Monday, 25th November 2024

ಫೋಬಿತಾರ; ದೇಶಕ್ಕೊಂದೇ ಘೇಂಡಾಗೃಣ

ಅಲೆಮಾರಿಯ ಡೈರಿ

ಸಂತೋಷಕುಮಾರ ಮೆಹೆಂದಳೆ

mehandale100@gmail.com

ಹುಲಿ ಅಭಯಾರಣ್ಯ, ಆನೆ ಸಾಕಣೆ ಮತ್ತು ಪ್ರವಾಸೋದ್ಯಮ, ಕೊನೆಗೆ ಕರಡಿ, ನವಿಲಿಗೂ ಅಷ್ಟಿಷ್ಟು ನೂರು ಕಿ.ಮೀ. ಜಾಗ ಮಾಡಿ ಕೊಟ್ಟು ಬದುಕಲು ಅನುವು ಮಾಡಿಕೊಟ್ಟ ದೇಶ ನಮ್ಮದು.

ಅಷ್ಟೇ ಯಾಕೆ? ತೀರ ವರ್ಜಿತ ಸಂಕುಲವಾದ ಇಲಿಗಳಿಗಾಗೇ ದೇವಸ್ಥಾನ ಕಟ್ಟಿ ಸಾವಿರಾರು ಇಲಿಗಳು, ದೇವಸ್ಥಾನದ ಒಳಗೆ ಹೋಗು ತ್ತಿದ್ದಂತೆ ನಮ್ಮ ಅಂಗಿ-ಚೆಡ್ಡಿಯ ಮೇಲೆ ಹತ್ತಿಳಿ ಯುವ ಮಟ್ಟಕ್ಕೆ ಮೈಮೇಲೆ ಏರಿಸಿಕೊಂಡಿದ್ದೂ ಅಲ್ಲದೆ, ತೀರ ಈಗೀಗ ಮೊಸಳೆಗಳಿಗೂ ಹಾವುಗಳಿಗೂ ಕೊನೆಗೆ ಅಲ್ಲಲ್ಲಿ ಕಂಡೂ ಕೇಳರಿಯದ ಸರೀಸೃಪಗಳೂ ಸಹಿತ ತಮ್ಮದೇ ಅಭಯಾರಣ್ಯದಲ್ಲಿ ಭಯ ವಿಲ್ಲದೆ ಮುಕ್ತವಾಗಿ ಬದುಕಲು ಅನುವು ಮಾಡಿ ಕೊಟ್ಟಿದ್ದರಿಂದ ಎರಡು ದಶಕದಲ್ಲಿ ಎಲ್ಲ ಪ್ರಾಣಿಗಳು ಒಮ್ಮೆ ಅಪಾಯದಂಚಿಂದ ಹೊರ ಬಂದು ಸಾಕಷ್ಟು ಉಳಿಕೆ ಕಂಡು ಬದುಕು ಕಂಡುಕೊಂಡವು.

ಈ ನಿಟ್ಟಿನಲ್ಲಿ ಬಹುಶಃ ದೇಶದಲ್ಲೂ ಲಭ್ಯವಾಗದ ಈ ಯಮಗಾತ್ರದ ಪ್ರಾಣಿಗಳಿಗೆ ನೆಲೆ ಕಲ್ಪಿಸದಿದ್ದರೆ, ಬದುಕು ಮುಗಿದೇ ಹೋಗುತ್ತದೆ ಅಂದಾಗ ದೇಶದ ಎಡಭುಜದ ಮೂಲೆ ಯದು ಭಾಗದಲ್ಲಿ ಜಾಗ ಕಲ್ಪಿಸಿ ಬದುಕಿಕೊಳ್ಳಿ ಎಂದು ಔದಾರ್ಯ ತೋರದೆ ಹೋಗಿದ್ದರೆ ಇವತ್ತು ನಮ್ಮ ದೇಶದಲ್ಲಿ ಒಂದೇ ಒಂದು ನೀರಾನೆಗಳು ಸ್ಯಾಂಪಲ್ಲಿಗೂ ಸಿಕ್ಕುತ್ತಿರಲಿಲ್ಲ. ಆದರೆ ಪುಣ್ಯಕ್ಕೆ ಸಿಕ್ಕಿಂನ ಬ್ರಹ್ಮಪುತ್ರಾದ ದಂಡೆಯ ಮೇಲೆ ಒಂದಿಷ್ಟು ಜಾಗ ಕೊಟ್ಟರು ನೋಡಿ. ಮೊದಮೊದಲಿಗೆ ಏನೋ ಒಂದಷ್ಟು ಕಾಡೆಮ್ಮೆ ತರಹ ಇವೂ ಮೂಗು ಮೇಲೆ ಮಾಡಿಕೊಂಡು ಕೊಂಬು ಹೂಡಿಕೊಂಡು ಅಲ್ಲಲ್ಲಿ ಓಡಾಡಿಕೊಂಡಿವೆ ಎಂದೇ ಎಣಿಸ ಲಾಗಿತ್ತು.

