ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ – ೨೪೫
ಬೆಂಗಳೂರು: ಕಾಶ್ಮೀರದಿಂದ ಸುಮಾರು ಏಳು ಲಕ್ಷ ಪಂಡಿತರನ್ನು ಓಡಿಸಲಾಗಿದೆ. ಆದರೆ, ಏಕಕಾಲದಲ್ಲಿ ಅವರು ಓಡಿ ಬಂದಿಲ್ಲ. ಹಂತ ಹಂತವಾಗಿ, ಜನರನ್ನು ಗುಂಪು ಗುಂಪಾಗಿ ಹತ್ಯೆ ಮಾಡಿ ಹೆದರಿಸಲಾಯಿತು. ಹಿಂಡು ಹಿಂಡಾಗಿ ಅಲ್ಲಿನ ಪಂಡಿತರನ್ನು ಹತ್ಯೆ ಮಾಡಲಾಯಿತು.
ಜೀವ ಉಳಿಸಿಕೊಳ್ಳಲು ಅವರು ಅಲ್ಲಿಂದ ಓಡಿ ಹೋಗಲೇ ಬೇಕಾಯಿತು. ಇದೀಗ ಬಿಡುಗಡೆಯಾಗಿರುವ ದಿ ಕಾಶ್ಮೀರ್ ಫೈಲ್ಸ್ ಚಿತ್ರದಲ್ಲಿ ಒಂದೆರಡು ಕಥೆಗಳನ್ನು ಮಾತ್ರ ತೋರಿಸಲಾಗಿದೆ. ಆದರೆ ಬೆಳಕಿಗೆ ಬರದ ಕಾಶ್ಮೀರಿ ಪಂಡಿತರ ಅನೇಕ ಹತ್ಯಾಕಾಂಡಗಳು
ನಡೆದಿವೆ ಎಂದು ಕಾಶ್ಮೀರವೆಂಬ ಖಾಲಿ ಕಣಿವೆ ಮತ್ತು ಕಾಶ್ಮೀರದಲ್ಲೊಂದು ಸಂಜೆ ಕೃತಿ ಕಾರರಾದ ಅಲೆಮಾರಿ ಸಾಹಿತಿ ಸಂತೋಷಕುಮಾರ ಮೆಹಂದಳೆ ಹೇಳಿದ್ದಾರೆ.
ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ‘ಕಾಶ್ಮೀರ ಹತ್ಯಾಕಾಂಡ: ನೀವು ಕೇಳರಿಯದ ಸತ್ಯಗಳ ಪ್ರಸ್ತುತಿ’ ಕಾರ್ಯಕ್ರಮದಲ್ಲಿ ಕಾಣದ ಕಾಶ್ಮೀರದ ಕೆಲವು ಸತ್ಯ ಸಂಗತಿಗಳನ್ನು ಅನಾವರಣಗೊಳಿಸಿದರು. ಕಾಶ್ಮೀರ್ ಫೈಲ್ಸ್ ಚಿತ್ರ ನೋಡಿದ ನಂತರ ಅನೇಕ ಚರ್ಚೆ ಗಳು ಪ್ರಾರಂಭವಾಗಿದೆ. ೭ಲಕ್ಷ ಪಂಡಿತರು ಬಂದಿದ್ದಾರೆ. ಕಾಶ್ಮೀರದಿಂದ ಇವರ ಕಥೇ ಏನು? ಅಲ್ಲಿ ನಡೆದ ಕೃತ್ಯಕ್ಕೆ ಕಾರಣ ಕರ್ತರ‍್ಯಾರು? ರಾಜಕೀಯ ಹಿತಾಶಕ್ತಿ, ದಾರಿ ತಪ್ಪಿದ ಯುವಕರು, ಪುಕ್ಸಟ್ಟೆ ಸಿಗುತ್ತಿದ್ದ ಹಣದ ಕಾರಣ… ಹೀಗೆ ತರಹೇವಾರಿ ವಿಚಾರ ಗಳ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ, ಮೂಲ ಕಾರಣಗಳ ಬಗ್ಗೆ ತಿಳಿದುಕೊಳ್ಳುತ್ತಿಲ್ಲ ಎಂದರು.
