Wednesday, 23rd October 2024

#Budget2020 ಹೈಲೈಟ್ಸ್‌

2020-21ರ ಕೇಂದ್ರ ಮುಂಗಡ ಪತ್ರವನ್ನು ಮುಂದಿಟ್ಟ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, “ಮೇ 2019ರಲ್ಲಿ ಭಾರೀ ಬಹುಮತ ಪಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಸರ್ಕಾರ ರಚನೆ ಮಾಡಿದ್ದಾರೆ. ಭಾರತದ ಜನತೆ ಅವರಿಗೆ ಒಮ್ಮತದಿಂದ ಜನಾದೇಶವನ್ನು ನೀಡಿದ್ದಾರೆ. ಇದು ಕೇವಲ ರಾಜಕೀಯ ಸ್ಥಿರತೆಗಲ್ಲ, ಬದಲಾಗಿ ನಮ್ಮ ಆರ್ಥಿಕತೆ ನೀತಿಯ ಮೇಲೆ ಜನ ಇಟ್ಟ ನಂಬಿಕೆಯಾಗಿದೆ. ಈ ಬಜೆಟ್‌ ಜನರ ಆದಾಯವನ್ನು ವೃದ್ಧಿಸಿ, ಖರೀದಿಯ ಶಕ್ತಿಯನ್ನು ವರ್ಧಿಸಲೆಂದು ತಂದದ್ದಾಗಿದೆ,” ಎಂದಿದ್ದಾರೆ.

ಬಜೆಟ್‌ನ ಹೈಲೈಟ್ಸ್‌ ಇಂತಿವೆ :

ತೆರಿಗೆ

  • ಹೊಸ ತೆರಿಗೆ ನೀತಿಯನ್ನು ಘೋಷಿಸಲಾಗಿದೆ. ವಿಶೇಷ ವಿನಾಯಿತಿಗಳೊಂದಿಗೆ ಹಳೆಯ ತೆರಿಗೆ ಸ್ಕೀಂಗಳಲ್ಲೇ ಇರುವವರು, ಹಳೆಯ ದರಗಳನ್ನೇ ಪಾವತಿ ಮಾಡಬಹುದಾಗಿದೆ.
  • ಇದೇ ವೇಳೆ, 70ಕ್ಕೂ ಹೆಚ್ಚು ವಿನಾಯಿತಿಗಳನ್ನು ತೆರವುಗೊಳಿಸಲಾಗಿದೆ. ಕಂಪನಿಗಳು ಇನ್ನು ಮುಂದೆ ಲಾಭಾಂಶ ವಿತರಣೆ ತೆರಿಗೆ (DDT) ಪಾವತಿ ಮಾಡಬೇಕಾದ ಅಗತ್ಯವಿಲ್ಲ.
  • GSTಯಲ್ಲಿರುವ ಜೊಳ್ಳುಗಳನ್ನು ಕಿತ್ತೊಗೆಯಲು ಆಧಾರ್‌ ಪರಿಶೀಲನೆಯನ್ನು ಪರಿಚಯಿಸಲಾಗುವುದು. ಇದೇ ವೇಳೆ ಆಧಾರ್‌‌ ಅವಲಂಬಿತ ತ್ವರಿತ PAN ವಿತರಣೆಯನ್ನೂ ಘೋಷಿಸಲಾಗಿದೆ.
ಆರ್ಥಿಕತೆ ಹಾಗೂ ಹಣಕಾಸು

  • ಬ್ಯಾಂಕ್‌ ಠೇವಣಿಗಳ ಮೇಲೆ ಇದ್ದ ವಿಮಾ ಕವಚವನ್ನು, ಪ್ರತಿಯೊಬ್ಬ ಠೇವಣಿದಾರಿನಿಗೂ 1 ಲಕ್ಷ ರೂಗಳಿಂದ 5 ಲಕ್ಷರೂಗಳಿಗೆ ಏರಿಸಲಾಗಿದೆ.
  • ಸಿವಿಲ್ ಪ್ರಮಾದಗಳನ್ನು ಕ್ರಿಮಿನಲ್‌ ಮೊಕದ್ದಮೆಗಳ ವ್ಯಾಪ್ತಿಯಿಂದ ಹೊರಗಿಡಲು ಸರ್ಕಾರ ಚಿಂತಿಸಿದೆ.
  • LICಯಲ್ಲಿ (ವಿಮಾ ಸಂಸ್ಥೆ) ತನ್ನ ಪಾಲನ್ನು ಪ್ರಾರಂಭಿಕ ಸಾರ್ವಜನಿಕ ಆಫರಿಂಗ್‌ (IPO) ಮೂಲಕ ಮಾರಾಟ ಮಾಡಲು ನಿರ್ಧರಿಸಿದೆ.
ಕೃಷಿ

