Sunday, 24th November 2024

ರಾಜ್ಯದಲ್ಲಿರುವ ಗ್ರಾಮಗಳ ಜಾತಿ ಸೂಚಕ ಹೆಸರು ರದ್ದು: ಆರ್.ಅಶೋಕ್

ಬೆಂಗಳೂರು: ರಾಜ್ಯದಲ್ಲಿ ಗ್ರಾಮಗಳಿಗೆ ಇರುವ ವಡ್ಡರಹಟ್ಟಿ, ಗೊಲ್ಲರಹಟ್ಟಿ, ಬೋವಿ ಹಟ್ಟಿ ಮೊದಲಾದ ಜಾತಿ ಸೂಚಕ ಹೆಸರುಗಳನ್ನು ರದ್ದು ಪಡಿಸಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಸೋಮವಾರ ವಿಧಾನಸಭೆಯಲ್ಲಿ ಶಾಸಕ ಬಸವನಗೌಡ ತುರವಿಹಾಳ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಅನೇಕ ಕಡೆ ಯಲ್ಲಿ ವಡ್ಡರಹಟ್ಟಿ, ಗೊಲ್ಲರಹಟ್ಟಿ, ಕುರುಬರ ಹಟ್ಟಿ ಸೇರಿದಂತೆ ನಾನಾ ರೀತಿಯ ಜಾತಿ ಸೂಚಕ ಹೆಸರುಗಳಿವೆ. ಈ ಜಾತಿ ಸೂಚಕ ಗ್ರಾಮಗಳ ಹೆಸರನ್ನು ತಕ್ಷಣವೇ ತೆಗೆದು ಹಾಕಲು ಸೂಚಿಸುವುದಾಗಿ ತಿಳಿಸಿದರು.

ಕಾಂಗ್ರೆಸ್ ಸದಸ್ಯ ರಮೇಶ್ ಕುಮಾರ್, ವಡ್ಡರಪಾಳ್ಯ, ಮಾದಿಗರಹಳ್ಳಿ ಎಂಬಂತ ಜಾತಿ ಸೂಚಕ ಹೆಸರುಗಳನ್ನು ಇಟ್ಟುಕೊಂಡಿ ದ್ದಾರೆ. ದಯವಿಟ್ಟು ಅಧಿಕಾರಿಗಳಿಗೆ ಈ ಹೆಸರು ಗಳನ್ನು ತೆಗೆಯುವಂತೆ ಸೂಚಿಸಲು ಮನವಿ ಮಾಡಿದರು.

ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮ ಗಳನ್ನಾಗಿ ಮಾಡಬೇಕು. 8, 9 ತಿಂಗಳು ಆಗಲಿದೆ. ಜಾತಿ ಸೂಚಕ ಹೆಸರಿರುವ ಗ್ರಾಮಗಳ ಹೆಸರನ್ನು ರದ್ದುಪಡಿಸಲು ತಕ್ಷಣವೇ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವುದಾಗಿ ತಿಳಿಸಿದರು.