Sunday, 24th November 2024

ಗುರುಗಳ ಅನುಗ್ರಹ ಒಂದು ನೈಜ ಅನುಭವ

*ವಿಜಯ ಕುಮಾರ್ ಕಟ್ಟೆೆ

ಕೆಲವು ಅನುಭವಗಳು ಅನುಭವದಿಂದ ಮಾತ್ರ ವೇದ್ಯ ಎನಿಸುತ್ತವೆ, ಅವುಗಳ ಸತ್ಯಾಾಸತ್ಯತೆಯನ್ನು ಅನುಭವವೇ ಋಜುವಾತು ಪಡಿಸುತ್ತದೆ. ನನ್ನ ಜೀವನದಲ್ಲಿ ಗುರುಕೃಪೆಯಿಂದ ಕೆಲವು ಸನ್ನಿಿವೇಶಗಳು ನಡೆದದ್ದು ವೇದ್ಯಕ್ಕೆೆ ಬಂದಿದೆ.
ಪವಿತ್ರ ಅಯೋಧ್ಯಾಾ ಕ್ಷೇತ್ರದಲ್ಲಿ, ಒಂದು ಅತ್ಯಂತ ಆಶ್ಚರ್ಯಕರ ಘಟನೆ. 1995ರಲ್ಲಿ, ನನ್ನ ಮಗ ಏಳು ವರ್ಷದ ವಿಕಾಸ್ ರಾಮದೇವರ ಮುಂದೆ 30 ನಿಮಿಷಗಳ ಕಾಲ ಹಾಡಿದ್ದು, ಗಾಯನದಲ್ಲಿ ಮೈಮರೆತಿದ್ದ ಪಂಡಿತರು, ಶ್ರೀರಾಮನ ಮೂರ್ತಿಗೆ ತೊಡಿಸಿದ್ದ ಹಾರವನ್ನು ತೆಗೆದು ಬಾಲಕನ ಕುತ್ತಿಿಗೆಗೆ ಹಾಕಿದ್ದು, ಸೋಜಿಗದ ರೀತಿಯಲ್ಲಿ 24 ವರ್ಷದ ನಂತರವೂ ಹೂವು ಹಾಳಾಗದೆ ಹಾಗೆಯೇ ಇರುವುದು – ಇವೆಲ್ಲವೂ ಅಚ್ಚರಿ ಎನಿಸಿದೆ. ಗುರುರಾಯರ ಆರಾಧ್ಯದೈವ ರಾಮದೇವರ ಅನುಗ್ರಹ ಪಡೆದ ನಂತರ ಬಾಲಕನನ್ನು ರಾಯರೇ ಸದಾಕಾಲವೂ ರಕ್ಷಿಸಿ, ಮುನ್ನಡಿಸಿ, ಆಶೀರ್ವಾದ ಮಾಡುತ್ತಲೇ ಇದ್ದಾಾರೆಂದು ಅನಿಸುತ್ತಿಿದೆ. ಇದಕ್ಕೆೆ ಈ ಬಾಲಕನ ಜೀವನದಲ್ಲಿ ನಡೆದ ಕೆಲವು ಘಟನೆಗಳೇ ಸಾಕ್ಷಿ.

1. ಬ್ಯಾಾಂಕ್‌ನಲ್ಲಿ ಕೆಲಸ ಮಾಡುತ್ತಿಿದ್ದ ನನಗೆ 1996ರಲ್ಲಿ ಲಕ್ನೋೋದಿಂದ ಬೆಂಗಳೂರಿಗೆ ವರ್ಗವಾಯಿತು. ತುಂಬಿದ ಸಂಸಾರ. ನನ್ನ ಒಬ್ಬನ ಸಂಬಳದಿಂದ ಸಂಸಾರ ನಡೆಯಬೇಕಿತ್ತು. ಈ ನಡುವೆ ಮಗನ ಸಂಗೀತ ಪಾಠ ಪ್ರಾಾರಂಭವಾಯಿತು. ಬೆಳಗ್ಗೆೆಯೇ ಚಳಿಯನ್ನೂ ಲೆಕ್ಕಿಿಸದೆ ಪಾಠಕ್ಕೆೆ ಹೋಗುತ್ತಿಿದ್ದ. ನಿಷ್ಠೆೆಯ ಕಲಿಕೆಯ ಫಲ ಗೌರೀಬಿದನೂರು ಮಠದಲ್ಲಿ ಸಂಗೀತ ಕಾರ್ಯಕ್ರಮ ನೀಡುವ ಅವಕಾಶ ದೊರೆಯಿತು. ಬಾಲಕ ಪೂರ್ಣ ಪ್ರಮಾಣದ ಸಂಗೀತ ಕಚೇರಿ ನೀಡಿದ. ಅವನಿಗೆ ಸಂಗೀತ ಛ್ಟಿಿಛಿಜಿಠ್ಟಿ ಇಂದ ಬಂದದ್ದಲ್ಲ ಮತ್ತು ಯಾರದೇ ಸಹಾಯ ಇರಲಿಲ್ಲ. ಇದ್ದದ್ದು ಗುರುರಾಯರ ಅನುಗ್ರಹ. 1999ರಲ್ಲಿ ಪ್ರಾಾರಂಭವಾದ ಇವನ ಸಂಗೀತ ಸೇವೆ 2019ರವರೆಗೂ, ನಿರಂತರವಾಗಿ 21 ವರ್ಷ ಆರಾಧನೆಯಲ್ಲಿ ನಡೆಯುತ್ತಾಾ ಬಂದಿದೆ. ಇಂತಹ ಸೇವೆ ಮಾಡಲು ಗುರುರಾಯರ ಅನುಗ್ರಹ ಇದೆ ಎಂದೇ ನನ್ನ ನಂಬಿಕೆ.

