Saturday, 23rd November 2024

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಎನ್‌ಎಸ್‌ಎ ಕಾಯ್ದೆಯಡಿ ಆರೋಪ

ಬಲ್ಲಿಯಾ: ಉತ್ತರ ಪ್ರದೇಶದ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಶಾಲೆಯ ಪ್ರಾಂಶುಪಾಲರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಆರೋಪ ದಾಖಲಿಸಲಾಗಿದೆ.

ಹಿರಿಯ ಪ್ರಾಥಮಿಕ ಶಾಲೆಯ ಪ್ರಾಂಶುಪಾಲ ಅಕ್ಷಯ್‌ ಲಾಲ್‌ ಯಾದವ್‌ ಅವರ ವಿರುದ್ಧ ಎನ್‌ಎಸ್‌ಎ ಕಾಯ್ದೆಯಡಿ ಮೊಕದ್ದಮೆ ಹೂಡಲಾಗಿದೆ ಎಂದು ಉಭಾನ್‌ ಪೊಲೀಸ್‌ ವಿಶೇಷ ಠಾಣಾಧಿಕಾರಿ ಅವಿನಾಶ್‌ ಹೇಳಿದರು. ಪ್ರಕರಣಕ್ಕೆ ಸಂಬಂಧಿಸಿ ಈ ಮೊದಲು ನಿರ್ಭಯ್‌ ನಾರಾಯಣ್‌ ಸಿಂಗ್‌, ಭೀಮಪುರ ಮಹಾರಾಜಿ ದೇವಿ ಸ್ಮಾರಕ ಅಂತರ ಕಾಲೇಜು ವ್ಯವಸ್ಥಾಪಕ ರಾಜು ಪ್ರಜಾಪತಿ ಮತ್ತು ರವೀಂದ್ರ ಸಿಂಗ್ ಅವರ ವಿರುದ್ಧ ಎನ್‌ಎಸ್‌ಎ ಅಡಿ ಮೊಕದ್ದಮೆ ದಾಖಲಿಸಲಾಗಿತ್ತು.

ಮಾರ್ಚ್‌ 30 ರಂದು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಪತ್ರಕರ್ತರು, ಆರು ಶಾಲೆಗಳ ವ್ಯವಸ್ಥಾಪಕರು ಮತ್ತು ಐದು ಶಾಲೆಗಳ ಪ್ರಾಂಶುಪಾಲರು ಸೇರಿ ಸುಮಾರು 52 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಬಂಧಿತರಲ್ಲಿ ಬಲ್ಲಿಯಾ ಜಿಲ್ಲಾ ಶಾಲೆಗಳ ಇನ್ಸ್‌ಪೆಕ್ಟರ್ ಬ್ರಿಜೇಶ್‌ ಮಿಶ್ರಾ ಅವರೂ ಸೇರಿದ್ದಾರೆ.