ಮುಖ್ಯವಾಹಿನಿಗೆ ಬಾರದ ಹತ್ಯಾಕಾಂಡಗಳು
ನದಿ ಮಾರ್ ಹತ್ಯಾಕಾಂಡ: ೨೦೦೭ರಲ್ಲಿ ಶ್ರೀಮಂತರನ್ನು ಲೂಟಿ ಮಾಡುತ್ತಾರೆ. ಆಗ ಜೈಷ್-ಎ-ಮೊಹಮ್ಮದ್ ಹುಟ್ಟಿಕೊಳ್ಳು ತ್ತದೆ. ಈ ಹತ್ಯಾಕಾಂಡದಲ್ಲಿ ೨೩ ಗಂಡಸರು, ೭ ಹೆಂಗಸರು ಮತ್ತು ೨ ಮಕ್ಕಳು ಸಾವಿಗೀಡಾಗುತ್ತಾರೆ.
ಚಂಬಾ ಹತ್ಯಾಕಾಂಡ: ೩೫ ಮಂದಿ ಕಾಶ್ಮೀರಿಗಳನ್ನು ಹತ್ಯೆ ಮಾಡಲಾಗುತ್ತದೆ. ಈ ಹತ್ಯಾಕಾಂಡದಲ್ಲಿ ಯಾವುದೇ ಅತ್ಯಾಚಾರ ಆಗಿಲ್ಲ ಎಂದು ಹೇಳಿ ಅಂದಿನ ಮಾಧ್ಯಮ ಪ್ರಕರಣವನ್ನು ಮುಖ್ಯವಾಹಿನಿಗೆ ತರಲಿಲ್ಲ. ಚಂಬಾ ಹತ್ಯಾಕಾಂಡವಾಗುವವರೆಗೆ ಅಲ್ಲಿನ ಮುಸಲ್ಮಾನರ ಮೇಲೆ ಕಾಶ್ಮೀರಿ ಪಂಡಿತರು ನಂಬಿಕೆ ಇಟ್ಟು ಬದುಕುತ್ತಿದ್ದರು. ಈ ಹತ್ಯಾಕಾಂಡದಿಂದ ನಂಬಿಕೆ ಸುಳ್ಳಾ ಯಿತು.
ದೋಡಾ ಹತ್ಯಾಕಾಂಡ : ಗ್ರಾಮದಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿರುವ ವೇಳೆ ಭಾರತೀಯ ಸೇನಾ ವೇಶ ಧರಿಸಿ ಬಂದ ದ್ರೋಹಿಗಳು ೨೯ ಹಿಂದೂಗಳನ್ನು ಹತ್ಯೆ ಮಾಡುತ್ತಾರೆ. ೯ ಮಂದಿ ಹೆಂಗಸರ ಮೇಲೆ ೪ ಗಂಟೆಗಳ ಕಾಲ ಅತ್ಯಾಚಾರ ಮಾಡುತ್ತಾರೆ.
ಚಂಪಾ ನೇರಿ ಹತ್ಯಾಕಾಂಡ: ೧೯೯೮ರ ವೇಳೆಗೆ ೪ ಲಕ್ಷ ಮಂದಿ ಕಾಶ್ಮೀರವನ್ನು ಬಿಟ್ಟು ಹೊರನಡೆದಿರುತ್ತಾರೆ. ಈ ಘಟನೆಯಲ್ಲಿ ಮದುವೆ ಕಾರ್ಯಕ್ರಮದಲ್ಲಿ ನೆರೆದಿದ್ದ ೩೭ ಮಂದಿಯನ್ನು ಹತ್ಯೆ ಮಾಡಲಾಗುತ್ತದೆ. ೧೦ ಮಂದಿ ಹೆಂಗಸರ ಮೇಲೆ ಅತ್ಯಾಚಾರ ವಾಗುತ್ತದೆ.
ಶಿಭಾನಿ ಕೌಲ್ ಅಪಹರಣ: ೧೯೯೦ರಲ್ಲಿ ಶಿಬಾನಿ ಕೌಲ್ ಎಂಬ ಬಾಲಕಿಯನ್ನು ಅಪಹರಿಸಿ ೩ ದಿನಗಳ ಕಾಲ ಅತ್ಯಾಚಾರ ಮಾಡ ಲಾಗುತ್ತದೆ. ನಂತರ ಸುತ್ತಿಗೆ ಯಿಂದ ಹೊಡೆದು ಹತ್ಯೆ ಮಾಡಲಾಗುತ್ತದೆ.