2. 2007ರಲ್ಲಿ ನನಗೆ 2 ದಿನ ಟ್ರೇನಿಂಗ್ ಕಾಲೇಜ್‌ನಲ್ಲಿ ಕಂಪ್ಯೂೂಟರೀಕರಣದ ಬಗ್ಗೆೆ ಮಾತಾಡಲು ಕಳುಹಿಸಲಾಯಿತು. ನನ್ನ ಹಳೆಯ ಮಿತ್ರ ಮತ್ತು ಸಹೋದ್ಯೋೋಗಿ ಕೂಡ ಅಲ್ಲಿ ಇದ್ದರು. ಆ ದಿನ ಸಂಜೆ ಅವರು ‘ನಿಮಗೆ ಹೇಳಲೇಬೇಕಾದ ವಿಷಯ, ಸುವರ್ಣ ಚಾನೆಲ್ ನಲ್ಲಿ ರಿಯಾಲಿಟಿ ಶೋ ಮಾಡುತ್ತಿಿದ್ದಾರೆ, ಅದಕ್ಕೆೆ ಆಡಿಷನ್ ಮಾಡುತ್ತಿಿದ್ದಾರೆ. ಸಿಡಿ, ಕಳಿಸಬಹುದು. ನಿಮ್ಮ ಮಗ ಚೆನ್ನಾಾಗಿ ಹಾಡುತ್ತಾಾನೆ ಕಳುಹಿಸಿ’ ಅಂದರು. ರಿಯಾಲಿಟಿ ಶೋ ಬಗ್ಗೆೆ ನನಗೆ ಅಷ್ಟು ಗೊತ್ತಿಿರಲಿಲ್ಲ. ಮನೆಗೆ ಬಂದು ಆಡಿಷನ್ ಬಗ್ಗೆೆ ನನ್ನ ಪತ್ನಿಿ ಮತ್ತು ವಿಕಾಸ್ ಇಬ್ಬರಿಗೂ ತಿಳಿಸಿದೆ. ಇಬ್ಬರೂ ಬೇಡ ಅಂದರು. ಓದಿಗೆ ಅಡ್ಡಿಿ ಆಗುತ್ತೆೆ, ಹೆಚ್ಚು ಹಾಡುಗಳು ಕೂಡ ಹೆಚ್ಚು ಬರುವುದಿಲ್ಲ, ಬೇಡ ಅಂದ. ಮರುದಿನ ಮತ್ತೆೆ ಆ ಸ್ನೇಹಿತರು ‘ಹಾಡು ಕಳುಹಿಸಿದಿರಾ, ಇವತ್ತೇ ಕೊನೆಯ ದಿನ’ ಅಂದರು. ನಮ್ಮ ಮನೆಯಲ್ಲಿ ಯಾರಿಗೂ ಇಂಟರೆಸ್‌ಟ್‌ ಇಲ್ಲ ಅಂದೆ. ‘ವಿಕಾಸ್ ಚೆನ್ನಾಾಗಿ ಹಾಡುತ್ತಾಾನೆ.