ಆದರೆ, ಒಮ್ಮೆ ರಕ್ಷಣೆ ಕೊಡುತ್ತಿದ್ದಂತೆ ನಿಧಾನಕ್ಕೆ ಬದುಕು-ಸಂಸಾರ ಎಂದು ಶುರು ಮಾಡಿದ ಕಾಡಂಚಿನ ಹಾಡಿಗಳ ಹಿನ್ನೀರಲ್ಲಿ ಮುಳು ಗೆದ್ದು ತೇಲತೊಡಗಿದವು ನೋಡಿ. ಒಂದೇ ದಶಕದಲ್ಲಿ ಗಜ ಗಾತ್ರದ ಮರಿಗಳು ಬುಡ ಕದಲಿಸುತ್ತ ಕುಲು ಕುಲು ಎನ್ನತೊಡಗಿದ್ದವು.
ಆವತ್ತು ದೇಶದ ಮೊದಲ ಘೇಂಡಾ ಅಭಯಾರಣ್ಯದ ಯೋಜನೆ ಯಶಸ್ವಿಯಾಗಿತ್ತು.

ಅದು ಫೋಭಿತಾರ.

ಕಾಡು ದಾರಿಯಲ್ಲಿ ಕಾಲು ಇಳಿಸಲು ವಾಹನದಿಂದಿಳಿದರೆ ಇರಿಯುವ ಇರಾದೆಯಿಂದಲೇ ಮೂಗೆತ್ತಿಕೊಂಡು ಬರುವ, ಗಾರ್ಡುಗಳ ಸನ್ನೆಯನ್ನು ಆಧರಿಸಿ ಅ ನಿಂತು ಮೂತಿ ತಿರುಗಿಸುವ, ಒಂದೊಂದು ಕನಿಷ್ಠ ಎಳೆಂಟು ನೂರು ಕೆ.ಜಿ. ತೂಗುವ ದೈತ್ಯ ದೇಹಿ ಘೇಂಡಾ ಮೃಗಗಳು, ನೀರಾನೆಗಳು ಒಂಟಿ ಕೊಂಬನ್ನೆತ್ತಿಕೊಂಡು ನಿಲ್ಲುತ್ತಿದ್ದರೆ, ಮರಿಯಾಗಿದ್ದರೆ ಮುದ್ದಾಡುವ ಉಮೇದಿ ಬಂದರೂ ತಪ್ಪೇನಿಲ್ಲ. ಹತ್ತಿರ ಹೋಗಿ ತಡುವಿಕೊಳ್ಳುವ ಮೀರ್ಟ ನನಗಿರಬೇಕಷ್ಟೆ.

