Monday, 25th November 2024

ಆರಂಭವಾದ ಅಂತರ್ಯುದ್ಧ

ಸಂತೋಷಕುಮಾರ ಮೆಹೆಂದಳೆ

ಮಾರಣ ಹೋಮ- ಅನ್‌ಟೋಲ್ಡ್ ಸ್ಟೋರಿ ಆಫ್ ಕಾಶ್ಮೀರ

ಲಿಬರೇಷನ್ ಫ್ರಂಟ್‌ನ ಮೊದಲ ಆಪರೇಶನ್ ಎಂದರೆ ಮೊದಲು ಹಿಂದೂಗಳನ್ನೂ ಒಕ್ಕಲೆಬ್ಬಿಬೇಕಾಗಿತ್ತು. ಅದಕ್ಕಾಗಿ ಆಯ್ದು ಕೊಂಡದ್ದೇ ಕಾಶ್ಮೀರ್ ಹತ್ಯಾಕಾಂಡಗಳ ರೂಪರೇಷೆ. ಹಿಂದೂ ಪಂಡಿತರ ವಿನಃ ಕಾಶ್ಮೀರ ದಲ್ಲಿ ಬೇರೆ ಇರಲೇ ಇಲ್ಲ. ಅಳಿದುಳಿದ ಸಿಖ್ಖರು, ಪಾರ್ಸಿಗಳು, ಬನಿಯಾಗಳು, ಯಾದ ವರು, ಬಾಕಿ ವ್ಯಾಪಾರಕ್ಕೆಂದು ಬಂದ ಮಲೆಯಾಳಿಗಳು, ಅಲ್ಲೊಬ್ಬ ಇಲ್ಲೊಬ್ಬ ಬಂಗಾಲಿ ಹೀಗೆ ಉಳಿದವೆಲ್ಲ ಲೆಕ್ಕಕ್ಕಿಲ್ಲದ ಜನಸಂಖ್ಯೆ.

ಮುಖ್ಯ ಇದ್ದಿದ್ದೇ ಈ ಹಿಂದೂ ಕಾಶ್ಮೀರಿ ಪಂಡಿತರು. ಅದರಲ್ಲಿ ತಲೆತಲಾಂತರದಿಂದ ಬಂದ ಅದ್ವಿತೀಯ ಕಲಾವಿದರು, ಕೋವಿದರು, ಪ್ರಕಾಂಡ ತತ್ವಜ್ಞಾನಿಗಳು, ತರ್ಕಶಾಸ ಪರಿಣಿತರು, ಕಲೆ, ಶಾಸ, ಸಂಸ್ಕೃತಿ, ಸಂಗೀತ ಸೇರಿದಂತೆ ಎಲ್ಲ ನಿಟ್ಟಿನಲ್ಲೂ ಜಾಗತಿಕವಾಗಿ ಹೆಸರು ಮಾಡಿದ್ದ ಜನಾಂಗ ಅದು. ಇವರನ್ನೆಲ್ಲ ಒಮ್ಮೆ ನುಂಗಿ ನೀರು ಕುಡಿದರೆ ನಂತರ ಕಾಶ್ಮೀರ ಈಚೆಗೆ ಬರುತ್ತದೆ. ಅದು ಬೇರೆಯಾಗುತ್ತಿದ್ದಂತೆ ಅದನ್ನು ಪಾಕಿಸ್ತಾನಕ್ಕೆ ಸೇರಿ ಕೊಳ್ಳುವ ನಿರ್ಣಯವನ್ನು ಸ್ವತಃ ಕಾಶ್ಮೀರ ತೆಗೆದುಕೊಳ್ಳುತ್ತದೆ. ಕಾರಣ ಹೇಗಿದ್ದರೂ ಜನಮತಗಣನೆ ಸಧ್ಯಕ್ಕೆ ತಮ್ಮ ಕಡೆಗಿದೆ. ಶ್ರೀನಗರವನ್ನು ಮೊದಲು ತೆಕ್ಕೆಗೆ ತೆಗೆದುಕೊಳ್ಳು ವುದು.

