಲಿ 22 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನಕ್ಕೆ 49,400 ರೂಪಾಯಿ, 24 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನಕ್ಕೆ 53,890 ರೂಪಾಯಿ. ಹೈದರಾಬಾದ್ ನಲ್ಲಿ 22 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನಕ್ಕೆ 49,400 ರೂಪಾಯಿ, 24 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನಕ್ಕೆ 53,890 ರೂಪಾಯಿ.

ಕೇರಳದಲ್ಲಿ 22 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನಕ್ಕೆ 49,400 ರೂಪಾಯಿ, 24 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನಕ್ಕೆ 53,890 ರೂಪಾಯಿ. ಕೊಯಂಮತ್ತೂರ್ ನಲ್ಲಿ 22 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನಕ್ಕೆ 50, 200 ರೂಪಾಯಿ, 24 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನಕ್ಕೆ 54,760 ರೂಪಾಯಿ.

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 432.62 ಅಂಕ ಇಳಿಕೆಯಾಗಿದ್ದು, 52,410.13 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಎನ್ ಎಸ್ ಇ ನಿಫ್ಟಿ 147.80 ಅಂಕ ಇಳಿಕೆಯಾಗಿದ್ದು, 15,715.40 ಅಂಕಗಳ ಮಟ್ಟದಲ್ಲಿದೆ.