Saturday, 23rd November 2024

ಇಂಡೋನೇಷ್ಯಾದಲ್ಲಿ 6.6 ತೀವ್ರತೆ ಪ್ರಬಲ ಭೂಕಂಪ 

ಇಂಡೋನೇಷ್ಯಾದಲ್ಲಿ ಸಮುದ್ರದ ಆಳದಲ್ಲಿ 6.6 ತೀವ್ರತೆಯ ಪ್ರಬಲ ಭೂಕಂಪ 

ಜಕಾರ್ತ : ಪಶ್ಚಿಮ ಇಂಡೋನೇಷ್ಯಾದಲ್ಲಿ ಸೋಮವಾರ ಪ್ರಬಲ ಮತ್ತು ಸಮುದ್ರದೊಳಗೆ ಭೂಕಂಪ ಸಂಭವಿಸಿದೆ. ಅಲ್ಲಿನ ಸರ್ಕಾರ ಸುನಾಮಿಯ ಅಪಾಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ರಿಕ್ಟರ್​ ಮಾಪಕದಲ್ಲಿ ಭೂಕಂಪನ ತೀವ್ರತೆ 6.6 ದಾಖಲಾಗಿದೆ. ಪಶ್ಚಿಮ ಸುಮಾತ್ರಾ ಪ್ರಾಂತ್ಯದ ಪರಿಯಾಮನ್‌ನ ಪಶ್ಚಿಮದ 169 ಕಿಲೋಮೀಟರ್‌ ದೂರದಲ್ಲಿ ಮತ್ತು 16 ಕಿಲೋಮೀಟರ್ ಆಳದಲ್ಲಿ ಈ ಭೂಕಂಪನ ಕೇಂದ್ರ ಬಿಂದು ಇತ್ತು.

ಸುನಾಮಿಯ ಅಪಾಯವಿಲ್ಲ ಎಂದು ಇಂಡೋನೇಷ್ಯಾದ ಹವಾಮಾನ ಮತ್ತು ಭೂ ಭೌತಶಾಸ್ತ್ರ ಸಂಸ್ಥೆ ತಿಳಿಸಿದೆ. ಇಂಡೋ ನೇಷ್ಯಾ 271 ಮಿಲಿಯನ್ ಜನಸಂಖ್ಯೆಯ ವಿಶಾಲವಾದ ದ್ವೀಪ ಸಮೂಹವಾಗಿದೆ.

ಪಶ್ಚಿಮ ಸುಮಾತ್ರಾ ಪ್ರಾಂತ್ಯದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ 16 ಜನರು ಮೃತಪಟ್ಟಿದ್ದರು. 400ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಮಲೇಷ್ಯಾ ಮತ್ತು ಸಿಂಗಾಪುರದವರೆಗೆ ಸಂಭವಿಸಿದ ಕಂಪನದಿಂದ ಸಾವಿರಾರು ಮನೆಗಳು ಮತ್ತು ಇತರ ಕಟ್ಟಡಗಳು ಹಾನಿಗೊಳಗಾಗಿದ್ದವು.