ಹಾಗೆ ನಿರ್ಣಯಿಸಿದ ನಂತರ ಭಾರತ ಮತ್ತೊಮ್ಮೆ ತುಂಡಾಗುತ್ತದೆ. ಅಲ್ಲಿಗೆ ಮುಕುಟ ಇಲ್ಲದ ಹಿಂದೂಸ್ತಾನವನ್ನು ನಂತರದಲ್ಲಿ ಮೂಲೆಗೆ ಒತ್ತುವುದು ಎಷ್ಟರ ಮಾತು ಅದರ ಮೊದಲ ಭಾಗವೇ ಹಿಂದೂ ಕಶ್ಮೀರಿ ಪಂಡಿತರ ಮೇಲಿನ ಜನಾಂಗೀಯ ದಮನಕಾರಿ ದಾಳಿ ಮತ್ತು ಕೈಗೆ ಸಿಕ್ಕ ಹಿಂದೂ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಸಿಕ್ಕಸಿಕ್ಕಲ್ಲಿ ಹೆಂಗಸರನ್ನು ಅತ್ಯಾಚಾರದ ಸೀರಿಸು ಆರಂಭವಾಗಿದ್ದು. ಇದೆಲ್ಲ ಸುಮ್ಮನೆ ನಡೆಯಲಿಲ್ಲ. ಮೊದಮೊದಲಿಗೆ ಅತ್ಯಂತ ವ್ಯವಸ್ಥಿತವಾಗಿ ಪ್ರತಿ ದಿನ, ಇಷ್ಟಿಷ್ಟೆ ಮೂಲೆ ಮೂಲೆಯಲ್ಲಿ ತಮ್ಮ ಜನರನ್ನು ಒಗ್ಗೂಡಿಸಿದ ಮತಾಂಧರು ಅಲ್ಲಲ್ಲಿ ಬಲ ಪ್ರದರ್ಶನದ ಗಲಾಟೆಗಳನ್ನು ಬಡಿದಾಟಗಳನ್ನು ಮಾಡಿದರು.

ಒಂದಿಬ್ಬರನ್ನು ಭೀಕರವಾಗಿ ಥಳಿಸಿಯೂ ಬಿಟ್ಟರು. ಗುಂಪಾಗಿ ಎರಗಿ ದೌರ್ಜನ್ಯಗಳನ್ನೂ ಮಾಡಿದರು. ಆದರೆ ಪಾಕ್‌ನ ಅರ್ಜೆನ್ಸಿನೇ ಬೇರೆ ಇತ್ತು. ಅದು ತೀವ್ರವಾಗಿ ಫಲಿತಾಂಶಕ್ಕಾಗಿ ಕಾಯುತ್ತಿತ್ತು. ಅದರ ಆಲೋಚನೆಯ ವೇಗ ಇಲ್ಲಿ ದಕ್ಕುತ್ತಿರಲಿಲ್ಲ. ಆಗ ಹುಟ್ಟಿದ್ದೇ ಜನಾಂಗೀಯ ದಾಳಿ. ಏನೂ ಮಾಡಿದರೂ ನಿರೀಕ್ಷಿಸಿದ ಫಲಿತಾಂಶ ಬರದಿದ್ದಾಗ, ಗಂಡಸರನ್ನು ಕೊಂದರೆ ಉಪಯೋಗವಾಗುತ್ತಿಲ್ಲ, ಸೋ ಮತಾಂಧರು ನೇರವಾಗಿ ಮೊದಲು ಹಿಂದೂ ಹೆಂಗಸರ ಎದೆಗೇ ಕೈಯಿಡುವ ಯೋಜನೆ ರೂಪಿಸಿ ದರು ನೋಡಿ, ಕಣಿವೆಯ ಕಲರ್ರೆ ಬದಲಾಗಿತ್ತು.

