Monday, 25th November 2024

ಔದಾರ್ಯಕ್ಕೆ ಕೊನೆ ನರಮೇಧದಿಂದ ಬೇಡ

ರಾವ್-ಭಾಜಿ

ಪಿ.ಎಂ.ವಿಜಯೇಂದ್ರ ರಾವ್

journocate@gmail.com

ಇತ್ತೀಚೆಗೆ ಇಂಟರ್ನೆಟ್‌ನಲ್ಲಿ ಓದಿದ ಸುದ್ದಿ. ಅಮೆರಿಕದ ಒಂದು ಹೊಟೆಲ್‌ನಲ್ಲಿ ತಮ್ಮ ಇಬ್ಬರು ಮಕ್ಕಳೊಂದಿಗೆ ಉಳಿದು ಕೊಂಡಿದ್ದ ಆ ದೇಶದ ದಂಪತಿಗಳು ಹೊರಗಿನಿಂದ ಪಿಜ್ಜಾ ತರಿಸುತ್ತಾರೆ. ಕಾರಣಾಂತರದಿಂದ ಡೆಲಿವರಿ ತಡವಾಗುತ್ತದೆ. ಪ್ರತಿಕೂಲ ವಾತಾವರಣದಲ್ಲೂ ಡೆಲಿವರಿ ಹೆಣ್ಣುಮಗಳು ಕರ್ತವ್ಯಪ್ರಜ್ಞೆ ಮೆರೆಯುತ್ತಾಳೆ.

ಹೊಟೆಲ್‌ನಲ್ಲಿ ವಿರಮಿಸುತ್ತಿದ್ದ ದಂಪತಿಗಳು ಮಕ್ಕಳ ಡಿನ್ನರ್ ವಿಳಂಬವಾಯಿತೆಂದು ಆಕೆಗೆ ಕೆಟ್ಟದಾಗಿ ಬೈಯುತ್ತಾರೆ. ಮುನಿಸಿ ಕೊಂಡ ಆಕೆ ಆದದ್ದಾಗಲೆಂದು ಪಿಜ್ಜಾ ಕೊಡದೇ ವಾಪಸಾಗುತ್ತಾಳೆ. ಈ ಪ್ರಸಂಗದ ವರದಿಗೆ ಅನೇಕ ಪ್ರತಿಕ್ರಿಯೆಗಳು ವ್ಯಕ್ತವಾ ದವು. ಬಹುತೇಕ ಎಲ್ಲಾ ಓದುಗರೂ ಆಕೆಯ ವರ್ತನೆಯನ್ನು ಅನುಮೋದಿಸಿದ್ದರು. ಮಕ್ಕಳ ಕಾರಣದಿಂದಾದರೂ ನೀನು ಪಿಜ್ಜಾ ಕೊಟ್ಟು ಬರಬೇಕಿತ್ತು. ಹಸಿದ ಮಕ್ಕಳ ತಪ್ಪಾದರೂ ಏನು, ಎಂಬ ಏಕೈಕ ವಿಭಿನ್ನ ಪ್ರತಿಕ್ರಿಯೆ ಇತ್ತು. ಹಾಗೆ ಪ್ರತಿಕ್ರಿಯಿಸಿದವರು ಒಬ್ಬ ಹಿಂದೂ. ಇದು ಹಿಂದೂವಿನ ಮೂಲಗುಣ. ಅಮೆರಿಕಾಗೆ ಹೋದರೂ ಬದಲಾ ಗದು. ಈ ಸ್ವಭಾವವೇ ಎಂದಿನಂತೆ ಅವನ ಅಸ್ತಿತ್ವದ ಸಮಸ್ಯೆಗೂ ಕಾರಣವಾಗಿದೆ.

ಇದು ಐತಿಹಾಸಿಕ ಸತ್ಯ. ಅಪಾತ್ರದಾನವನ್ನೊಪ್ಪದ ಸನಾತನಧರ್ಮದ ನೆಲದ ಅಪಾತ್ರ ದಾನ ಸಾಂಸ್ಥಿಕ ರೂಪ ಪಡೆದು ಕೊಂಡಿ ರುವುದು ಬಹುದೊಡ್ಡ ವ್ಯಂಗ್ಯ. ಅಪಾತ್ರನಿಗೆ ಜೀವದಾನ ಮಾಡಿ ತಾನೇ ಗತಿಸಿದ ಪೃಥ್ವಿ ರಾಜ್ ಚೌಹಾಣನಿಗಿಂತ ಉದಾಹರಣೆ ಬೇಕೇ? ಅಂದಿನಿಂದ ಇಂದಿನವರೆಗೂ ಬದಲಾಗಿರುವುದು ಔದಾರ್ಯದ ಸ್ವರೂಪವಲ್ಲ, ಅದರ ತಳಹದಿ. ಚೌಹಾಣ್ ಘಜ್ನಿಗೆ ನೀಡಿದ ಪ್ರಾಣಭಿಕ್ಷೆಯ ಹಿನ್ನೆಲೆ ಏನೇ ಇರಲಿ ಅದರ ಲೆಕ್ಕಾಚಾರ ಉಲ್ಟಾ ಆಗಿದ್ದು, ಅದಕ್ಕೆ ಹಿಂದೂಗಳು ತೆರಬೇಕಾದ ಬೆಲೆ ಅಪಾರ.

