ರನ್ ಆಂಟನಿ ಜತೆಗೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಿರ್ದೇಶಕ ರಘುಶಾಸ್ತ್ರಿ ಈಗ ಟಕ್ಕರ್ ಕೊಡಲು ಸಿದ್ಧವಾಗಿದ್ದಾರೆ. ಹಾಗಂತ ಯಾರಿಗೂ ಸವಾಲ್ ಎಸೆಯಲು ಅಲ್ಲ, ಬದಲಾಗಿ ಸೈಬರ್ ಖದೀಮರ ಬಗ್ಗೆ ಎಚ್ಚರ ಮೂಡಿಸಲು ತಯಾರಾಗಿದ್ದಾರೆ.
ರಘು ತಮ್ಮ ಎರಡನೇ ಪ್ರಯತ್ನವಾಗಿ ಟಕ್ಕರ್ ಸಿನಿಮಾವನ್ನು ನಿರ್ದೇಶಿಸಿದ್ದು ತೆರೆಗೆ ತರುತ್ತಿದ್ದಾರೆ. ಮುಂದಿನ ಶುಕ್ರವಾರ ಟಕ್ಕರ್ ಅದ್ಧೂರಿಯಾಗಿ ತೆರೆಗೆ ಬರಲಿದೆ. ಅಷ್ಟಕ್ಕೂ ಏನಿದು ಟಕ್ಕರ್, ಏನಿದು ಸೈಬರ್ ಕಳ್ಳತನ ಎಂಬುದರ ಬಗ್ಗೆ ರಘು ಶಾಸ್ತ್ರಿ ವಿ.ಸಿನಿಮಾಸ್ ನೊಂದಿಗೆ ಮಾತನಾಡಿದ್ದಾರೆ.
ವಿ.ಸಿನಿಮಾಸ್ : ಚಿತ್ರದಲ್ಲಿ ಯಾರಿಗೆ ಟಕ್ಕರ್ ಕೊಡಲು ಹೊರಟ್ಟಿದ್ದೀರ ?
ರಘು ಶಾಸ್ತ್ರಿ : ಇಲ್ಲಿ ಯಾರಿಗೂ ಸವಾಲು ಒಡ್ಡುವ ಕೆಲಸವಲ್ಲ. ಟಕ್ಕರ್ ಸೈಬರ್ ಕ್ರೈಂ ಕಥೆಯ ಚಿತ್ರ. ಈ ಸಿನಿಮಾ ಸೈಬರ್ ಕ್ರೈಂ ಖದೀಮರಿಗೆ ಟಕ್ಕರ್ ನೀಡುವುದು ಖಚಿತ. ಆಧುನಿಕತೆ ಮುಂದುವರಿ ದಂತೆಲ್ಲ, ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚುತ್ತಿವೆ. ಹಾಗಾಗಿ ಇಂತಹ ಪ್ರಕರಣಗಳಿಂದ ನಾವು ಹೇಗೆ ಸುರಕ್ಷಿತವಾಗಿರಬೇಕು ಎಂಬುದನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ.
ಖದೀಮರನ್ನು ಬಿಡದೆ ಕಾಡುವ ನಾಯಕ, ಸೈಬರ್ ಹ್ಯಾಕರ್‌ಗಳಿಗೆ ಸದಾ ಸವಾಲೊಡ್ಡುತ್ತಾನೆ. ಅದಕ್ಕಾಗಿಯೇ ಈ ಚಿತ್ರಕ್ಕೆ ಟಕ್ಕರ್ ಎಂಬ ಶೀರ್ಷಿಕೆ ಇಟ್ಟಿದ್ದೇವೆ.
ವಿ.ಸಿ : ಈ ಹಿಂದೆಯೂ ಹಲವು ಸೈಬರ್ ಕ್ರೈಂ ಕಥೆಯ ಸಿನಿಮಾಗಳು ತೆರೆಗೆ ಬಂದಿವೆ. ಇದರಲ್ಲಿ ಏನು ವಿಶೇಷತೆ ಕಾಣಬಹುದು ?