೧೯೯೧ರ ಜನವರಿ: ಈ ಪ್ರಕರಣ ೬ವರ್ಷ ನಂತರ ಹೊರಗೆ ಬರುತ್ತದೆ. ಕಾಶ್ಮೀರಿ ಹಿಂದೂ ಎಂಬ ಕಾರಣಕ್ಕೆ ಪೊಲೀಸ್ ಒಬ್ಬರಿಗೆ ೪೦ ದಿನ ಚಿತ್ರಹಿಂಸೆ ನೀಡುತ್ತಾರೆ. ೨೦ಕಡೆ ಮೂಳೆ ಮುರಿತವಾಗುತ್ತದೆ. ಚಿತ್ರಹಿಂಸೆಯ ಗಾಯವನ್ನು ಡಬ್ಬಣದಿಂದ ಹೊಲಿಯು ತ್ತಾರೆ. ಮರ್ಮಾಂಗ ಕತ್ತರಿಸಿ ಕಾರದ ಪುಡಿ, ಮಣ್ಣು ಹಾಕುತ್ತಾರೆ.
ಬಬ್ಲಿ ರೈನ: ಶಿಕ್ಷಕಿಯಾಗಿದ್ದ ಈಕೆಯನ್ನು ೩ರಿಂದ ೫ ಜನರಿದ್ದ ತಂಡ ಗ್ಯಾಂಗ್ ರೇಪ್‌ಮ ಮಾಡುತ್ತದೆ. ಸತತ ೨೫ ದಿನ ಆಕೆಯ ಮೇಲೆ ಅತ್ಯಾಚಾರ ನಡೆಯುತ್ತದೆ. ಇದರಿಂದ ದೇಹದ ೧೩ ಎಲುಬುಗಳು ಮುರಿಯುತ್ತವೆ. ಆಕೆ ಸತ್ತ ೫ ವರ್ಷಗಳ ನಂತರ ದಾಖಲೆ ಗಳನ್ನು ಹೊರತೆಗೆಯಲಾಗುತ್ತದೆ.
ಇವಿಷ್ಟೇ ಅಲ್ಲದೆ, ಕಾಶೀಮ್‌ನಗರ ಹತ್ಯಾಕಾಂಡ, ಸಂಗ್ರಾಮ್ ಹತ್ಯಾಕಾಂಡ, ಕೋಟಾ ಜಾವ್ರತ್ ಹತ್ಯಾಕಾಂಡ, ಕಿಸ್ತ್ವಾರಾ ಹತ್ಯಾ ಕಾಂಡ, ಪರಮಾನಂದ್ ವಾಲಿ ಮತ್ತು ಓಂಕಾರ್‌ನಾಥ್ ವಾಲಿ ಎಂಬ ಇಬ್ಬರು ಪೊಲೀಸರ ಹತ್ಯೆ, ರಾಜೇಶ್ವರಿ ಎಂಬ ಯುವತಿಯ ಅಪಹರಣ ಮತ್ತು ಅತ್ಯಾಚಾರ, ಕನ್ಯಾಲಾಲ್ ಪೆಶಿನ್ ಹತ್ಯೆ, ಛಾಂದ್‌ಕೇರ್ ಎಂಬ ಯುವಕನ ಹತ್ಯೆ, ದಿಲೀಪ್ ಕುಮಾರ್ ಎಂಬ ಯುವಕನ ಹತ್ಯೆ… ಹೀಗೆ ಸಾಕಷ್ಟು ದೌರ್ಜನ್ಯಗಳು ಕಾಶ್ಮೀರಿ ಪಂಡಿತರು ಮತ್ತು ಹಿಂದೂಗಳ ಮೇಲೆ ನಡೆದಿವೆ.
ಇಷ್ಟೆಲ್ಲಾ ನಡೆಯುತ್ತಿದ್ದರೂ ಏನೂ ನಡೆದಿಲ್ಲ ಎನ್ನುವ ಹಾಗೆ ಅಂದಿನ ಸರಕಾರ, ಮಾಧ್ಯಮಗಳು ಕುಳಿತಿದ್ದವು. ಹಂತ ಹಂತ ವಾಗಿ ಉಗ್ರರು ನೀಡುತಿದ್ದ ಹಿಂಸೆಯನ್ನು ತಾಳಲಾರದೆ ಗುಂಪು ಗುಂಪಾಗಿ ಕಾಶ್ಮೀರಿ ಪಂಡಿತರು ಊರು ಬಿಡುವ ಹಾಗಾಯಿತು. ನೆರೆಯ ಮುಸ್ಲಿಮರ ಬಗ್ಗೆ ಇಟ್ಟ ಭರವಸೆಯಿಂದಲೇ ಅತೀ ಹೆಚ್ಚು ಹತ್ಯೆಗಳಾಗಿವೆ. ಶೇ. ೯೦ರಷ್ಟು ಅತ್ಯಾಚಾರ ಮತ್ತು ಕೊಲೆಗಳು ನೆರೆ ಹೊರೆಯವರಿಂದಲೇ ನಡೆದಿದೆ ಎಂದು ವಿವರಿಸಿದರು.
