Friday, 22nd November 2024

ಪ್ರತಿ ಜಿಲ್ಲೆಯಲ್ಲಿ ಒಂದು ವೈದ್ಯಕೀಯ ಕಾಲೇಜು ಸ್ಥಾಪನೆ: ಮೋದಿ

ನವದೆಹಲಿ: ಮುಂದಿನ 10 ವರ್ಷಗಳಲ್ಲಿ ಹೊಸ ವೈದ್ಯರನ್ನು ದೇಶ ಹೊಂದಲಿದೆ ಎಂದ ಪ್ರಧಾನಿ ಮೋದಿ ಹೇಳಿದ್ದಾರೆ.

ಗುಜರಾತ್‌ನ ಭುಜ್ ಜಿಲ್ಲೆಯಲ್ಲಿರುವ ಕೆಕೆ ಪಟೇಲ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಶುಕ್ರವಾರ ಉದ್ಘಾಟನೆ ಮಾಡಿದರು.

ಬಳಿಕ ಮಾತನಾಡಿದ ಪ್ರಧಾನಿ ಮೋದಿ ಅವರು, ಕೇಂದ್ರ ಸರ್ಕಾರದ ಹೊಸ ನೀತಿಯ ಅನುಸಾರ ದೇಶದ ಪ್ರತಿಯೊಂದು ಜಿಲ್ಲೆಗಳಲ್ಲೂ ಕನಿಷ್ಟ ಒಂದು ವೈದ್ಯಕೀಯ ಕಾಲೇಜುಗಳ ಸ್ಥಾಪಿಸುವ ಗುರಿ ಹೊಂದಿದ್ದು, ವೈದ್ಯಕೀಯ ಶಿಕ್ಷಣ ಎಲ್ಲರಿಗೂ ದೊರೆಯಬೇಕು ಎಂಬ ಉದ್ದೇಶದಿಂದ ಈ ಪ್ರಯತ್ನಕ್ಕೆ ಮುಂದಾಗಿದೆ.

ಗುಜರಾತ್‌ ಎರಡು ದಶಕಗಳ ಹಿಂದೆ ಒಂಬತ್ತು ವೈದ್ಯಕೀಯ ಕಾಲೇಜುಗಳನ್ನು ಹೊಂದಿತ್ತು ಅದರಲ್ಲಿ ಕೇವಲ 1100 ಸೀಟುಗಳು ಮಾತ್ರ ಇದ್ದವು. ಆದರೆ ಕಳೆದ 20 ವರ್ಷಗಳಲ್ಲಿ ವೈದ್ಯಕೀಯ ಶಿಕ್ಷಣ ಕ್ಷೇತ್ರ ದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಪ್ರಸ್ತುತ ಗುಜರಾತ್‌ನಲ್ಲಿ 36ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜು ಗಳಿದ್ದು, ಪ್ರತಿವರ್ಷ 6000 ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ ಎಂದರು.

2001ರಲ್ಲಿ ಉಂಟಾಗಿದ್ದ ಭೀಕರ ಭೂಕಂಪನದ ವಿನಾಶದ ಕುರಿತು ಪ್ರಧಾನಿ ನೆನಪು ಮಾಡಿಕೊಂಡಿದ್ದು, ಆಗಿನ ಸ್ಥಿತಿಯನ್ನ ಎದುರಿಸಿ ಭುಜ್ ಮತ್ತು ಕಚ್‌ನ ಜನರು ತಮ್ಮ ಪರಿಶ್ರಮದಿಂದ ತಮ್ಮ ಪ್ರದೇಶವನ್ನ ಕಟ್ಟಿದ್ದಾರೆ ಎಂದು ಹೇಳಿದರು. ಭುಜ್ ನಲ್ಲಿ ಸ್ಥಾಪಿಸಿರುವ ವೈದ್ಯಕೀಯ ಆಸ್ಪತ್ರೆ ಜನರಿಗೆ ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲಿದೆ ಎಂದು ಒತ್ತಿ ಹೇಳಿದರು.