ಇದಲ್ಲದರ ಹಿಂದೆ ದಶಕಗಳ ಕಾಲದಿಂದಲೂ ಸ್ಥಳೀಯ ಕಾಶ್ಮೀರಿಗಳಲ್ಲಿ ಮಡುಗಟ್ಟಿಸಲಾಗುತ್ತಿದ್ದ ಉದ್ದೇಶ ಪೂರ್ವಕ ಪ್ರತ್ಯೇಕತಾ ವಾದ ಮತ್ತು ಇತಿಹಾಸ ನಾವು ಅರಿಯದೆ ಹೋದರೆ, ಬಹುಶಃ ಪಂಡಿತರು ಬಲಿಯಾದ ಹಿಂದಿನ ಮತಾಂಧಂತೆ ಮತ್ತು ಪಟ್ಟಿರ ಬಹುದಾದ ಹಿಂಸೆಯ ರೌರವತೆ ನಿಮಗೆ ಅರಿವಾಗಲಿಕ್ಕಿಲ್ಲ. ಈ ಎಲ್ಲ ಗೋಜಲುಗಳನ್ನು ಪಾಕಿಸ್ತಾನ ನಿರಂತರವಾಗಿ ಇಲ್ಲಿ ಸೃಷ್ಟಿಸುವ ಹೊತ್ತಿಗಾಗಲೇ, ಅಪಘನ್ ಸರಹದ್ದಿನಿಂದ ಮುಜಾಹಿದ್ದಿನ್, ತಾಲಿಬಾನ್ ಹೆಸರಿನ ಉಗ್ರರು ಬರುವ ಸಮಯಕ್ಕೆ ಕಾಶ್ಮೀರಿ ಸ್ಥಳೀಯ ಮತಾಂಧರಲ್ಲಿ ತಮ್ಮದೇ ನಂಬಿಕೆ ಮತ್ತು ಉದ್ವೇಗಗಳು ಬೇರೂರಿ ಬಿಟ್ಟಿದ್ದವು.

ಮಾನಸಿಕವಾಗಿ ಹಿಂದೂಸ್ತಾನದ ಭಾಗವಾಗಲೇ ಒಲ್ಲೆ ಎನ್ನುತ್ತಿದ್ದ ಮತ್ಸರ ರೂಪಿತನ ಮೈ ದಳೆದದ್ದು 1986ರ ಕಾಶ್ಮೀರ ದಂಗೆ. ಆಗ ಇದಕ್ಕೆ ಕಾರಣವಾದದ್ದು ಮತ್ತು ಹೊಣೆಗಾರಿಕೆ ಹೊತ್ತಿದ್ದು ‘ಜಮಾತ್ ಈ ಇಸ್ಲಾಮಿ’ ಮತ್ತು ಅದರ ಜತೆ ಸೇರ್ಪಡೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ‘ಜೆ.ಕೆ.ಎಲ್.ಎಫ್.’ ಇವೆರಡನ್ನೂ ತಯಾರು ಮಾಡಿ ಅಜಾದ್ ಕಾಶ್ಮೀರ್ ಬೀಜ ಬಿತ್ತಿದ್ದು ಪಾಕಿಸ್ತಾನದ ಐ.ಎಸ್ .ಐ. ಅದರ ಮೊದಲ ಹಂತವಾಗಿ ಕಾಶ್ಮೀರಕೊಳ್ಳದಲ್ಲಿ ವ್ಯಾಪಕವಾಗಿದ್ದ ಸೂಫಿ ಅನುಸರಣೆಯ ಬದಲಾಗಿ ಹಬ್ಬಿಸ ಲಾಗಿದ್ದು ವಹಾಬಿಸಂ.