ಸುಲಭಕ್ಕೆ ಸಫಾರಿ ಜೀಪನ್ನೆ ಉರುಳಿಸುವ ಮಟ್ಟPಕ್ಕೂ ಬೆನ್ನಟ್ಟಿ ಬರುವ ಇವುಗಳು ಟನ್ ಲೆಕ್ಕದಲ್ಲಿ ತೂಗುತ್ತಾ ದೈತ್ಯ ದೇಹಿಯಾಗಿ ರುವುದೇ ಇವತ್ತು ಅವುಗಳ ಉಳಿವಿಗೆ ಕಾರಣವೂ ಹೌದು. ಸದ್ಯಕ್ಕೆ ಭಾರತದಲ್ಲಿ ನೂರಕ್ಕೆ ಹತ್ತಿರ ಒಂಟಿ ಕೊಂಬಿನ ಘೇಂಡಾಗಳನ್ನು ಸಾಕುತ್ತಿರುವ ‘ಪೋಭಿತಾರ’ ರಾಷ್ಟ್ರೀಯ ಅಭಯಾರಣ್ಯ ಸಫಾರಿ ಪ್ರಿಯರಿಗೆ ಘೇಂಡಾ ದರ್ಶನ ಮಾಡಿಸುತ್ತಿದೆ.

ಈಶಾನ್ಯ ರಾಜ್ಯವಾದ ಸಿಕ್ಕಿಂನ ಬ್ರಹ್ಮಪುತ್ರಾ ನದಿ ದಂಡೆಯ ಮೇಲೆ ‘ಮೊರಿಗಾಂವ್’ ಜಿಯ ‘ಮಯಾಂಗ್’ ಎನ್ನುವ ಹಳ್ಳಿಯ ಮಗ್ಗುಲಿಗೆ ಸುಮಾರು ಮೂವತ್ತೆಂಟು ಚದುರು ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಈ ಘೇಂಡಾ ತಾಣ ಒಳಹೊಕ್ಕರೆ, ಅಪ್ಪಟ ನಮ್ಮ ಪಶ್ಚಿಮ ಘಟ್ಟದ ಫೀಲು ಕೊಡುವ ಅರಣ್ಯ ಪ್ರದೇಶವೇ. ೧೯೮೭ರಲ್ಲಿ ವನ್ಯಜೀವಿ ತಾಣವಾಗಿ ಗುರುತಿಸಿಕೊಂಡ, ಎಡಗಡೆಯಲ್ಲಿ ಅಗಾಧ
ಜಲರಾಶಿ ಯಾದ ಬ್ರಹ್ಮಪುತ್ರ ಹಾಗೂ ಬಲ ಬದಿಗೆ ಕಾಡಿನ ದಟ್ಟತೆಯ ಮಧ್ಯೆ ಆನೆ ಬಿಡಾರದೊಂದಿಗೆ ರಕ್ಷಿತ ಘೇಂಡಾರಣ್ಯವನ್ನು ಪೋಷಿಸಲಾಗುತ್ತಿದೆ.

ಅಸ್ಸಾಂ ಪ್ರವಾಸೋದ್ಯಮ ಮತ್ತು ರಕ್ಷಿತಾರಣ್ಯ ಅಭಿವೃದ್ಧಿ ಪ್ರಾಧಿಕಾರ ವಾಣಿಜ್ಯಾತ್ಮಕವಾಗಿಯೂ ಇದನ್ನು ಬಳಸಿಕೊಳ್ಳುತ್ತಿದೆ. ಪ್ರವಾಸಿ ಗರಿಂದ ಸಾಕಷ್ಟು ಲಾಭದಾಯಕವಾಗಿ ಬೆಳೆಯುತ್ತಿರುವ ಸಫಾರಿಯ ಲಾಭದ ಬಾಬತ್ತು ಘೇಂಡಾರಣ್ಯದಲ್ಲಿ ಇನ್ನಷ್ಟು ಪ್ರೋತ್ಸಾಕರ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಮಾಡಿದೆ. ಅದಕ್ಕಾಗೇ ಮೊದಲಿದ್ದ ಬರೀ ತೆರೆದ ವಾಹನದ ಸಫಾರಿ ಜೊತೆಗೆ ದಿನದ
ಮೊದಲಾರ್ಧ ಭಾಗದಲ್ಲಿ ಆನೆಯ ಸಫಾರಿ ಕೂಡಾ ಲಭ್ಯವಿದೆ.