  • ₹2.83 ಲಕ್ಷ ಕೋಟಿಗಳ ಬಜೆಟ್‌ಅನ್ನು ಪ್ರಥಮಿಕ ಕ್ಷೇತ್ರ ಹಾಗೂ ಸಂಬಂಧಿತ ಚಟುವಟಿಕೆಗಳಿಗೆಂದು ಮೀಸಲಿಡಲಾಗಿದೆ.
  • 2022ರ ವೇಳಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಭರದಲ್ಲಿ, 2020-21ರ ವಿತ್ತೀಯ ವರ್ಷದಲ್ಲಿ 15 ಲಕ್ಷ ಕೋಟಿ ರೂಗಳಷ್ಟು ಕೃಷಿ ಸಾಲ ವಿತರಣೆ ಮಾಡುವ ಗುರಿ.
  • ಬರಪೀಡಿತ 100 ಜಿಲ್ಲೆಗಳಿಗೆ ಸಮಗ್ರ ಯೋಜನೆ.
  • ಸೋಲಾರ್‌ ಪಂಪ್‌ಗಳನ್ನು ಸ್ಥಾಪಿಸಲು 20 ಲಕ್ಷ ರೈತರಿಗೆ ನೆರವು. ಹೆಚ್ಚುವರಿ 15 ಲಕ್ಷ ರೈತರಿಗೆ ತಂತಮ್ಮ ಗ್ರಿಡ್‌ಗಳನ್ನು ಸೋಲಾರೀಕರಣಗೊಳಿಸಲು ಸಹಾಯ.
  • ಮಹಿಳಾ ಸ್ವಸಹಾಯ ಗುಂಪುಗಳಿಂದ ಗ್ರಾಮಗಳ ಮಟ್ಟದಲ್ಲಿ ದಾಸ್ತಾನು ಸಂಗ್ರಹ ಸೌಲಭ್ಯ ಕಲ್ಪಿಸುವ ಯೋಜನೆ.
  • ಬೇಗ ಹಾಳಾಗುವಂಥ ಕೃಷಿ ಉತ್ಪನ್ನಗಳ ತ್ವರಿತ ಸಾಗಾಟಕ್ಕಾಗಿ ರೈಲುಗಳಲ್ಲಿ ವಿಶೇಷ ’ಕಿಸಾನ್ ಕೋಚ್‌’ ಹಾಗೂ ವಿಮಾನಯಾನ ಕ್ಷೇತ್ರದಲ್ಲಿ ಕೃಷಿ ಉಡಾನ್‌ ಅಭಿಯಾನಕ್ಕೆ ಚಾಲನೆ.
ಆರೋಗ್ಯ ಮತ್ತು ನೃರ್ಮಲ್ಯ

  • ಆರೋಗ್ಯ ಕ್ಷೇತ್ರಕ್ಕೆ 69,000 ಕೋಟಿ ರೂಗಳ ಮಂಜೂರು.
  • 12,300 ಕೋಟಿ ರೂಗಳು ಸ್ವಚ್ಛ ಭಾರತಕ್ಕೆ ಮೀಸಲು.
  • 2ನೇ ಹಾಗೂ 3ನೇ ಸ್ಥರಗಳ ನಗರಗಳಲ್ಲಿ ಸಾರ್ವಜನಿಕ-ಖಾಸಗಿ-ಪಾಲುದಾರಿಕೆಯಲ್ಲಿ ಆಸ್ಪತ್ರೆಗಳ ನಿರ್ಮಾಣ.
  • ಜನೌಷಧಿ ಯೋಜನೆಯನ್ನು ವಿಸ್ತರಿಸಿ, 2025ರ ಒಳಗೆ ಎಲ್ಲ ಆಸ್ಪತ್ರೆಗಳನ್ನೂ ಆಯುಷ್ಮಾನ್ ಭಾರತ್‌ ಯೋಜನೆಯಡಿ ತರುವುದು.
ಶಿಕ್ಷಣ