ವೈರಿಯ ಮುಂದಿನ ನಡೆಯನ್ನು ಊಹಿಸಿ ಅದಕ್ಕೆ ತಕ್ಕ ಹೆಜ್ಜೆ ಇಡುವುದು ರಣತಂತ್ರದ ಮುಖ್ಯ ಅಂಶ. ಪೊಲೀಸರು ಹಿಸ್ಟರಿ ಶೀಟರ್‌ಗಳ ಮೇಲೆ ನಿಗಾ ಇಡುವಂತೆ, ರಣರಂಗ ದಲ್ಲಿ ವೈರಿಯನ್ನು ಸದೆಬಡಿದ ನಂತರ ವೂ ಅವನ ಭವಿತವ್ಯದ ಪ್ರತೀಕಾರವನ್ನು ನಿರೀಕ್ಷಿಸುವುದು ರಣತಂತ್ರದ ಮತ್ತೊಂದು ಅಂಶ. ಅದೇನೇ ಇರಲಿ, ಚೌಹಾಣ್‌ನ ಔದಾರ್ಯದ ಹಿಂದೆ ಹೇಡಿತನವಿರಲಿಲ್ಲ. ಕೃತ್ರಿಮವೂ ಇರಲಿಲ್ಲ. ಹಿಂದೂಗಳ ರಕ್ತ ಗತ ಸ್ವಭಾವಕ್ಕನುಗುಣವಾದ ಮುಗ್ಧ ತಪ್ಪ ನ್ನೊಂದು ಮಾಡಿದ. ಸಮರದಲ್ಲಿ ಮುಗ್ಧತೆಗೆ ಅವಕಾಶವಿಲ್ಲ. ಕಾಳಗ ಮುಗ್ಧರಿಗಲ್ಲ.

Rob Paul to pay Peter ಎಂಬ ನಾಣ್ಣುಡಿಯೊಂದಿದೆ. ಅವನ ತಲೆಯೊಡೆದು ಇವನಿಗೆ ಕೊಡುವುದು. ನಾಯಿತಗೊಂಡ ನಮ್ಮ ನಾಯಕ ಶಿಖಾಮಣಿಗಳೆ ಮಾಡುತ್ತಾ ಬಂದಿರುವುದು ಅದನ್ನೇ: ಹಿಂದೂಗಳ ಹಣದಿಂದ ಅಲ್ಪಸಂಖ್ಯಾತರೆಂದು ಹೇಳುತ್ತಾ ಕೊಬ್ಬಿಸುತ್ತಾ ಬಂದಿರುವುದು. ಸಾರ್ವಜನಿಕ ಸಂಪನ್ಮೂಲಗಳನ್ನು ತಾವೂ ಕಬಳಿಸುತ್ತಾ, ಅಲ್ಪ ಸಂಖ್ಯಾತರಿಗೂ ಮೇಯಿಸುವುದೇ ಒಂದು ಟೆಂಪ್ಲೆಟ್ ಆಗಿಬಿಟ್ಟಿದೆ. ಅದು ಔದಾರ್ಯವಲ್ಲ. ದರೋಡೆ ಮಾಡಿದವನಿಗೆ ಶಿಕ್ಷೆಯಾಗಬೇಕು. ಅಧಿಕಾರದಲ್ಲಿದ್ದರೆ ದಂಡನೆ ಯಿಂದ ತಪ್ಪಿಸಿಕೊಳ್ಳಬಹುದು. ತಪ್ಪುಗಳನ್ನು ಮುಚ್ಚಿಹಾಕಬಹುದು.

