ಬ್ಯಾಾಂಕಾಕ್:
ಭಾರತದ ಅಭಿಷೇಕ್ ವರ್ಮಾ ಹಾಗೂ ಜ್ಯೋೋತಿ ಸುರೇಖಾ ವೆನ್ನಮ್ ಜೋಡಿಯು ಇಲ್ಲಿಂದು ಮುಕ್ತಾಾಯವಾದ 21ನೇ ಏಷ್ಯನ್ ಆರ್ಚರಿ ಚಾಂಪಿಯನ್‌ಶಿಪ್ ಕಾಪೌಂಡ್ ಮಿಶ್ರ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿತು. ಒಟ್ಟಾಾರೆ, ಭಾರತ ಎಂಟು ಪದಕಗಳನ್ನು ಪಡೆಯುವ ಮೂಲಕ ಚಾಂಪಿಯನ್‌ಶಿಪ್ ಅಭಿಯಾನ ಮುಗಿಸಿತು.
ವರ್ಮಾ ಹಾಗೂ ವೆನ್ನಮ್ ಮಿಶ್ರ ಜೋಡಿಯು ಚೈನೀಸ್ ತೈಫೆಯ ಯಿ-ಹ್ಯೂಸುನ್ ಚೆನ್ ಮತ್ತು ಚಿಯಾ -ಲುಹಾ ಚೆನ್ ಜೋಡಿಯ ವಿರುದ್ಧ 158-151 ಅಂತರದಲ್ಲಿ ಗೆದ್ದು ಚಿನ್ನದ ಪದಕಕ್ಕೆೆ ಭಾಜನವಾಯಿತು. ಒಟ್ಟಾಾರೆ, ಭಾರತ ಒಂದು ಚಿನ್ನ, ಎರಡು ಬೆಳ್ಳಿಿ ಹಾಗೂ ನಾಲ್ಕು ಪದಕಗಳೊಂದಿಗೆ ತನ್ನ ಅಭಿಯಾನ ಅತ್ಯಂಗೊಳಿಸಿತು.
ಇದಕ್ಕೂ ಮುನ್ನ ಕಾಪೌಂಡ್ ತಂಡದ ವಿಭಾಗದಲ್ಲಿ ಅಭಿಷೇಕ್ ವರ್ಮಾ ಅವರು ಕೇವಲ ಒಂದೇ-ಒಂದು ಅಂಕದ ಅಂತರದಿಂದ ಕೊರಿಯಾ ವಿರುದ್ಧ 232-233 ಅಂತರದಲ್ಲಿ ಪರಾಭವಗೊಂಡು ಬೆಳ್ಳಿಿ ಪದಕಕ್ಕೆೆ ತೃಪ್ತಿಿಪಟ್ಟುಕೊಂಡರು.
ಮಹಿಳೆಯರ ಕಾಪೌಂಡ್ ತಂಡದ ವಿಭಾಗದಲ್ಲಿ ಜ್ಯೋೋತಿ, ಮುಸ್ಕಾಾನ್ ಕಿರಾರ್ ಹಾಗೂ ಪ್ರಿಿಯಾ ಗುಜ್ರಾಾರ್ ಅವರನ್ನೊೊಳಗೊಂಡ ತಂಡ ಕೊರಿಯಾ ವಿರುದ್ಧ 215-231 ಅಂತರದಲ್ಲಿ ಸೋತು ಬೆಳ್ಳಿಿ ಪದಕ ಪಡೆಯಿತು.
ತಂಡದ ವಿಭಾಗದಲ್ಲಿ ಚಿನ್ನದ ಪದಕ ವಂಚಿತರಾದ ಅಭಿಷೇಕ್ ವರ್ಮಾ ಹಾಗೂ ಜ್ಯೋೋತಿ ಅವರು ಕಾಪೌಂಡ್ ಮಿಶ್ರ ವಿಭಾಗದಲ್ಲಿ ಚೈನೀಸ್ ತೈಫೆ ಜೋಡಿಯನ್ನು ಮಣಿಸಿ ಭಾರತಕ್ಕೆೆ ಮೊದಲ ಚಿನ್ನದ ಪದಕ ತಂದುಕೊಟ್ಟಿಿತು. ಮಂಗಳವಾರ ಭಾರತ ನಾಲ್ಕು ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿತ್ತು. ಇದರಲ್ಲಿ ಅತನು ದಾಸ್ ಮಹತ್ತರ ಪಾತ್ರವಹಿಸಿದ್ದರು.
==