ದಿನವೂ ಪಕ್ಕದ ಪಳಗಿಸಿಟ್ಟಿರುವ ಆನೆಯ ತಾಂಡಾ ದಿಂದ ಬೆಳ್ಳಂಬೆಳಗ್ಗೆ ಅನೆಗಳನ್ನು ದಟ್ಟಿ ಬಿಗಿದು ಹೊರಡಿಸುವ ಮಾವುತರು ಹನ್ನೆರಡು ಗಂಟೆಯವರೆಗೂ ಅನೆ ಸಫಾರಿ ಮಾಡಿಸುತ್ತಾರೆ. ನಂತರ ತಮ್ಮ ಬಿಡಾರಕ್ಕೆ ತೆರಳುವ ಆನೆ ದಂಡು ಅಲ್ಲಿಯವರೆಗೆ ಕನಿಷ್ಟ ಐದೈದು ಸುತ್ತು ಮುಗಿಸಿರುತ್ತವೆ. ಕೊನೆಯ ಅನೆಯ ಸಫಾರಿ ಹೊರಡುವುದು ಹನ್ನೆ ರಡು ಗಂಟೆಗೆ. ಅದರ ನಂತರ ಏನಿದ್ದರೂ ತೆರೆದ ಜೀಪಿನಲ್ಲಿ
ಒಂದೂವರೆ ಗಂಟೆಯ ಪಯಣ ಕಾಡಿನೊಳಗೆ. ಆದರೆ ಆನೆ ಸ-ರಿಯಲ್ಲಿ ಕಾಡಿನಲ್ಲಿ ಎಂದರಲ್ಲಿ ನಡೆಯುವ, ತೀರ ಘೇಂಡಾಗಳ ಮೈ ಸವರಿ ಬರುವಷ್ಟು ಪಕ್ಕದಲ್ಲೇ ವಿಹರಿಸುವ ಸಫಾರಿಯಾದರೆ, ತೆರೆದ ವಾಹನದ್ದು ನಿರ್ದಿಷ್ಟ ದಾರಿಯಲ್ಲಿ ಮಾತ್ರ ನಡೆಯುವ ದೂರದರ್ಶನ.

ಸರೋವರದಂತೆ ಆವರಿಸಿಕೊಂಡು ನಿಂತಿರುವ ಬ್ರಹ್ಮಪುತ್ರಾ ಹಿನ್ನೀರಿನಲ್ಲಿ ಸಾವಿರಾರು ಪೆಲಿಕಾನ್ ಮತ್ತು ನೂರರವತ್ತಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳು ಸೇರಿದಂತೆ ಎರಡೂ ಕಡೆಯಲ್ಲಿ ಸ್ಥಳೀಯ ಬುಡಕಟ್ಟುಗಳ ಜಾನುವಾರಗಳು ರಕ್ಷಿತಾರಣ್ಯ ಪ್ರವೇಶಿಸುತ್ತಿರುತ್ತವೆ. ಜೀಪನ್ನು ನಿರ್ದಿಷ್ಟ ನೀರಿನ ಒಳಾವರಣದಲ್ಲಿ ನಿಲ್ಲಿಸುವ ವನಪಾಲಕನ ಮಾಹಿತಿಯ ಜತೆಗೆ ಪ್ರತಿ ಜೀಪಿಗೆ ಗನ್ ಮ್ಯಾನ್ ರಕ್ಷಣೆ ಒದಗಿಸುತ್ತಾನೆ. ಕೆಲವೆಡೆ ಶಿಳ್ಳೆಗೂ, ಚಪ್ಪಾಳೆಗೂ, ಅವನ ಸಂeಗೂ ಹೊಂದಿಕೊಂಡಿರುವ ಘೇಂಡಾಗಳು ಅಲ್ಲಲ್ಲಿ ನಿಂತು ಚಲಿಸುವುದು ಕುತೂಹಲಕಾರಿ. ಇನ್ನು ಮರಿಗಳೊಂದಿಗೆ ಬೀಡು ಬಿಟ್ಟು ಅಲ್ಲಲ್ಲಿ ಓಡಾಡಿಕೊಂಡಿರುವ ಘೇಂಡಾಗಳು ಕೆಲವೊಮ್ಮೆ ಜೀಪಿನ ಎದುರಿಗೇ ಬಂದು ತಂಡ ಕಟ್ಟಿಕೊಂಡು ನಿಂತು ಸತಾಯಿಸುವುದೂ ಇದೆ.