ವಾಮಮಾರ್ಗದಲ್ಲಿ ಅಧಿಕಾರವನ್ನು ಪಡೆದು ಅಲ್ಪಸಂಖ್ಯಾತರಿಗೂ, ಲಂಗುಲಗಾಮಿಲ್ಲದೆ ದುರ್ಷ್ಕೃತ್ಯಗಳಲ್ಲಿ ತೊಡಗುವಂತೆ
ಕುಮ್ಮಕ್ಕು ಕೊಡುವುದು ಮತ್ತೊಂದು ಟೆಂಪ್ಲೆಟ. ಅಧಿಕಾರಕ್ಕೆ ಬರಲು, ಅಽಕಾರದಲ್ಲಿ ಉಳಿಯಲು ಮುಸ್ಲಿಮರ ಮತ ಬೇಕು. ಮುಂಚೆಯೇ ಧರ್ಮದ ಅಮಲಿನಲ್ಲಿರುವವರಿಗೆ ಮತ್ತಷ್ಟು ನಶೆ ಏರಿಸಿ ಅವರ ಬೆಂಬಲವನ್ನು ಪಡೆಯಬೇಕು. ಅವರ ಸಂಖ್ಯೆ ಹೆಚ್ಚಾಗುತ್ತಲೇ ಹೋದರೆ ಅವರ ಬೆಂಬಲದಿಂದ ತಮ್ಮ ಅಧಿಕಾರವೂ ಅಬಾಧಿತವಾಗಿ ಮುಂದುವರೆಯುತ್ತದೆಂಬ ಹವಣಿಕೆ. ಠಕ್ಕ ಮಂತ್ರಿ-ಶಾಸಕರನ್ನೂ, ಅವರನ್ನು ಅವಲಂಬಿಸುವ ಅವರ ಅಪರಾಧಿ ಬೆಂಬಲಿಗರನ್ನೂ ಪ್ರಶ್ನಿಸುವರೇ ಇಲ್ಲವೆಂತಾಗಿದೆ. ಇವರ ಎಂಜಲು ಅವರಿಗೆ, ಅವರ ಎಂಜಲು ಇವರಿಗೆ. ತಪ್ಪಿತಸ್ಥರನ್ನು ದಾರಿಗೆ ತರುವ ವ್ಯವಸ್ಥೆ ಇಲ್ಲವಾಗಿದೆ.

ಉಗಳೂಟದ ಪಾರ್ಟಿಯಲ್ಲಿ, ಅಧಿಕಾರಶಾಹಿಯ ಬಹುತೇಕರು ಮತ್ತು ಮಾಧ್ಯಮಲೋಕದ ಗಣನೀಯ ಸಂಖ್ಯೆಯ ಮಂದಿ ಕುಳಿತಿದ್ದಾರೆ. ಭ್ರಷ್ಟಾಚಾರ, ಅತ್ಯಾಚಾರ, ಅನಾಚಾರ, ದಂಧೆ, ವೇಶ್ಯಾವಾಟಿಕೆ, ಲೂಟಿ, ಹ, ದರೋಡೆ ಮುಂತಾದ ಎಲ್ಲಾ ಅನಿಷ್ಟ ಗಳ ಮೂಲ ಇದು. ನಾಚಿಕೆ ಹೇಸಿಗೆಯಿಲ್ಲದೆ ಐಷಾರಾಮಿ ಹೊಟೆಲ್‌ನಲ್ಲಿ ಹಲ್ಲೆಯಲ್ಲಿ ಭಾಗಿಯಾದ ನಳಪಾಡ್‌ನನ್ನು ಯುವ ಕಾಂಗ್ರೆಸ್ ನ ಅಧ್ಯಕ್ಷಪೀಠದಲ್ಲಿ ಕೂರಿಸಲಾಗುತ್ತದೆ.

ಸ್ನೇಹಿತರೊಟ್ಟಿಗೆ ಕುಡಿದ ಗಮ್ಮತ್ತಿನಲ್ಲಿ ಹತ್ತಿರದ ಮತ್ತೊಂದು ಹೊಟೆಲ್‌ನ ಸಿಬ್ಬಂದಿಯ ಮೇಲೆ ಎರಗಿದ ಪುಂಡರ ನಾಯಕನನ್ನು ಮುಖ್ಯಮಂತ್ರಿಯ ಮಗನೆಂಬ ಕಾರಣಕ್ಕೆ ಪೊಲೀಸಪ್ಪರು ಜೋಪಾನ ಮಾಡುತ್ತಾರೆ. ಮಾಜಿ ಪ್ರಧಾನಿಯ ಮೊಮ್ಮಗನೆಂಬ ಕಾರಣಕ್ಕೆ ಪಕ್ಷದ ಟಿಕೆಟ್ಟನ್ನು ಆದ್ಯತೆಯ ಮೇರೆಗೆ ಕೊಡಲಾಗುತ್ತೆ. ಪೊಲೀಸರನ್ನೂ ಸೇರಿದಂತೆ ಅಧಿಕಾರಶಾಹಿ ನಿಷ್ಕ್ರಿಯವಾಗು ವುದು ಕಾಶ್ಮೀರದಲ್ಲಿ ಮಾತ್ರವಲ್ಲ. ಕರ್ನಾಟಕವೂ ಸೇರಿದಂತೆ ಭಾರತದ ಯಾವುದೇ ಭಾಗದಲ್ಲಿ ಕಾಶ್ಮೀರೋಪಾದಿಯಲ್ಲಿ ನರಕ ಸೃಷ್ಟಿಯಾಗುವ ಸಂಭವನೀಯತೆ ಗೋಚರವಾಗುವುದು ಈ ಕಾರಣಕ್ಕೆ.

