Sunday, 24th November 2024

ಎಲ್ಲರ ಮೆಚ್ಚುಗೆ ಬೇಕೆ?

ಓರ್ವ ಮುದುಕ, ಹುಡುಗ ಮತ್ತು ಕತ್ತೆೆ ಪಟ್ಟಣಕ್ಕೆೆ ಹೋಗುತ್ತಿಿದ್ದರು. ಹುಡುಗ ಕತ್ತೆೆಯ ಮೇಲೆ ಸವಾರಿ ಮಾಡುತ್ತಿಿದ್ದನು ಮತ್ತು ಮುದುಕ ನಡೆದುಕೊಂಡು ಹೋಗುತ್ತಿಿದ್ದರು. ಅವರು ಹೋಗುತ್ತಿಿರುವಾಗ, ಕೆಲವು ಜನರನ್ನು ಮುದುಕನು ನಡೆದುಕೊಂಡು ಹೋಗುತ್ತಿಿದ್ದಾನೆ ಮತ್ತು ಹುಡುಗ ಸವಾರಿ ಮಾಡುತ್ತಿಿದ್ದಾನೆ ಎಂದು ಹೀಯಾಳಿಸಿದರು. ಮನುಷ್ಯ ಮತ್ತು ಹುಡುಗ ಆ ಜನರು ಹೇಳಿದ್ದನ್ನು ಕೇಳಿ, ಅದೇ ಸರಿ ಎಂದು ಭಾವಿಸಿ ಅವರ ಸ್ಥಾಾನಗಳನ್ನು ಬದಲಾಯಿಸಿಕೊಂಡರು. ಮುಂದೆ ಸಾಗಿದಾಗ, ಅದನ್ನು ನೋಡಿದ ಕೆಲವು ಜನರು, ‘ಏನು ಅವಮಾನ, ಅವನು ಆ ಚಿಕ್ಕ ಹುಡುಗನನ್ನು ನಡೆಯುವಂತೆ ಮಾಡುತ್ತಿಿದ್ದಾನೆ.’ ಎಂದು ಟೀಕಿಸಿದರು. ಆಗ ಅವರು ಇಬ್ಬರೂ ನಡೆಯಬೇಕೆಂದು ನಿರ್ಧರಿಸಿದರು!

‘ಶೀಘ್ರವಾಗಿ ಸವಾರಿ ಮಾಡಲು ಯೋಗ್ಯವಾದ ಕತ್ತೆೆ ಇದ್ದಾಗ ನಡೆಯುತ್ತಿಿರುವ ಈ ಇಬ್ಬರೂ ದಡ್ಡರು’ ಎಂದು ಇನ್ನೂ ಕೆಲವು ಜನರು ಅಣಕಿಸಿದರು. ಆಗ, ಇಬ್ಬರೂ ಕತ್ತೆೆ ಸವಾರಿ ಮಾಡಲು ನಿರ್ಧರಿಸಿದರು. ‘ಬಡ ಕತ್ತೆೆಯ ಮೇಲೆ ಇಬ್ಬರು ಕುಳಿತು, ಅಷ್ಟು ಭಾರ ಎನಿಸುವ ಹೊರೆ ಹಾಕುವುದು ಎಷ್ಟು ಹಿಂಸಾತ್ಮಕವಾಗಿದೆ’ ಎಂದು ಇನ್ನು ಕೆಲವು ಜನರು ಟೀಕಿಸಿದರು.

ಹುಡುಗ ಮತ್ತು ಮನುಷ್ಯ ಬಹುಶಃ ಈ ಟೀಕೆಯನ್ನು ಕೇಳಿ ಚಿಂತೆಗೆ ಒಳಗಾದರು. ಕತ್ತೆೆಗೆ ನಾವು ಹಿಂಸೆ ಕೊಡುವುದು ಸರಿ ಅಲ್ಲ ಎಂದುಲೆಕ್ಕಾಾಚಾರ ಹಾಕಿದರು, ಕತ್ತೆೆಯನ್ನು ಹೊತ್ತು ಕೊಂಡು ಹೋಗಲು ನಿರ್ಧರಿಸಿದರು. ಇಬ್ಬರೂ ಜಾಗ್ರತೆಯಿಂದ ಕತ್ತೆೆಯನ್ನು ಭುಜದ ಮೇಲೆ ಕುಳ್ಳಿಿರಿಸಿಕೊಂಡು ನಡೆದರು. ಕತ್ತೆೆಯು ಇವರ ಹಿಡಿತ ತಾಳಲಾರದೆ ಒಮ್ಮೊೊಮ್ಮೆೆ ಭಯದಿಂದ, ಗಾಬರಿಯಿಂದ ಅಲ್ಲಾಾಡುತ್ತಿಿತ್ತು. ಅದನ್ನು ಸಂಭಾಳಿಸಿಕೊಂಸು ನಡೆದರು.
ದಾರಿಗಡ್ಡಲಾಗಿ ಪುಟ್ಟ ನದಿ ಮತ್ತು ಅಗಲಕಿರಿದಾದ ಸೇತುವ ಬಂತು. ಆ ಸೇತುವೆಯನ್ನು ದಾಟುತ್ತಿಿದ್ದಾಗ, ಕತ್ತೆೆಯ ಭಾರವನ್ನು ತಾಳಲಾರದೇ, ತಮ್ಮ ಹಿಡಿತವನ್ನು ಕಳೆದುಕೊಂಡು ನದಿಗೆ ಬಿದ್ದರು. ಕತ್ತೆೆ ಸಹ ಇವರ ಜತೆ ಬಿದ್ದು, ಎಲ್ಲರೂ ನೀರಿನಲ್ಲಿ ಮುಳುಗಿದರು. ಜನರು ಮಾಡಿದ ನಾನಾ ರೀತಿಯ ಟೀಕೆಗಳನ್ನು ತಾಳ್ಮೆೆಯಿಂದ ಕೇಳಿ, ಆ ಟೀಕೆಗಳಿಗೆ ಅನುಗುಣವಾಗಿ ಅವರು ತಮ್ಮ ನಡೆಯನ್ನು ಬದಲಿಸಿಕೊಳ್ಳುತ್ತಾಾ ಹೋದರು. ಆದರೆ ಕೊನೆಯಲ್ಲಿ ಅವರಿಗೇ ತೊಂದರೆ ತಂದು ಕೊಂಡರು ಮಾತ್ರವಲ್ಲ, ಕತ್ತೆೆಗೂ ಸಂಕಷ್ಟ ತಂದರು.
ನೀವು ಎಲ್ಲರನ್ನು ಮೆಚ್ಚಿಿಸಲು ಪ್ರಯತ್ನಿಿಸುತ್ತಿಿದ್ದರೆ, ನೀವೂ ಸಹ ಇದೇ ರೀತಿ ಆಗುವ ಸಾಧ್ಯತೆ ಇದೆ. ನಿಮ್ಮ ಕತ್ತೆೆಗೆ ವಿದಾಯ ಹೇಳಿ! ಎಲ್ಲರನ್ನೂ ಮೆಚ್ಚಿಿಸಲು ಹೋಗಬೇಡಿ.
– ವಿಜಯಕುಮಾರ್ ಎಸ್.ಅಂಟೀನಮಠ