ಇದಕ್ಕೆ ಪೂರಕವಾಗಿ ಸರಕಾರವೂ ನಿಮ್ಮೊಂದಿಗೆ ಇದೆ ಎನ್ನುವುದನ್ನು ಸಾಬೀತು ಪಡಿಸಲು 1980ರ ಸುಮಾರಿಗೆ  ಶ್ಮೀgಕೊಳ್ಳದ ಸುಮಾರು 300ಕ್ಕೂ ಹೆಚ್ಚು ಸ್ಥಳಗಳ ಮೂಲ ಹೆಸರನ್ನು ಧರ್ಮಕ್ಕನುಗುಣವಾಗಿ ಬದಲಿಸಿಬಿಟ್ಟ ಆಗಿನ ಕಾಶ್ಮೀರ ಮುಖ್ಯಮಂತ್ರಿ ಶೇಖ್ ಅಬ್ದುಲ್ಲಾ. ಇದು ಕಾಶ್ಮೀರ್ ಹತ್ಯಕಾಂಡ ಅಥವಾ ದಳ್ಳುರಿಗೆ ತಿರುಗಿಸಬಹುದಾ ಎನ್ನುವ ಸಾಧ್ಯತೆಗೆ ಸಿಕ್ಕ ಅತಿ ದೊಡ್ಡ ಬ್ರೆಕ್. ಆಗಲೇ ದಿಲ್ಲಿ ಇದನ್ನೆಲ್ಲ ಗಮನಿಸಬೇಕಿತ್ತು. ಆದರೆ ಮಾಧ್ಯಮ ಮತ್ತು ಆಡಳಿತಗಳು ಅದ್ಯಾವ ಮಟ್ಟಿಗೆ ತುಷ್ಟೀಕರಣ ಮಾಡಿದು ವೆಂದರೆ ಇದಾವುದೂ ದಿಲ್ಲಿ ಸಾಯಲಿ, ಮೊದಲಿಗೆ ಪಕ್ಕದಲ್ಲೇ ಇದ್ದ ಇದೆಲ್ಲ ಜಮ್ಮುವಿಗೇ ಅರಿವಾಗಲಿಲ್ಲ.

ಇಲ್ಲಿ ಕಾಶ್ಮೀರ್ ದಲ್ಲಿದ್ದ ಹಿಂದೂಗಳೆಲ್ಲ ಭಾರತೀಯ ಮಿಲಿಟರಿ ಪಡೆಗೆ ಖಬರಿಗಳಾಗಿದ್ದಾರೆ, ಇನ್ ಫಾರ್ಮರ್ ಆಗಿ ಕೆಲಸ
ಮಾಡುತ್ತಾರೆ ಎಂದು ಬಿಂಬಿಸಿ ಬಿಡುವುದರ ಮೂಲಕ ಸ್ಥಳೀಯ ಮುಸ್ಲಿಂರನ್ನು ಮೊದಲು ವ್ಯವಸ್ಥಿತವಾಗಿ ಎತ್ತಿ ನಿಂತಿದ್ದು ಐ.ಎಸ್.ಐ. ಕಾರಣ 1980 ಕ್ಕೂ ಮೊದಲಿನ ಎರಡು ದೊಡ್ಡ ಬಹಿರಂಗ ವಿಫಲಗಳಿಂದ ಪಾಕಿಸ್ತಾನ ಈ ಬಾರಿ ನೇರವಾಗಿ ತಡುವಿ ಕೊಳ್ಳಲಾಗದೆ ಧರ್ಮಯುದ್ಧದ ಹೆಸರಲ್ಲಿ ಉಗ್ರರನ್ನು ತಯಾರಿಸಿ ಮುಂದಕ್ಕೆ ಬಿಟ್ಟಿತ್ತು.