ಕಸ್ತೂರ್ ಬಾ ಕೂಡ ತಲೆಯ ಭಾಗವನ್ನು ಮುಚ್ಚಿಕೊಳ್ಳುತ್ತಿದ್ದರು ಎಂಬ ಹಿಜಾಬ್ ಕುರಿತಂತೆ ಲಜ್ಜೆರಹಿತ ಹೇಳಿಕೆ ನೀಡುವ ಎಚ್. ಡಿ. ಕುಮಾರಸ್ವಾಮಿಗೆ ಕಸ್ತೂರ್ ಬಾ ಯಜಮಾನರು ಪ್ರಾಮಾಣಿಕತೆಯ ಪಾಠ ಮಾಡಿದ್ದು ನೆನಪಾಗುವುದಿಲ್ಲ. ಆತನ ನೌಟಂಕಿ ಹೇಳಿಕೆಯೂ, ನಾನು ಯಾವುದೇ ಕಾರಣಕ್ಕೂ ಭಾರತ ಹಿಂದೂರಾಷ್ಟ್ರವಾಗುವುದಕ್ಕೆ ಬಿಡುವುದಿಲ್ಲ ಎಂಬ ಸಿದ್ದರಾಮಯ್ಯರ ಅಟ್ಟಹಾಸವೂ ರಾಜ್ಯದ ಹಿಂದೂಗಳಲ್ಲಿ ಆತಂಕವನ್ನು ಸೃಷ್ಟಿಮಾಡಬೇಕು.

ಕಸಾಯಿಖಾನೆಯಲ್ಲಿ ಮಾಂಸವನ್ನು ಸಿದ್ಧಪಡಿಸುವ ಮುನ್ನ ಕೋಣದ ಹಣೆಯ ಭಾಗಕ್ಕೆ ದೊಡ್ಡ ಸುತ್ತಿಗೆಯಿಂದ ಬಾರಿಸ ಲಾಗುತ್ತದೆ. ಅದನ್ನು stunning ಎಂದು ಕರೆಯಲಾಗುತ್ತದೆ. ಒಂದು ಕ್ಷಣದಲ್ಲಿ ಅತ್ಯಲ್ಪ ಕಡಿಮೆ ಹಿಂಸೆಯಿಂದ ಅದರ ಜೀವ ವನ್ನು ತೆಗೆಯುವ ವಿಧಾನವದು! ಸ್ಟಮ್ಭೀಭೂತವಾಗುವುದನ್ನೂ stunned ಎಂದು ಕರೆಯುತ್ತಾರೆ. ಫೈಲ್ಸ್ ಚಿತ್ರವನ್ನು ನೋಡಿದ ಶಾಂತಿಪ್ರಿಯ ಹಿಂದೂಗಳೂ ಚಿತ್ರದಿಂದ ಸ್ಟನ್ ಆಗಿದ್ದಾರೆ.

ಕೆಲವು ಪ್ರೇಕ್ಷಕರಿಂದ ಕಣ್ಣೀರು ಚಿಮ್ಮಿದೆ. ಮತ್ತೆ ಕೆಲವರು ಕಣ್ಣೀರನ್ನೂ ಹಾಕಲಾಗದೆ ಆಘಾತದಿಂದ ಮೂಕರಾಗಿದ್ದಾರೆ.
ಜಿಹಾದಿಗಳು ಮಾಡಿದ್ದಷ್ಟನ್ನೂ, ಮಾಡಿzಲ್ಲವನ್ನೂ ತೋರಿಸಲು ಮುನ್ನೂರು ಗಂಟೆಗಳ ಚಿತ್ರವನ್ನು ತಯಾರಿಸಬೇಕಿತ್ತು.
ಅವನ್ನು ವೀಕ್ಷಿಸಿದ ಪ್ರೇಕ್ಷಕರಲ್ಲಿ ಅರ್ಧಕ್ಕೆ ಅರ್ಧ ಮಂದಿ ಸಿನೆಮಾ ಹಾಲ್‌ನ ಎದೆಯೊಡೆದು ಸ್ಟನ್ನಿಂಗ್‌ಗೆ ಒಳಗಾದ ಕೋಣದಂತೆ ಪ್ರಾಣಬಿಡುತ್ತಿದ್ದರು.