ಮತ್ತೊೊಮ್ಮೆೆ ಯೋಚಿಸಿ’ ಅಂತ ಬಲವಂತ ಮಾಡಿದರು. ಮನೆಗೆ ಬಂದ ಮೇಲೆ ಮತ್ತೆೆ ಮನೆಯಲ್ಲಿ ಹೇಳಿದೆ. ಸ್ನೇಹಿತರು ಅಷ್ಟು ಹೇಳುತ್ತಿಿದ್ದಾರೆ, ಕಳಿಸೋಣ. ಅಕಸ್ಮಾಾತ್ ಓದಿಗೆ ಅಡ್ಡಿಿಯಾದರೆ ವಾಪಸ್ ಬಂದರೆ ಆಯಿತು ಅಂದಾಗ ತಾಯಿ, ಮಗ ಇಬ್ಬರೂ ಒಪ್ಪಿಿದರು. ವಿಕಾಸ್ 3 ಹಾಡು ರೆಕಾರ್ಡ್ ಮಾಡಿ ಕಳುಹಿಸಿದ. ಮುಂದಿನದು ಅಚ್ಚರಿ. ಸಾವಿರಾರು ಮಂದಿಯ ನಡುವೆ ಆಡಿಷನ್‌ನಲ್ಲಿ ಆಯ್ಕೆೆಯಾಗಿ, ನಂತರ ಸುಮಾರು ಒಂದೂವರೆ ವರ್ಷ ನಡೆದ ರಿಯಾಲಿಟಿ ಶೋನ ಫೈನಲಿಸ್‌ಟ್‌. ಈ ಪಯಣದಲ್ಲಿ ಎಲ್ಲ ಪ್ರಕಾರದ ಹಾಡುಗಳನ್ನು ಸೊಗಸಾಗಿ ಹಾಡಬಲ್ಲವನಾದ. ಇಲ್ಲೂ ರಾಯರ ಅನುಗ್ರಹವೇ ಕಾರಣ. 36 ವರ್ಷದಲ್ಲಿ ಯಾವತ್ತೂ ಟ್ರೈನಿಂಗ್ ಕಾಲೇಜನಲ್ಲಿ ಕ್ಲಾಾಸ್ ಮಾಡದೆ ಇದ್ದ ನಾನು ಆ ಎರಡು ದಿನವೇ ಕ್ಲಾಾಸ್ ಮಾಡಿದ್ದು. ಅಲ್ಲಿ ಸ್ನೇಹಿತರ ಭೇಟಿಯಾಗಿದ್ದು, ಅವರ ಮೂಲಕ ವಿಕಾಸ್ ಬದುಕು ಹೊಸ ಮಾರ್ಗ ಕಂಡುಕೊಂಡದ್ದು ರಾಯರ ಅನುಗ್ರಹದಿಂದ ಎಂದೇ ನನ್ನ ನಂಬಿಕೆ. ನನ್ನ ಆ ಸ್ನೇಹಿತರ ಹೆಸರು ಗುರುರಾಜರಾವ್.