ಗುಮ್ಮಲು ಮುಂದಕ್ಕೆ ನುಗ್ಗಿ ಬೆದರಿಸುತ್ತ ಏರಿ ಬರುವುದೂ ಇದೆ. ಆಗೆಲ್ಲ ಅನಿವಾರ್ಯವಾಗಿ ಗಾಳಿಯಲ್ಲಿ ಗುಂಡು ಹಾರಿಸಿ ಅವನ್ನು ಚದುರಿಸುವ ಗನ್‌ಮ್ಯಾನ್ ದಾರಿ ಸುಗಮವಾಗಿಸುತ್ತಾನೆ. ಆದರೂ ಮರಿಗಳೊಂದಿಗೆ ಹಿಂದಿಂದೆ ಬರುವ ಘೇಂಡ ಅಕಸ್ಮಾತ ನಮ್ಮನ್ನು ತಾಗಿದರೆ ಜೀಪು ಪಲ್ಟಿ ಹೊಡೆಯಲು ಎರಡು ಸೆಕೆಂಡೂ ಬೇಡ. ಅದಕ್ಕಾಗಿ ಅದನ್ನು ಸುರಕ್ಷಿತ ಅಂತರದ ನಿಲ್ಲಿಸಿಕೊಳ್ಳುತ್ತಾರೆ. ಅದೇ ಆನೆಯ ಸಫಾರಿಯಲ್ಲಿ ಈ ಅಪಾಯದ ಕಾರಣವಿಲ್ಲ. ಏನಿದ್ದರೂ ನಿಧಾನ ಗತಿಯ ನಡಿಗೆಗೆ ಕೂತು ಹೋಗುವುದಷ್ಟೆ ಕೆಲಸ.

ಅನೆಯೊಂದರ ಮೇಲೆ ನಾಲ್ಕೈದು ಜನರನ್ನು ಕೂರಿಸಿಕೊಳ್ಳುವ ಸಫಾರಿಯಲ್ಲಿ, ಜೀಪಿನದರೆ ಒಮ್ಮೆಲೆ ಕುಟುಂಬ ಪೂರ್ತಿ ಸ್ನೇಹಿತ ರೊಂದಿಗೆ ಹೊರಡಬಹುದು. ಎಂಟತ್ತು ಜನರಿಗೆ ನಿಲ್ಲುವ ಅವಕಾಶ ಇರುವ ಸಫಾರಿ ಜೀಪಿನ ಒಂದು ಸುತ್ತಿನ ಬಾಡಿಗೆ ಸಾವಿರದೇಳನೂರು ರೂ.ಗಳು. ಆನೆಗಳ ಮೇಲೆ ಕೂತಿದ್ದರೆ ತೀರ ಘೆಂಡಾಗಳ ಆಸು ಪಾಸಿಗೂ ಆನೆ ಹೊರಡಿಸುತ್ತಾರೆ. ಅದರಲ್ಲೂ ನೀರ ಮಧ್ಯದಲ್ಲೂ ಆನೆ ನುಸುಳುವ ರೋಚಕತೆಗೆ ಜೀಪಿನ ಸ-ರಿ ಕೇಳದಿರುವುದೇ ಸೊಗಸು.