ಅದೇ ಸಾವಿರ ವರ್ಷಗಳ ಧರ್ಮಯುದ್ಧ. vOs|;ಗಜವಾಹಿ ಹಿಂದ್ vOs|; ಇತ್ತ ಭಾರತದ ಪಂಜಾಬ್‌ದಲ್ಲಿ ನಡೆದ ಸಿಖ್‌ದಂಗೆ  ಮತ್ತು ಖಲಿಸ್ಥಾನ ಮೂವ್‌ಮೆಂಟುಗಳು ಜೆಹಾದಿಗಳಿಗೆ ದೊಡ್ಡಮಟ್ಟದ ವಿಶ್ವಾಸವನ್ನು ನೀಡಿದ್ದು ಸುಳ್ಳಲ್ಲ. ಕಾರಣ ಒಳಗೊಳಗೆ ಯಾವ ಬೆಂಬಲವೂ ಇಲ್ಲದ ಖಲಿಸ್ಥಾನಿಗಳೇ ಈ ಮಟ್ಟಿಗಿನ ಗೆಲುವು ಕಾಣುತ್ತಾರೆಂದರೆ, ಜಾಗತಿಕವಾಗಿ ಅತಿದೊಡ್ಡ ನೆಟ್‌ವರ್ಕ್
ಹೊಂದಿರುವ ಮೂಲಭೂತವಾದಕ್ಕೆ ಕಾಶ್ಮೀರ್ ಸ್ವತಂತ್ರಗೊಳಿಸುವುದೇನು ದೊಡ್ಡದಾ, ತಗಿ ಅತ್ಲಾಗೆ ಎಂದು ಎದ್ದು ನಿಂತು ಬಿಟ್ಟರು ನೋಡಿ.

ಕಶ್ಮೀರ ಮುಖ್ಯಮಂತ್ರಿಯಾಗಿ ಗದ್ದುಗೆ ಹಿಡಿದಿದ್ದ ಫಾರೂಕ್ ಅಬ್ದುಲ್ 1982ರಲ್ಲಿ ಸ್ವತಃ ಹೋಗಿ ಬಿಂದ್ರನ್ ವಾಲೆಯನ್ನೇ ನೇರವಾಗಿ ಭೇಟಿ ಮಾಡಿ ಮಾತುಕತೆಯಾಡಿ ಬಂದುಬಿಟ್ಟ. ಪಾಕಿಸ್ತಾನಕ್ಕೂ ಮತ್ತು ಕಾಶ್ಮೀರವನ್ನು ಭಾರತದ ಹಿಡಿತದಾಚೆಗೆ ನಿಂತು ಆಳಬೇಕೆನ್ನುವ ರಾಜಕೀಯ ದುರಾಸೆಯ ಮನಸ್ಥಿತಿಗಳಿಗೂ ಬೇಕಿದ್ದುದು ಅದೇ ಆಗಿತ್ತು. ಅತ್ಯಂತ ತೀವ್ರವಾಗಿ ಭಾರತೀಯ ವಿರೋಧಿ ಮನಸ್ಥಿತಿ ಬೆಳೆಸುವಲ್ಲಿ ಇವೆರಡೂ ಸಫಲವಾಗಿಬಿಟ್ಟವು. ಇದೇ ಹೊತ್ತಿಗೆ ಎಲ್ಲರನ್ನೂ ಕಶ್ಮೀರ ನೆಲದ ವಿರೋಧಿಗಳೆಂದೆ ಬಿಂಬಿಸಲು ಮಕ್ಬೂಲ್ ಭಟ್‌ನನ್ನು ನೇಣಿಗೇರಿಸಲು ತೀರ್ಪು ನೀಡಿದ ನ್ಯಾಯಧೀಶರನ್ನು ವಿರೋಧಿಸುವ ಯೋಜನೆಯ ಮೂಲಕ ದೊಡ್ಡ ಪ್ರಮಾಣದಲ್ಲಿ ಪ್ರಚಾರಕ್ಕೆ ಬಳಸಿಕೊಳ್ಳಲಾಯಿತು.