ರಘು : ಇಲ್ಲಿ ವೆಬ್ ಕ್ಯಾಮೆರಾ ಹ್ಯಾಕರ್ ಕುರಿತಾದ ಕಥೆಯಿದೆ. ಇಂದು ಹಲವು ಸೈಬರ್ ಖದೀಮರು ನಮಗೆ ಅರಿವಿಲ್ಲದಂತೆ ವೆಬ್ ಕ್ಯಾಮೆರಾ ಹ್ಯಾಕ್ ಮಾಡಿ ನಮ್ಮ ಖಾಸಗಿತನ ವನ್ನು ಕದ್ದು, ಅದನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಅದು ಹೇಗೆ, ಏನು ಎಂಬು ದನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ. ಇಂದಿನ ಯುವ ಪೀಳಿಗೆಯ ಬಹು ತೇಕರು ಮೊಬೈಲ್, ಲ್ಯಾಪ್ ಟಾಪ್ ಉಪಯೋಗಿಸುತ್ತಿದ್ದಾರೆ.
ಅವು ನಮಗೆ ಅರಿವಿಲ್ಲದಂತೆ ಹ್ಯಾಕ್ ಆಗಿರುತ್ತವೆ. ನಮ್ಮ ಖಾಸಗಿತನಕ್ಕೆ ಧಕ್ಕೆ ಉಂಟಾಗುತ್ತ ದೆ. ಇಂತಹ ಸೈಬರ್ ಖದೀಮರಿಂದ ನಮ್ಮನ್ನು ನಾವು ಹೇಗೆ ಸುರಕ್ಷಿತವಾಗಿ ಕಾಪಾಡಿಕೊಳ್ಳ ಬೇಕು ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದೇವೆ. ಅದರಲ್ಲೂ ಯುವತಿಯರು, ಮಹಿಳೆ ಯರು ಎಷ್ಟು ಜಾಗರೂಕರರಾಗಿರಬೇಕು ಎಂಬ ಸಂದೇಶವೂ ಈ ಚಿತ್ರದಲ್ಲಿದೆ. ಇದು ಕುಟಂಬ ಸಮೇತರಾಗಿ ಕುಳಿತು ನೋಡಬಹುದಾದ ಸಿನಿಮಾವಾಗಿದೆ.
ವಿ.ಸಿ : ಈ ಕಥೆ ಹೊಳೆದಿದ್ದು ಹೇಗೆ ?
ರಘು : ಒಮ್ಮೆ ಅಮೇರಿಕಾಗೆ ತೆರಳಿದ್ದಾಗ, ಅಲ್ಲಿ ನಡೆದ ಸೈಬರ್ ಕ್ರೈಂ ಘಟನೆಯ ಬಗ್ಗೆ ಕೇಳಿದೆ. ತಾಂತ್ರಿಕತೆಯಲ್ಲಿ ಮುಂದುವರಿದ ಅಮೇರಿಕಾದಲ್ಲಿಯೇ ಸೈಬರ್ ಖದೀಮರು ಈ ಮಟ್ಟಿಗೆ ಕೈಚಳಕ ತೋರಿದರೆ, ಇನ್ನು ಭಾರತದಲ್ಲಿ ಪರಿಸ್ಥಿತಿ ಹೇಗಿರಬಹುದು ಎಂದು ಊಹಿಸಿಕೊಂಡೆ.
ಸೈಬರ್ ಕ್ರೈಂ ಬಗ್ಗೆ ಅರಿವು ಮೂಡಿಸಬೇಕು ಎಂದು ಸಂಕಲ್ಪ ತೊಟ್ಟೆ. ಅದಕ್ಕಾಗಿ ಕಥೆ ಹೆಣೆದು ಚಿತ್ರ ನಿರ್ದೇಶನಕ್ಕೆ ಮುಂದಾದೆ.
ಅಂದುಕೊಂಡಂತೆ ಚಿತ್ರ ಮೂಡಿಬಂದಿದೆ. ಟಕ್ಕರ್ ಚಿತ್ರದಲ್ಲಿ ಎಲ್ಲರಿಗೂ ಅಗತ್ಯವಾದ ಸಂದೇಶವೂ ಇದೆ. ಈ ಚಿತ್ರದಲ್ಲಿ ಮನೋಜ್ ನಾಯಕನಾಗಿ ನಟಿಸಿದ್ದಾರೆ. ರಂಜನಿ ರಾಘವನ್ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ. ಉಳಿದಂತೆ ಜೈ ಜಗದೀಶ್, ಶ್ರೀಧರ್, ಸಾಧುಕೋಕಿಲ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.