ನಮ್ಮ ಮದುವೆ 1993 ಮೇ 18 ರಂದು ಶಹಾಪುರದ ಚರಬಸವೇಶ್ವರ ದೇವಸ್ಥಾಾನದಲ್ಲಿ ಜರುಗಿತು. ಎಲ್ಲರೂ ಜೀವನದಲ್ಲಿ ಮದುವೆ ದಿನ ಸಂತೋಷ, ಸಂಭ್ರಮದಿಂದ ಮನೆ ನಂದಗೋಕುಲವಾಗಿರುತ್ತದೆ. ನಮ್ಮ ಮದುವೆ ದಿನ ಏನಾಯ್ತು ಎಂದರೆ ಮದುವೆಗೆ ಅಂತ ಕುರ್ಚಿ, ಟೆಂಟ್, ಪೆಂಡಾಲ್‌ಗಳನ್ನು ತಂದಿದ್ದರು. ನಮ್ಮ ಯಜಮಾನರು ಸುಮ್ಮನೇ ಕೂಡದೇ ಪೆಂಡಾಲನ್ನು ಬಲಗೈಯಿಂದ ಜೋರಾಗಿ ಶಕ್ತಿಿ ಹಾಕಿ ಎತ್ತಲು ಹೋದಾಗ ಅವರ ಕೈ ಚುಳುಕ್ ಆಗ ಸಾಕಷ್ಟು ನೋವು ಆಗಿದೆ.
ಆದರೆ ಮದುವೆ ಗಡಿಬಿಡಿಯಲ್ಲಿ ಅದರ ಕಡೆ ಹೆಚ್ಚು ಗಮನ ಹರಿಸಿಲ್ಲ. ಎಲ್ಲಾಾ ಶಾಸ್ತ್ರಗಳು ನಡೆಯಲೇ ಬೇಕಲ್ಲ. ಮದುವೆ ಸುಸೂತ್ರವಾಗಿ ಜರುಗಿತು. ಎಲ್ಲಾಾ ಬಂಧುಗಳು, ನನ್ನ ಗೆಳತಿಯರು ಬಂದು ಮದುವೆಯ ಸಡಗರಕ್ಕೆೆ ಕೈಜೋಡಿಸಿದರು. ಆ ಮದುವೆಯ ಜೋಶ್‌ನಲ್ಲಿ ನಮ್ಮ ಯಜಮಾನರ ಕೈ ನೋವಿನ ಬವಣೆ ಏನೂ ಅನಿಸಿಲ್ಲ. ಸಾಯಂಕಾಲ ಆಗುತ್ತಿಿದ್ದಂತೆ ಪುನಃ ನೋವು ಕಾಣಿಸಿಕೊಂಡು ಲಟ್ ಲಟ್ ಹೊಡೆಯಲು ಶುರು ಆಗಿದೆ. ವೈದ್ಯರ ಬಳಿ ಎಂದರೆ, ಆಗ್ಲೇ ಎಲ್ಲಾಾ ಶಾಸ್ತ್ರ ಮುಗಿಸಿ, ಎಲ್ಲರ ಜತೆ ನಾವಿಬ್ಬರೂ ಹಳ್ಳಿಿಗೆ ಬಂದಿದ್ದೆವು.