ಜೆ.ಕೆ.ಎಲ್.ಎಫ್. ಹೋದಲೆಲ್ಲ ತನ್ನ ನಾಯಕನನ್ನು ನೇಣಿಗೆ ಹೇಗೆ ಸಿಕ್ಕಿಸಲಾಗಿದೆ, ನೋಡಿದಿರಾ ಹೇಗೆ ‘ಅವರವರದ್ದೇ ನ್ಯಾಯ
ವ್ಯವಸ್ಥೆಯಲ್ಲಿ ನಮ್ಮ ಜನರನ್ನು ಬಡಿದು ಹಾಕಲಾಗುತ್ತಿದೆ ಎಂಬ ಚಿತಾವಣೆ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿ ಬಿಟ್ಟಿತು. ಕಾರಣ ಮಕ್ಬೂಲ್ ಭಟ್ ಸ್ಥಳೀಯವಾಗಿ ಪ್ರಬಲ ಹಿಡಿತದವನಾಗಿದ್ದ ಜೊತೆಗೆ ಜೆ.ಕೆ. ಲಿಬರೇಷನ್ ಫ್ರಂಟ್‌ನವನು.
ಹಾಗಾಗಿ ಭಟ್‌ನ ಮೇಲಿದ್ದ ಪೋಲಿಸ್ ಅಧಿಕಾರಿಯನ್ನು ಕೊಂದ ಮತ್ತು ಉಗ್ರವಾದ ಬಗ್ಗೆ ನೀಡಿದ ನ್ಯಾಯಾಲಯದ ತೀರ್ಪನ್ನು ಗೌರವಿಸದೆ ಅದನ್ನು ನೀಡಿದ ನ್ಯಾಯಮೂರ್ತಿಗಳ ಮೇಲೆ ತಿರುಗಿಸುವುದರ ಮೂಲಕ ದೊಡ್ಡ ಬುನಾದಿ ಎಬ್ಬಿಸಿಕೊಂಡಿತ್ತು ಫ್ರಂಟ್. ದೊಡ್ಡ ದುರಂತ ಎಂದರೆ ಆರಂಭದಲ್ಲೆ ಇದನ್ನೆಲ್ಲ ಚಿವುಟಬಹುದಾಗಿದ್ದ, ಇದೆಲ್ಲದಕ್ಕೆ ತಡೆ ಹಾಕಬಹುದಾಗಿದ್ದ ದಿಲ್ಲಿ ಕ್ಯಾರೆ ಅನ್ನದೆ ನೋಡುತ್ತಿತ್ತು.

ಸಾಂದರ್ಭಿಕವಾಗಿ 1983ರ ಜುಲೈನಲ್ಲಿ ಖಲಿಸ್ತಾನಿ ಬಂಡುಕೋರರಿಗೆ ಜಮ್ಮು ಮತ್ತು ಶ್ರೀನಗರ ಸರಹದ್ದಿನಲ್ಲೆ ತರಬೇತು ನಡೆಯು ತ್ತಿರುವ ಸುದ್ದಿ ಬಿತ್ತು ನೋಡಿ. ಆಗ ದಿಲ್ಲಿ ಹೌಹಾರಿತ್ತು. ಕಾರಣ ಇದನ್ನು ಮೊದಲು ಹೊರಗೆ ಹಾಕಿದ್ದು ವಿದೇಶಿ ಮಾಧ್ಯಮಗಳು. ದೊಡ್ಡ ಮಟ್ಟದ ಮುಜುಗರ ಅನುಭವಿಸಿದ ದಿಲ್ಲಿ ಅದಕ್ಕಾಗಿ ಫಾರೂಕ್ ಅಬ್ದುಲ್ಲನ ತಲೆ ದಂಡವನ್ನು ಕೇಳಿತು. (ಇದು ಕ್ಲಾಸಿ ಫೈಡ್ ಇನ್ಫಾರ್ಮೇಶನ್ ಎಂದು ಬಹಿರಂಗವಾಗಿಲ್ಲದಿದ್ದರೂ ಹಲವು  ಮಾಧ್ಯಮಗಳು ಇದನ್ನು ಜರಡಿಯಾಡಿದವು) ಫಾರೂಕ್ ಅಬ್ದುಲ್ ಅಜಾದ್ ಕಾಶ್ಮೀರ ನೆಲೆಗಳಿಗೂ ಭೇಟಿ ಕೊಟ್ಟಿದ್ದನಂತೆ. ಅವನ ಜತೆಗಾರನಾಗಿದ್ದ ಹಶೀಮ್ ಖುರೇಶಿ ಮತ್ತು ಜೆ.ಕೆ.ಎಲ್.ಎಫ್.ನೊಂದಿಗೆ ಬಹಿರಂಗವಾಗಿ ಮೇಜು ಹಂಚಿಕೊಳ್ಳುತ್ತಿದ್ದ.

