ಹುಬ್ಬಳ್ಳಿ ದಾಂದಲೆ ಪ್ರಕರಣ ನಡೆದಾಗಿನಿಂದ ರಾಜಕೀಯ ಮುಖಂಡರು ಒಂದಿಲ್ಲೊಂದು ಹೇಳಿಕೆ ನೀಡಲು ಪೈಪೋಟಿಗಿಳಿದಿದ್ದಾರೆ.
‘ಮುಸ್ಲಿಂ ಗೂಂಡಾಗಳಿಂದ ದಾಳಿ ನಡೆದಿದೆ’ ಎನ್ನುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೇಳಿಕೆಯಾಗಲೀ, ‘ಒಂದು ಸ್ಟೇಟಸ್ ಹಾಕಿದ್ದಕ್ಕೆ ಇಷ್ಟೊಂದು ಕೆರಳಬೇಕೇ’ ಎನ್ನುವ ಸಿ.ಟಿ. ರವಿ ಅವರ ಪ್ರಶ್ನೆಯಾಗಲೀ, ‘ಅಮಾಯಕರನ್ನು ಬಂಧಿಸಬೇಡಿ’ ಎನ್ನುವ ಕುಮಾರ ಸ್ವಾಮಿ ಹೇಳಿಕೆಯಾಗಲಿ ಸಮರ್ಥನೀಯವಲ್ಲ.
ಗಲಭೆಗೆ ಸಂಬಂಧಪಟ್ಟ ೮೦ಕ್ಕೂ ಹೆಚ್ಚು ಜನರನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದು, ಕೂಲಂಕಷವಾಗಿ ತನಿಖೆ ನಡೆಸು ತ್ತಿದ್ದಾರೆ. ಯಾರು ಅಮಾಯಕರು, ಯಾರು ಅಪರಾಧಿಗಳು ಎಂಬುದು ತನಿಖೆಯಿಂದಷ್ಟೇ ಹೊರಬರಬೇಕಿದೆ. ಇಂತಹ ಸಮಯದಲ್ಲಿ ರಾಜಕೀಯ ನಾಯಕರು ಯಾವುದೋ ಒಂದು ಸಮುದಾಯದ ಪರ ವಹಿಸಿ ಮಾತನಾಡುವುದರಿಂದ ತನಿಖೆಯ ದಾರಿ ತಪ್ಪುವ ಸಾಧ್ಯತೆ ಇದೆ. ಇಂತಹ ಪ್ರಕರಣಗಳನ್ನು ಪಕ್ಷಗಳು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಚಾಳಿಯನ್ನು ಬಿಡಬೇಕಿದೆ.
ಸೂಕ್ಷ್ಮ ಪರಿಸ್ಥಿತಿಯ ಲಾಭ ಪಡೆಯಲು ಹವಣಿಸುತ್ತಿರುವುದನ್ನು ನೋಡಿದರೆ ತಮ್ಮ ಹೊಣೆಗಾರಿಕೆಯನ್ನು ಮರೆತಂದಿದೆ. ಸರಕಾರದ ಭಾಗವಾದ ಜನಪ್ರತಿನಿಧಿಗಳ ಬದ್ಧತೆ ಇರಬೇಕಾದುದು ಸಂವಿಧಾನಕ್ಕೇ ಹೊರತು ಸಮುದಾಯಗಳಿಗಲ್ಲ ಎಂಬುದನ್ನು ಅರಿಯಬೇಕಿದೆ. ಪ್ರತಿಪಕ್ಷಗಳ ಮುಖಂಡರು ಕೂಡ ಸಂಯಮ ಕಾಯ್ದುಕೊಳ್ಳಬೇಕಾದ ಸನ್ನಿವೇಶ ಇದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೊಲೀಸರಿಗೆ ಈ ಪ್ರಕರಣದಲ್ಲಿ ಮುಕ್ತ ಸ್ವಾತಂತ್ರ್ಯ ಕೊಟ್ಟು ಸೂಕ್ತ ತನಿಖೆಗೆ ನಿರ್ದೇಶಿಸಿದ್ದಾರೆ.
ಆದರೆ ರಾಜಕೀಯ ಮುಖಂಡರ ಹೇಳಿಕೆಗಳಿಂದ ಬಂಧನದಿಂದ ಹೊರಗಿರುವ ಅನೇಕರನ್ನು ಗೊಂದಲಕ್ಕೆ ಸಿಕ್ಕಿಸುತ್ತಿದೆ. ಹೀಗಾಗಿ ಪ್ರಕರ ಣದ ಸತ್ಯಾಸತ್ಯತೆ ಹೊರಬರುವವರೆಗೂ ಸುಮ್ಮನಿದ್ದರೆ ಒಳ್ಳೆಯದು. ಪೊಲೀಸರು ಕೂಡ ಈ ಪ್ರಕರಣದಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಲು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಯಾವುದೇ ಜಾತಿ, ಧರ್ಮ, ಪ್ರಭಾವಕ್ಕೆ ಒಳಗಾಗದೇ ತನಿಖೆ ನಡೆಸಬೇಕು.
ಈ ಪ್ರಕರಣದಲ್ಲಿ ಭಾಗಿಯಾದ ಯುವಕರು ಒಂದೆಡೆಯಾದರೆ, ಇದರ ಹಿಂದೆ ಇರುವ ಕಾಣದ ಕೈಗಳನ್ನು ಕಂಡು ಹಿಡಿಬೇಕಿದೆ. ಆ ಮೂಲಕ
ಸಿದ್ಧಾರೂಡರ ಸನ್ನಿಽ ಹುಬ್ಬಳ್ಳಿಯಲ್ಲಿ ಶಾಶ್ವತ ಶಾಂತಿ ನೆಲೆಸುವಂತೆ ನೋಡಿಕೊಳ್ಳಬೇಕಿದೆ.