ಕಾಶ್ಮೀರ್ ಫೈಲ್ಸ್ ಚಿತ್ರದಿಂದ ಹಿಂದೂ ವಿರೋಧಿ ನಾಯಕರೂ ಒಂದು ರೀತಿ ಸ್ಟನ್ ಆಗಿzರೆ. ಚುನಾವಣೆಗೆ ಒಂದು ವರ್ಷ ವಿರುವಾಗ ದೇಶದ ಹಿಂದೂಗಳು ಒಂದಾಗುವುದು ಅವರ ಬುಡವನ್ನಲುಗಾಡಿಸತೊಡಗಿದೆ. ಚಿತ್ರವೆಬ್ಬಿಸಿರುವ ಬಿರುಗಾಳಿಯಿಂದ ವಿರೋಧ ಪಕ್ಷಗಳು ಪತರಗುಟ್ಟುತ್ತಿವೆ. ಅನಾಯಾಚಿತವಾಗಿ ದೊರಕಿದ ಈ ಅವಕಾಶವನ್ನು ಹಿಂದೂ ಮತದಾರ ಚಾಣಾಕ್ಷವಾಗಿ ಬಳಸಿ ಕೊಳ್ಳುವುದರಲ್ಲಿ ಅವರ ಅಸ್ತಿತ್ವವೂ, ದೇಶದ ಸಮಸ್ತರ ಏಳಿಗೆಯೂ ಅಡಗಿದೆ. ಹಿಂದೂ ಏಕತೆಗಾಗಿ ಹಿಂದೆಂದೂ ಸಿಗದ ಭೂಮಿಕೆ ಯನ್ನು ಕಾಶ್ಮೀರ್ ಫೈಲ್ಸ್ ಅನುದ್ದೇಶಿತವಾಗಿ ಒದಗಿಸಿಕೊಟ್ಟಿದೆ.

ಇದರಿಂದ ಭಾರತವಿರೋಧಿ ಸಿದ್ಧಾಂತದ ಪಕ್ಷಗಳು ತಲ್ಲಣಗೊಂಡಿವೆಯೇ ಹೊರತು, ದೇಶದ ಅಲ್ಪಸಂಖ್ಯಾತರು  ಮುಖ್ಯವಾಗಿ, ಅಲ್ಪಸಂಖ್ಯಾತರಲ್ಲದಿದ್ದರೂ ಅಲ್ಪಸಂಖ್ಯಾತರ ಸಕಲ ಸವಲತ್ತುಗಳನ್ನೂ ಭೋಗಿಸುತ್ತಿರುವ ಮುಸ್ಲಿಮರು, ಎಗ್ಗಿಲ್ಲದ ಮತಾಂತರ ದಿಂದ ದೇಶವನ್ನು ಹಾಳುಗೆಡುವುತ್ತಿರುವ ಮಿಷನರಿಗಳು ಹಾಗೂ ಖಲೀಸ್ತಾನ್ ಪರ ನಿಂತಿರುವ ಕುಲಾಂತರಿ ಸಿಖ್ಖರು) ನಿರಾತಂಕ ವಾಗಿದ್ದಾರೆ. ಏಕೆಂದರೆ ಅವರೆಲ್ಲರಿಗೂ ಗೊತ್ತು ಹಿಂದೂಗಳ ಸಹನೆ ಹೆಚ್ಚೆಂದು ಮತ್ತು ಹಿಂದೂಗಳು ಒಟ್ಟಾಗಲಾರ ರೆಂದು.