  • ಶಿಕ್ಷಣ ಕ್ಷೇತ್ರಕ್ಕೆ 99,300 ಕೋಟಿ ಹಾಗೂ ಕೌಶಲ್ಯಾಭಿವೃದ್ಧಿಗೆ 3,000 ಕೋಟಿ ರೂಗಳು.
  • ಯುವ ಇಂಜಿನಿಯರ್‌ಗಳಿಗೆ ವರ್ಷದ ಮಟ್ಟಿಗೆ ಸ್ಥಳೀಯ ಪೌರಾಡಳಿತಗಳಿಂದ ಇಂಟರ್ನ್‌ಶಿಪ್‌.
  • NIRF ಶ್ರೇಯಾಂಕದಲ್ಲಿ ಅಗ್ರ 100ರೊಳಗೆ ಇರುವ ಸಂಸ್ಥೆಗಳಿಂದ ಡಿಗ್ರಿ ಮಟ್ಟದವರೆಗೂ ಆನ್ಲೈನ್‌ ಶಿಕ್ಷಣ ಒದಗಿಸುವ ಮೂಲಕ, ಬಡ ವಿದ್ಯಾರ್ಥಿಗಳಿಗೆ ಅನುಕೂಲ.
  • ರಾಷ್ಟ್ರೀಯ ಪೊಲೀಸ್‌ ವಿವಿ ಹಾಗೂ ರಾಷ್ಟ್ರೀಯ ವಿಧಿವಿಜ್ಞಾನ ವಿವಿ ಸ್ಥಾಪನೆ.
  • ‘Study in India’ ಧ್ಯೇಯೋದ್ದೇಶಕ್ಕೆ ಚಾಲನೆ ನೀಡಲು ಏಷ್ಯಾ ಹಾಗೂ ಆಫ್ರಿಕಾ ವಿದ್ಯಾರ್ಥಿಗಳಿಗೆ IND SAT ಪರೀಕ್ಷೆ ಆರಂಭ.
ಮೂಲಸೌಕರ್ಯ

  • 2021ರ ವೇಳಗೆ ಸಾರಿಗೆ ಮೂಲ ಸೌಕರ್ಯಕ್ಕೆ 1.7 ಲಕ್ಷ ಕೋಟಿ ರೂಗಳನ್ನು ಕೊಡಮಾಡಲು ಬಜೆಟ್‌ನಲ್ಲಿ ಉದ್ದೇಶಿಸಲಾಗಿದೆ.
  • ಶೀಘ್ರದಲ್ಲೇ ರಾಷ್ಟ್ರೀಯ ಲಾಜಿಸ್ಟಿಕ್ಸ್‌ ನೀತಿಯ ಘೋಷಣೆ.
  • ಚೆನ್ನೈ ಬೆಂಗಳೂರು ಎಕ್ಸ್‌ಪ್ರೆಸ್‌ವೇಗೆ ಚಾಲನೆ.
  • 27,000 ಕಿಮೀ ನಷ್ಟು ರೈಲ್ವೇ ಮಾರ್ಗದ ವಿದ್ಯುದೀಕರಣದ ಗುರಿ. 2025ರ ವೇಳೆಗೆ ಭಾರತೀಯ ರೈಲ್ವೇಯ ಅಷ್ಟೂ ಜಾಲವನ್ನು ವಿದ್ಯುದೀಕರಣಗೊಳಿಸುವ ಗುರಿ ಇಟ್ಟಕೊಳ್ಳಲಾಗಿದೆ.
  • ಭಾರತೀಯ ರೈಲ್ವೇಯ ಹೆಚ್ಚಿನ ವಿದ್ಯುತ್‌ ಅಗತ್ಯತೆಗಳನ್ನು ಸೋಲಾರ್‌ ಇಂಧನದ ಮೂಲಕ ಪೂರೈಸುವ ಗುರಿ.
  • 2024ರ ವೇಳೆಗೆ ರಾಷ್ಟ್ರೀಯ ಹೆದ್ದಾರಿಗಳಿಂದ ಆದಾಯ ಬರುವಂತೆ ಮಾಡಲಿದೆ ಸರ್ಕಾರ.
  • UDAN ಯೋಜನೆಯಡಿ 100 ವಿಮಾನ ನಿಲ್ದಾಣಗಳ ಅಭಿವೃದ್ಧಿ