ಸದ್ಯ ದೇಶದಲ್ಲಿ ಲಭ್ಯವಿರುವ ಘೇಂಡಾಗಳ ಸಂಖ್ಯೆ ಸಿಂಹ ಪಾಲು ಹೊಂದಿರುವ -ಭಿತಾರದಲ್ಲೇ ೯೩ರಷ್ಟು ಘೇಂಡಾಗಳು ಲಭ್ಯವಿವೆ. ಇದರೊಂದಿಗೆ ಸುಮರು ೨೦೦೦ದಷ್ಟು ವಲಸೆ ಹಕ್ಕಿಗಳು, ೧೬೦ ಕ್ಕೂ ಹೆಚ್ಚು ಪ್ರಭೇದದ ಚಿಟ್ಟೆಗಳು ಲಭ್ಯವಿದ್ದರೆ, ಆವರಣದೊಳಗೇ ತಯಾರಾಗುತ್ತಿರುವ ಮೊಸಳೆ ಪಾರ್ಕ್ ಇನ್ನೇನು ಪ್ರವಾಸಿಗಳಿಗೆ ತೆರೆದುಕೊಳ್ಳಲಿದೆ. ಅಸ್ಸಾಂನ ಗುವಾಹಟಿಯಿಂದ ೪೮ ಕಿ.ಮಿ. ದೂರವಿರುವ ಫೋಭಿತಾರ, ಗುವಾಹಟಿಯಿಂದ ‘ಚಂಮ್ತಾ’ ಹಳ್ಳಿಯಿಂದ ಎಡಕ್ಕೆ ತಿರುವು ತೆಗೆದುಕೊಳ್ಳುತ್ತದೆ.

ಚಂದ್ರಾಪುರದ ಹತ್ತಿರದ ತಿರುವಿನ ದಾರಿಯಾದರೆ, ಗುವಾಹಟಿಯ ಮುಖ್ಯ ರಸ್ತೆ ಯಲ್ಲೂ ಚಲಿಸಿ ತಲುಪಬಹುದಾಗಿದೆ. ಪ್ರಮುಖವಾಗಿ
ಖಾಸಗಿ ಸಾರಿಗೆ ಮಾತ್ರ ಲಭ್ಯವಿದ್ದು ಯಾವುದೇ ಸರಕಾರಿ ಸಾರಿಗೆ ನಂಬಿಕೊಂಡು ಇಲ್ಲಿಗೆ ತಲುಪುವುದು ಸಾಧ್ಯವೇ ಇಲ್ಲ. ಅಸಲಿಗೆ ಅಸ್ಸಾಂ ರಾಜ್ಯದಲ್ಲೂ ಸರಕಾರಿ ಸಾರಿಗೆ ನಂಬಿಕೊಳ್ಳುವಂತಿಲ್ಲ ಬಿಡಿ. ದಿನದ ಸಂಜೆಯ ಮೂರು ಗಂಟೆಗೂ ಮೊದಲೇ ತಲುಪಿದಲ್ಲಿ ತುಂಬ ಅನುಕೂಲ. ಕಾರಣ ಇಲ್ಲ ಬೇಗ ಎಂದರೆ ಐದು ಗಂಟೆಯ ಹೊತ್ತಿಗೆ ಕತ್ತಲಾವರಿಸುವುದರಿಂದ ಸ-ರಿ ಕಾಡಿನೊಳಗೆ ಅದಕ್ಕೂ ಮೊದಲೇ ಕತ್ತಲಾವರಿಸುತ್ತದೆ. ಮಳೆಗಾಲ ಕಳೆದು ಡಿಸೆಂಬರ್ ವರೆಗೆ ಕಾಡಿನ ರಮ್ಯ ನೋಟಕ್ಕೂ ದಕ್ಕುವ ಪರಿಸರ ಪ್ರವಾಸ ಯೋಗ್ಯ.