(ಹಿಂದೂಗಳು ಒಗ್ಗೂಡದಿರುವುದಕ್ಕೆ ಪ್ರಮುಖ ಕಾರಣಗಳು: ೧. ಆಕ್ರಮಣಕಾರೀ ಮತಾಂತರದಲ್ಲಿ ನಿರತರಾಗಿರುವ ಮಿಷನರಿಗಳು ದಿನನಿತ್ಯ ಹಿಂದೂಗಳ ವಿರುದ್ಧ ದಲಿತರನ್ನು ಎತ್ತಿಕಟ್ಟುತ್ತಿರುವುದು. ಇದು ಧಾರ್ಮಿಕ ಕಾರಣ; ೨. ಹಿಂದೂ ಸಮಾಜದಿಂದ ದಲಿತರನ್ನೂ ಹಿಂದುಳಿದ ವರ್ಗಗಳ ಜನರನ್ನೂ ಧರ್ಮದಿಂದ ಹೊರಗೆಳೆದುಕೊಂಡು ಮುಸ್ಲಿಮರ ಜತೆ ಸೇರಿಸಿ ಹಿಂದೂಯೇತರ ಪಕ್ಷಗಳನ್ನು ಗಟ್ಟಿಗೊಳಿಸುವುದು. ಇದು ರಾಜಕೀಯ.) ಒಂದು ವೇಳೆ, ಹಿಂದೂಗಳು ಒಗ್ಗೂಡಿ ಹಿಂದೂಪರವೆಂದು ಹೇಳಲಾದ ಭಾರತೀಯ ಜನತಾ ಪಕ್ಷವನ್ನೇ ಪುನರ್‌ಚುನಾಯಿಸಿದರೂ, ಕಾಶ್ಮೀರ್ ಫೈಲ್ಸ್‌ನಿಂದ ಪ್ರಚೋದಿತರಾಗಿ ಅವರು ಮುಸ್ಲಿಮರ ಮೇಲೆ ಬೀಳುವುದನ್ನು ಕಲ್ಪಿಸಿಕೊಳ್ಳಲು ಮುಸ್ಲಿಮರಿಗೂ ಅಸಾಧ್ಯ. ಆ ಸಾಧ್ಯತೆಯೇ ಅವಾಸ್ತವಿಕ, ಅಸ್ವಾಭಾವಿಕ.

ಹಿಂದೂಪರ ಪಕ್ಷ ಎಷ್ಟೇ ಪ್ರಚಂಡ ಬಹುಮತದಿಂದ ಗೆದ್ದುಬಂದರೂ, ಅದು ಕೋಮುಸೌಹಾರ್ದಕ್ಕೆ ಧಕ್ಕೆ ತಾರದು. ಅದೊಂದೇ ಕಾರಣಕ್ಕೆ ಹಿಂದೂ ರಾಷ್ಟ್ರದ ಪರಿಕಲ್ಪನೆಗೆ ಗರಿಮೂಡಲು ಇದಕ್ಕಿಂತ ಪ್ರಾಶಸ್ತ್ಯ ಮುಹೂರ್ತ ಸಿಗದು. ಈ ವಿಷಯಕ್ಕೆ ಪೂರಕವಾಗಿ ನೂರಾರು ಅಂಶಗಳಿವೆ. ೧. ದೇವೇಗೌಡರು ಪ್ರಧಾನಿಯಾಗಿದ್ದಾಗ ತಮ್ಮ ಅಧಿಕೃತ ದಾವೋಸ್ ಭೇಟಿಗೆ ಮನೆಮಂದಿಯನ್ನೆ ಅಟ್ಟಿ ಕೊಂಡು ಹೋದ ಕಾರಣವೋ ಏನೋ ಕಾಣೆ, ಅಲ್ಲಿ ಕುಮಾರಸ್ವಾಮಿ ತರಹದ ತರ್ಕ ಚಾಲ್ತಿಯಲ್ಲಿದೆ.

ಅನ್ಯಕೋಮಿನ ಕಣ್ಣಿಗೆ ಸರಿಕಾಣುತ್ತಿಲ್ಲವೆಂಬ ಕಾರಣಕ್ಕೆ ಸ್ವಿಟ್ಜರ್‌ಲ್ಯಾಂಡ್ ದೇಶದ ಅತಿ ವಿಶಾಲವಾದ ಸ್ಮಶಾನದಲ್ಲಿ ನೆಡಲಾಗಿದ್ದ ಶಿಲುಬೆಗಳನ್ನು ಕೀಳಲು ಕಳೆದ ತಿಂಗಳು ನಿರ್ಣಯಿಸಲಾಯಿತು. ನಮ್ಮ ಅನುಕೂಲಸಿಂಧು ಮಾಧ್ಯಮದ ಪರಿಪಾಠದಂತೆ ಆ ಕೋಮಿನ ಹೆಸರು ಪ್ರಕಟವಾಗಿಲ್ಲ!