ದಿಲ್ಲಿಗೆ ರಾಜಕಾರಣದಲ್ಲಿ ಇದೆಲ್ಲ ಬೇಕಿರಲಿಲ್ಲ.ತನ್ನದೇ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಾ, ಅವನ ಸಹೋದರ ಸಂಬಂಧಿ ಗುಲಾಮ್ ಮಹಮ್ಮದ್ ಶಾ ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುವಂತೆ ಮಾಡಿತ್ತು. ಅಬ್ದುಲ್ಲ ಹೆಸರಿಲ್ಲದಂತಾಗಿದ್ದ. ಆದರೆ ಅಧಿಕಾರಕ್ಕೆ ಬಂದ ದಿಲ್ಲಿ ಬೆಂಬಲಿತ ಹೊಸಮುಖ್ಯ ಮಂತ್ರಿಯೂ ಮತ್ತದೆ ಧರ್ಮಾಧಾರಿತ ರಾಜಕಾರಣದ ಆಟವಾಡುತ್ತಾ ಪ್ರತ್ಯೇಕತಾವಾದಿಗಳಿಗೂ ಅಧಿಕಾರ ಹಂಚಿದ.

ಸ್ಥಳೀಯ ಧರ್ಮದ ಅಗತ್ಯತೆಗಳಿಗೆ ಬಹಿರಂಗವಾಗೇ ಬೆಂಬಲಿಸಿದ. ಮೌಲ್ವಿ ಇಫ್ತಿಕಾರ್ ಹುಸೇನ್ ಆನ್ಸಾರಿ, ಮಹಮ್ಮದ್ ಶಫಿ ಖುರೇಶಿ ಹಾಗು ಮಹಿನುದ್ದಿನ್ ಸಲಾಟಿಯಂತಹ ಕಾಶ್ಮೀರಿ ಪ್ರತ್ಯೇಕತಾವಾದಿಗಳು ನೇರವಾಗಿ ಅಧಿಕಾರದಲ್ಲಿ ಸೇರಿದರು. ಅವರನ್ನು ಸಂತೃಪ್ತಗೊಳಿಸಲು ಮತ್ತು ಕಶ್ಮೀರ ಕಣಿವೆ ಮೊದಲ ಬಾರಿಗೆ ಹಿಂದೂ ದೇವಸ್ಥಾನಗಳಿಗೆ ಬಹಿರಂಗವಾಗೇ ಕೈಯಿಡಲಾಗಿತ್ತು. ಇನ್ನು ಮೇಲೆ ದೇವಸ್ಥಾನದೊಳಗೆ ನಮಾಜ್ ಆರಂಭ ವಾಗಲಿತ್ತು. ಕೊತಕೊತನೆ ಕುದಿದು ಹೋಗಿತ್ತು ಕಾಶ್ಮೀರ ಕಣಿವೆ.

…ಮುಂದುವರೆಯುವುದು