ಆಮೇಲಾಮೇಲೆ ಅರಣ್ಯದ ಎಲೆ ಉದುರುವ ಪ್ರಕ್ರಿಯೆ ಆರಂಭವಾಗುವುದರಿಂದ ಕಾಡಿನ ದಟ್ಟತೆಯ ಅನುಭವ ದಕ್ಕುವುದಿಲ್ಲ. ಈಶಾನ್ಯ ರಾಜ್ಯ ಪಯಣ ಬೆಳೆಸಿದರೆ ಒಮ್ಮೆ ಭೇಟಿ ಕೊಡಬಹುದಾದ ತಾಣ ‘ಫೋಭಿತಾರ’ ಇಷ್ಟಾದ ಮೇಲೂ ರಕ್ಷಿತಾರಣ್ಯದ ಹೆಸರಿನಲ್ಲಿ ತಾವು ಸೇ- ಎಂದುಕೊಂಡು ಮೈ ಮರೆತಿದ್ದ ಘೇಂಡಾಗಳಿಗೆ ಮಾರಣಾಂತಿಕವಾದ್ದದ್ದು ಬ್ರಹ್ಮಪುತ್ರ. ಮಳೆಗಾಲದಲ್ಲಿ ಲೆಕ್ಕ ತಪ್ಪಿ ಹರಿಯುವ ಈ ನದಿಗೆ ಚೀನಾದ ಕಡೆಯಿಂದ ಬರುವ ಗ್ರೆಟ್ ಬೆಂಡ್ ಮಳೆಯ ಹತ್ತು ಪಟ್ಟು ಹೆಚ್ಚಿನ ನೀರು ತುಂಬಿಸುತ್ತದಲ್ಲ ಯಾವಾಗ ಅಸ್ಸಾಂನ ಸುತ್ತ
ನೀರು ಏರುತ್ತದೋ ಗೊತ್ತೇ ಆಗುವುದಿಲ್ಲ. ಆ ಉಕ್ಕುವ ನದಿಯ ಪಾತ್ರದ ಕಾರಣ ಈ ಹಿನ್ನೀರು ಏರಿ ಎತ್ತ ತಿರುಗಬೇಕು ಎಂದು ಯಮ ಭಾರ ಮೈ ಹೊತ್ತುಕೊಂಡ ಘೇಂಡಾ ತನ್ನ ಮಕ್ಕಳು ಮರಿ ಸಂಸಾರ ಜಾಪತ್ರೆ ಎಂದು ಎಲ್ಲ ಹೊರಡುವ ಹೊತ್ತಿಗೆ ತಡವಾಗಿರುತ್ತದೆ ಮೂಗು ಮೂತಿ ಮುಳುಗುವ ನೀರಿನಲ್ಲಿ ಭಾರಿ ಹಡಗಿನಂತೆ ಕದಲುತ್ತ ತೇಲಲಾರಂಭಿಸುತ್ತದೆ.

ಅದೃಷ್ಟ ಇದ್ದರೆ ಅಲ್ಲ ನೆಲದ ಭಾಗ ದಕ್ಕಿ ಎದ್ದು ನಿಂತು ಬದುಕಿಕೊಂಡು ಸುರಕ್ಷಿತ ಜಾಗಕ್ಕೆ ತೆರಳುತ್ತವೆ. ಕೆಲವೊಮ್ಮೆ ನೀರಿಳಿದಾಗ ಎ ತೇಲುವ ಶವ ಕಾಣುತ್ತದೆ. ಒಟ್ಟೂ ಸಂಖ್ಯೆಯಲ್ಲಿ ನಾಲ್ಕಾರು ಕಮ್ಮಿಯಾಗಿರುತ್ತವೆ. ಮರುವರ್ಷ ಮತ್ತೆ ಹೆಚ್ಚುವ ಮೊದಲೇ ಬ್ರಹ್ಮಪುತ್ರ ಮತ್ತೆ ಏರುತ್ತಾಳೆ. ಒಂಟಿಕೊಂಬಿನ ಸಲಗಗಳ ಅಭಯಾರಣ್ಯ ಮಳೆಗಾಲದಲ್ಲಿ ಮಾತ್ರ ಮರಣಾರಣ್ಯವಾಗಿದ್ದೂ ಹೌದು.