ಪ್ರಶಾಂತವಾದ ಅದೇ ಸ್ವಿಟ್ಜರ್‌ಲ್ಯಾಂಡ್ನಲ್ಲಿ ಫೆಬ್ರವರಿ ೧೬ ರಂದು, ಲಿಬ್ಯಾ ಮೂಲದ ಮುಖಂಡನಾಗಿ ಆಯ್ಕೆಯಾದಂತೆ
ಆಗಲು ಅಬೂ ರಮಾದಾನ್ ಎಂಬ ಮು ಮಸೀದಿಯೊಂದರಿಂದ ಕರೆಕೊಡುತ್ತಾನೆ: ‘ಓ ಅ, ನಮ್ಮ ಧರ್ಮದ ಶತ್ರುಗಳಾದ ಜ್ಯೂಗಳು, ಕಿರಿಸ್ತಾನರು, ಹಿಂದೂಗಳು, ರಷ್ಯನ್ನರು, ಶಿಯಾಗಳು ನಿನ್ನ ಕೃಪೆಯಿಂದ ನಾಶವಾಗಲಿ. ಇಸ್ಲಾಂ ತನ್ನ ಹಿಂದಿನ ವೈಭವವನ್ನು ಮತ್ತೆ ಕಾಣಲಿ.

ಹಯ ಪ್ರಕರಣದಲ್ಲಿ ಆರೋಪ ಹೊತ್ತಿದ್ದಕ್ಕೇ ನಳಪಾಡ ನನ್ನು ಯುವ ಕಾಂಗ್ರೆಸ್ ಅಧ್ಯಕ್ಷ ಪೀಠ ಹುಡುಕಿಕೊಂಡುಬಂದಂತೆ, ರಮಾದಾನ್ ಮೇಲೆ ಜನಾಂಗೀಯ ದ್ವೇಷ ಬಿತ್ತಿದ್ದಕ್ಕಾಗಿ ಕೇಸ್ ದಾಖಲಾಗಿದ್ದರೂ ಅವನ ಮಸೀದಿ ಭೇಟಿಗೇನು ಅಡ್ಡಿಯಾಗಿಲ್ಲ. ಸರಕಾರದಿಂದ ಕಳೆದ ೧೩ ವರ್ಷಗಳಲ್ಲಿ ೬೦೦,೦೦೦ ಫ್ರಾಂಕ್‌ಗಳನ್ನು ಭತ್ಯೆಯಾಗಿ ಪಡೆದಿದ್ದಾನೆ. ಆದರೆ, ಸಮಾಜದ  ಮುಖ್ಯ ವಾಹಿನಿಗೆ ಬರುವ ಯಾವುದೇ ಪ್ರಯತ್ನ ಪಟ್ಟಿಲ್ಲ.

ಕದ್ದುಮುಚ್ಚಿ ತನ್ನ ತಾಯ್ನಾಡಿಗೆ ಹೋಗಿಬರುತ್ತಲೇ ಇರುವುದೂ ತನಿಖಾದಳದ ಗಮನಕ್ಕೆ ಬಂದಿದೆ. ಅವನು ಮಾತ್ರ,
ನಳಪಾಡ್‌ನಂತೆ ತನಿಖೆಗೆ ಯಾವುದೇ ಸಹಕಾರ ನೀಡುತ್ತಿಲ್ಲ. ಕಳೆದ ಜನವರಿಯಲ್ಲಿ, ಆಂಧ್ರದ ಕರ್ನೂಲ್‌ನ ಆತ್ಮಕೂರ್
ಎಂಬ ಊರಿನಲ್ಲಿ ಅನಧಿಕೃತವಾಗಿ ಮಸೀದಿ ಏಳುವುದಕ್ಕೆ ಸ್ಥಳೀಯ ಹಿಂದೂಗಳು ಆಕ್ಷೇಪವೆತ್ತುತ್ತಾರೆ. ಅದಕ್ಕೆ ಸಿಡಿದೆದ್ದ
ಮುಸ್ಲಿಮರು ಊರಿನ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡುತ್ತಾರೆ. ದಂಗೆಕೋರರ ಪೈಕಿ ಆ ರಾಜ್ಯದ ಮುಖ್ಯಮಂತ್ರಿ ಭದ್ರತಾ ಡ್ಯೂಟಿಗೆ ನಿಯೋಜಿತನಾಗಿದ್ದ ಶೇಖ್ ಅತಾವು ಎಂಬ ಮುಖ್ಯಪೇದೆಯೂ ಸೇರಿರುತ್ತಾನೆ.