ನಿರ್ವಾಹ ಇಲ್ಲದೇ, ಅನಿವಾರ್ಯವಾಗಿ ಬೆಳಗಿನವರೆಗೂ ಕಾದು ವೈದ್ಯರ ಬಳಿಗೆ ಹೋದಾಗ ಎಲ್ಲಾ ರೀತಿಯ ಟೆಸ್‌ಟ್‌ಗಳು, ಎಕ್ಸರೇ ಮಾಡಿದರು. ರಿಪೋರ್ಟ್ ನೋಡಿ ಕೈ ಫ್ರಾಾಕ್ಚರ್ ಆಗಿದೆ ಎಂದು ಹೇಳಿ ಬ್ಯಾಾಂಡೇಜ್ ಮಾಡಿ ಕೊರಳಿನ ಪಟ್ಟಿಿಗೆ ಕೈಯನ್ನು ಬಿಗಿದು, ಕೈಗಳನ್ನು ಅಲ್ಲಾಾಡದಂತೆ ಮಾಡಿ ಕಳುಹಿಸಿದರು. ಮದುವೆಯ ಮರುದಿನ ಪೂರ್ತಿ ಡಾಕ್ಟರ ಬಳಿ, ಆಸ್ಪತ್ರೆೆ ಬಳಿ ಕಾಲ ಕಳೆದು, ಹಾಕಿಸಿಕೊಂಡು ಮನೆಗೆ ಬಂದರು. ಮದುವೆಯ ದಿನವೇ ನೋವು ತಿನ್ನುವ ಯೋಗ ಅವರಿಗೆ.
ಇದರಿಂದಾಗಿ ಮದುಮಗಳ ಕಾಲ್ಗುಣ ಚೆನ್ನಾಾಗಿ ಇಲ್ಲ ಎನ್ನುವ ಪಟ್ಟ ನನಗೆ ಬಂತು. ಮದುವೆಯಾದ ಕೂಡಲೆ ಪತಿಗೆ ಕೈ ನೋವಾಗಿದ್ದಕ್ಕೆೆ ನಾನೇ ಕಾರಣ ಎಂದು ತಮಾಷೆಯಿಂದ ಎಲ್ಲರೂ ಹೇಳಿಕೊಳ್ಳಲು ಆರಂಭಿಸಿದರು. ಅವರ ಕೈ ಫ್ರಾಾಕ್ಚರ್ ಆಗಿದೆ ಎಂದು ಅವರನ್ನು ನೋಡಿ, ಮಾತನಾಡಿಸಿಕೊಂಡು ಹೋಗಲು ಹಲವರು ಬಂದರು. ಅವರು ಗೆಳೆಯರ ಬಳಗದಲ್ಲಿ, ನನ್ನ ಗೆಳೆಯ ಗೆಳತಿಯರ ಬಳಗದಲ್ಲಿ, ನನ್ನನ್ನು ಮತ್ತು ಗೇಲಿ ಮಾಡಲು ಅವರಿಗೆ ವಿಷಯ ಸಿಕ್ಕಂತೆ ಆಯ್ತು.
ಇದು ಇಷ್ಟಕ್ಕೇ ಮುಗಿಯಲಿಲ್ಲ. ಇವರಿಗೆ ಕೈ ಫ್ರಾಾಕ್ಚರ್ ಆಗಿ ವಾಸಿ ಆಗಲು ಹಲವು ದಿನ ತಗುಲಿತು. ಮದುವೆಯಾದ ಕೂಡಲೇ ವಿವಿಧ ಬಂಧುಗಳ ಮನೆಗೆ ಹೋಗುವ ಕಾರ್ಯಕ್ರಮಕ್ಕೆೆ ಇದರಿಂದ ಕಲ್ಲು ಬಿತ್ತು. ಇದಕ್ಕಿಿಂತ ಮಿಗಿಲಾಗಿ ನಮ್ಮ ಹನಿಮೂನ್ ಪ್ರೋೋಗ್ರಾಾಂ ಕೂಡ ರದ್ದಾಯಿತು. ಮದುವೆಯಾದ ಹೊಸತರಲ್ಲಿ ನಾವಿಬ್ಬರೇ ಸುತ್ತಾಾಡುತ್ತಾಾ ಬೇರೆ ಬೇರೆ ದೇವಸ್ಥಾಾನ ಮತ್ತು ಊರುಗಳಲ್ಲಿ ಸುತ್ತಾಾಡುವ ಮಧುರ ಅವಕಾಶ ಕೈತಪ್ಪಿಿ
*ಬಸವರಾಜೇಶ್ವರಿ ಅಂಗಡಿ.ರಾಯಚೂರು.