3. ಕಾಂಫಿಡೆಂಟ್ ಸ್ಟಾಾರ್ ಸಿಂಗರ್ ಫೈನಲ್ಸ್. ಅವನ ಹಾಡುಗಾರಿಕೆ ಮೆಚ್ಚಿಿದ ಸಂಗೀತ ಪ್ರೇಮಿಗಳು, ಅಭಿಮಾನಿಗಳು ಇವನೇ ಗೆಲ್ಲುವ ಚಾನ್‌ಸ್‌ ಇದೆ ಅಂತ ಮಾತಾಡಿಕೊಳ್ಳುತ್ತಿಿದ್ದರು. ಫೈನಲ್ಸ್ ನಡೆಯುವ 10 ದಿನಗಳ ಹಿಂದೆ, ಸಾಯಂಕಾಲ ಸುಮಾರು 4.30. ಬಾಗಿಲ ಬಳಿ ಬಂದು ಯಾರೋ ಕರೆದರು. ನೋಡಿದರೆ ಒಬ್ಬ ಬ್ರಾಾಹ್ಮಣರು ನಿಂತಿದ್ದರು. ಸುಮಾರು 50 ವಯಸ್ಸು ಇರಬಹುದು. ಒಳಗೆ ಬನ್ನಿಿ ಎಂದು ಕರೆಯುವ ಮುನ್ನ ಒಳಗೆ ಬಂದು ಕುಳಿತುಕೊಂಡರು. ಒಂದು ಕ್ಷಣ ಏನು ಮಾತಾಡಬೇಕೆಂದು ತೋಚಲಿಲ್ಲ, ಅಪರಿಚಿತರು, ಸೀದಾ ಒಳಗೆ ಬಂದು ಕುಳಿತಿದ್ದಾರೆ. ನಮಸ್ಕಾಾರ ಹೇಳಿ ಮಾತಾಡುವ ಮುನ್ನವೇ, ಅವರು ಹೇಳಿದರು ‘ನಾನು ಬಡಬ್ರಾಾಹ್ಮಣ. ಮನೆ ಕಟ್ಟುತ್ತಿಿದ್ದೇನೆ. ಸ್ವಲ್ಪ ಸಹಾಯ ಬೇಕಾಗಿದೆ’ ಅಂದರು . ತಕ್ಷಣ ವಿಕಾಸ್ ಅಮ್ಮನನ್ನು ಕರೆದು ‘ಏನೂ ಕೊಡದೆ ಹಾಗೆಯೇ ಕಳುಹಿಸಬೇಡಿ’ ಅಂದ. ತಾಂಬೂಲ ಸಮೇತ 500ರೂಪಾಯಿಗಳನ್ನು ತಟ್ಟೆೆಯಲ್ಲಿಟ್ಟು ಕೊಡಲು ಹೋದರೆ, ಅವರು ಜೋಳಿಗೆಗೆ ಹಾಕಿ ಎಂದರು. ಎಷ್ಟು ಹಣ ಇಟ್ಟಿಿದ್ದೇವೆ ಎಂದು ಕೂಡ ನೋಡಲಿಲ್ಲ. ನಮ್ಮೆೆಲ್ಲರಿಗೂ ಆಶೀರ್ವಾದ ಮಾಡಿ, ‘ಹೋಗಿ ಬರುತ್ತೇನೆ’ ಎಂದು ಹೊರಟರು. ನಮ್ಮ ಅಕ್ಕಪಕ್ಕ ಇರುವ ಮನೆಗಳಿಗೆ ಅವರನ್ನು ಕರೆದುಕೊಂಡು ಹೋಗೋಣ ಎಂದು ಹೊರಗೆ ಬಂದು ಹಿಂದು-ಮುಂದಿನ ರಸ್ತೆೆಗಳಲ್ಲಿ ಹುಡುಕಿದರೆ, ಅವರು ಇಲ್ಲವೇ ಇಲ್ಲ. ಎಲ್ಲಿ ಹೋದರು? ಬಂದವರು ಯಾರು? ನನ್ನ 50 ವರ್ಷದ ಜೀವನದಲ್ಲಿ ಯಾರೂ ಬಂದು ಮನೆ ಕಟ್ಟಲು ಸಹಾಯ ಮಾಡಿ ಎಂದು ಕೇಳಿದ್ದು ನೋಡಿರಲಿಲ್ಲ. ಹಿರಿಯರನ್ನು ವಿಚಾರಿಸಿದೆವು. ಕೊನೆಗೆ ಅನಿಸಿದ್ದು ಹೀಗೆ : ಸ್ವತಃ ರಾಯರೇ ಬ್ರಾಾಹ್ಮಣ ರೂಪದಲ್ಲಿ ಬಂದು, ‘ಮಗು, ಬಹುಮಾನ ಬರಬೇಕಾದ ಮನೆ (ಫೈನಲ್‌ನಲ್ಲಿ ಗೆದ್ದವರಿಗೆ ಫ್ಲಾಾಟ್ ಬಹುಮಾನ ಇತ್ತು) ನಿನಗೆ ಈಗಲೇ ಬೇಡ, ನಾನು ಅದಕ್ಕಿಿಂತ ಹೆಚ್ಚಾಾಗಿರುವ ಸಂಗೀತ ಜ್ಞಾನ ನೀಡುತ್ತೇನೆ’ ಎಂದು ದರ್ಶನ ನೀಡಿ ನಾವು ಕೆಳಗೆ ಹೋಗುವ ಮೊದಲೇ ಅದೃಶ್ಯರಾಗಿದ್ದಾರೆ. ವಿಕಾಸ್ ಇನ್ನಷ್ಟು ಸಂಗೀತ ಸಾಧನೆ ಮಾಡುತ್ತಿಿದ್ದಾಾನೆ. ಇದನ್ನು ನೀವು ನಂಬಿಕೆಯ ಪ್ರಶ್ನೆೆ ಎನ್ನಬಹುದು, ಆದರೆ ನನ್ನ ಅನುಭವಕ್ಕೆೆ ಬಂದದ್ದಂತೂ ಸತ್ಯ.

ನಮ್ಮಂಥಹ ಸಾಧಾರಣ ಮನುಷ್ಯರ ಬಾಳಿನಲ್ಲಿ ಸಂಗೀತ ಪ್ರಿಿಯರಾದ ಗುರು ರಾಘವೇಂದ್ರರು ಬಾಲಕನಿಗೆ ಸಂಗೀತದ ಕ್ಷೇತ್ರದಲ್ಲಿ ಅನುಗ್ರಹ ಮಾಡಿದ್ದಾಾರೆ ಅಂದರೆ ಅದು ಅವರ ಕಾರುಣ್ಯಕ್ಕೆೆ ಸಾಕ್ಷಿ. ಎಂತಹ ಕಷ್ಟಗಳೇ ಬಂದರು ಗುರುರಾಯರ ಸ್ಮರಣೆ ಮಾಡಿದ ತಕ್ಷಣ ಕಷ್ಟವು ಮಂಜಿನಂತೆ ಕರಗುವುದು. ಇದು ನಾವು ನಮ್ಮ ಜೀವನದಲ್ಲಿ ಅನುಭವಿಸಿದ ಸತ್ಯ. (ಸಂಪರ್ಕ : 8747018222)