ಸರಣಿ ಪ್ರಸಾರ: ಸಂತೋಷ್ ಕುಮಾರ್ ಮೆಹಂದಳೆ ಅವರ ಕಾಶ್ಮೀರ ಹತ್ಯಾಖಾಂಡ ಕುರಿತ ‘ದಿ ಅನ್ ಟೋಲ್ಡ್ ಸ್ಟೋರಿ ಆಫ್ ಕಾಶ್ಮೀರ್’ ಅಂಕಣ ಸರಮಾಲೆ ವಿಶ್ವವಾಣಿ ದಿನಪತ್ರಿಕೆಯಲ್ಲಿ ಶೀಘ್ರದಲ್ಲೇ ಆರಂಭವಾಗಲಿದೆ.
? ಮೊದಲ ೮ ವರ್ಷದಲ್ಲಿ ೨೯ ಹತ್ಯಾಕಾಂಡಗಳು, ಒಂದು ಸಾವಿರಕ್ಕಿಂತ ಹೆಚ್ಚು ಹತ್ಯೆಗಳಾಗಿವೆ.
? ಅಪಹರಣಕಾರರಿಗೆ ಹಿಂದೂ ಸರಕಾರಿ ಅಧಿಕಾರಿಗಳು ಮತ್ತು ನೌಕರರೇ ಮುಖ್ಯ ಗುರಿಯಾಗಿದ್ದರು.
? ಕಾಶ್ಮೀರದಲ್ಲಿ ಒಬ್ಬ ಹಿಂದೂವನ್ನು ಕೊಂದರೆ ೨ ಲಕ್ಷ ರು. ಬಹುಮಾನವಾಗಿ ನೀಡಲಾಗುತ್ತಿತ್ತು.
? ಎಡಪಂತಿಯರ ಹಾವಳಿ ಇಲ್ಲದಿದ್ದರೆ ೨ ದಶಕಗಳಿಗಿಂತ ಮುಂಚೆಯೇ ಕಾಶ್ಮೀರದ ಪರಿಸ್ಥಿತಿ ಸರಿಹೋಗುತಿತ್ತು.
? ಕಾಶ್ಮೀರದಲ್ಲಿ ಅತೀ ಹೆಚ್ಚು ಆಘಾತಗಳು ಹೆಣ್ಣುಮಕ್ಕಳ ಮೇಲೆ ನಡೆದಿದೆ.
? ನಾಯಕರ ಬೆಂಬಲ ಮತ್ತು ಕ್ರೂರ ಘಟನಾವಳಿಗಳ ಸುದ್ದಿ ಹೊರ ಬೀಳದಿರುವುದೇ ಕಾಶ್ಮೀರದಲ್ಲಿ ಘಟನೆಗಳು ಹೆಚ್ಚಾಗಲು ಕಾರಣ.
? ೨ ವರ್ಷದಲ್ಲಿ ೧೮೭ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವೆಸಗಿ ಕೊಲ್ಲಲಾಗಿದೆ. ೩೧೬ ಜನರ ಹತ್ಯೆಯಾಗಿದೆ ಎಂದು ದಾಖಲೆ ಹೇಳುತ್ತದೆ.
? ೧೯೯೫ರಲ್ಲಿ ಅಮೆರಿಕಾ ಮತ್ತು ಆಸ್ಟ್ರೇಲಿಯಾದ ಪ್ರವಾಸಿಗರು ಅಪಹರಣ ಮತ್ತು ಹತ್ಯೆ ಸುದ್ದಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮಾಡಿದ ನಂತರ ಸ್ಥಳಿಯ ಮಾಧ್ಯಮಗಳು ಎಚ್ಚೆತ್ತುಕೊಳ್ಳುತ್ತವೆ.