ಅವನ ಮೇಲೆಯೂ ಕ್ರಮ ಜರುಗಿಸಲಾಗುತ್ತೆ, ಆದರೆ, ಅವನನ್ನು ಬಚಾಯಿಸಲು ಶತಪ್ರಯತ್ನ ನಡೆಯುತ್ತದೆ. ಇದು ನಮ್ಮ
ಸೆಕ್ಯುಲಾರ್ ದೇಶದ ಹಣೆಬರಹ. ಹಿಂದೂ ರಾಷ್ಟ್ರದ ಪರವಾಗಿ ನನ್ನ ವಾದವನ್ನು ಮುಂದಿನವಾರ ಮುಂದುವರೆಸುತ್ತೇನೆ. ಕಾಶ್ಮೀರ್ ಫೈಲ್ಸ್ ನೋಡಿ ಆಘಾತಗೊಂಡ ಹಿಂದೂಗಳೇ ಹೇಳಿ: ಪರಿಸ್ಥಿತಿ ಇನ್ನೆಷ್ಟು ಹದಗೆಡುವವರೆಗೂ ಕಾಯೋಣ. ಮೂರು ದಶಕಗಳ ನಂತರ ಬದುಕನ್ನು ಮೂರಾಬಟ್ಟೆ ಮಾಡಿಕೊಂಡ ಪಂಡಿತರ ಪುನರ್ವಸತಿಗಾಗಿ ಸಮಸ್ತ ಹಿಂದೂಗಳ ಮಾರ್ದನಿ ಏಳದಿದ್ದರೆ, ಭಾರತ ೧೦೦ನೇ ಸ್ವಾತಂತ್ರ್ಯೋತ್ಸವ ಆಚರಿಸುವ ಸಂದರ್ಭದಲ್ಲೂ ಅವರಲ್ಲಿ ಬಹುತೇಕರು ಇನ್ನೂ ನಿರ್ಗತಿಕರಾಗೇ ಇರುತ್ತಾರೆ.

ತಾಯ್ನಾಡಿನ ಮೂಲೋತ್ಪಾಟನೆಗೊಂಡ ಅವರಿಗೆ ನ್ಯಾಯವೊದಗಿಸುವುದಕ್ಕೆ ಹಿಂದೂಗಳು ಒತ್ತಾಯ ಮಾಡದಿದ್ದರೆ,
ಮುಸ್ಲಿಮರು ಮಾಡಿಯಾರೇ? ಕಾಶ್ಮೀರ ಫೈಲ್ಸ್‌ನ ಭರ್ಜರಿ ಯಶಸ್ಸಿನ ನಂತರವೂ ಚಿತ್ರದಲ್ಲಿ ಇಲ್ಲದ ಹುಳುಕು ಹುಡುಕುತ್ತಾ ಅದು ಕೋಮುಗಲಭೆಗೆ ಪ್ರಚೋದನೆ ನೀಡುತ್ತದೆಂಬ ಕುತ್ಸಿತ ವಾದವನ್ನು ಮುಂದಿಡುತ್ತಿರುವ ಷಂಡ ಮಾಧ್ಯಮಗಳು ಪಂಡಿತರ ಪರವಾಗಿ ನಿಲ್ಲುತ್ತವೆಯೇ? ಇಂದು ವಿಷಯ ಪ್ರಸ್ತುತವೆನಿಸುತ್ತದೆ. ನನ್ನ ಲೇಖನವೂ ಸೇರಿದಂತೆ ಸುಮಾರು ನಲವತ್ತು ಲೇಖನ ಗಳುಳ್ಳ ಬ್ರಾಹ್ಮಣ ಶಿಕಾರಿ ಎಂಬ ಅಪರೂಪದ ಪುಸ್ತಕ ಮುಂದಿನ ವಾರ ಬಿಡುಗಡೆಯಾಗಲಿದೆ. ನನ್ನ ವಿನಮ್ರ ಸಲಹೆಯ ಮೇರೆಗೆ ಅದನ್ನು ಸಂತ್ರಸ್ತ ಕಾಶ್ಮೀರೀ ಪಂಡಿತರಿಗೆ ಅರ್ಪಿಸಲಾಗುತ್ತಿದೆ.

ಪುಸ್ತಕದ ಆಶಯ ಸಮಾಜವನ್ನು ಬೆಸೆಯುವುದಾಗಿದೆ. ಶಿಕಾರಿಯಾಡಲ್ಪಟ್ಟ ಜನಾಂಗಕ್ಕೆ ಪಂಡಿತರಿಗಿಂತ ಬೇರೆ ಉದಾಹರಣೆ ಬೇಕೇ? ಹಿಂದೂಗಳ ಭೂತಾಯಿಯನ್ನು ಮೀರಿಸುವ ಸಹನೆಗೆ ಪಂಡಿತರ ಉದಾಹರಣೆ ಸಾಲದೇ? ಅವರ ತಾಳ್ಮೆಯೇ ಅವರ
ದೌರ್ಬಲ್ಯವೇ? ನ್ಯಾಯ ಒದಗಿಸಲಿಕ್ಕೆ ಜಾತಿ ಧರ್ಮಗಳ ಹೆಸರು ಮುಖ್ಯವೇ?